ಕನ್ನಡ ಸುದ್ದಿ  /  ಜೀವನಶೈಲಿ  /  World No Tobacco Day: ತಂಬಾಕಿನಿಂದ ದೂರವಿರಿ, ಆರೋಗ್ಯದೊಂದಿಗೆ ಸಮಾಜವನ್ನೂ ರಕ್ಷಿಸಿ; ವಿಶ್ವ ತಂಬಾಕು ರಹಿತ ದಿನದ ಮಹತ್ವ, ಇತಿಹಾಸ ತಿಳಿಯಿರಿ

World No Tobacco Day: ತಂಬಾಕಿನಿಂದ ದೂರವಿರಿ, ಆರೋಗ್ಯದೊಂದಿಗೆ ಸಮಾಜವನ್ನೂ ರಕ್ಷಿಸಿ; ವಿಶ್ವ ತಂಬಾಕು ರಹಿತ ದಿನದ ಮಹತ್ವ, ಇತಿಹಾಸ ತಿಳಿಯಿರಿ

ತಂಬಾಕು ಸೇವನೆಯಿಂದ ಆರೋಗ್ಯ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮಹತ್ವ, ಇತಿಹಾಸ, 2024ರ ಥೀಮ್‌ ಇತ್ಯಾದಿ ಇತ್ಯಾದಿ ವಿವರ ಇಲ್ಲಿದೆ.

ವಿಶ್ವ ತಂಬಾಕು ದಿನದ ಮಹತ್ವ, ಇತಿಹಾಸ ತಿಳಿಯಿರಿ
ವಿಶ್ವ ತಂಬಾಕು ದಿನದ ಮಹತ್ವ, ಇತಿಹಾಸ ತಿಳಿಯಿರಿ (PC: Canva)

ಸದ್ಯ ಪ್ರಪಂಚದಾದ್ಯಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನವಿದೆ. ಭಾರತವನ್ನು ಕ್ಯಾನ್ಸರ್‌ ರಾಜಧಾನಿ ಎಂದೂ ಸಹ ಕರೆಯಲಾಗುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಲ್ಲಿ ತಂಬಾಕು ಪ್ರಮುಖವಾದದ್ದು. ಬೀಡಿ, ಸಿಗರೇಟ್‌, ಗುಟ್ಕಾ, ಪಾನ್‌ ಮುಂತಾದ ತಂಬಾಕಿನ ಉತ್ಪನ್ನಗಳು ಆರೋಗ್ಯದ ಮೇಲೆ ಮಾತ್ರವಲ್ಲ ಸಮಾಜದ ಮೇಲೂ ಹಾನಿಕಾರಕ ಪರಿಣಾಮ ಉಂಟು ಮಾಡುತ್ತದೆ. ತಂಬಾಕು ವೈಯಕ್ತಿಕ ಹಾನಿ ಮಾತ್ರವಲ್ಲ, ಇದರ ಸೇವನೆ ಅಥವಾ ಬಳಕೆಯು ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಟ್ರೆಂಡಿಂಗ್​ ಸುದ್ದಿ

ತಂಬಾಕಿನಿಂದ ಆರೋಗ್ಯ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕಿನ ಹಾನಿಕಾರಣ ಪರಿಣಾಮಗಳು ಮತ್ತು ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಅಗತ್ಯತೆದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಧೂಮಪಾನವನ್ನು ತ್ಯಜಿಸಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುವುದು ಬಹಳ ಮುಖ್ಯ. ಧೂಮಪಾನ ಹಾಗೂ ತಂಬಾಕಿನ ಉತ್ಪನ್ನಗಳನ್ನು ತ್ಯಜಿಸುವುದರಿಂದ ಅವರ ಆ ವ್ಯಕ್ತಿಯ ಜೀವ, ಜೀವನ ಮಾತ್ರವಲ್ಲ, ಸುತ್ತಲಿನ ಸಮಾಜ ಹಾಗೂ ವ್ಯಕ್ತಿಗಳನ್ನೂ ಉಳಿಸಬಹುದು. ವಿಶ್ವ ತಂಬಾಕು ರಹಿತ ದಿನವನ್ನು ಯಾವಾಗ ಆಚರಿಸುತ್ತಾರೆ, ಈ ದಿನದ ಮಹತ್ವ, ಇತಿಹಾಸ ಮುಂತಾದ ವಿವರ ಇಲ್ಲಿದೆ. 

ವಿಶ್ವ ತಂಬಾಕು ದಿನ ಯಾವಾಗ?

ಪ್ರತಿವರ್ಷ ಮೇ 31ರಂದು ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ತಂಬಾಕು ದಿನ ಶುಕ್ರವಾರ ಬಂದಿದೆ.

