ಪ್ರತಿದಿನ ಬಳಸಿದ್ರೂ ಹಲವು ವರ್ಷಗಳ ಕಾಲ ವಾಷಿಂಗ್ ಮಷಿನ್ ಹಾಳಾಗದಂತೆ ಇರಬೇಕು ಅಂದ್ರೆ ಈ ಟಿಪ್ಸ್ ನಿಮಗೆ ಗೊತ್ತಿರಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಬಳಸಿದ್ರೂ ಹಲವು ವರ್ಷಗಳ ಕಾಲ ವಾಷಿಂಗ್ ಮಷಿನ್ ಹಾಳಾಗದಂತೆ ಇರಬೇಕು ಅಂದ್ರೆ ಈ ಟಿಪ್ಸ್ ನಿಮಗೆ ಗೊತ್ತಿರಬೇಕು

ಪ್ರತಿದಿನ ಬಳಸಿದ್ರೂ ಹಲವು ವರ್ಷಗಳ ಕಾಲ ವಾಷಿಂಗ್ ಮಷಿನ್ ಹಾಳಾಗದಂತೆ ಇರಬೇಕು ಅಂದ್ರೆ ಈ ಟಿಪ್ಸ್ ನಿಮಗೆ ಗೊತ್ತಿರಬೇಕು

ಈಗಿನ ಕಾಲದಲ್ಲಿ ಬಟ್ಟೆಯನ್ನು ಕೈಯಿಂದ ಒಗೆಯುವವರಿಗಿಂತ ವಾಷಿಂಗ್‌ ಮಷಿನ್ ಬಳಸುವವರ ಸಂಖ್ಯೆಯೇ ಹೆಚ್ಚು. ಪ್ರತಿದಿನ ವಾಷಿಂಗ್ ಮಷಿನ್ ಬಳಸಿದ್ರೂ ಅದು ಕೆಡಬಾರದು, ಆಗಾಗ ಕೈ ಕೊಡಬಾರದು, ದೀರ್ಘಕಾಲ ಬಾಳಿಕೆ ಬರಬೇಕು ಅಂತಾದ್ರೆ ನಿಮಗೆ ಈ ಟಿಪ್ಸ್ ಗೊತ್ತಿರಬೇಕು.

ವಾಷಿಂಗ್ ಮಷಿನ್ ಬಳಸುವ ಟಿಪ್ಸ್‌
ವಾಷಿಂಗ್ ಮಷಿನ್ ಬಳಸುವ ಟಿಪ್ಸ್‌

‘ವಾಷಿಂಗ್ ಮಷಿನ್ ಇಲ್ಲಾ ಅಂದ್ರೆ ಬಹಳ ಕಷ್ಟನಪ್ಪಾ, ಒಂದ್‌ ದಿನ ಮಷಿನ್ ಹಾಳಾದ್ರೂ ಹೇಗಪ್ಪಾ ಬಟ್ಟೆ ಒಗಿಯೋದು ಎನ್ನುವ ಚಿಂತೆ ಮೂಡುತ್ತೆ‘ ಅಂತ ಹೆಣ್ಣುಮಕ್ಕಳು ಗೋಳು ತೋಡಿಕೊಳ್ಳುತ್ತಾರೆ. ಹಾಗಂತ ಒಮ್ಮೆ ತಂದ ಮಷಿನ್ ಹಾಳಾಗದೇ ಇರಲು ಸಾಧ್ಯಾನಾ, ಆಗಾಗ ಏನಾದ್ರೂ ತೊಂದ್ರೆ ಬರ್ತಾನೆ ಇರುತ್ತೆ ಅಲ್ವಾ ಅಂತ ನಿಮಗೆ ಅನ್ನಿಸಬಹುದು. ಆದರೆ ಖಂಡಿತ ವಾಷಿಂಗ್ ಮಷಿನ್ ಹಾಳಾಗದಂತೆ ನೋಡಿಕೊಳ್ಳಬಹುದು.

