Constitution Day: ಇಂದು ಸಂವಿಧಾನ ದಿನ; ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಭಾರತ ಸಂವಿಧಾನದ ಕುರಿತ 10 ಮಹತ್ವದ ಸಂಗತಿಗಳು ಇಲ್ಲಿದೆ
2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. 2015ರ ಅಕ್ಟೋಬರ್ 11 ರಂದು ಸಮಾನತೆಯ ಪ್ರತಿಮೆಗೆ ಶುಂಕುಸ್ಥಾಪನೆ ಮಾಡುವ ಸಂದರ್ಭ ಪ್ರಧಾನಿ ಮೋದಿ ಸಂವಿಧಾನ್ ದಿವಸ್ ಆಚರಣೆಯನ್ನು ಘೋಷಿಸಿದರು. ಈ ದಿನದ ಇತಿಹಾಸ, ಮಹತ್ವ ಹಾಗೂ ಭಾರತ ಸಂವಿಧಾನದ ಕುರಿತು 10 ಮಹತ್ವದ ಸಂಗತಿಗಳನ್ನು ತಿಳಿಯಿರಿ.
ಭಾರತವು ಪ್ರತಿವರ್ಷ ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವನ್ನು ಆಚರಿಸುತ್ತಿದೆ. ನವೆಂಬರ್ 26 ರಂದು ಭಾರತ ಸಂವಿಧಾನವನ್ನು ಅಂಗೀಕರಿಸಲಾಯಿತು ಎನ್ನಲಾಗುತ್ತದೆ. 1949ರ ನವೆಂಬರ್ 26 ರಂದು ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆಯ ಅಂಗೀಕರಿಸಿತು. ಭಾರತ ಸಂವಿಧಾನ 1956ರ ಜನವರಿ 26 ರಂದು ಜಾರಿಗೆ ಬಂದಿತ್ತು. ಆದರೆ 2015ರಲ್ಲಿ ಸಮಾನತೆಯ ಪ್ರತಿಮೆ ಉದ್ಘಾಟನೆಯ ವೇಳೆಗೆ ಪ್ರಧಾನಿ ಮೋದಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿದರು.
ಇತಿಹಾಸ
ಸಂವಿಧಾನ ದಿನವನ್ನು ಸಂವಿಧಾನ್ ದಿವಸ್ ಎಂದೂ ಕರೆಯಲಾಗುತ್ತದೆ. ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಿತು. ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು. 1948ರ ಆರಂಭದಲ್ಲಿ ಡಾ. ಅಂಬೇಡ್ಕರ್ ಭಾರತೀಯ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು ಹಾಗೂ ಅದನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದರು. ನವೆಂಬರ್ 26, 1946ರಂದು ಈ ಕರಡನ್ನು ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಯಿತು. ನಂತರ ಅಂದರೆ 1950ರ ಜನವರಿ 26 ರಂದು ಭಾರತೀಯ ಸಂವಿಧಾನವು ಗಣರಾಜ್ಯ ದಿನವಾಗಿ ಜಾರಿಗೆ ಬಂದಿತು.
ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರಚಿಸುವ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಲು ಸಂವಿಧಾನ ಸಭೆಯು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿತು. ಭಾರತೀಯ ಸಂವಿಧಾನವು ಅಂಗ್ಲ ಭಾಷೆಯಲ್ಲಿ 1,17,360 ಪದಗಳನ್ನು ಹೊಂದಿರುವ ವಿಶ್ವ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.
ಸಂವಿಧಾನದ ಮಹತ್ವ
ಭಾರತ ಸಂವಿಧಾನ ದಿನವು ಅಪಾರ ಐತಿಹಾಸಿಕ ಹಾಗೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಇದು ಭಾರತೀಯ ಸಂವಿಧಾನ ಅಂಗೀಕಾರವನ್ನು ಗುರುತಿಸುತ್ತದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶ ಇತಿಹಾಸದಲ್ಲಿ ಘಟಿಸಿದ ಮಹತ್ವದ ಹಾಗೂ ಅದ್ಭುತ ಕ್ಷಣವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ನೇತೃತ್ವದ ಸಂವಿಧಾನ ರಚನಾ ಸಭೆಯ ಸದಸ್ಯರ ಅವಿರತ ಪ್ರಯತ್ನಗಳನ್ನು ಈ ದಿನ ನೆನಪಿಸುತ್ತದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪಾತ್ರ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2015ರ ನವೆಂಬರ್ 19 ರಂದು ಭಾರತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿತು. ಆ ಮೂಲಕ ಭಾರತೀಯ ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುವ ಆರಂಭಕ್ಕೆ ಮುನ್ನುಡಿ ಬರೆಯಿತು.