ವಿಶ್ವ ತಂಬಾಕು ರಹಿತ ದಿನದ ಇತಿಹಾಸ

1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನದ ಆಚರಣೆ ಸ್ಥಾಪಿಸಿತು. ಆದರೆ 1987ರಲ್ಲಿ ಮೊದಲ ಬಾರಿಗೆ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವದಾದ್ಯಂತ ಈ ಆಚರಣೆಯ ನಡೆಯುತ್ತಿದೆ. ತಂಬಾಕು ಉತ್ಪನ್ನಗಳ ವ್ಯಾಪಕ ವಾಣಿಜ್ಯ ಮಾರುಕಟ್ಟೆ ಮತ್ತು ಮಾನವನ ಆರೋಗ್ಯದ ಮೇಲೆ ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವ ಸಲುವಾಗಿ ಈ ದಿನವನ್ನು ಸ್ಥಾಪಿಸಲಾಯಿತು. 

WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ತಂಬಾಕು ಸಂಬಂಧಿತ ಕಾಯಿಲೆಗಳ ಪರಿಣಾಮವಾಗಿ ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ. 2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅಭಿಯಾನವನ್ನು ನಡೆಸುತ್ತಿದೆ.

ಧೂಮಪಾನ ನಿಷೇಧಕ್ಕೆ ಕಾರ್ಯಕ್ರಮಗಳು ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದು ಮುಂತಾದವುಗಳ ಮೇಲೆ ಅಭಿಯಾನಗಳನ್ನು ಮಾಡಲಾಗುತ್ತದೆ. ಆ ಮೂಲಕ ವಿಶ್ವದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 

ವಿಶ್ವ ತಂಬಾಕು ರಹಿತ ದಿನದ ಮಹತ್ವ

ವಿಶ್ವ ತಂಬಾಕು ರಹಿತ ದಿನವು ತಂಬಾಕಿನ ಹಾನಿಕಾರಕ ಪರಿಣಾಮಗಳನ್ನು ಪ್ರತಿಬಿಂಬಿಸಲು ಮತ್ತು ತಂಬಾಕು ಸೇವನೆಯನ್ನು ಕಡಿಮೆ ಮಾಡುವ ನಮ್ಮ ಬದ್ಧತೆಯನ್ನು ನವೀಕರಿಸಲು ಅವಕಾಶವನ್ನು ಒದಗಿಸುತ್ತದೆ.

ಧೂಮಪಾನ ಮುಕ್ತ ಜಗತ್ತನ್ನು ಬೆಂಬಲಿಸುವ ನೀತಿಗಳನ್ನು ಉತ್ತೇಜಿಸಲು ಮತ್ತು ಧೂಮಪಾನವನ್ನು ತೊರೆಯಲು ಪ್ರಯತ್ನಿಸುತ್ತಿರುವ ಜನರಿಗೆ ಬೆಂಬಲ ವಾತಾವರಣವನ್ನು ಸೃಷ್ಟಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ.ನಿಮ್ಮ ಸುತ್ತಮುತ್ತಲಿನ ಜನರನ್ನು ಧೂಮಪಾನವನ್ನು ತ್ಯಜಿಸಲು ಪ್ರೇರೇಪಿಸಿ ಇದರಿಂದ ಅವರು ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನವನ್ನು ನಡೆಸಬಹುದು. ಅಭಿಯಾನಗಳಲ್ಲಿ ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಲು ಈ ಅವಕಾಶವನ್ನು ಬಳಸಿಕೊಳ್ಳಿ.

ವಿಶ್ವ ತಂಬಾಕು ರಹಿತ ದಿನ 2024ರ ಥೀಮ್‌ 

ವಿಶ್ವ ತಂಬಾಕು ರಹಿತ ದಿನ 2024 ಥೀಮ್‌ ʼತಂಬಾಕು ಉದ್ಯಮಗಳ ಹಸ್ತಕ್ಷೇಪಗಳನ್ನು ತಡೆದು ಮಕ್ಕಳನ್ನು ರಕ್ಷಿಸುವುದುʼ ಎಂಬುದಾಗಿದೆ. ಇದು ಭವಿಷ್ಯದ ಜನಾಂಗವನ್ನು ತಂಬಾಕಿನ ದುಷ್ಪರಿಣಾಮಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. 

ತಂಬಾಕು ಅಥವಾ ಬೀಡಿ, ಸೀಗರೇಟ್‌ ಸೇವನೆಯನ್ನು ಇಂದೇ ನಿಲ್ಲಿಸಿ, ಸ್ವಸ್ಥ ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ.