ಫಾರಿನ್ ಟ್ರಿಪ್ ಪ್ಲಾನ್ ಇದ್ಯಾ, ಕಡಿಮೆ ಖರ್ಚಲ್ಲಿ ಹೋಗಿ ಬರಬಹುದಾದ 10 ದೇಶಗಳಿವು; ಇಲ್ಲಿಗೆ ಹೋಗೋಕೆ ಬೆಸ್ಟ್ ಟೈಮ್ ಯಾವ್ದು ನೋಡಿ
International Travel: ನೀವು ಪ್ರವಾಸ ಪ್ರಿಯರೇ? ಪ್ರವಾಸ ಹೋಗಲು ಬಜೆಟ್ ಸ್ನೇಹಿ ದೇಶಗಳನ್ನು ಹುಡುಕುತ್ತಿದ್ದರೆ ನಿಮಗಾಗಿ ಇಲ್ಲಿ ಕೆಲವು ದೇಶಗಳ ಪಟ್ಟಿಯನ್ನು ಕೊಡಲಾಗಿದೆ. ಜೊತೆಗೆ ಯಾವ ಸಮಯದಲ್ಲಿ ಆ ದೇಶಗಳಿಗೆ ಪ್ರವಾಸ ಬೆಳೆಸುವುದು ಸೂಕ್ತ ಎಂಬುದನ್ನು ನೀಡಲಾಗಿದೆ.
ಪ್ರವಾಸ ಪ್ರಿಯರಿಗೆ ಹೊಸ ಹೊಸ ಊರುಗಳಿಗೆ ಭೇಟಿ ನೀಡುವುದೆಂದರೆ ಎಲ್ಲಿಲ್ಲದ ಸಂತೋಷ ನೀಡುತ್ತದೆ. ಕೆಲವರು ಹೊಸ ದೇಶಗಳಿಗೆ ಪ್ರವಾಸಕ್ಕೆ ಹೋಗಲು ಕಾಯುತ್ತಿರುತ್ತಾರೆ. ಆದರೆ ಕೆಲವು ವಿದೇಶ ಪ್ರವಾಸಗಳು ದುಬಾರಿಯಾಗಿರುತ್ತದೆ. ಹಾಗಾಗಿ ಎಲ್ಲರೂ ಬಜೆಟ್ ಸ್ನೇಹಿ ಸ್ಥಳಗಳನ್ನು ಹುಡುಕುವುದು ಹೆಚ್ಚು. ಆದರೆ ಬಜೆಟ್ ಸ್ನೇಹಿ ಪ್ರವಾಸವೆಂದರೆ ನಿಮ್ಮ ಎಲ್ಲಾ ಆಸೆಗಳಿಗೆ ಕಡಿವಾಣ ಹಾಕುವುದು ಎಂದರ್ಥವಲ್ಲ. ನಿಮ್ಮ ಸ್ಥಳ ಅನ್ವೇಷಣೆ ಮತ್ತು ಸಂತೋಷ ಹೆಚ್ಚಿಸಿಕೊಳ್ಳಲು ಅಂತರರಾಷ್ಟ್ರೀಯ ಪ್ರವಾಸವನ್ನು ಸಹ ಯೋಜಿಸಬಹುದು. ಹೇಗೆಂದರೆ ಭಾರತದಿಂದ ಅಂತಹ ಬಜೆಟ್ ಸ್ನೇಹಿ ದೇಶಗಳಿಗೆ ನೀವೂ ಕೂಡಾ ಖಂಡಿತ ಪ್ರವಾಸ ಹೋಗಬಹುದು. ವಿದೇಶಗಳಿಗೆ ಪ್ರವಾಸ ಬೆಳಸುವಾಗ ಅಲ್ಲಿನ ಸ್ಥಳೀಯ ಹಬ್ಬ, ಅಲ್ಲಿನ ಹವಾಮಾನ ಪರಿಸ್ಥಿತಿಗಳನ್ನು ತಿಳಿದು ಪ್ರವಾಸಕ್ಕೆ ಹೋದರೆ ಸಂತೋಷ ಇಮ್ಮಡಿಯಾಗುತ್ತದೆ.
ಬಜೆಟ್ ಸ್ನೇಹಿ ವಿದೇಶ ಪ್ರವಾಸಕ್ಕೆ ಹೋಗಲು ನೀವು ಬಯಸಿದರೆ ಇಲ್ಲಿ ಅಂತಹ 10 ಬಜೆಟ್ ಸ್ನೇಹಿ ಸ್ಥಳಗಳು ಇಲ್ಲಿವೆ.
