ಬೆಂಗಳೂರಿನಿಂದ ಉತ್ತರಾಖಂಡಕ್ಕೆ ಕಡಿಮೆ ವೆಚ್ಚದಲ್ಲಿ ಯಾತ್ರೆ: ಐಆರ್‌ಸಿಟಿಸಿ ಹೊಸ ಪ್ಯಾಕೇಜ್ ಘೋಷಣೆ - IRCTC Tour Packages
ಐಆರ್‌ಸಿಟಿಸಿ ಕಡಿಮೆ ವೆಚ್ಚದಲ್ಲಿ ಬೆಂಗಳೂರಿನಿಂದ ಉತ್ತರಾಖಂಡಕ್ಕೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ದಿನಾಂಕ, ಪ್ಯಾಕೇಜ್ ಮೊತ್ತ, ಪ್ರವಾಸಿ ತಾಣಗಳು, ದೇವಾಲಯಗಳು ಹಾಗೂ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.
ಉತ್ತರಾಖಂಡ ಎನ್ನುವಷ್ಟರಲ್ಲಿ ಮೊದಲಿಗೆ ನೆನಪಾಗುವುದೇ ಕೇದಾರನಾಥ ದೇವಾಲಯ, ಬದ್ರಿನಾಥ ದೇವಾಲಯ, ಗಂಗೋತ್ರಿ, ಯಮುನೋತ್ರಿ, ತುಂಗಾನಾಥ ದೇವಾಲಯ, ಧರಿ ದೇವಿ ದೇವಾಲಯಗಳು. ಹಿಮಾಲಯವನ್ನು ದಾಟಿದ ಕೂಡಲೇ ಉತ್ತರ ಭಾರತದ ಕಡೆಯಿಂದ ಆರಂಭವಾಗುವ ಉತ್ತರಾಖಂಡ್ ಹಿಂದೂ ಯಾತ್ರಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಯೋಗ ಅಧ್ಯಯನದ ಪ್ರಮುಖ ಕೇಂದ್ರ ರಿಷಿಕೇಶ ಪ್ರಸಿದ್ಧ ತಾಣವಾಗಿದೆ. ಧಾರ್ಮಿಕ ತಾಣಗಳಷ್ಟೇ ಅಲ್ಲ ಇಲ್ಲಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಬಂಗಾಳದ ಹುಲಿಗಳು ಹಾಗೂ ಇತರೆ ಸ್ಥಳೀಯ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ.
ನೀವೇನಾದರೂ ಬೆಂಗಳೂರಿನಿಂದ ಉತ್ತರಾಖಂಡಕ್ಕೆ ಟೂರ್ (Bangalore to Uttarakhand Tour Package) ಮಾಡುವ ಆಲೋಚನೆ ಅಥವಾ ಪ್ಲಾನ್ ಇದ್ದರೆ ನಿಮಗಾಗಿ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (IRCTC) - ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ದೇವ ಭೂಮಿ ಉತ್ತರಾಖಂಡ ಯಾತ್ರೆ ಬೈ ಭಾರತ್ ಗೌರವ್ ಮಾನಸ್‌ಖಂಡ್ ಎಕ್ಸ್‌ಪ್ರೆಸ್ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಒಬ್ಬರಿಗೆ ಎಷ್ಟು ಖರ್ಚಾಗಬಹುದು, ಯಾವೆಲ್ಲಾ ಪ್ರವಾಸಿ ತಾಣಗಳನ್ನು ತೋರಿಸಲಾಗುತ್ತೆ ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಐಆರ್‌ಸಿಟಿಸಿಯ ಟೂರ್ ಪ್ಯಾಕೇಜ್‌ನ ಮುಖ್ಯಾಂಶಗಳು
ಪ್ರವಾಸದ ಹೆಸರು: ಭಾರತ್ ಗೌರವ್ ಮಾನಸಖಂಡ್ ಎಕ್ಸ್‌ಪ್ರೆಸ್‌ನಿಂದ ದೇವ್ ಭೂಮಿ ಉತ್ತರಾಖಂಡ ಯಾತ್ರೆ
ಅವಧಿ: 10 ರಾತ್ರಿಗಳು/11 ದಿನಗಳು
ಹೊರಡುವ ನಗರ: ಬೆಂಗಳೂರು
ಪ್ರವಾಸದ ದಿನಾಂಕ: 22/8/2024
ಬೆಂಗಳೂರಿನಿಂದ ಉತ್ತರಾಖಂಡ ಟೂರ್ ಪ್ಯಾಕೇಜ್‌ನಲ್ಲಿ ಒಬ್ಬರಿಗೆ ಎಷ್ಟು ಆಗುತ್ತೆ
ರೈಲಿಲ್ಲಿ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎರಡು ವಿಭಾಗಗಳು ಇರಲಿದ್ದು, ಸ್ಟ್ಯಾಂಡರ್ಡ್‌ನಲ್ಲಿ ಒಬ್ಬರಿಗೆ 28,020 ರೂಪಾಯಿ ವೆಚ್ಚವಾಗಲಿದೆ. 5 ರಿಂದ ಮೇಲ್ಪಟ್ಟ ಮಕ್ಕಳಿಗೂ 28,020 ರೂಪಾಯಿ ವೆಚ್ಚವಾಗುತ್ತೆ. ಡಿಲಕ್ಸ್‌ನಲ್ಲಿ ಒಬ್ಬರಿಗೆ 35,340 ರೂಪಾಯಿ ಇದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇಷ್ಟೇ ಮೊತ್ತವನ್ನು ನಿಗದಿ ಮಾಡಲಾಗಿದೆ. ಪ್ರವಾಸ ಹೊರಡುವ 3 ದಿನಗಳ ಮೊದಲು ಆಸನಗಳ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗುತ್ತದೆ.
ಟೂರ್ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳನ್ನು ತೋರಿಸಾಗುತ್ತೆ?
- ಭೀಮತಾಲ್
- ನೈನಿತಾಲ್-ನೈನಾ ದೇವಿ ದೇವಸ್ಥಾನ ಮತ್ತು ನೈನಿ ಸರೋವರ
- ಕೈಂಚಿ ಧಾಮ್ - ಬಾಬಾ ನೀಮ್ ಕರೋಲಿ ದೇವಸ್ಥಾನ
- ಕಾಸರ್ ದೇವಿ ಮತ್ತು ಕತರ್ಮಲ್ ಸೂರ್ಯ ದೇವಾಲಯ
- ಜಾಗೇಶ್ವರಧಾಮ
- ಗೋಲು ದೇವತಾ - ಚಿಟೈ
- ಅಲ್ಮೋರಾ - ನಂದಾ ದೇವಿ ದೇವಸ್ಥಾನ
- ಬೈಜನಾಥ್
- ಬಾಗೇಶ್ವರ
- ಕೌಸಾನಿ
- ರಾನಿಖೇತ್
ಆಗಸ್ಟ್ 22 ರ ಬೆಳಗ್ಗೆ 8 ಗಂಟೆಗೆ ರೈಲು ಬೆಂಗಳೂರಿನಿಂದ ಹೊರಡಲಿದೆ. ಬೆಂಗಳೂರಿನಿಂದ ಉತ್ತರಾಖಂಡಕ್ಕೆ ಐಆರ್‌ಸಿಟಿಸಿ ಘೋಷಣೆ ಮಾಡಿರುವ ಪ್ರವಾಸದ ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ irctctoursim.com ಗೆ ಭೇಟಿ ನೀಡಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)