Iron Box Cleaning: ನಿಮ್ಮ ಮನೆಯ ಐರನ್ ಬಾಕ್ಸ್‌ ಅಡಿಬದಿಯಲ್ಲಿ ಕಪ್ಪಾಗಿದ್ಯಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಕ್ಲೀನ್ ಮಾಡಿ-is your homes iron box surface blackened so follow these tips and get clean smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Iron Box Cleaning: ನಿಮ್ಮ ಮನೆಯ ಐರನ್ ಬಾಕ್ಸ್‌ ಅಡಿಬದಿಯಲ್ಲಿ ಕಪ್ಪಾಗಿದ್ಯಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಕ್ಲೀನ್ ಮಾಡಿ

Iron Box Cleaning: ನಿಮ್ಮ ಮನೆಯ ಐರನ್ ಬಾಕ್ಸ್‌ ಅಡಿಬದಿಯಲ್ಲಿ ಕಪ್ಪಾಗಿದ್ಯಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಕ್ಲೀನ್ ಮಾಡಿ

ನಿಮ್ಮ ಮನೆಯಲ್ಲಿರುವ ಇಸ್ತ್ರಿ ಪೆಟ್ಟಿಗೆ ಅಡಿಭಾಗದಲ್ಲಿ ಕಪ್ಪಾಗಿದೆಯಾ? ಇದರಿಂದ ಅದಕ್ಕೆ ಬಟ್ಟೆಗಳು ಅಂಟಿಕೊಂಡಂತೆ ಅನುಭವ ಆಗ್ತಾ ಇದ್ಯಾ? ಹಾಗಾದ್ರೆ ನೀವು ಈ ರೀತಿ ನಿಮ್ಮಇಸ್ತ್ರಿ ಪೆಟ್ಟಿಗೆಯನ್ನು ಕ್ಲೀನ್ ಮಾಡಬೇಕು.

ಐರನ್ ಬಾಕ್ಸ್‌
ಐರನ್ ಬಾಕ್ಸ್‌

ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ, ಬಟ್ಟೆಗಳು ಹೆಚ್ಚಾಗಿ ಸುಟ್ಟುಹೋಗುತ್ತವೆ. ಆಗ ಅವು ಕಲೆಗಳಾಗಿ ಉಳಿದುಕೊಳ್ಳುತ್ತವೆ ಇದರಿಂದಾಗಿ ಮೇಲೆ ಕಪ್ಪು ಗುರುತುಗಳು ಸದಾ ಉಳಿಯುತ್ತದೆ. ಇದರಿಂದ ಇತರ ಬಟ್ಟೆಗಳನ್ನು ನೀವು ಐರನ್ ಮಾಡುವಾಗಲೂ ನಿಮಗೆ ತೊಂದರೆ ಉಂಟಾಗುತ್ತದೆ. ಈ ತೊಂದರೆಯನ್ನು ನಿವಾರಣೆ ಮಾಡಲು ನಾವು ನಿಮಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಈ ಸಲಹೆಯನ್ನು ಅನುಸರಿಸಿದರೆ ನಿಮಗೆ ಈ ಸಲಹೆ ಉಪಯೋಗವಾಗಲಿದೆ.

ಕಪ್ಪು ಗುರುತು ತೆಗೆಯುವುದು ಸುಲಭವಲ್ಲ ಆದರೆ ಅದನ್ನು ತೆಗೆಯಲು ಕೆಲವು ಉಪಾಯಗಳಂತು ಇದೆ. ಈ ಮಾರ್ಗವನ್ನು ನೀವು ಅನುಸರಿಸಿ ಕ್ಲೀನ್ ಮಾಡಿದಲ್ಲಿ ಕಲೆಗಳು ಮಾಯವಾಗುತ್ತದೆ.

ನಿಂಬೆ ರಸ ಹಾಕಿ ಕ್ಲೀನ್ ಮಾಡಿ

ನೀವು ನಿಂಬೆ ರಸವನ್ನು ಬಳಸಬಹುದು. ಇದರಲ್ಲಿರುವ ಸಿಟ್ರಿಕ್ ಆಮ್ಲವು ತುಂಬಾ ಚೆನ್ನಾಗಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ. ಇದನ್ನು ನೀವು ಮಾಡಲು ಮೊದಲಿಗೆ ಒಂದು ಚಿಕ್ಕ ಲೋಟ ತೆಗೆದುಕೊಳ್ಳಿ. ನಂತರದಲ್ಲಿ ಅದರೊಳಗೆ ನಿಂಬೆಯ ರಸವನ್ನು ಸಂಗ್ರಹ ಮಾಡಿ. ಆ ರಸವನ್ನು ಒಂದು ಬ್ರೆಷ್ ಅಥವಾ ಬಟ್ಟೆಯ ಮೂಲಕ ಅಡಿಭಾಗದಲ್ಲಿ ಹಚ್ಚಿ. ಹೀಗೆ ಮಾಡಿದರೆ ಕಪ್ಪು ಕಲೆಗಳು ಹೋಗುತ್ತವೆ.

