ಬಿಗ್‌ ಬಿಲಿಯನ್‌ ಡೇ 2024: ಸೆ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಡಿಸ್ಕೌಂಟ್‌, ಆನ್‌ಲೈನ್‌ ಅಂಗಡಿಯಲ್ಲಿ ಜಾತ್ರೆ-technology news flipkart big billion days sale 2024 to start soon big deals on september 27 pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಗ್‌ ಬಿಲಿಯನ್‌ ಡೇ 2024: ಸೆ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಡಿಸ್ಕೌಂಟ್‌, ಆನ್‌ಲೈನ್‌ ಅಂಗಡಿಯಲ್ಲಿ ಜಾತ್ರೆ

ಬಿಗ್‌ ಬಿಲಿಯನ್‌ ಡೇ 2024: ಸೆ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಡಿಸ್ಕೌಂಟ್‌, ಆನ್‌ಲೈನ್‌ ಅಂಗಡಿಯಲ್ಲಿ ಜಾತ್ರೆ

ಬಿಗ್‌ ಬಿಲಿಯನ್‌ ಡೇ 2024: ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಅಂಗಡಿಯಲ್ಲಿ ಈ ವರ್ಷದ ಹಬ್ಬದ ಸೇಲ್‌ ಬಿಗ್‌ ಬಿಲಿಯನ್‌ ಡೇಸ್‌ 2024 ಇದೇ ಸೆಪ್ಟೆಂಬರ್‌ 27ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ಗಳು, ಟಿವಿ, ಗೃಹೋಪಕರಣಗಳು, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಎಲ್ಲಾ ಕೆಟಗರಿಗಳಲ್ಲೂ ಭರ್ಜರಿ ಡಿಸ್ಕೌಂಟ್‌ ದೊರಕಲಿದೆ.

ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಡೇ 2024 ಆರಂಭವಾಗಲಿದೆ.
ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಡೇ 2024 ಆರಂಭವಾಗಲಿದೆ.

ಬಿಗ್‌ ಬಿಲಿಯನ್‌ ಡೇ 2024: ಪ್ರತಿವರ್ಷ ಹಬ್ಬದ ಋತುವಿನಲ್ಲಿ ಇಕಾಮರ್ಸ್‌ ತಾಣಗಳು ದೊಡ್ಡ ಮಟ್ಟದ ಆಫರ್‌ ಪ್ರಕಟಿಸುತ್ತವೆ. ಫ್ಲಿಪ್‌ಕಾರ್ಟ್‌ ಕಂಪನಿಯು ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಹೆಸರಿನಲ್ಲಿ ಈ ರೀತಿ ಭರ್ಜರಿ ಕೊಡುಗೆ ನೀಡುತ್ತದೆ. ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಅಂಗಡಿಯಲ್ಲಿ ಈ ವರ್ಷದ ಹಬ್ಬದ ಸೇಲ್‌ ಬಿಗ್‌ ಬಿಲಿಯನ್‌ ಡೇಸ್‌ 2024 ಇದೇ ಸೆಪ್ಟೆಂಬರ್‌ 27ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ಗಳು, ಟಿವಿ, ಗೃಹೋಪಕರಣಗಳು, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಎಲ್ಲಾ ಕೆಟಗರಿಗಳಲ್ಲೂ ಭರ್ಜರಿ ಡಿಸ್ಕೌಂಟ್‌ ದೊರಕಲಿದೆ. ಎಚ್‌ಡಿಎಫ್‌ಸಿ ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಸಾಕಷ್ಟು ಲಾಭವೂ ದೊರಕಲಿದೆ.

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ 2024ರ ಸಂದರ್ಭದಲ್ಲಿ ಆಪಲ್‌, ಗೂಗಲ್‌, ಸ್ಯಾಮ್‌ಸಂಗ್‌ನಂತಹ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳು, ಐಫೋನ್‌ಗಳ ದರವನ್ನು ಗಮನಾರ್ಹವಾಗಿ ತಗ್ಗಿಸುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ. ಅಂದಹಾಗೆ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಎಲ್ಲಾ ಸದಸ್ಯರಿಗೆ ಒಂದೇ ರೀತಿಯ ಡಿಸ್ಕೌಂಟ್‌ ದೊರಕಲಿದೆ. ಆದರೆ, ಫ್ಲಿಪ್‌ಕಾರ್ಟ್‌ ಪ್ಲಸ್‌ ಚಂದಾದಾರರಿಗೆ ಮಾತ್ರ ಸೆಪ್ಟೆಂಬರ್‌ 26ರಿಂದಲೇ ಆಫರ್‌ಗಳು ದೊರಕಲಿವೆ. ಉಳಿದವರಿಗೆ ಸೆಪ್ಟೆಂಬರ್‌ 27ರಿಂದ ಆಫರ್‌ಗಳು ಲಭ್ಯವಿರಲಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ ಲಾಭ

