Love vs Arrange Marriage: ಲವ್ ಮ್ಯಾರೇಜ್ ಮಾಡಿಕೊಳ್ಳೋದಾ ಅಥವಾ ಅರೇಂಜಾ ಎಂದು ಆಲೋಚನೆ ಮಾಡ್ತಿದ್ದೀರಾ? ಯಾವ ಮದುವೆ ಹಿತಕರ
ಕನ್ನಡ ಸುದ್ದಿ  /  ಜೀವನಶೈಲಿ  /  Love Vs Arrange Marriage: ಲವ್ ಮ್ಯಾರೇಜ್ ಮಾಡಿಕೊಳ್ಳೋದಾ ಅಥವಾ ಅರೇಂಜಾ ಎಂದು ಆಲೋಚನೆ ಮಾಡ್ತಿದ್ದೀರಾ? ಯಾವ ಮದುವೆ ಹಿತಕರ

Love vs Arrange Marriage: ಲವ್ ಮ್ಯಾರೇಜ್ ಮಾಡಿಕೊಳ್ಳೋದಾ ಅಥವಾ ಅರೇಂಜಾ ಎಂದು ಆಲೋಚನೆ ಮಾಡ್ತಿದ್ದೀರಾ? ಯಾವ ಮದುವೆ ಹಿತಕರ

Love vs Arrange Marriage: ಮದುವೆ ಅನ್ನೋದು ಒಂದು ಸುಂದರ ಅನುಬಂಧ. ಇದರಲ್ಲಿ ಲವ್ ಅಥವಾ ಅರೇಂಜ್‌ ಎಂದು ಆಲೋಚನೆ ಮಾಡುವುದಕ್ಕಿಂತ ಮದುವೆ ಆದಮೇಲೆ ಹೇಗೆ ಹೊಂದಿಕೊಂಡು ಹೋಗುತ್ತಾರೆ ಎನ್ನುವುದು ತುಂಬಾ ಮುಖ್ಯ.

ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್‌ ಯಾವುದು ಬೆಸ್ಟ್‌
ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್‌ ಯಾವುದು ಬೆಸ್ಟ್‌

Love vs Arrange Marriage: ಕೆಲವರು ಪ್ರೀತಿಸಿ ಮದುವೆ ಆದ್ರೆ ಇನ್ನು ಕೆಲವರು ಮನೆಯಲ್ಲಿ ತೋರಿಸಿದ ಹುಡುಗ ಅಥವಾ ಹುಡುಗಿಯನ್ನು ಮದುವೆ ಆಗುತ್ತಾರೆ. ನಾವೇ ಅರ್ಥ ಮಾಡಿಕೊಂಡು ನಮಗೆ ಮೊದಲಿನಿಂದ ತಿಳಿದಿದ್ದವರನ್ನು ಮದುವೆ ಆಗುವುದು ಲವ್ ಮ್ಯಾರೇಜ್ ಎನಿಸಿಕೊಂಡರೆ, ಕುಟುಂಬದವರು ತೋರಿಸಿದ ನಂತರ ಅವರನ್ನು ಮದುವೆಯಾಗಿ ಅರ್ಥ ಮಾಡಿಕೊಳ್ಳುವುದು ಅರೇಂಜ್ಡ್‌ ಮ್ಯಾರೇಜ್ ಎನಿಸಿಕೊಳ್ಳುತ್ತದೆ. ಲವ್ ಮ್ಯಾರೇಜ್ ಎಂದರೆ ಕಣ್‌ಕಣ್ ಬಿಡುವ ಕಾಲವೊಂದಿತ್ತು ಆದರೆ ಈಗ ಅದು ಬದಲಾಗಿದೆ. ಆದರೂ ಇನ್ನು ಕೆಲವರು ಈಗಲೂ ಲವ್ ಮ್ಯಾರೇಜ್ ಎನ್ನುವುದು ಅಪರಾಧ ಎನ್ನುವ ರೀತಿಯಲ್ಲಿ ನೋಡುತ್ತಾರೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೇ ಮದುವೆ ಆಗುತ್ತಾರೆ. ನಿಶ್ಚಿತಾರ್ಥವಾದಮೇಲೆ ಸಾಕಷ್ಟು ಸಮಯ ಸಿಗುತ್ತದೆ. ಹಿಂದೆಲ್ಲ ಒಂದೇ ವಾರದ ಅಂತರದಲ್ಲಿ ಮದುವೆ ಆಗುತ್ತಿದ್ದರು. ಇನ್ನು ಮದುವೆ ಆಗುವ ಮೊದಲು ಮುಖವನ್ನೂ ನೋಡುತ್ತಿರಲಿಲ್ಲ.