ಅಡಿಗೆ ಸೋಡಾ ಬಳಸಿ

ಅಡಿಗೆ ಸೋಡಾದ ಸಹಾಯದಿಂದ, ನೀವು ಕಪ್ಪು ಬಣ್ಣವನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀರು ಮತ್ತು ಅಡಿಗೆ ಸೋಡಾವನ್ನು ಹಾಕಿ ಮಿಕ್ಸ್‌ ಮಾಡಿ ಪೇಸ್ಟ್ ಮಾಡಿ. ಈಗ ಅದನ್ನು ನೀವು ಐರನ್ ಬಾಕ್ಸ್ ಅಡಿಭಾಗದಲ್ಲಿ ಹಚ್ಚಬೇಕು. ಇದಕ್ಕೂ ಬೇಕಿದ್ದರೆ ಬ್ರೆಷ್ ಅಥವಾ ಬಟ್ಟೆಯ ಸಹಾಯ ತೆಗೆದುಕೊಳ್ಳಿ. ಎಲ್ಲೆಲ್ಲಿ ಹೆಚ್ಚು ಕಪ್ಪಗಿನ ಕಲೆ ಇದೆಯೋ ಅಲ್ಲೆಲ್ಲ ನೀವು ಇದನ್ನು ಹಚ್ಚಬಹುದು. ಹೀಗೆ ಹಚ್ಚಿ ಒಂದು ಐದು ನಿಮಿಷಗಳ ಕಾಲ ಹಾಗೇ ಬಿಡಿ. ಆ ನಂತರ ಅದನ್ನು ಒಂದು ಒದ್ದೆ ಬಟ್ಟೆ ತೆಗೆದುಕೊಂಡು ಒರೆಸಿಬಿಡಿ.

ಟೂತ್ ಪೇಸ್ಟ್

ಟೂತ್ ಪೇಸ್ಟ್ ಹಲ್ಲುಗಳಿಗೆ ಹೊಳಪು ಕೊಡುತ್ತದೆ ಎಂದಷ್ಟೇ ನಿಮಗೆ ತಿಳಿದಿದೆ. ಆದರೆ ಇದನ್ನು ಬಳಸಿಕೊಂಡು ಐರನ್ ಬಾಕ್ಸ್‌ ಕೂಡ ಕ್ಲೀನ್ ಮಾಡಬಹುದು. ಟೂತ್ ಪೇಸ್ಟ್ ಅನ್ನು ಸುಟ್ಟ ಜಾಗಕ್ಕೆ ಹಚ್ಚಿ, ಒಣಗಿದ ನಂತರ ಮೃದುವಾದ ಸ್ಪಾಂಜ್‌ನಿಂದ ಉಜ್ಜಿ ಸ್ವಚ್ಛಗೊಳಿಸಿ ಕಲೆ ಮಾಯವಾಗುತ್ತದೆ.

ಸ್ವಚ್ಛಗೊಳಿಸುವ ಮೊದಲು ಕೆಲವು ಮುನ್ನೆಚ್ಚರಿಕೆ

ಸ್ವಚ್ಛಗೊಳಿಸುವ ಮೊದಲು ನೀವು ಐರನ್‌ ಬಾಕ್ಸ್‌ ಸ್ವಿಚ್ ಆಫ್ ಮಾಡಿ ಮತ್ತು ಬೋರ್ಡ್ನಿಂದ ಅದರ ಪ್ಲಗ್ ತೆಗೆದುಹಾಕಿ. ಇದರಿಂದಾಗಿ ನೀವು ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಅದೇ ರೀತಿ ನೀವು ಸ್ವಚ್ಛ ಮಾಡಿದ ನೀರಿನ ಅಂಶ ಒಣಗುವ ಮುನ್ನವೇ ಐರನ್ ಬಾಕ್ಸ್‌ ಆನ್ ಮಾಡಬೇಡಿ.