ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಇಂಗ್ಲಿಷ್‌ನ A ಲೆಟರ್‌ ಎಲ್ಲಿದೆ? ಕಣ್ಣು ಶಾರ್ಪ್‌ ಇದ್ರು, ಈ ಚಿತ್ರ ತಲೆ ತಿರುಗುವಂತೆ ಮಾಡೋದು ಪಕ್ಕಾ

Brain Teaser: ಚಿತ್ರದಲ್ಲಿ ಇಂಗ್ಲಿಷ್‌ನ A ಲೆಟರ್‌ ಎಲ್ಲಿದೆ? ಕಣ್ಣು ಶಾರ್ಪ್‌ ಇದ್ರು, ಈ ಚಿತ್ರ ತಲೆ ತಿರುಗುವಂತೆ ಮಾಡೋದು ಪಕ್ಕಾ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವುದು ಮಾತ್ರವಲ್ಲ, ತಲೆ ತಿರುಗಿಸುವಂತಿರುವುದು ಸುಳ್ಳಲ್ಲ. ಈ ಚಿತ್ರದಲ್ಲಿ X X ಬರೆಯಲಾಗಿದ್ದು, ಒಂದು ಕಡೆ ಮಾತ್ರ A ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯಬೇಕು. ಇದನ್ನು ಕೇವಲ 10 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲು.

ಚಿತ್ರದಲ್ಲಿ ಇಂಗ್ಲಿಷ್‌ನ A ಲೆಟರ್‌ ಎಲ್ಲಿದೆ? ಕಣ್ಣು ಶಾರ್ಪ್‌ ಇದ್ರು, ಈ ಚಿತ್ರ ತಲೆ ತಿರುಗುವಂತೆ ಮಾಡೋದು ಪಕ್ಕಾ
ಚಿತ್ರದಲ್ಲಿ ಇಂಗ್ಲಿಷ್‌ನ A ಲೆಟರ್‌ ಎಲ್ಲಿದೆ? ಕಣ್ಣು ಶಾರ್ಪ್‌ ಇದ್ರು, ಈ ಚಿತ್ರ ತಲೆ ತಿರುಗುವಂತೆ ಮಾಡೋದು ಪಕ್ಕಾ

ಬ್ರೈನ್‌ ಟೀಸರ್‌ಗಳು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಕೆಲವು ಬ್ರೈನ್‌ ಟೀಸರ್‌ ಚಿತ್ರಗಳನ್ನು ನೋಡಿದರೆ ತಲೆ ಸುತ್ತು ಬರೋದು ಪಕ್ಕಾ. ಆದರೆ ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರವು ಕಣ್ಣಿಗೆ ಸವಾಲು ಹಾಕುವ ಜೊತೆಗೆ ನಮಗೆ ತಲೆ ತಿರಗುವಂತೆಯೂ ಮಾಡುತ್ತದೆ. ಎಕ್ಸ್‌ನಲ್ಲಿ ವೈರಲ್‌ ಆಗಿರುವ ಚಿತ್ರದಲ್ಲಿ ಇಂಗ್ಲಿಷ್‌ನ A ಅಕ್ಷರವನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಆದರೆ ಕೇವಲ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು.

ಆರಾಧ್ಯ ಸಿಂಗ್‌ ಎನ್ನುವವರು ಎಕ್ಸ್‌ನಲ್ಲಿ ಈ ಬ್ರೈನ್‌ ಟೀಸರ್‌ ಚಿತ್ರವನ್ನು ಹಂಚಿಕೊಂಡಿದ್ದಾರೆ. ʼನಿಮ್ಮ ಗಮನಶಕ್ತಿಯನ್ನು ಪರೀಕ್ಷಿಸುವ ಚಿತ್ರ ಇದಾಗಿದೆ, ಚಿತ್ರ A ಅಕ್ಷರ ಎಲ್ಲಿದೆ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ?ʼ ಎಂದು ಬರೆದುಕೊಂಡು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಜೂನ್‌ 11 ರಂದು ಈ ಪೋಸ್ಟ್‌ ಮಾಡಲಾಗಿದ್ದು, ಈವರೆಗೆ 250ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣಿಗೆ A ಕಾಣಿಸದೇ ಇರಬಹುದು. ಚಿತ್ರವನ್ನು ಬಹಳ ಹೊತ್ತು ವೀಕ್ಷಿಸಿದರೆ ತಲೆ ಸುತ್ತು ಬರುವುದು ಖಂಡಿತ. ಆದರೆ ಈ ಚಿತ್ರ ನಿಮಗೆ ಒಂಥರ ಮಜಾ ಕೊಡುತ್ತದೆ. ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದ್ದರೆ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಈ ಚಿತ್ರವನ್ನು ಹಂಚಿಕೊಂಡು ಅವರ ಬಳಿ A ಎಲ್ಲಿದೆ ಎಂದು ಕಂಡುಹಿಡಿಯಲು ತಿಳಿಸಿ.

ಬ್ರೈನ್‌ ಟೀಸರ್‌ ಚಿತ್ರಗಳು ನಮ್ಮ ಗ್ರಹಿಕೆಯ ಶಕ್ತಿ ಹಾಗೂ ಗಮನ ಶಕ್ತಿಯನ್ನು ಪರೀಕ್ಷೆ ಮಾಡುತ್ತವೆ. ಇದು ಕಣ್ಣು ಹಾಗೂ ಮನಸ್ಸಿಗೆ ವ್ಯಾಯಾಮ ನೀಡುವುದು ಸುಳ್ಳಲ್ಲ. ಇಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ನಮ್ಮ ಸಮಸ್ಯೆಯನ್ನು ಪರಿಹರಿಸುವ ಕೌಶಲ ವೃದ್ಧಿಯಾಗುತ್ತದೆ.

ಈ ಬ್ರೈನ್‌ ಟೀಸರ್‌ ಅನ್ನು ಓದಿ 

Brain Teaser: ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್‌

ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.

Brain Teaser: ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ? 11 ಸೆಕೆಂಡ್‌ನಲ್ಲಿ ಕಂಡುಹಿಡಿದು ಜಾಣತನ ತೋರಿ

ನಿಮ್ಮ ಗಮನಶಕ್ತಿ ಎಷ್ಟು ಶಾರ್ಪ್‌ ಇದೆ ಎಂದು ತಿಳಿಯುವ ಆಸೆ ನಿಮಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಟ್ರೈ ಮಾಡಿ. ಇಲ್ಲಿರುವ ಬೀಗಗಳ ಸಾಲಿನಲ್ಲಿ ಒಂದು ಬೀಗದ ಲಾಕ್‌ ಓಪನ್‌ ಇದೆ. ಆ ಬೀಗ ಯಾವುದು ಎಂದು 11 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣು, ಮೆದುಳು ನಿಜಕ್ಕೂ ಶಾರ್ಪ್‌ ಇದ್ರೆ ಟ್ರೈ ಮಾಡಿ.