ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಿನಿಂದ ಜಗನ್ನಾಥನ ಸನ್ನಿಧಿ ಪುರಿಗೆ ರೈಲಿನಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ದಿನಾಂಕ, ಸಮಯ ತಿಳಿಯಿರಿ

ಬೆಂಗಳೂರಿನಿಂದ ಜಗನ್ನಾಥನ ಸನ್ನಿಧಿ ಪುರಿಗೆ ರೈಲಿನಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ದಿನಾಂಕ, ಸಮಯ ತಿಳಿಯಿರಿ

ಬೆಂಗಳೂರಿನಿಂದ ಪುರಿಗೆ ರೈಲಿನಲ್ಲಿ ಹೋಗುವುದು ಹೇಗೆ, ಟಿಕೆಟ್ ಬೆಲೆ ಎಷ್ಟಿರುತ್ತೆ ಇಂತಹ ಹತ್ತಾರು ಪ್ರಶ್ನೆಗಳಲ್ಲಿ ಜನರಲ್ಲಿರುತ್ತವೆ. ಪುರಿಗೆ ಹೋಗಲು ನೀವೇನಾದರೂ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ಬೆಂಗಳೂರು-ಪುರಿ ರೈಲಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಿಂದ ಜಗನ್ನಾಥನ ಸನ್ನಿಧಿ ಪುರಿಗೆ ರೈಲಿನಲ್ಲಿ ಹೋಗುವುದು ಹೇಗೆ; ಎಷ್ಟು ಖರ್ಚಾಗುತ್ತೆ?
ಬೆಂಗಳೂರಿನಿಂದ ಜಗನ್ನಾಥನ ಸನ್ನಿಧಿ ಪುರಿಗೆ ರೈಲಿನಲ್ಲಿ ಹೋಗುವುದು ಹೇಗೆ; ಎಷ್ಟು ಖರ್ಚಾಗುತ್ತೆ?