1. ನೇಪಾಳ
ಹಿಮಾಲಯದ ಮಡಿಲಿನಲ್ಲಿರುವ ನೇಪಾಳವು ಅದ್ಭುತ ಭೂದೃಶ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಅನುಭವಗಳನ್ನು ನಿಮಗೆ ನೀಡುತ್ತದೆ. ನೇಪಾಳಕ್ಕೆ ಪ್ರವಾಸಕ್ಕೆ ಹೋಗಲು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಬೆಸ್ಟ್ ಸಮಯ. ಅಲ್ಲಿನ ಆಹ್ಲಾದಕರ ವಾತಾವರಣ ಚಾರಣಕ್ಕೆ ಪೂರಕವಾಗಿರುತ್ತದೆ.
ಇದನ್ನೂ ಓದಿ: Travel: ವೀಸಾ ಇಲ್ಲದೆ ಇಂಡೋನೇಷ್ಯಾ ಭೇಟಿಗೆ ಅವಕಾಶ; ಈ ತಾಣಗಳಿಗೆ ಮಿಸ್ ಮಾಡದೆ ಹೋಗಿ ಬನ್ನಿ
2. ಶ್ರೀಲಂಕಾ
ಉಷ್ಣವಲಯದ ಸ್ವರ್ಗ ಎಂದೇ ಹೆಸರಾದ ಶ್ರೀಲಂಕಾ ಬಜೆಟ್ ಸ್ನೇಹಿ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಡಿಸೆಂಬರ್‌ನಿಂದ ಏಪ್ರಿಲ್ ಮಧ್ಯದವರೆಗಿನ ಸಮಯ ಅಲ್ಲಿಗೆ ಪ್ರವಾಸ ಹೂಗಲು ಸೂಕ್ತ. ಅಲ್ಲಿನ ಗತಕಾಲದ ದೇವಸ್ಥಾನಗಳು, ಕಡಲತೀರಗಳು ಮತ್ತು ಹಸಿರು ಚಹಾ ತೋಟಗಳು ನಿಮ್ಮ ಕಣ್ಮನ ಸೆಳೆಯುತ್ತವೆ.
3. ವಿಯೆಟ್ನಾಂ
ಸದಾ ಗದ್ದಲದ ಹೊನೋಯಿ ಬೀದಿಗಳಿಂದ ಹಾ ಲಾಂಗ್ ಕೊಲ್ಲಿಯವರೆಗಿನ ಭೂದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ಅಹ್ಲಾದಕರ ಹವಾಮಾನವನ್ನು ಆನಂದಿಸಲು ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಶುಷ್ಕ ಅವಧಿ ಬೆಸ್ಟ್.
4. ಥೈಲ್ಯಾಂಡ್
ಶ್ರೀಮಂತ ಸಂಸ್ಕೃತಿ ಮತ್ತು ಕಡಲತೀರಗಳಿಗೆ ಹೆಸರುವಾಸಿಯಾದ ಥೈಲ್ಯಾಂಡ್ ವರ್ಷಪೂರ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಲ್ಲಿನ ತೀವ್ರ ಬಿಸಿಲಿನ ಸಮಯದಲ್ಲಿ ಬೇಟಿ ನೀಡುವುದಕ್ಕಿಂತ ನವೆಂಬರ್‌ನಿಂದ ಫೆಬ್ರುವರಿವರೆಗಿನ ತಂಪಾದ ವಾತಾವರಣ ಪ್ರವಾಸದ ಮಜ ಅನುಭವಿಸಲು ಬೆಸ್ಟ್ ಆಗಿದೆ.
ಇದನ್ನೂ ಓದಿ: Travel: ಭಾರತೀಯರಿಗೆ ಶ್ರೀಲಂಕಾ ಪ್ರವಾಸವಿನ್ನು ಸುಲಭ; ಈ ದೇಶದಲ್ಲಿ ಕಡಿಮೆ ಖರ್ಚಿನಲ್ಲಿ ನೋಡಬಹುದಾದ 6 ಅದ್ಭುತ ತಾಣಗಳಿವು
5. ಕಾಂಬೋಡಿಯಾ
ಸಾಂಪ್ರದಾಯಿಕ ಅಂಕೋರ್ ವಾಟ್‌ನ ತವರಾದ ಕಾಂಬೋಡಿಯಾವು ನವೆಂಬರ್‌ನಿಂದ ಮಾರ್ಚ್‌ವರೆಗಿನ ಶುಷ್ಕ ಕಾಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ಖಮೇರ್ ಸಂಸ್ಕೃತಿ ಪುರಾತನ ದೇವಾಲಯಗಳು ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.
