ಸರ್ಜರಿ ಮಾಡುತ್ತಿರುವಾಗ ಮೊಬೈಲ್‌ನಲ್ಲಿ ವಿಡಿಯೊ ಗೇಮ್ ಆಡಿದ ವ್ಯಕ್ತಿ, ವೈರಲ್ ಆಯ್ತು ಡಾಕ್ಟರ್ ಹಂಚಿಕೊಂಡ ವಿಡಿಯೊ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊ ಸ್ಟೋರಿ ಬಗ್ಗೆ ಕೇಳಿದ್ರೆ ತಲೆ ಗಿರ್ ಅನ್ನೋದು ಪಕ್ಕಾ, ಅದೇನಪ್ಪಾ ಅಂಥದ್ದು ಅಂತೀರಾ. ಇದು ಸರ್ಜರಿ ಮಾಡುವಾಗ ವಿಡಿಯೊ ಗೇಮ್ ಆಡಿದ ವ್ಯಕ್ತಿಯ ಕಥೆ. ಆಪರೇಷನ್ ಥಿಯೇಟರ್‌ನಲ್ಲಿ ವಿಡಿಯೊ ಗೇಮ್ ಆಡಿದ ವ್ಯಕ್ತಿಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ವೈದ್ಯರು, ಇದೀಗ ಆ ವಿಡಿಯೊ ಭಾರಿ ವೈರಲ್ ಆಗಿದೆ.
ಆಪರೇಷನ್ ಥಿಯೇಟರ್ ಹೆಸರು ಕೇಳಿದ್ರೆ ನಡುಕ ಬರುತ್ತೆ, ಯಾಕಂದ್ರೆ ಇದು ಸಿನಿಮಾ ಥಿಯೇಟರ್ ಅಲ್ಲ ನೋಡಿ. ಆದ್ರೆ ಆಪರೇಷನ್ ಥಿಯೇಟರ್ ಅಲ್ಲೂ ಎಂಜಾಯ್ ಮಾಡೋರು ಇರ್ತಾರಾ, ಅಂದ್ರೆ ಖಂಡಿತ ಇರ್ತಾರೆ. ಇಲ್ಲೊಬ್ಬ ವ್ಯಕ್ತಿ ಆಪರೇಷನ್ ಥಿಯೇಟರ್‌ನಲ್ಲಿ ತನಗೆ ಸರ್ಜರಿ ಮಾಡುವಾಗಲೇ ವಿಡಿಯೊ ಗೇಮ್ ಆಡುತ್ತಿರುತ್ತಾನೆ, ಸರ್ಜರಿಯ ಪರಿವೇ ಇಲ್ಲದೇ ಇವನು ವಿಡಿಯೊ ಗೇಮ್ ಆಡುವ ವಿಡಿಯೊವನ್ನು ಸ್ವಂತ ಡಾಕ್ಟರ್ ಹಂಚಿಕೊಂಡಿದ್ದಾರೆ. ಅರಿವಳಿಕೆ ತಂತ್ರಜ್ಞ ಡಾ. ಸುಮಿತ್ ಘೋಷ್ ಮತ್ತು ಡಯಾಲಿಸಿಸ್ ತಂತ್ರಜ್ಞೆ ಡಾ. ಪಿಂಕಿ ಮುಖರ್ಜಿ ಅವರು ರೋಗಿಯ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.
ʼಅನಸ್ತೇಶಿಯಾ ಯಾರಿಗೂ ನೋವು ನೀಡುವುದಿಲ್ಲʼ ಎಂದು ಬರೆದುಕೊಂಡು ಈ ವಿಡಿಯೊ ಹಂಚಿಕೊಂಡಿದ್ದಾರೆ ವೈದ್ಯರು.
ವಿಡಿಯೊದಲ್ಲಿ, ರೋಗಿಯು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯ ಹೊರತಾಗಿಯೂ, ಆ ವ್ಯಕ್ತಿ ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೊ ಗೇಮ್‌ಗಳನ್ನು ಆಡುವುದರಲ್ಲಿ ಮಗ್ನರಾಗಿದ್ದಾರೆ.
ಈ ವಿಡಿಯೊವನ್ನು ಈಗಾಗಲೇ 100ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್ಸ್ ಕಾಮೆಂಟ್ ಮಾಡಿದ್ದಾರೆ.
ಹಿಂದೊಮ್ಮೆ ಆಪರೇಷನ್ ನಡೆಯುವಾಗ ಗೀಟಾರ್ ಬಾರಿಸುತ್ತಿರುವ ವ್ಯಕ್ತಿಯ ವಿಡಿಯೊ ವೈರಲ್ ಆಗಿತ್ತು, ಇತ್ತೀಚಿನ ದಿನಗಳಲ್ಲಿ ಅಪರೇಷನ್ ನಡೆಯುವ ಜಾಗ ಮಾತ್ರ ಮರಗಟ್ಟುವಂತೆ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಗುತ್ತಿದ್ದು, ಸರ್ಜರಿ ಮಾಡುವಾಗ ಮಾತನಾಡುವುದು, ನಗುವುದು ಮುಂತಾದವನ್ನು ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ನೋಡಬಹುದು.
ಈ ವೈರಲ್ ಸುದ್ದಿಯನ್ನೂ ನೋಡಿ
ವೈರಲ್ ಆಯ್ತು ಬೆಂಗಳೂರಿನ ಆಟೊಮೆಟಿಕ್ ಪಾನಿಪುರಿ ವೆಂಡಿಂಗ್ ಮಷೀನ್, ಬೆಂಗ್ಳೂರು ತುಂಬಾ ಫಾಸ್ಟ್ ಕಣ್ರಿ ಅಂದ್ರು ನೆಟ್ಟಿಗರು
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಇತ್ತೀಚಗಷ್ಟೇ ಅತ್ಯಧಿಕ ಮನೆ ಬಾಡಿಗೆ ಹೊಂದಿರುವ ಏರಿಯಾ ಎಂಬ ಕಾರಣಕ್ಕೆ ಸುದ್ದಿಯಾಗಿತ್ತು. ಇದೀಗ ಆಟೊಮೆಟಿಕ್ ಪಾನಿಪುರಿ ವೆಂಡಿಂಗ್ ಮಷಿನ್ ಮೂಲಕ ಸುದ್ದಿಯಾಗುತ್ತಿದೆ. ಪಾನಿಪೂರಿಗೂ ಆಟೊಮೆಟಿಕ್ ಮಷಿನ್ ಬಂದಿರುವುದು ಕಂಡು ಎಚ್‌ಎಸ್‌ಆರ್ ಲೇಔಟ್ 2050ರಷ್ಟು ಮುಂದಕ್ಕೆ ಹೋಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.