World coconut day 2024: ಜೀವಕುಲಕ್ಕೆ ಕಲ್ಪವೃಕ್ಷ ದೇವರು ಕೊಟ್ಟ ಉಡುಗೊರೆ, ಇಂದು ವಿಶ್ವ ತೆಂಗು ದಿನಾಚರಣೆ-world coconut day 2024 today is world coconut day here is the importance and benefits of coconut smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  World Coconut Day 2024: ಜೀವಕುಲಕ್ಕೆ ಕಲ್ಪವೃಕ್ಷ ದೇವರು ಕೊಟ್ಟ ಉಡುಗೊರೆ, ಇಂದು ವಿಶ್ವ ತೆಂಗು ದಿನಾಚರಣೆ

World coconut day 2024: ಜೀವಕುಲಕ್ಕೆ ಕಲ್ಪವೃಕ್ಷ ದೇವರು ಕೊಟ್ಟ ಉಡುಗೊರೆ, ಇಂದು ವಿಶ್ವ ತೆಂಗು ದಿನಾಚರಣೆ

World coconut day 2024:ತೆಂಗಿನಕಾಯಿಗಳು ಪ್ರಪಂಚದಾದ್ಯಂತ ಬಳಸುವ ಪ್ರಮುಖ ಆಹಾರದಲ್ಲಿ ಒಂದು. ಇಂದು ವಿಶ್ವ ತೆಂಗಿನ ದಿನವನ್ನು ಯಾಕೆ ಆಚರಿಸುತ್ತಾರೆ? ಭಾರತದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂಬೆಲ್ಲ ವಿಷಯ ಇಲ್ಲಿದೆ ಗಮನಿಸಿ.

ವಿಶ್ವ ತೆಂಗು ದಿನಾಚರಣೆ
ವಿಶ್ವ ತೆಂಗು ದಿನಾಚರಣೆ

ತೆಂಗಿನಕಾಯಿಗಳು ಪ್ರಪಂಚದಾದ್ಯಂತ ಬಳಸುವ ಪ್ರಮುಖ ಆಹಾರಗಳಾಗಿವೆ. ಎಲ್ಲ ದೇಶಗಳಲ್ಲೂ ಇವುಗಳ ಅಗತ್ಯ ಬಹಳ ಇದೆ. ತೆಂಗಿನಕಾಯಿಗಳು ನಮಗೆ ಮಾಡುವ ಒಳ್ಳೆಯದನ್ನು ಗುರುತಿಸಲು ಪ್ರತಿ ವರ್ಷ ಒಂದು ದಿನವನ್ನು ವಿಶೇಷವಾಗಿ ಮೀಸಲಿಡಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 2ರಂದು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯವು ತೆಂಗಿನಕಾಯಿ ದಿನವನ್ನು ಆರಂಭಿಸಿತು. ನಮ್ಮ ದೇಶದಲ್ಲಿ ಯಾವುದೇ ಸಣ್ಣ ಪೂಜೆಯಲ್ಲೂ ತೆಂಗಿನಕಾಯಿ ಇರಲೇಬೇಕು. ಭಾರತದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಈ ತೆಂಗಿನಕಾಯಿಗಳನ್ನು ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಇದು ಆಹಾರದ ಮುಖ್ಯ ಭಾಗ

ತೆಂಗಿನಕಾಯಿ ನಮ್ಮ ಆಹಾರದ ಭಾಗವಾಗಿಲ್ಲದಿದ್ದರೆ ನಮಗೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತಿಲ್ಲ. ರುಚಿಕರವಾದ ಆಹಾರವನ್ನು ನೀಡುವುದರ ಜೊತೆಗೆ, ಇದು ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೆಂಗಿನ ಎಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ.

ತೆಂಗಿನಕಾಯಿಯ ಆರೋಗ್ಯ ಪ್ರಯೋಜನಗಳು

ಫೈಬರ್

ಪೋಷಕಾಂಶಗಳಿಂದ ಕೂಡಿದ ತೆಂಗಿನಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಬ್ಬಿಣ, ಮೆಗ್ನೀಸಿಯಮ್, ಸತು, ತಾಮ್ರ, ಮ್ಯಾಂಗನೀಸ್, ಸೆಲೆನಿಯಮ್ ಮುಂತಾದ ಪ್ರಮುಖ ಖನಿಜಗಳನ್ನು ಇದು ಹೊಂದಿದೆ. ಹಾಗಾಗಿ ತೆಂಗಿನಕಾಯಿಯನ್ನು ಸಾಧ್ಯವಾದಷ್ಟು ನಿಮ್ಮ ಆಹಾರದ ಭಾಗವಾಗಿಸಿ. ಅದು ಹಸಿಯಿದ್ದರೂ, ಒಣಗಿದ್ದರೂ ಉತ್ತಮ ಪೋಷಕಾಂಶ ನೀಡುತ್ತದೆ.

