Benefits of Barre workout: ಬಾರ್ ವರ್ಕೌಟ್ ಎಂದರೇನು..ಇದನ್ನು ಮಾಡೋದು ಹೇಗೆ..?
ಬಾರ್ ವರ್ಕೌಟ್‌ನಲ್ಲಿ ವ್ಯಾಯಾಮ ಮತ್ತು ವಿನೋದ ಎರಡೂ ದೊರೆಯಲಿದೆ. ಈ ಬಾರ್ ವರ್ಕೌಟ್‌ಗಳು ಬ್ಯಾಲೆ ಆಧಾರಿತ ನೃತ್ಯ ಜೀವನಕ್ರಮಗಳಾಗಿವೆ. ಬ್ಯಾಲೆ ನೃತ್ಯಗಾರರು ತಮ್ಮ ನೃತ್ಯವನ್ನು ಬಾರ್ ಡ್ಯಾನ್ಸ್ ಎಂದೂ ಕರೆಯುತ್ತಾರೆ. ಈ ರೀತಿಯ ನೃತ್ಯದಲ್ಲಿನ ಚಲನೆಗಳು ವಿವಿಧ ಸ್ನಾಯುಗಳಿಗೆ ಉತ್ತಮ ತಾಲೀಮು ನೀಡುತ್ತದೆ. ಈ ವರ್ಕೌಟ್ ಕೂಡಾ ಜುಂಬಾ ಹಾಗೂ ಏರೋಬಿಕ್ಸ್‌ನಂತೆ ಮಾಡಲು ಸುಲಭವಾಗಿರುತ್ತದೆ.
ಆರೋಗ್ಯ ಮತ್ತು ಫಿಟ್ ಆಗಿರಬೇಕೆಂದರೆ ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ವರ್ಕೌಟ್ ಮಾಡಬೇಕು. ಒಂದು ವೇಳೆ ಪ್ರತಿದಿನ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ವಾರಾಂತ್ಯದಲ್ಲಿ ವ್ಯಾಯಾಮ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಕೆಲವೊಂದು ವ್ಯಾಯಾಮಗಳು ಬಹಳ ಕಷ್ಟ ಎನಿಸುತ್ತದೆ. ಆದರೆ ವರ್ಕೌಟ್ ಜೊತೆ ಫನ್ ಇದ್ದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ.
ಬಹುಶ: ವರ್ಕೌಟ್ ಬಗ್ಗೆ ಚೆನ್ನಾಗಿ ಅರಿವು ಇರುವವರಿಗೆ ಬಾರ್ ವ್ಯಾಯಾಮದ ಬಗ್ಗೆ ಮಾಹಿತಿ ಇರುತ್ತದೆ. ಇನ್ನೂ ಕೆಲವರಿಗೆ ಅದರ ಬಗ್ಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ. ಬಾರ್ ವರ್ಕೌಟ್‌ನಲ್ಲಿ ವ್ಯಾಯಾಮ ಮತ್ತು ವಿನೋದ ಎರಡೂ ದೊರೆಯಲಿದೆ. ಈ ಬಾರ್ ವರ್ಕೌಟ್‌ಗಳು ಬ್ಯಾಲೆ ಆಧಾರಿತ ನೃತ್ಯ ಜೀವನಕ್ರಮಗಳಾಗಿವೆ. ಬ್ಯಾಲೆ ನೃತ್ಯಗಾರರು ತಮ್ಮ ನೃತ್ಯವನ್ನು ಬಾರ್ ಡ್ಯಾನ್ಸ್ ಎಂದೂ ಕರೆಯುತ್ತಾರೆ. ಈ ರೀತಿಯ ನೃತ್ಯದಲ್ಲಿನ ಚಲನೆಗಳು ವಿವಿಧ ಸ್ನಾಯುಗಳಿಗೆ ಉತ್ತಮ ತಾಲೀಮು ನೀಡುತ್ತದೆ. ಈ ವರ್ಕೌಟ್ ಕೂಡಾ ಜುಂಬಾ ಹಾಗೂ ಏರೋಬಿಕ್ಸ್‌ನಂತೆ ಮಾಡಲು ಸುಲಭವಾಗಿರುತ್ತದೆ.
