Skin Care Tips: ನೀವು ಮಾಡುವ ಈ ತಪ್ಪುಗಳೇ ನಿಮ್ಮ ಚರ್ಮ ಹಾಳಾಗಲು ಕಾರಣ;ಇನ್ನಾದರೂ ನಿಗಾ ಇರಲಿ
Skin Care Tips: ಮೊಡವೆ, ಕಪ್ಪು ಕಲೆಗಳು, ಓಪನ್ ಪೋರ್ಸ್ ಹೆಚ್ಚಾಗಲು ನಾವು ಮಾಡುವ ಕೆಲವು ತಪ್ಪುಗಳೇ ಕಾರಣ. ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ಖಂಡಿತ ನಮ್ಮ ಚರ್ಮ ಸದಾ ಕಲೆರಹಿತವಾಗಿ, ತಾಜಾತನ, ಹೊಳಪಿನಿಂದ ಕೂಡಿರುತ್ತದೆ.
Skin Care Tips: ಅಂಗಾಂಗಗಳ ಆರೋಗ್ಯ ಎಷ್ಟು ಮುಖ್ಯವೋ ಚರ್ಮದ ಆರೋಗ್ಯ ಕೂಡಾ ಬಹಳ ಮುಖ್ಯ. ಆಯಾ ಕಾಲಕ್ಕೆ ತಕ್ಕಂತೆ ಪ್ರತಿದಿನವೂ ಚರ್ಮದ ಕಾಳಜಿ ಮಾಡಿದರೆ ನೀವು ಸುಂದರವಾಗಿ ಕಾಣುವುದರಲ್ಲಿ ಅನುಮಾನವೇ ಇಲ್ಲ. ಆದರೆ ಕೆಲವರು ಎಷ್ಟೇ ಕಾಳಜಿ ಮಾಡಿದರೆ ನಮ್ಮ ಚರ್ಮ ನಿಸ್ತೇಜವಾಗಿದೆ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅದರೆ ಇದಕ್ಕೆ ಅನೇಕ ಕಾರಣಗಳಿವೆ.
ಪ್ರತಿದಿನ ಒಂದೊಳ್ಳೆ ಫೇಸ್ ವಾಶ್ ಬಳಸಿ 3 ಸಮಯ ಮುಖ ತೊಳೆದರೆ ಅದು ಚರ್ಮದ ಆರೈಕೆ ಆಗುವುದಿಲ್ಲ. ನೀವು ಈ ತಪ್ಪುಗಳನ್ನು ಸರಿಪಡಿಸಿಕೊಂಡರೆ ನಿಮ್ಮ ಚರ್ಮ ಕಲೆರಹಿತವಾಗಿ, ಹೊಳೆಯುತ್ತದೆ.
ಸನ್‌ಸ್ಕ್ರೀನ್ ಹಚ್ಚದಿರುವುದು: ಸನ್‌ಸ್ಕ್ರೀನ್ ನಿರ್ಲಕ್ಷಿಸುವುದು ದೊಡ್ಡ ತಪ್ಪು. ಚರ್ಮಕ್ಕೆ ರಕ್ಷಣೆ ನೀಡದೆ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಅಕಾಲಿಕ ವಯಸ್ಸಾಗುವಿಕೆ, ಬಿಸಿಲು ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮೋಡ ಕವಿದ ದಿನಗಳಲ್ಲಿ ಕೂಡಾ , ಹೊರಗೆ ಹೋಗುವ ಮೊದಲು ಕನಿಷ್ಠ ಎಸ್‌ಪಿಎಫ್ 30 ಇರುವ ವಿಶಾಲ-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಅನ್ನು ಯಾವಾಗಲೂ ಹಚ್ಚಿ.
ಮೇಕಪ್ ತೆಗೆಯದೆ ಮಲಗುವುದು: ಕೆಲವರಿಗೆ ಸದಾ ಮೇಕಪ್ ಹಚ್ಚಿ ಅಭ್ಯಾಸ, ಮಲಗುವಾಗ ಕೂಡಾ ಅವರು ಮೇಕಪ್ ತೆಗೆಯುವುದಿಲ್ಲ. ಆದರೆ ಈ ರೀತ ಮಾಡುವುದರಿಂದ ನಿಮ್ಮ ಚರ್ಮ ಕಳೆಗುಂದುತ್ತದೆ. ಆದ್ದರಿಂದ ಮಲಗುವ ಮುನ್ನ ತಪ್ಪದೆ ಮೇಕಪ್ ತೆಗೆಯಿರಿ.
ಪದೇ ಪದೆ ಮುಖ ತೊಳೆಯುವುದು: ಪದೇ ಪದೆ ಮುಖ ತೊಳೆಯುವುದರಿಂದ ಮುಖ ಸ್ವಚ್ಛವಾಗುತ್ತದೆ ಅನ್ನೋದು ಕೆಲವರ ತಪ್ಪು ತಿಳುವಳಿಕೆ. ಆದರೆ ದಿನಕ್ಕೆ 3 ಬಾರಿ ಮುಖ ತೊಳೆದರೆ ಸಾಕು. ಅವಶ್ಯಕತೆ ಇದ್ದರೆ ಒಮ್ಮೆ ಉತ್ತಮ ಗುಣಮಟ್ಟದ ಕ್ಲೆನ್ಸರ್ ಬಳಸಿ.