ವಾಷಿಂಗ್ ಮಷಿನ್ ದೀರ್ಘಕಾಲ ಬಾಳಿಕೆ ಬರಬೇಕು ಅಂತಿದ್ರೆ ಅದನ್ನು ಬಳಸುವ ರೀತಿ ನಮಗೆ ತಿಳಿದಿರಬೇಕು. ಹೇಗೆ ನಿರ್ವಹಿಸಬೇಕು ಎನ್ನುವ ತಿಳುವಳಿಕೆ ಕೂಡ ಇರಬೇಕು. ಇಲ್ಲದೇ ಹೋದಲ್ಲಿ ಪದೇ ಪದೇ ರಿಪೇರಿಗೆ ಬಂದು ಬೇಗ ಹಾಳಾಗುತ್ತೆ. ಹಾಗಾದ್ರೆ ವಾಷಿಂಗ್ ಮಷಿನ್ ದೀರ್ಘಕಾಲದ ಹಾಳಾಗಬಾರದು ಅಂದ್ರೆ ಅದನ್ನು ಹೇಗೆ ಬಳಸಬೇಕು ಎನ್ನುವ ಟಿಪ್ಸ್ ಇಲ್ಲಿದೆ.

ವಾಷಿಂಗ್ ಮಷಿನ್ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

* ಲೋಡ್ ಬಗ್ಗೆ ಗಮನ ಇರಲಿ: ಪ್ರತಿ ವಾಷಿಂಗ್ ಮಷಿನ್‌ಗೂ ಇಂತಿಷ್ಟು ಕೆಜಿ ಲೋಡ್ ಅಂದರೆ ಬಟ್ಟೆಯನ್ನು ಹಾಕಬೇಕು ಎಂದಿರುತ್ತದೆ. 6.5 ಕೆಜಿ, 7 ಕೆಜಿ, 7.5 ಕೆಜಿ ಎಂಬ ನಿರ್ದಿಷ್ಟ ತೂಕ ಇರುತ್ತದೆ. ಅದಕ್ಕಿಂತ ಹೆಚ್ಚಿನ ಲೋಡ್ ಹಾಕಿದಾಗ ವಾಷಿಂಗ್ ಮಷಿನ್ ಒಳಗಡೆ ರಿಮ್‌ಗೆ ತೊಂದರೆ ಆಗುತ್ತದೆ. ಮುಕ್ಕಾಲು ಭಾಗದಷ್ಟು ಮಾತ್ರ ಬಟ್ಟೆ ಹಾಕಲು ಅವಕಾಶ ಇರುತ್ತದೆ. ವಾಷಿಂಗ್ ಮಷಿನ್ ಖರೀದಿಸುವಾಗಲೇ ಈ ಬಗ್ಗೆ ಎಲ್ಲಾ ಚೆನ್ನಾಗಿ ತಿಳಿದುಕೊಂಡಿರಬೇಕು.

* ವಾಷಿಂಗ್ ಮಷಿನ್ ಜೊತೆ ನೀಡುವ ಮ್ಯಾನುವಲ್ ಬುಕ್ ಅನ್ನು ಸಂಪೂರ್ಣ ಓದಿ, ಅದರಲ್ಲಿ ಬಳಕೆ ಮಾಡುವ ವಿಧಾನ ಹೇಗೆ ಕೊಟ್ಟಿರುತ್ತಾರೋ ಹಾಗೆ ತಪ್ಪದೇ ಅನುಸರಿಸಿ.

* ಲಿಂಟ್ ಫಿಲ್ಟರ್ ಮತ್ತು ವಾಟರ್ ಇನ್ಲೆಟ್ ಬಳಿ ವಾರಕ್ಕೊಮ್ಮೆಯಾದರೂ ನೀರಿನ ಫಿಲ್ಟರ್ ಅನ್ನು ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಅವುಗಳಲ್ಲಿ ಧೂಳು, ಗಲೀಜು ಸಿಕ್ಕು ತೊಂದರೆಯಾಗುತ್ತದೆ. ಕೆಲವು ವಾಷಿಂಗ್ ಮಷಿನ್‌ನಲ್ಲಿ ರಬ್ಬರ್ ಗ್ಯಾಸ್ಕೆಟ್‌ಗಳಿರುತ್ತವೆ. ಅವುಗಳನ್ನು ಸಹ ಆಗಾಗ ಸ್ವಚ್ಛಗೊಳಿಸಬೇಕು.

* ವಾಷಿಂಗ್ ಮಷಿನ್ ಅನ್ನು ಧೂಳು, ಕೊಳೆ ಹಾಗೂ ಸೂರ್ಯನ ಶಾಖದಿಂದ ರಕ್ಷಿಸಿ. ವಾಷಿಂಗ್ ಮಷಿನ್ ದೀರ್ಘವಧಿ ಬಾಳಿಕೆ ಬರಲು ಅದಕ್ಕೆ ಕವರ್ ಹಾಕುವುದು ಬಹಳ ಮುಖ್ಯ.