ಈ ಬಾರಿ ಫ್ಲಿಪ್‌ಕಾರ್ಟ್‌ ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್‌ ಜತೆ ಕೈಜೋಡಿಸಿದ್ದು, ಸಾಕಷ್ಟು ಆಫರ್‌ಗಳು ಗ್ರಾಹಕರಿಗೆ ದೊರಕಲಿದೆ. ಎಚ್‌ಡಿಎಫ್‌ಸಿ ಗ್ರಾಹಕರಿಗೆ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಯಲ್ಲಿ ಶೇಕಡ 10ರಷ್ಟು ಡಿಸ್ಕೌಂಟ್‌ ದೊರಕಲಿದೆ. ಜತೆಗೆ ಸುಲಭವಾಗಿ ಇಎಂಐ ವಹಿವಾಟು ನಡೆಸಬಹುದಾಗಿದೆ. ಇದೇ ಸಮಯದಲ್ಲಿ ಗ್ರಾಹಕರು ಫ್ಲಿಪ್‌ಕಾರ್ಟ್‌ನ ಸೂಪರ್‌ ಮನಿ ಆಪ್‌ ಮೂಲಕ ಯುಪಿಐನಲ್ಲಿ ಲೈಫ್‌ಟೈಮ್‌ ಕ್ಯಾಶ್‌ಬ್ಯಾಕ್‌ ಸೌಲಭ್ಯವನ್ನೂ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಸಾಕಷ್ಟು ಆಫರ್‌ಗಳು ದೊರಕಲಿವೆ. ಗ್ಯಾಲಾಕ್ಸಿ ಎಸ್‌23, ಗ್ಯಾಲಾಕ್ಸಿ ಎಸ್‌23 ಎಫ್‌ಇ, ಗ್ಯಾಲಾಕ್ಸಿ ಎ14 5ಜಿ ಮುಂತಾದ ಸ್ಮಾರ್ಟ್‌ಫೋನ್‌ಗಳ ದರ ಕಡಿಮೆ ಇರಲಿದೆ. ಈಗಲೇ ಗ್ರಾಹಕರು ತಮಗೆ ಬೇಕಾದ ಸ್ಮಾರ್ಟ್‌ಫೋನ್‌ಗಳನ್ನು ವಿಶ್‌ಲಿಸ್ಟ್‌ಗೆ ಸೇರಿಸಬಹುದು. ಆಫರ್‌ ಆರಂಭವಾದ ತಕ್ಷಣ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ. ನಥಿಂಗ್‌ ಫೋನ್‌ 2ಎ, 2ಎ ಪ್ಲಸ್‌ ಮತ್ತು ಏಸರ್‌ ಆಸ್ಫೈರ್‌ 3ಗಳಿಗೂ ಭರ್ಜರಿ ಡಿಸ್ಕೌಂಟ್‌ ದೊರಕಲಿದೆ.

ಟಿವಿಗಳು, ಸ್ಮಾರ್ಟ್‌ವಾಚ್‌ಗಳು, ಟ್ಯಾಬ್ಲೆಟ್‌ಗಳು, ಆಡಿಯೊ ಉಪಕರಣಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಖರೀದಿ ಮೇಲೆ ಡೀಲ್‌ಗಳ ವಿವರವನ್ನು ಫ್ಲಿಪ್‌ಕಾರ್ಟ್‌ ಸದ್ಯದಲ್ಲಿಯೇ ಪ್ರಕಟಿಸಲಿದೆ. ನಥಿಂಗ್ ಫೋನ್ 2a ಮತ್ತು ಐಫೋನ್ ಮಾದರಿಗಳ ಮೇಲಿನ ಕೊಡುಗೆಗಳನ್ನು ಕ್ರಮವಾಗಿ ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 23 ರಂದು ಘೋಷಿಸಲಾಗುತ್ತದೆ. ಇದರೊಂದಿಗೆ ಎಕ್ಸ್‌ಚೇಂಜ್‌ ಡೀಲ್‌ಗಳನ್ನೂ ಕಂಪನಿ ಪ್ರಕಟಿಸಲಿದೆ.

mysore-dasara_Entry_Point