ಬೆಂಗಳೂರು: ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಡಿಶಾದ ಪುರಿ ಜಗನಾಥ ದೇವಾಲಯ (Puri Jagannath Temple) ಒಂದು. ಇಲ್ಲಿ 2024ನೇ ಸಾಲಿನ ಐತಿಹಾಸಿಕ ರಥಯಾತ್ರೆ ಜುಲೈ 7ರ ಭಾನುವಾರದಿಂದ ಆರಂಭವಾಗಿದೆ. ಲಕ್ಷಾಂತರ ಭಕ್ತರು ರಥಯಾತ್ರೆಯಲ್ಲಿ ಭಾಗವಹಿಸಿ ದೇವರುಗಳ ದರ್ಶನ ಪಡೆಯುತ್ತಿದ್ದಾರೆ. ಎರಡು ದಿನಗಳ ರಥ ಯಾತ್ರೆ ಇಂದು (ಜುಲೈ 8, ಸೋಮವಾರ) ಸಂಪನ್ನಗೊಂಡಿದೆ. ರಥಯಾತ್ರೆಯ ಧಾರ್ಮಿಕ ವಿಧಾನ ಜುಲೈ 29 ರಿಂದಲೇ ಆರಂಭವಾಗಿತ್ತು. ವಿಷ್ಣುವಿನ ಒಂದು ರೂಪವಾಗಿರುವ ಜಗನ್ನಾಥನನ್ನು ಕಣ್ತುಂಬಿಕೊಳ್ಳಿ ಇಲ್ಲಿಗೆ ಲಕ್ಷಾಂತರ ಮಂದಿ ಈ ರಥಯಾತ್ರೆಯ ವೇಳೆ ಆಗಮಿಸುತ್ತಾರೆ. ಒಂದು ವೇಳೆ ಪುರಿಯ ಜಗನ್ನಾಥನನ್ನು ಕಣ್ತುಂಬಿಕೊಳ್ಳಲು ನೀವು ಇಲ್ಲಿಗೆ ಪ್ರವಾಸದ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ರೈಲಿನಲ್ಲಿ ಒಡಿಶಾದ ಪುರಿಯನ್ನು (Bangalore Puri Train) ತಲುಪುವುದು ಹೇಗೆ, ರೈಲು ಟಿಕೆಟ್ ದರ, ಬೆಂಗಳೂರಿನಿಂದ ಪುರಿಗೆ ಇರುವ ಅಂತರ ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಿಂದ ಪುರಿಗೆ 1,437 ಕಿಲೋ ಮೀಟರ್ ಆಗಲಿದ್ದು, ಸುಮಾರು 25 ಗಂಟೆಗಳ ಜರ್ನಿಯನ್ನು ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಪುರಿಗೆ 10 ರೈಲುಗಳಿಗೆ. ಅದರಲ್ಲಿ 1 ರೈಲು ನೇರವಾಗಿ ಪುರಿಗೆ ತಲುಪುತ್ತೆ, ಇನ್ನ 7 ರೈಲುಗಳು ಖುರ್ಡಾ ರೋಡ್ ಜಂಕ್ಷನ್ ಹಾಗೂ 2 ರೈಲುಗಳು ಭುವನೇಶ್ವರ್‌ಗೆ ತಲುಪುತ್ತದೆ. ಖುರ್ಡಾ ರೋಡ್ ಜಂಕ್ಷನ್‌ನಿಂದ ಪುರಿಗೆ 52 ಕಿಮೀ ಇದ್ದು, 1 ಗಂಟೆ 18 ನಿಮಿಷ ರಸ್ತೆ ಮೂಲಕ ತಲುಪಬಹುದು. ಇನ್ನ ಒಡಿಶಾ ರಾಜಧಾನಿ ಭುವನೇಶ್ವರ್‌ನಿಂದ ಪುರಿಗೆ 63 ಕಿಲೋ ಮೀಟರ್ ಇದ್ದು, 1 ಗಂಟೆ 23 ನಿಮಿಷದೊಳಗೆ ರಸ್ತೆ ಮೂಲಕ ಪುರಿ ತಲುಪಬಹುದು.

ಬೆಂಗಳೂರಿನಿಂದ ಪುರಿಗೆ 1,437 ಕಿಲೋ ಮೀಟರ್ ಆಗಲಿದ್ದು, ಸುಮಾರು 25 ಗಂಟೆಗಳ ಜರ್ನಿಯನ್ನು ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಪುರಿಗೆ 10 ರೈಲುಗಳಿಗೆ. ಅದರಲ್ಲಿ 1 ರೈಲು ನೇರವಾಗಿ ಪುರಿಗೆ ತಲುಪುತ್ತೆ, ಇನ್ನ 7 ರೈಲುಗಳು ಖುರ್ಡಾ ರೋಡ್ ಜಂಕ್ಷನ್ ಹಾಗೂ 2 ರೈಲುಗಳು ಭುವನೇಶ್ವರ್‌ಗೆ ತಲುಪುತ್ತದೆ. ಖುರ್ಡಾ ರೋಡ್ ಜಂಕ್ಷನ್‌ನಿಂದ ಪುರಿಗೆ 52 ಕಿಮೀ ಇದ್ದು, 1 ಗಂಟೆ 18 ನಿಮಿಷ ರಸ್ತೆ ಮೂಲಕ ತಲುಪಬಹುದು. ಇನ್ನ ಒಡಿಶಾ ರಾಜಧಾನಿ ಭುವನೇಶ್ವರ್‌ನಿಂದ ಪುರಿಗೆ 63 ಕಿಲೋ ಮೀಟರ್ ಇದ್ದು, 1 ಗಂಟೆ 23 ನಿಮಿಷದೊಳಗೆ ರಸ್ತೆ ಮೂಲಕ ಪುರಿ ತಲುಪಬಹುದು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಿಂದ ಪುರಿಗೆ ಹೋಗುವ 10 ರೈಲುಗಳ ಸಂಪೂರ್ಣ ವಿವರ

