ಬರೋಬ್ಬರಿ 50 ಕೆ.ಜಿ ತೂಕ ಕಳೆದುಕೊಂಡ ವ್ಯಕ್ತಿ: ತೂಕ ಇಳಿಕೆ ಜತೆಗೆ ಒಂದಿಂಚು ಎತ್ತರ, ಧ್ವನಿಯೂ ಬದಲಾಯಿತು-weight loss success story us man who lost 50 kg here is the story about changes in his life prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬರೋಬ್ಬರಿ 50 ಕೆ.ಜಿ ತೂಕ ಕಳೆದುಕೊಂಡ ವ್ಯಕ್ತಿ: ತೂಕ ಇಳಿಕೆ ಜತೆಗೆ ಒಂದಿಂಚು ಎತ್ತರ, ಧ್ವನಿಯೂ ಬದಲಾಯಿತು

ಬರೋಬ್ಬರಿ 50 ಕೆ.ಜಿ ತೂಕ ಕಳೆದುಕೊಂಡ ವ್ಯಕ್ತಿ: ತೂಕ ಇಳಿಕೆ ಜತೆಗೆ ಒಂದಿಂಚು ಎತ್ತರ, ಧ್ವನಿಯೂ ಬದಲಾಯಿತು

ತೂಕ ಇಳಿಕೆ ಮಾಡಿಕೊಂಡ ಅನೇಕರ ನಿಜ ಜೀವನದ ಕಥೆಗಳನ್ನು ನೀವು ಕೇಳಿರಬಹುದು. ಅಮೆರಿಕದ ವ್ಯಕ್ತಿಯೊಬ್ಬರು ಬರೋಬ್ಬರಿ 50 ಕೆಜಿ ತೂಕ ಇಳಿಸಿಕೊಂಡಿದ್ದು, ಐದು ವರ್ಷದಿಂದ ಅಷ್ಟೇ ತೂಕವನ್ನು ನಿರ್ವಹಿಸಿದ್ದಾರೆ. ತೂಕ ಇಳಿಕೆ ನಂತರ ಇವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂಬ ಬಗ್ಗೆ ವಿವರಿಸಿದ್ದಾರೆ.

ತೂಕ ಇಳಿಕೆ ನಂತರ ಇವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂಬ ಬಗ್ಗೆ ಈ ವ್ಯಕ್ತಿ ವಿವರಿಸಿದ್ದಾರೆ.
ತೂಕ ಇಳಿಕೆ ನಂತರ ಇವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂಬ ಬಗ್ಗೆ ಈ ವ್ಯಕ್ತಿ ವಿವರಿಸಿದ್ದಾರೆ. (Instagram/ Nick Geoppo)

ಅನೇಕ ಮಂದಿ ತೂಕ ಇಳಿಕೆಗೆ ಪ್ರಯತ್ನಿಸಿ ಯಶಸ್ವಿಯೂ ಆಗಿದ್ದರೆ. ತೂಕ ಇಳಿಕೆ ಅಂದ್ರೆ ಅದು ಹೂವಿನ ಹಾದಿಯಲ್ಲ. ಅನೇಕ ಕಷ್ಟ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಅನ್ನೋದಕ್ಕೆ ಹಲವಾರು ಮಂದಿ ಉದಾಹರಣೆಯಾಗಿದ್ದಾರೆ. ಸ್ಲಿಮ್ ಆಗಿರಬೇಕು ಅನ್ನುವುದು ಬಹುತೇಕ ಮಂದಿಯ ಬಯಕೆ. ಆದರೆ, ಏನೂ ಪ್ರಯತ್ನವನ್ನೇ ಮಾಡದೆ ತಾನು ತೂಕ ಇಳಿಸಿಕೊಳ್ಳಬೇಕೆಂದರೆ ಆಗುವುದಿಲ್ಲ. ಇದಕ್ಕೆ ಪ್ರಯತ್ನವನ್ನೂ ಪಡಬೇಕು. ಹಾಗೆಯೇ ತೂಕ ಇಳಿಸಿಕೊಂಡ ಮೇಲೆ ಮತ್ತೆ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು, ಜಾಗರೂಕತೆಯಿಂದ ಆಹಾರ ಸೇವನೆ ಮಾಡುವುದು, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ತೂಕ ನಷ್ಟವನ್ನು ಕಾಪಾಡಿಕೊಳ್ಳುವಲ್ಲಿ ಇವುಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇದೇ ರೀತಿ ಅಮೆರಿಕ ಮೂಲದ ನಿಕ್ ಜಿಯೊಪ್ಪೊ ಎಂಬ ವ್ಯಕ್ತಿಯು ಬರೋಬ್ಬರಿ 110 ಪೌಂಡ್ (49.89 ಕೆ.ಜಿ) ಕಳೆದುಕೊಂಡಿದ್ದಾರೆ. ಐದು ವರ್ಷಗಳಿಂದ ಇದೇ ತೂಕವನ್ನು ನಿರ್ವಹಿಸಿರುವುದು ಇವರು ಮಾಡಿರುವ ಸಾಧನೆಯಾಗಿದೆ. ಆರೋಗ್ಯಕರ ತೂಕವನ್ನು ಕಳೆದುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ. 50 ಕೆ.ಜಿ ತೂಕ ಕಳೆದುಕೊಂಡ ನಂತರ ತನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸಿದೆ ಎಂದು ವಿವರಿಸಿದ್ದಾರೆ.

