ಬೆಂಗಳೂರಿನ ಟೆಕ್ ಸೆಂಟರ್‌ನಲ್ಲಿ ಅರ್ಧಕ್ಕರ್ಧ ಉದ್ಯೋಗಿಗಳನ್ನು ಕಡಿತಗೊಳಿಸಿದ ಝೀ ಎಂಟರ್‌ಟೇನ್‌ಮೆಂಟ್; 3ಎಂ ತಂತ್ರ ಅಳವಡಿಸಿದ ಕಂಪನಿ
ಬೆಂಗಳೂರಿನ ಟೆಕ್ ಸೆಂಟರ್‌ನಲ್ಲಿ ಅರ್ಧಕ್ಕರ್ಧ ಉದ್ಯೋಗಿಗಳನ್ನು ಕಡಿತಗೊಳಿಸಿದ ಝೀ ಎಂಟರ್‌ಟೇನ್‌ಮೆಂಟ್, 3ಎಂ ತಂತ್ರ ಅಳವಡಿಸಿಕೊಂಡು ಹೆಚ್ಚಿನ ಕಾರ್ಯಕ್ಷಮತೆ, ಉತ್ಪಾದನೆ ಕಡೆಗೆ ಗಮನಹರಿಸಿದೆ. ಡಿಜಿಟಲ್ ಕಂಟೆಂಟ್ ಕ್ಷೇತ್ರದಲ್ಲಿ ಗಮನಸೆಳೆದ ಈ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ಕಂಪನಿಯ ಕೆಲವು ಉನ್ನತಾಧಿಕಾರಿಗಳು ರಾಜೀನಾಮೆ ನೀಡಿ ತೆರಳಿದ ಬೆನ್ನಿಗೆ, ಝೀ ಎಂಟರ್‌ಟೇನ್‌ಮೆಂಟ್ (Zee Entertainment) ವೆಚ್ಚ ಕಡಿತಗೊಳಿಸುವ ಕ್ರಮದ ಭಾಗವಾಗಿ ಬೆಂಗಳೂರಿನ ತಂತ್ರಜ್ಞಾನ ಮತ್ತು ನಾವೀನ್ಯ ಕೇಂದ್ರದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ.
ಇತ್ತೀಚೆಗೆ ನಡೆದ ಮಾಸಿಕ ನಿರ್ವಹಣಾ ಮಾರ್ಗದರ್ಶನ (3ಎಂ) ಕಾರ್ಯಕ್ರಮದಲ್ಲಿ ಮಂಡಳಿಯಿಂದ ಪಡೆದ ಮಾರ್ಗದರ್ಶನದ ಮೇರೆಗೆ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರದ (ಟಿಐಸಿ) ಒಟ್ಟು ರಚನೆಯನ್ನು ಅಂದಾಜು 50 ಪ್ರತಿಶತದಷ್ಟು ಕಡಿಮೆ ಮಾಡಿದೆ ಎಂದು ಕಂಪನಿ ತಿಳಿಸಿದೆ.
ಗ್ರಾಹಕರ ಆದ್ಯತೆಗಳ ಬಗ್ಗೆ ಆಳ ಒಳನೋಟಗಳನ್ನು ಪಡೆಯಲು ತಂತ್ರಜ್ಞಾನ-ನೇತೃತ್ವದ ಸಾಧನಗಳನ್ನು ಬಳಸಿಕೊಳ್ಳುವ ಮೂಲಕ ಕಂಪನಿಯ ಒಟ್ಟಾರೆ ಕಂಟೆಂಟ್ ರಚನೆ, ವಿತರಣೆ ಮತ್ತು ಹಣಗಳಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ಟಿಐಸಿ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ಝೀ ಎಂಟರ್‌ಟೇನ್‌ಮೆಂಟ್ ಹೇಳಿದ್ದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.