ಬಾರ್ ವರ್ಕೌಟ್ ಮಾಡೋದು ಹೇಗೆ?
ಬಾರ್ ವರ್ಕೌಟ್‌ನಲ್ಲಿ ಸ್ವಲ್ಪ ಶಾಸ್ತ್ರೀಯ ನೃತ್ಯ ಭಂಗಿ, ಯೋಗ ಭಂಗಿಗಳು ಸಂಯೋಜಿತವಾಗಿರುತ್ತದೆ. ಈ ರೀತಿಯ ವ್ಯಾಯಾಮ ಮಾಡಲು ಯಾವುದಾದರೂ ವಸ್ತುವಿನ ಸಪೋರ್ಟ್ ಬಹಳ ಅಗತ್ಯ. ಸಾಮಾನ್ಯವಾಗಿ ಕೆಲವೊಂದು ಬಾರ್ ವ್ಯಾಯಾಮ ಮಾಡಲು ವಿಶೇಷ ಬಾರ್ ಬ್ಯಾಂಡ್‌ಗಳು, ಯೋಗ ಪಟ್ಟಿಗಳು, ವ್ಯಾಯಾಮದ ಚೆಂಡುಗಳು ಸೇರಿದಂತೆ ಇನ್ನಿತರ ಅಲಕರಣೆಗಳ ಅಗತ್ಯವಿರುತ್ತದೆ. ಆದರೆ ಇವುಗಳು ಇಲ್ಲದಿದ್ದರೂ ಕುಳಿತು ಸಪೋರ್ಟ್ ತೆಗೆದುಕೊಂಡು ವ್ಯಾಯಾಮ ಅಭ್ಯಾಸ ಮಾಡಬಹುದು. ವಾಲ್-ಮೌಂಟೆಡ್ ಬಾರ್ ಬದಲಿಗೆ ಊಟದ ಕುರ್ಚಿ ಅಥವಾ ಇತರ ವಸ್ತುವನ್ನು ಹಿಡಿದಿಟ್ಟುಕೊಳ್ಳಬಹುದು. ಇಲ್ಲದಿದ್ದರೂ ಬರಿಗೈಯಿಂದ ದೇಹವನ್ನು ಸಮತೋಲನಗೊಳಿಸಬಹುದು. ಈ ಲಘು ವ್ಯಾಯಾಮಗಳು ಸಾಮಾನ್ಯವಾಗಿ ಕೋರ್ ಚಲನೆಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ದೇಹದ ಆಕಾರ ಮತ್ತು ರಚನೆ ಸೇರಿದಂತೆ ಒಟ್ಟಾರೆ ದೇಹದ ಆಕಾರವನ್ನು ಬದಲಾಯಿಸಲು ಕೂಡಾ ಈ ವ್ಯಾಯಾಮ ಮಾಡಬಹುದು.
ಬಾರ್ ವರ್ಕೌಟ್‌ಗಳ ಪ್ರಯೋಜನಗಳೇನು?
ಬಾರ್ ವರ್ಕೌಟ್ ಮಾಡುವುದರಿಂದ ನಿಮ್ಮ ಫಿಟ್ನೆಸ್ ಸುಧಾರಿಸುತ್ತದೆ. ದೇಹದಲ್ಲಿ ಅಧಿಕ ಕೊಬ್ಬನ್ನು ಕಳೆದುಕೊಳ್ಳಬಹುದು ಮತ್ತು ಉತ್ತಮ ಮೈಕಟ್ಟು ಪಡೆಯಬಹುದು. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೋನ್ ಮಾಡಬಹುದು. ಜೊತೆಗೆ ಬಾರ್ ವರ್ಕೌಟ್ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು, ಮಾನಸಿಕ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಸುಧಾರಿಸಬಹುದು. ಅಲ್ಲದೆ ಈ ವರ್ಕೌಟ್‌ಗಳನ್ನು ಮಾಡುವುದರಿಂದ ಒಳ್ಳೆಯ ಮೋಜಿನ ಅನುಭವವಾಗುತ್ತದೆ. ಇವುಗಳನ್ನು ಯಾರಾದರೂ, ಯಾವುದೇ ವಯಸ್ಸಿನಲ್ಲಿ ಮಾಡಬಹುದು.
ವಿಭಾಗ