ಪ್ರೀತಿಸಿ ಮದುವೆ ಆದರೆ ಹೇಗಿರುತ್ತೆ ಜೀವನ?
ಪ್ರೀತಿಸಿ ಮದುವೆ ಆದವರಿಗೆ ಜಬಾವ್ಧಾರಿಗಳು ಹೆಚ್ಚಿರುತ್ತವೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ಸಿಕ್ಕಷ್ಟು ಸ್ವಾತಂತ್ರ್ಯ ಇದರಲ್ಲಿ ಇರುವುದಿಲ್ಲ. ನಿಮ್ಮ ಕಷ್ಟದ ಕಾಲದಲ್ಲಿ ನೀವೇ ಎಲ್ಲವನ್ನು ನೋಡಿಕೊಳ್ಳಬೇಕು, ನಿಭಾಯಿಸಿಕೊಳ್ಳಬೇಕು. ತುಂಬಾ ಜಗಳ ಮಾಡಿಕೊಂಡಾಗ ನೀವೇ ಮಾಡಿಕೊಂಡಿದ್ದು ನೀವೇ ಅನುಸರಿಸಿಕೊಂಡು ಹೋಗಿ ಎಂದು ಹೇಳಿ ಕುಟುಂಬದವರು ಸುಮ್ಮನಾಗಬಹುದು. ನಿಮ್ಮ ನಿಮ್ಮ ಸಂಗಾತಿಯ ತಂದೆ ತಾಯಿಯನ್ನು ಒಪ್ಪಿಸಿ ಮದುವೆ ಆದರೆ ತೊಂದರೆ ಇಲ್ಲ. ಇಲ್ಲವಾದರೆ ಕುಟುಂಬದ ಬೆಂಬಲ ಅಷ್ಟಾಗಿ ಸಿಗುವುದಿಲ್ಲ.

ಖುಷಿ ವಿಚಾರ
ನೀವು ಒಬ್ಬರನ್ನೊಬ್ಬರು ಅರಿತು ಮದುವೆ ಆಗುತ್ತೀರಿ. ಅವರ ಗುಣ, ನಡತೆ ಎಲ್ಲವೂ ನಿಮಗೆ ತಿಳಿದಿರುತ್ತದೆ. ಇಬ್ಬರೂ ಪರಸ್ಪರ ನಿರ್ಧಾರ ತೆಗೆದುಕೊಳ್ಳುವಾಗ ಒಬ್ಬರ ಅನುಮತಿ ಇನ್ನೊಬ್ಬರು ಪಡೆದೇ ಪಡೆಯುತ್ತಾರೆ. ಯಾವ ವಿಚಾರದಲ್ಲೂ ಗೌಪ್ಯತೆ ಇರುವುದಿಲ್ಲ. ಗೌಪ್ಯತೆಗಿಂತ ಜಾಸ್ತಿ ಆಪ್ತತೆ ಇರುತ್ತದೆ. ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಬಹುದು.