ಬೆಂಗಳೂರಿನಿಂದ ಪುರಿಗೆ 18464 ಸಂಖ್ಯೆ ಪ್ರಶಾಂತಿ ಎಕ್ಸ್‌ಪ್ರೆಕ್ಸ್ ರೈಲು ವಾರದ 7 ದಿನಗಳು ಸಂಚಾರ ನಡೆಸುತ್ತದೆ. ಈ ರೈಲು ಕೆಎಸ್‌ಆರ್ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 1.40ಕ್ಕೆ ಬಿಟ್ಟು ಮರು ದಿನ ಸಂಜೆ 6 ಗಂಟೆಗೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. 1ಎ ಕ್ಲಾಸ್‌ಗೆ 1885 ರೂಪಾಯಿ, 2ಎ ಕ್ಲಾಸ್‌ಗೆ 1120 ರೂಪಾಯಿ, 3ಎ ಕ್ಲಾಸ್ 790 ರೂಪಾಯಿ ಹಾಗೂ ಎಸ್‌ಎಲ್‌ಗೆ 295 ರೂಪಾಯಿ ಇದೆ.

ರೈಲು ಸಂಖ್ಯೆ 12864 ಎಸ್‌ಎಂವಿಬಿ ಹೌರಾ ಎಕ್ಸ್‌ಪ್ರೆಸ್ ರೈಲು ಕೂಡ ವಾರದ 7 ದಿನಗಳ ಬೆಂಗಳೂರಿನಿಂದ ಪುರಿಗೆ ಸಂಚಾರ ನಡೆಸುತ್ತದೆ. ಈ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10.35ಕ್ಕೆ ಬಿಟ್ಟು ಮರು ದಿನ ಬೆಳಗ್ಗೆ 11.35ಕ್ಕೆ ಗಂಟೆಗೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. 1ಎ ಕ್ಲಾಸ್‌ಗೆ 1885 ರೂಪಾಯಿ, 2ಎ ಕ್ಲಾಸ್‌ಗೆ 1120 ರೂಪಾಯಿ, 3ಎ ಕ್ಲಾಸ್ 790 ರೂಪಾಯಿ ಹಾಗೂ ಎಸ್‌ಎಲ್‌ಗೆ 295 ರೂಪಾಯಿ ಇದೆ.

ರೈಲು ಸಂಖ್ಯೆ 12509 ಗುಹಾಟಿ ಎಕ್ಸ್‌ಪ್ರೆಸ್ ಕೂಡ ವಾರದಲ್ಲಿ 3 ದಿನ (ಬುಧವಾರ, ಗುರುವಾರ, ಶುಕ್ರವಾರ) ಈ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಮಧ್ಯರಾತ್ರಿ 1.25ಕ್ಕೆ ಗಂಟೆಗೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. 1ಎ ಕ್ಲಾಸ್‌ಗೆ 1885 ರೂಪಾಯಿ, 2ಎ ಕ್ಲಾಸ್‌ಗೆ 1120 ರೂಪಾಯಿ, 3ಎ ಕ್ಲಾಸ್ 790 ರೂಪಾಯಿ ಹಾಗೂ ಎಸ್‌ಎಲ್‌ಗೆ 295 ರೂಪಾಯಿ ಇದೆ.

ರೈಲು ಸಂಖ್ಯೆ ಗರೀಭ್‌ರಥ್ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ 1 ದಿನ (ಶನಿವಾರ) ಬೆಂಗಳೂರಿನಿಂದ ಪುರಿಗೆ ಸಂಚರಿಸುತ್ತದೆ. ಯಶ್ವಂತಪುರ ಜಂಕ್ಷನ್‌ನಿಂದ ರಾತ್ರಿ 10.40ಕ್ಕೆ ಹೊರಟು ಮರು ದಿನ ಮುಂಜಾನೆ 3.55ಕ್ಕೆ ಪುರಿ ರೈಲು ನಿಲ್ದಾಣ ತಲುಪುತ್ತದೆ. ರೈಲು ಬೆಂಗಳೂರಿನಿಂದ ಪುರಿ ತಲುಪಲು 29 ಗಂಟೆ 15 ನಿಮಿಷ ತಗೆದೆಕೊಳ್ಳುತ್ತದೆ.