ಏನಿದು ಝೀ ಎಂಟರ್‌ಟೇನ್‌ಮೆಂಟ್‌ನ 3 ಎಂ ಕಾರ್ಯಕ್ರಮ
ಝೀ ಎಂಟರ್‌ಟೇನ್‌ಮೆಂಟ್‌ನ ಆಡಳಿತ ಮಂಡಳಿಯು ಮಂತ್ಲಿ ಮ್ಯಾನೇಜ್‌ಮೆಂಟ್ ಮೆಂಟರ್‌ಶಿಪ್ (3ಎಂ) ಅಥವಾ ಮಾಸಿಕ ನಿರ್ವಹಣಾ ಮಾರ್ಗದರ್ಶನ ಕಾರ್ಯಕ್ರಮವನ್ನು ಸಾಂಸ್ಥಿಕವಾಗಿ ಅಳವಡಿಸಿಕೊಂಡಿದೆ. ಪ್ರಮುಖ ಕಾರ್ಯಕ್ಷಮತೆಯನ್ನು ಸಾಧಿಸುವುದಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ತಂಡವನ್ನು ಸಕ್ರಿಯಗೊಳಿಸುವ ಮೂಲಕ ನಿಗದಿತ ಗುರಿಯಾದ ಶೇಕಡ 20 ಇಬಿಐಟಿಡಿಎ ಮಾರ್ಜಿನ್ ಸೇರಿ ಪ್ರಮುಖ ಮಾನದಂಡಗಳನ್ನು ಈಡೇರಿಸುವುದು ಈ 3 ಎಂ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ವಿಚಾರವನ್ನು ಝೀ ಎಂಟರ್‌ಟೇನ್‌ಮೆಂಟ್ ಮಾರ್ಚ್ 26ರಂದು ಸ್ಟಾಕ್‌ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಕಡತದಲ್ಲಿ ವಿವರಿಸಿದೆ.
ಈ ಕಾರ್ಯಕ್ರಮದ ಮೂಲಕ ಕಡಿಮೆ ಉದ್ಯೋಗಿಗಳೊಂದಿಗೆ ತನ್ನ ನಿಗದಿತ ಗುರಿ ಸಾಧನೆಗೆ ಅವರನ್ನು ಸಜ್ಜುಗೊಳಿಸುವ ಕೆಲಸಕ್ಕೆ ಝೀ ಎಂಟರ್‌ಟೇನ್‌ಮೆಂಟ್ ಮುಂದಾಗಿದೆ.
ಬೆಂಗಳೂರು ಟಿಐಸಿಯಲ್ಲಿ ವೆಚ್ಚಕಡಿತದ ಪರಿಣಾಮ
ಝೀ ಎಂಟರ್‌ಟೇನ್‌ಮೆಂಟ್‌ನ ಬೆಂಗಳೂರು ಟಿಐಸಿಯಲ್ಲಿ ವೆಚ್ಚಕಡಿತದ ಪರಿಣಾಮವಾಗಿ ಉದ್ಯೋಗಿಗಳ ಪ್ರಮಾಣ ಅರ್ಧಕ್ಕರ್ಧದಷ್ಟು ಕ
ಟಿಐಸಿಯಲ್ಲಿನ ಪ್ರಮುಖ ಬದಲಾವಣೆಗಳು ಕಂಪನಿಯ ಬೆಳವಣಿಗೆಗೆ ಸಂಬಂಧಿಸಿದ್ದಾಗಿವೆ. ಉನ್ನತ ಮಟ್ಟದ ಉತ್ಪಾದನೆಯನ್ನು ಖಾತರಿಪಡಿಸುವುದಕ್ಕೆ ಅಗತ್ಯ ಬದಲಾವಣೆ ಇದು. ಸಮರ್ಥ ಮತ್ತು ಸಾಕಷ್ಟು ಉತ್ಪಾದಕವಾದ ವೆಚ್ಚ-ಪರಿಣಾಮಕಾರಿ ರಚನೆಯನ್ನು ಸಾಧಿಸಲು ಈ ಸೂಕ್ಷ್ಮ ಮಟ್ಟದ ತಂತ್ರಗಾರಿಕೆ ವಿಧಾನಕ್ಕೆ ಅನುಗುಣವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸೋನಿ ಕಂಪನಿ ಜೊತೆಗೆ ವಿಲೀನ ಪ್ರಕ್ರಿಯೆ ನಿಂತ ಬಳಿಕ, ಝೀ ಎಂಟರ್‌ಟೇನ್‌ಮೆಂಟ್ ವೆಚ್ಚ ಕಡಿತದ ಕ್ರಮಗಳು ಮತ್ತು ವ್ಯವಹಾರವನ್ನು ಸುಗಮಗೊಳಿಸುವ ಕೆಲಸದೆಡೆಗೆ ಗಮನಹರಿಸಿದೆ.