ತೂಕ ಇಳಿಕೆಯೊಂದಿಗೆ ಬದಲಾಯಿತು ಧ್ವನಿ

50 ಕೆ.ಜಿಗಳಷ್ಟು ತೂಕ ಕಳೆದುಕೊಂಡ ನಿಕ್ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿತಂತೆ. ಮೊದಲಿಗೆ ತೂಕ ಇಳಿಕೆಯಾದ ಕೂಡಲೇ ಅವರಲ್ಲಿ ಬದಲಾವಣೆಯಾಗಿದ್ದು ಧ್ವನಿ. ಗಂಟಲಿನ ಮೇಲೆ ಬಹಳಷ್ಟು ಕೊಬ್ಬು ತುಂಬಿದ್ದರಿಂದ ಧ್ವನಿಯನ್ನು ಸಂಕುಚಿತಗೊಳಿಸುತ್ತದೆ. ತೂಕವನ್ನು ಕಳೆದುಕೊಂಡಾಗ ಧ್ವನಿಯು ಬದಲಾಯಿತು ಎಂದು ನಿಕ್ ಹೇಳಿದರು.

ತೂಕ ಇಳಿಕೆ ನಂತರ ಜನರ ನಡತೆ ಹೇಗಿತ್ತು?

ತೂಕ ಇಳಿಕೆ ನಂತರ ನಿಕ್ ಇತರೆ ಬದಲಾವಣೆಗಳನ್ನು ಗಮನಿಸಿದರು. ದಪ್ಪ ಎಂದು ಮೂದಲಿಸುತ್ತಿದ್ದ ಜನರ ಮಾತು ನಿಂತು ಹೋಯ್ತು. ತೆಳ್ಳಗಾದ ಕೂಡಲೇ ತನ್ನನ್ನು ಉತ್ತಮವಾಗಿ ನಡೆಸಿಕೊಂಡರು. ದಪ್ಪವಾಗಿದ್ದಾಗ ನಕಾರಾತ್ಮಕ ಭಾವನೆಯನ್ನು ಹೊಂದಿದ್ದರಂತೆ. ತೂಕವನ್ನು ಕಳೆದುಕೊಳ್ಳುವ ಮೂಲಕ ಮತ್ತು ಸ್ವಯಂ-ನಂಬಿಕೆ ಹುಟ್ಟಿಕೊಂಡಿತು. ಅಲ್ಲದೆ, ತನ್ನಲ್ಲಿ ಆತ್ಮವಿಶ್ವಾಸ ಮೂಡಿ ಜೀವನದಲ್ಲಿ ಧನಾತ್ಮಕತೆಯನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ. ತನ್ನನ್ನು ಉತ್ತಮವಾಗಿ ನಡೆಸಿಕೊಳ್ಳುವುದಕ್ಕಾಗಿ ಇತರರನ್ನು ದೂಷಿಸುವುದಿಲ್ಲ.

ಒಂದು ಇಂಚು ಎತ್ತರವಾದ ನಿಕ್!

ಆತಂಕ ಮತ್ತು ಖಿನ್ನತೆಯು ಯಾವುದೇ ಔಷಧಿಗಳಿಲ್ಲದೆ ಸಂಪೂರ್ಣವಾಗಿ ದೂರವಾಯಿತು. ಯಾವಾಗಲೂ ನಿಕ್ ತನ್ನ ಬಾಯಿಯಿಂದ ಉಸಿರಾಡುತ್ತಿದ್ದರಂತೆ. ಆದರೆ, ತೂಕ ಕಳೆದುಕೊಂಡ ಬಳಿಕ ಮೂಗಿನಿಂದ ಉಸಿರಾಡುತ್ತಿದ್ದಾರೆ. ತೂಕ ಹೆಚ್ಚಿರುವವರು ಗೊರಕೆ ಹೊಡೆಯುವುದು ಸಾಮಾನ್ಯ. ತೂಕ ಇಳಿಕೆ ನಂತರ ಗೊರಕೆಯೂ ನಿಂತು ಹೋಯ್ತು. ಅಷ್ಟೇ ಅಲ್ಲ ಒಂದು ಇಂಚಿನಷ್ಟು ಎತ್ತರವೂ ಆಗಿದ್ದಾರಂತೆ. ಪಕ್ಕೆಲುಬುಗಳು ನಿರಂತರವಾಗಿ ನೋಯುತ್ತಿತ್ತು. ಆದರೆ, ಅಚ್ಚರಿ ಅಂದ್ರೆ ತೂಕ ಇಳಿಕೆಯಾದ ನಂತರ ನೋವು ಕೂಡ ಹೊರಟು ಹೋಯ್ತು ಎಂದು ಸಂತಸ ಹಂಚಿಕೊಂಡಿದ್ದಾರೆ.

ತೂಕವನ್ನು ಕಳೆದುಕೊಂಡಿದ್ದರಿಂದ ತಾನು ತುಂಬಾ ಸಂತೋಷಗೊಂಡಿರುವುದಾಗಿ ತಿಳಿಸಿರುವ ನಿಕ್, ತಾನು ಫಿಟ್ ಆಂಡ್ ಫೈನ್ ಆಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸಲಹೆ ನೀಡಿರುವ ನಿಕ್, ಆತ್ಮವಿಶ್ವಾಸ ಬೆಳೆಸಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸುವುದು ಅಂಥಾ ಕಷ್ಟವೇನಲ್ಲ ಎಂದು ತಿಳಿಸಿದ್ದಾರೆ.

mysore-dasara_Entry_Point