ರೈಲು ಸಂಖ್ಯೆ 22501 ನ್ಯೂಟಿನ್ಸುಕಿಯಾ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಒಂದು ದಿನ (ಮಂಗಳವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಮುಂಜಾನೆ 3.10ಕ್ಕೆ ಹೊರಟು ಮರು ದಿನ ಮುಂಜಾನೆ 3.40ಕ್ಕೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಖುರ್ದಾ ರೋಡ್ ಜಂಕ್ಷನ್ ತಲುಪಲು 24 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ 12846 ಭುವನೇಶ್ವರ್ ಎಕ್ಸ್‌ಪ್ರೆಸ್ ವಾರದಲ್ಲಿ ಒಂದು ದಿನ (ಸೋಮವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಮುಂಜಾನೆ ಸಂಜೆ 4.35ಕ್ಕೆ ಹೊರಟು ಮರು ದಿನ ಸಂಜೆ 4.40ಕ್ಕೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಖುರ್ದಾ ರೋಡ್ ಜಂಕ್ಷನ್ ತಲುಪಲು 24 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ 12551 ಎಸ್‌ಎಂವಿಬಿ ಕೆವೈಕ್ಯೂ ಎಸಿ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಒಂದು ದಿನ (ಶನಿವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.50ಕ್ಕೆ ಹೊರಟು ಮರು ದಿನ ಬೆಳಗ್ಗೆ 9.10ಕ್ಕೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಖುರ್ದಾ ರೋಡ್ ಜಂಕ್ಷನ್ ತಲುಪಲು 24 ಗಂಟೆ 20 ನಿಮಿಷ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ 22834 ಬಿಬಿಎಸ್ ಹಂಸಫರ್ ರೈಲು ವಾರದಲ್ಲಿ ಒಂದು ದಿನ (ಗುರುವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಸಂಜೆ 4.35ಕ್ಕೆ ಹೊರಟು ಮರು ದಿನ ಸಂಜೆ 5.35ಕ್ಕೆ ಖುರ್ದಾ ರೋಡ್ ಜಂಕ್ಷನ್ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಖುರ್ದಾ ರೋಡ್ ಜಂಕ್ಷನ್ ತಲುಪಲು 25 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ 12246 ಡುರೊಂಟೊ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಐದು ದಿನ (ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11.20ಕ್ಕೆ ಹೊರಟು ಮರು ದಿನ ಬೆಳಗ್ಗೆ 9.45ಕ್ಕೆ ಭುವನೇಶ್ವರ್ ರೈಲು ನಿಲ್ದಾಣ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಭುವನೇಶ್ವರ್ ತಲುಪಲು 22 ಗಂಟೆ 25 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ 22305 ಎಸ್‌ಎಂವಿಬಿ ಜೆಎಸ್‌ಎಂಇ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ 1 ದಿನ (ಭಾನುವಾರ) ಸರ್ ಎಂ ವಿಶ್ವೇಶ್ವರಯ್ಯ ಟರ್ನಿಮಿನಲ್ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಟು ಮರು ದಿನ ಮಧ್ಯಾಹ್ನ 12.45ಕ್ಕೆ ಭುವನೇಶ್ವರ್ ರೈಲು ನಿಲ್ದಾಣ ತಲುಪುತ್ತದೆ. ಈ ರೈಲು ಬೆಂಗಳೂರಿನಿಂದ ಭುವನೇಶ್ವರ್ ತಲುಪಲು 26 ಗಂಟೆ 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)