6. ಇಂಡೋನೇಷ್ಯಾ
ಇಂಡೋನೇಷ್ಯಾದ ಅತ್ಯಾಕರ್ಷಕ ಭೂದೃಶ್ಯಗಳು ಬಜೆಟ್ ಸ್ನೇಹಿ ಪ್ರವಾಸ ಪ್ರಿಯರ ಸ್ವರ್ಗವಾಗಿದೆ. ಅಲ್ಲಿನ ಬಾಲಿ, ಜಾವಾ ಮುಂತಾದ ಸ್ಥಳಗಳಿಗೆ ಭೇಟಿ ನೀಡಲು ಮೇ ದಿಂದ ಸಪ್ಟೆಂಬರ್ ವರೆಗಿನ ಸಮಯವು ಬೆಸ್ಟ್ ಆಗಿದೆ.
7. ಮಲೇಷ್ಯಾ
ಆಧುನಿಕತೆ ಮತ್ತು ನೈಸರ್ಗಿಕ ಸೌಂದರ್ಯದ ಮಿಶ್ರಣವಾದ ಮಲೇಷ್ಯಾ ಪ್ರವಾಸಿಗರಿಗೆ ಸಂತೋಷ ನೀಡುತ್ತದೆ. ನವೆಂಬರ್‌ನಿಂದ ಫೆಬ್ರುವರಿವರೆಗಿನ ತಂಪಾದ ವಾತಾವರಣ ಪ್ರವಾಸಕ್ಕೆ ಯೋಗ್ಯವಾಗಿದೆ. ಕೌಲಾ ಲಂಪುರ್, ಪೆನಾಂಗ್ ಮತ್ತು ಅಲ್ಲಿನ ಮಳೆಕಾಡುಗಳನ್ನು ವೀಕ್ಷಿಸಲು ಈ ಸಮಯ ಸೂಕ್ತವಾಗಿದೆ.
8. ಮ್ಯಾನ್ಮಾರ್
ಹಿಂದೆ ಬರ್ಮಾ ಎಂದು ಕರೆಯಲ್ಪಡುತ್ತಿದ್ದ ಮ್ಯಾನ್ಮಾರ್ ಬಜೆಟ್ ಪ್ರವಾಸಿಗರ ಮನಸ್ಸಿನಲ್ಲಿ ಜನಪ್ರಿಯತೆಯನ್ನು ಗಳಿಸುತ್ತದೆ. ಇಲ್ಲಿನ ಪುರಾತನ ದೇವಾಲಯಗಳನ್ನು ಮತ್ತು ಅನನ್ಯ ಸಾಂಸ್ಕೃತಿಕ ವಸ್ತ್ರಗಳನ್ನು ವೀಕ್ಷಿಸಲು ನವೆಂಬರ್‌ನಿಂದ ಫೆಬ್ರವರಿಗಿನ ತಂಪಾದ ಶುಷ್ಕ ವಾತಾವರಣ ಉತ್ತಮವಾಗಿದೆ.
9. ಫಿಲಿಪ್ಪೀನ್ಸ್
ವೈವಿಧ್ಯಮಯ ಕಡಲ ತೀರಗಳು ಮತ್ತು ಫಿಲಿಪ್ಪೀನ್ಸ್‌ನ ಸಮುದ್ರ ಜೀವನ ಬಜೆಟ್ ಸ್ನೇಹಿ ಪ್ರವಾಸಕ್ಕೆ ಯೋಗ್ಯವಾಗಿದೆ. ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಹಿತಕರವಾದ ವಾತಾವರಣವು ಅಲ್ಲಿನ ದ್ವೀಪದಲ್ಲಿ ತೊಡಗಿಸಿಕೊಳ್ಳಬಹುದಾದ ಚಟುವಟಿಕೆಗಳಿಗೆ ಸೂಕ್ತವಾಗಿದೆ.
10. ಲಾವೋಸ್
ಲಾವೋಸ್ ಶಾಂತ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಬಜೆಟ್ ಸ್ನೇಹಿ ಪ್ರವಾಸ ಕೈಗೊಳ್ಳುವವರಿಗೆ ಉತ್ತಮವಾಗಿದೆ. ನವೆಂಬರ್‌ನಿಂದ ಫೆಬ್ರವರಿವರೆಗಿನ ಇಲ್ಲಿನ ಶುಷ್ಕ ವಾತಾವರಣವು ಪ್ರವಾಸಿಗರನ್ನು ಸೆಳೆಯುತ್ತದೆ. ಮಾನ್ಸೂನ್‌ನ ಅಡೆತಡೆಗಳಿಲ್ಲದ ಈ ವಾತಾವರಣವು ಅಲ್ಲಿನ ಲುವಾಂಗ್ ಪ್ರಭಾಂಗ್ ದೇವಾಲಯಗಳು ಮತ್ತು ರಮಣೀಯ ಭೂದೃಶ್ಯಗಳನ್ನು ನೊಡಲು ಉತ್ತಮವಾಗಿದೆ.