ಚರ್ಮದ ಆರೋಗ್ಯ ಕಾಪಾಡುತ್ತದೆ

ತೇವಾಂಶವನ್ನು ಕಾಪಾಡಿಕೊಳ್ಳಲು ತೆಂಗಿನ ಎಣ್ಣೆಯನ್ನು ಚರ್ಮ ಮತ್ತು ಕೂದಲಿಗೆ ಹಚ್ಚಿಕೊಳ್ಳಲಾಗುತ್ತದೆ. ಇದು ತೇವಾಂಶವನ್ನು ನೀಡುತ್ತದೆ. ಎಷ್ಟೋ ಜನ ನನ್ನದು ಡ್ರೈ ಸ್ಕಿನ್ ಎಂದು ಹೇಳುತ್ತಾರೆ ಅಂಥವರೆಲ್ಲರೂ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡರೆ ಅವರ ತ್ವಚೆ ಕೋಮಲವಾಗುತ್ತದೆ. ಒಣ ಚರ್ಮ ಮತ್ತು ಒಣ ಕೂದಲಿಗೆ ಚಿಕಿತ್ಸೆ ನೀಡುತ್ತದೆ. ಚರ್ಮದ ಕಾಯಿಲೆ ಇದ್ದರೆ ಅದನ್ನೂ ಕಡಿಮೆ ಮಾಡುವ ಶಕ್ತಿ ಇದಕ್ಕಿದೆ.

ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಹಾರದಲ್ಲಿ ತೆಂಗಿನಕಾಯಿಯನ್ನು ಹೆಚ್ಚು ಬಳಸುವುದು ಹೇಗೆ?

ತಾಜಾ ತೆಂಗಿನಕಾಯಿ: ತಾಜಾ ತೆಂಗಿನಕಾಯಿ ಚೂರುಗಳನ್ನು ತಿಂದು ಆನಂದಿಸಿ. .

ತೆಂಗಿನಕಾಯಿ ಚಟ್ನಿ: ತೆಂಗಿನಕಾಯಿ ಚಟ್ನಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ತಿಂದರೆ ಮಲಬದ್ಧತೆ ಕಡಿಮೆಯಾಗುತ್ತದೆ.

ಒಣಗಿದ ತೆಂಗಿನಕಾಯಿ: ಒಣಗಿದ ತೆಂಗಿನ ಸಿಪ್ಪೆಗಳನ್ನು ಯಾವುದಾದರೂ ಸ್ವೀಟ್‌ಗಳಿಗೆ ಮೇಲಿನಿಂದ ಉದುರಿಸಿಕೊಂಡು ತಿನ್ನಬಹುದು.

ತೆಂಗಿನ ನೀರು: ತೆಂಗಿನ ನೀರು ಉತ್ತಮ ಪಾನೀಯವಾಗಿದೆ. ವ್ಯಾಯಾಮದ ನಂತರ ದೇಹವನ್ನು ಹೈಡ್ರೇಟ್‌ ಮಾಡಲು ತೆಂಗಿನ ನೀರು ಒಳ್ಳೆಯದು. ಬೇಸಿಗೆಯಲ್ಲಿ ಇದನ್ನು ಕುಡಿದರೆ ದೇಹಕ್ಕೆ ತಂಪಾಗುತ್ತದೆ.

ತೆಂಗಿನಕಾಯಿ ಲಡ್ಡು: ಈ ಸಿಹಿ ಸಿಹಿಯನ್ನು ಹಬ್ಬಗಳ ಸಮಯದಲ್ಲಿ ಮಾಡಲಾಗುತ್ತದೆ. ತೆಂಗಿನಕಾಯಿಯನ್ನು ಸವಿಯಲು ತೆಂಗಿನಕಾಯಿ ಲಡ್ಡು ಉತ್ತಮ ಮಾರ್ಗವಾಗಿದೆ.

ತೆಂಗಿನ ಎಣ್ಣೆ: ಆರೋಗ್ಯಕರ ಕೊಬ್ಬು ನಿಮಗೆ ಬೇಕು ಎಂದರೆ ನೀವು ತೆಂಗಿನ ಎಣ್ಣೆಯನ್ನು ಬಳಕೆ ಮಾಡಬೇಕು. ಇದು ನಿಮಗೆ ಆರೋಗ್ಯ ನೀಡುತ್ತದೆ. ಅಡುಗೆ ಎಣ್ಣೆಯಾಗಿ ನೀವು ಇದನ್ನು ಬಳಕೆ ಮಾಡಬಹುದು. ಕರಿದ ಪದಾರ್ಥ ತಿನ್ನುವಾಗ ಎಚ್ಚರವಿರಲಿ.

ತೆಂಗಿನ ಹಾಲು: ತೆಂಗಿನ ಹಾಲನ್ನು ಸ್ಮೂಥಿಗಳು, ಶೇಕ್‌ಗಳು, ಸೂಪ್‌ಗಳು ಮತ್ತು ಭಾರತೀಯ ಗ್ರೇವಿಗಳಿಗಳ್ಲಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನೀವು ಇವುಗಳನ್ನು ತಿನ್ನಬಹುದು.

ಮೇಲೋಗರ: ತುರಿದ ತೆಂಗಿನಕಾಯಿಯನ್ನು ತರಕಾರಿಗಳಿಗೆ ಅಲಂಕರಿಸಲು ಬಳಸಬಹುದು. ಅಥವಾ ರುಚಿ ಮತ್ತು ವಿನ್ಯಾಸವನ್ನು ಹೆಚ್ಚಿಸಲು ಇದನ್ನು ಮೇಲೋಗರವಾಗಿ ಬಳಸಬಹುದು.