ಭಾರತ ಸಂವಿಧಾನ ಕುರಿತು 10 ಆಸಕ್ತಿದಾಯಕ ವಿಚಾರಗಳು
* ಭಾರತ ಸಂವಿಧಾನವು ಸಂಪೂರ್ಣ ಕೈಯಲ್ಲೇ ಬರೆದ ಹಾಗೂ ವಿನ್ಯಾಸಗೊಳಿಸಿರುವುದಾಗಿದೆ.
* ಭಾರತದ ಆಧುನಿಕ ಕಲೆಯ ಪ್ರವರ್ತಕ ಎಂದೇ ಕರೆಸಿಕೊಳ್ಳುವ ನಂದ್ ಲಾಲ್ ಬೋಸ್ ಅವರು ಸಂವಿಧಾನದ ಪ್ರತಿಯೊಂದು ಪುಟದ ಅಂಚನ್ನು ವಿಶಿಷ್ಠವಾಗಿ, ವಿಭಿನ್ನವಾಗಿ ವಿನ್ಯಾಸಗೊಳಿಸಿದ್ದರು ಹಾಗೂ ಕಲಾಕೃತಿಗಳಿಂದ ಅಲಂಕರಿಸಿದ್ದರು.
* ಕ್ಯಾಲಿಗ್ರಾಫಿಕ್ ಕಲೆಯ ಮಾಸ್ಟರ್ ಪ್ರೇಮ್ ಬಿಹಾರಿ ನರೇನ್ ರೈಜಾಡಾ ಏಕಾಂಗಿಯಾಗಿ ಸಂವಿಧಾನವನ್ನು ಬರೆದಿದ್ದಾರೆ.
* ಸಂವಿಧಾನ ಮೂಲ ಹಸ್ತಪತ್ರಿಯನ್ನು 16*22 ಇಂಚು ಅಳತೆಯ ಚರ್ಮಕಾಗದದ ಹಾಳೆಗಳ ಮೇಲೆ ಬರೆಯಲಾಗಿದೆ. ಇದರ ಜೀವತಾವಧಿ ಸಾವಿರ ವರ್ಷಗಳು ಎನ್ನಲಾಗುತ್ತದೆ. ಮೂಲ ಪ್ರತಿಯು 3.75 ಕೆಜಿ ತೂಕ ಹೊಂದಿದೆ.
* ಭಾರತೀಯ ಸಂವಿಧಾನದ ಹೆಸರನ್ನು ಅಮೆರಿಕದಿಂದ ಎರವಲು ಪಡೆಯಲಾಗಿದೆ. ಇದರ ಸ್ಥಾನ ಹಾಗೂ ಕಾರ್ಯಗಳನ್ನು ಬ್ರಿಟಿಪ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
* 1949ರಲ್ಲಿ 284 ಸದಸ್ಯರು ಸಹಿ ಹಾಕುವ ಮೂಲಕ ಸಂವಿಧಾನವನ್ನು ಅಂಗೀಕರಿಸಲಾಯಿತು.
* ಭಾರತೀಯ ಸಂವಿಧಾನವನ್ನು ಹಿಂದಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯಲಾಗಿದೆ.
* ಭಾರತದ ಸಂವಿಧಾನವನ್ನು ರಚಿಸಲು ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
* ಭಾರತ ಸಂವಿಧಾನವು ಪೀಠಿಕೆ, 448 ಲೇಖನಗಳು, 12 ಅನುಚ್ಛೇದಗಳು, 115 ತಿದ್ದುಪಡಿಗಳೊಂದಿಗೆ 22 ಭಾಗಗಳನ್ನು ಹೊಂದಿದೆ.
* ಭಾರತ ಸಂವಿಧಾನವು 1,17,360 ಪದಗಳನ್ನು ಹೊಂದಿರುವ ವಿಶ್ವ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.