* ತಿಂಗಳಿಗೊಮ್ಮೆ ವಾಷಿಂಗ್ ಪೌಡರ್ ಹಾಕಿ ಖಾಲಿ ಯಂತ್ರವನ್ನು ಚಲಾಯಿಸಿ. ಕನಿಷ್ಠ ಒಂದು ಗಂಟೆ ಕಾಲ ಹಾಗೆ ಬಿಡಿ. ನಂತರ ಅದು ತನ್ನ ಡ್ರಮ್ ಅನ್ನು ಸ್ವತಃ ಸ್ವಚ್ಛಗೊಳಿಸುತ್ತದೆ. ಆಟೊ ಕ್ಲೀನ್ ಆಯ್ಕೆ ಇದ್ದರೆ ಅದನ್ನೂ ಬಳಸಬಹುದು.

* ಕೆಲವರು ವಾಷಿಂಗ್ ಮಷಿನ್‌ಗೆ ಬಟ್ಟೆ ಹಾಕಿ ನಮ್ಮ ಕೆಲಸಕ್ಕೆ ಹೊರಟು ಬಿಡುತ್ತಾರೆ. ಇದು ಕೂಡ ಒಳ್ಳೆಯ ಅಭ್ಯಾಸವಲ್ಲ. ದೀರ್ಘಕಾಲದ ಒದ್ದೆ ಬಟ್ಟೆಯನ್ನು ವಾಷಿಂಗ್ ಮಷಿನ್‌ನಲ್ಲಿ ಇಡುವುದರಿಂದ ಇದರ ಕಾರ್ಯಕ್ಷಮತೆ ಕ್ರಮೇಣ ಕಡಿಮೆಯಾಗುತ್ತದೆ.

* ಆಟೊಮೆಟಿಕ್‌, ಸೆಮಿ ಆಟೊಮೆಟಿಕ್‌, ಫ್ರಂಟ್‌ ಲೋಡ್, ಟಾಪ್ ಲೋಡ್ ಹೀಗೆ ವಾಷಿಂಗ್ ಮಷಿನ್‌ಗೆ ಅನುಗುಣವಾಗಿ ವಾಷಿಂಗ್ ಪೌಡರ್ ಅಥವಾ ಲಿಕ್ವಿಡ್ ಬಳಸಬೇಕು. ಇದು ಬಹಳ ಮುಖ್ಯ. ಟಾಪ್‌ ಲೋಡ್ ವಾಷಿಂಗ್ ಮಷಿನ್ ಹಾಗೂ ಫ್ರಂಟ್‌ ಲೋಡ್‌ ವಾಷಿಂಗ್ ಮಷಿನ್‌ಗೆಂದೇ ಇರುವ ಲಿಕ್ವಿಡ್‌ಗಳನ್ನು ಬಳಸಬೇಕು. ಇಲ್ಲದೇ ಹೋದರು ಇದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಪದೇ ಪದೇ ರಿಪೇರಿಗೆ ಬರುತ್ತದೆ.

* ಇನ್ಲೆಟ್ ಮತ್ತು ಔಟ್ಲೆಟ್ ಪೈಪ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

* ಬಟ್ಟೆಗೆ ಪರಿಮಳ ಸೂಸುವ ಕಂಫರ್ಟ್‌ನಂತಹ ಲಿಕ್ವಿಡ್ ಬಳಸುವುದಿದ್ದರೆ ಇದನ್ನು ಮಷಿನ್‌ ತಕ್ಕಂತೆ ಬಳಸಿ.

* ಡ್ರಮ್‌ನಲ್ಲಿ ಉಳಿದಿರುವ ಡಿಟರ್ಜೆಂಟ್ ಅನ್ನು ತಪ್ಪದೇ ಸ್ವಚ್ಛ ಮಾಡಿ, ಇಲ್ಲದೇ ಹೋದಲ್ಲಿ ಮಷಿನ್‌ಗೆ ಹಾನಿಯಾಗುತ್ತದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ನೀವು ವಾಷಿಂಗ್ ಮಷಿನ್ ಬಳಸಿದರೆ ಬಹಳ ದಿನಗಳವರೆಗೆ ಮಷಿನ್ ಕೆಡದೇ ದೀರ್ಘಕಾಲ ಬಾಳಿಕೆ ಬರುತ್ತದೆ.

Whats_app_banner