ಸಮಯಕ್ಕೆ ತಕ್ಕಂತೆ ಮಾಯಿಶ್ಚರೈಸರ್ ಮಾಡದೆ ಇರುವುದು: ತೇವಾಂಶವುಳ್ಳ ಮತ್ತು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸರ್ ಬಹಳ ಪ್ರಮುಖವಾಗಿದೆ. ಆದ್ದರಿಂದ ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಚರ್ಮದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಮಾಯಿಶ್ಚರೈಸರ್ ಆರಿಸಿಕೊಳ್ಳಿ.
ಕೆಮಿಕಲ್‌ಯುಕ್ತ ಪ್ರಾಡಕ್ಟ್ ಬಳಸುವುದು: ಕೆಲವು ತ್ವಚೆ ಉತ್ಪನ್ನಗಳು ಆಲ್ಕೋಹಾಲ್, ಸುಗಂಧ ಮತ್ತು ಸಲ್ಫೇಟ್‌ಗಳಂಥ ಕಠಿಣ ರಾಸಾಯನಿಕ ಪದಾರ್ಥಗಳನ್ನು ಹೊಂದಿರುತ್ತವೆ, ಅದು ಚರ್ಮವನ್ನು ಹಾನಿಗೊಳಿಸಬಹುದು. ವಿಶೇಷವಾಗಿ ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಇನ್ನಷ್ಟು ಸಮಸ್ಯೆ ಆಗಬಹುದು. ಕಿರಿಕಿರಿ ಉಂಟುಮಾಡದ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ.
ವೈದ್ಯರನ್ನು ಸಂಪರ್ಕಿಸದೆ ಇರುವುದು: ಚರ್ಮದ ಸಮಸ್ಯೆಗೆ ಕೆಲವರು ಮನೆಮದ್ದು ಬಳಸುತ್ತಾರೆ. ಅದು ಒಳ್ಳಯದೇ. ಆದರೆ ಸಮಸ್ಯೆ ಕಠಿಣವಾದಾಗ ಚರ್ಮ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳ
ನಿಯಮಿತವಾಗಿ ಎಕ್ಸ್‌ಫೋಲಿಯೇಟ್ ಮಾಡದಿರುವುದು: ಎಕ್ಸ್‌ಫೋಲಿಯೇಟ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಜೀವಕೋಶದ ಉಸಿರಾಟ ಹೆಚ್ಚಿಸುತ್ತದೆ. ಚರ್ಮ ತಾಜಾತನಿಂದ ಕೂಡಿರುತ್ತದೆ, ಹೊಳಪು ಉಂಟಾಗುತ್ತದೆ. ಹಾಗೆಂದ ಮಾತ್ರಕ್ಕೆ ಅತಿಯಾದ ಎಕ್ಫೋಲಿಯೇಟ್ ಮಾಡುವುದು ಬೇಡ. ಒರಟಾದ ಸ್ಕಬ್ರರ್ ಚರ್ಮವನ್ನು ಹಾನಿಗೊಳಿಸುತ್ತದೆ. ಚರ್ಮಕ್ಕೆ ಹಾನಿಯಾಗದಂತೆ ಮೃದುವಾದ ಸ್ಕ್ರಬ್ರ್ ಬಳಸಿ, ವಾರಕ್ಕೆ ಒಮ್ಮೆ ಅಥವಾ 2 ಬಾರಿ ಬಳಸಿ.
ಕುತ್ತಿಗೆ ನಿರ್ಲಕ್ಷಿಸುವುದು: ಕೆಲವರು ಮುಖ ಮಾತ್ರ ತೊಳೆದು ಕುತ್ತಿಗೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಮುಖ ಮಾತ್ರ ಚೆನ್ನಾಗಿದ್ದು ಕುತ್ತಿಗೆ ಅಂದಗೆಟ್ಟರೆ ನೋಡಲು ಚೆನ್ನಾಗಿರುವುದಿಲ್ಲ. ಆದ್ದರಿಂದ ನೀವು ಮುಖ ತೊಳೆಯಲಿ, ಫೇಸ್ ವಾಶ್ ಹಚ್ಚಲಿ, ಮಾಯಿಶ್ಚರೈಸರ್ ಹಚ್ಚಲಿ ಕುತ್ತಿಗೆ ಕಡೆಗೂ ಗಮನ ನೀಡಿ.
ಅತಿ ಹೆಚ್ಚು ಬಿಸಿ ನೀರು ಬಳಸುವುದು: ಚರ್ಮಕ್ಕೆ ಒಳ್ಳೆಯದು ಎಂದು ಕೆಲವರು ಅತಿ ಬಿಸಿ ನೀರು ಬಳಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಬಿಸಿ ನೀರು ಚರ್ಮದ ನೈಸರ್ಗಿಕ ತೈಲದ ಅಂಶವನ್ನು ನಾಶ ಮಾಡಬಹುದು. ಚರ್ಮವನ್ನು ಶುಷ್ಕವನ್ನಾಗಿಸುತ್ತದೆ. ಆದ್ದರಿಂದ ತೇವಾಂಶವನ್ನು ಉಳಿಸಿಕೊಂಡು ನಿಮ್ಮ ಮುಖ ಸ್ವಚ್ಛವಾಗಿರಬೇಕೆಂದರೆ ಉಗುರು ಬೆಚ್ಚಗಿನ ನೀರನ್ನು ಬಳಸಿ.
ವಿಭಾಗ