ಇದನ್ನೂ ಓದಿ: ಊಟಕ್ಕೆ ಮೊದಲು vs ಊಟದ ನಂತರ, ಯಾವ ಸಮಯದಲ್ಲಿ ಹಣ್ಣು ತಿನ್ನೋದು ಆರೋಗ್ಯಕ್ಕೆ ಉತ್ತಮ, ಇಲ್ಲಿದೆ ತಜ್ಞರ ಸಲಹೆ

ಅರೇಂಜ್‌ ಮ್ಯಾರೇಜ್ ಆದ್ರೆ ಹೇಗಿರುತ್ತೆ ಜೀವನ?
ಈ ಜೀವನವೂ ಚೆನ್ನಾಗಿಯೇ ಇರುತ್ತದೆ. ನಿಮಗೆ ಸರಿಯಾದ ಸಂಗಾತಿ ಸಿಕ್ಕಾಗ ಜೀವನ ಸುಖಮಯವಾಗುತ್ತದೆ. ಆದರೆ ನೀವು ಮೊದಲೇ ಅವರ ಗುಣ ಹಾಗೂ ಅವರ ಕೌಟುಂಬಿಕ ಹಿನ್ನೆಲೆ ಎಲ್ಲವನ್ನೂ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ರೀತಿ ಮದುವೆಯಾದಾಗ ಹುಡುಗಿಯರು ಹೊಂದಾಣಿಕೆ ಮಾಡಿಕೊಳ್ಳುವುದು ಸಾಕಷ್ಟಿರುತ್ತದೆ. ಮನೆಯ ಎಲ್ಲಾ ಆಚಾರ, ವಿಚಾರಗಳನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ. ಹೆಚ್ಚಿನ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ. ಆರ್ಥಿಕ ವಿಚಾರಗಳು ಅಷ್ಟಾಗಿ ತಿಳಿಯುವುದಿಲ್ಲ.

ಖುಷಿ ವಿಚಾರ:
ಆರ್ಥಿಕವಾಗಿ ಫ್ಯಾಮಿಲಿ ಬೆಂಬಲವಾಗಿ ನಿಲ್ಲುತ್ತದೆ. ನಿಮ್ಮಿಬ್ಬರ ನಡುವೆ ಏನೇ ಸಮಸ್ಯೆ ಆದರೂ ಅದನ್ನು ನಿರ್ಣಯ ಮಾಡಲು ಕುಟುಂಬದವರು ಇರುತ್ತಾರೆ. ಸಾಮಾಜಿಕ ಸ್ಥಿರತೆ ಹೆಚ್ಚಾಗಿರುತ್ತದೆ.

ಯಾವುದು ಬೆಸ್ಟ್‌?
ಈ ಎರಡರಲ್ಲಿ ಯಾವುದು ಬೆಸ್ಟ್ ಎಂದು ನೀವೇ ನಿರ್ಧಾರ ಮಾಡಬೇಕು. ನಿಮಗೆ ಯಾವ ರೀತಿ ಅನುಕೂಲ ಇದೆ ಎನ್ನುವುದರ ಮೇಲೆ ಇದು ನಿಂತಿರುತ್ತದೆ. ಆದರೆ ಎರಡೂ ರೀತಿಯ ವಿವಾಹದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಲವ್ ಮಾಡಿ ಮದುವೆ ಆದರೂ ಬೇರೆ ಆಗುತ್ತಾರೆ. ಅರೇಂಜ್ ಆದವರೂ ಬೇರೆಯಾಗುತ್ತಾರೆ. ಇನ್ನು ಹಲವು ಪ್ರಕರಣಗಳಲ್ಲಿ ಯಾವ ರೀತಿ ಮದುವೆ ಆದರೂ ಕೂಡಿ ಬಾಳುತ್ತಾರೆ.

ಭಾರತದಲ್ಲಿ ಶೇಕಡ 48 ಮದುವೆ ಮಾತ್ರ ಅರೇಂಜ್ ಮ್ಯಾರೇಜ್ ಆಗಿದೆ ಎಂದು 2019ರಲ್ಲಿ ನಡೆದ ಸಮೀಕ್ಷೆ ತಿಳಿಸಿದೆ. 2023ರಲ್ಲಿ ಇದರ ಪ್ರಮಾಣ ಇನ್ನೂ ಕುಸಿದಿದ್ದು ಶೇಕಡ 44 ದಂಪತಿ ಮಾತ್ರ ಅರೇಂಜ್ ಮ್ಯಾರೇಜ್ ಆಗಿದ್ದಾರೆ ಎಂದಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

Whats_app_banner