"ಅಸಾಧಾರಣ ಕಂಟೆಂಟ್ ರಚಿಸುವ ಕಡೆಗೆ ಹೆಚ್ಚು ಗಮನಕೇಂದ್ರೀಕರಿಸುತ್ತಿದ್ದೇವೆ. ಇದನ್ನು ಸಾಧಿಸಲು, ನಮಗೆ ಸೃಜನಾತ್ಮಕ ವಿಧಾನ, ವಿವರವಾದ ಗ್ರಾಹಕ ಒಳನೋಟಗಳು ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದ ಪರಿಹಾರಗಳ ಮಿಶ್ರಣದ ಅಗತ್ಯವಿದೆ. ಟಿಐಸಿಯಲ್ಲಿನ ಪ್ರಮುಖ ಮತ್ತು ಸುವ್ಯವಸ್ಥಿತ ತಂಡವು ಈಗ ಈ ಕಂಟೆಂಟ್ ರಚನೆ, ವಿತರಣೆ ಮತ್ತು ಹಣಗಳಿಕೆಯ ಪ್ರಕ್ರಿಯೆಯಲ್ಲಿ ನಮ್ಮನ್ನು ಸಕ್ರಿಯಗೊಳಿಸಲು ಮತ್ತು ಸಬಲೀಕರಣಗೊಳಿಸಲು ಮಾತ್ರ ಗಮನಹರಿಸುತ್ತದೆ” ಎಂದು ಝೀ ಕಂಪನಿಯ ಎಂಡಿ ಮತ್ತು ಸಿಇಒಪ ಪುನಿತ್ ಗೋಯೆಂಕಾ ಹೇಳಿದ್ದಾಗಿ ಮನಿ ಕಂಟ್ರೋಲ್ ವರದಿ ಹೇಳಿದೆ.
ಕಂಪನಿಯು ತನ್ನ ಪ್ರಸಾರ ವ್ಯವಹಾರದ ಆದಾಯ ವರ್ಟಿಕಲ್‌ನಲ್ಲಿ ಕಾರ್ಯತಂತ್ರದ ಬದಲಾವಣೆಗಳನ್ನು ಘೋಷಿಸಿತು ಮತ್ತು ಮೂರು ವರ್ಷಗಳ ಕಾಲ ಕಂಪನಿಯಲ್ಲಿ ಆದಾಯ ಮತ್ತು ಹಣಗಳಿಕೆಯ ಲಂಬವಾದ ನೇತೃತ್ವ ವಹಿಸಿದ್ದ ರಾಹುಲ್ ಜೋಹ್ರಿ ಅವರ ರಾಜೀನಾಮೆಯನ್ನು ಸಹ ಅಂಗೀಕರಿಸಿತು. ನಂತರ, ಕಂಪನಿಯ ತಂತ್ರಜ್ಞಾನ ಮತ್ತು ಡೇಟಾದ ಅಧ್ಯಕ್ಷ ನಿತಿನ್ ಮಿತ್ತಲ್ ಕೂಡ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ಕಂಪನಿಯು ತನ್ನ ಪ್ರಸಾರ ವ್ಯವಹಾರದ ಆದಾಯ ವರ್ಟಿಕಲ್‌ನಲ್ಲಿ ಕಾರ್ಯತಂತ್ರದ ಬದಲಾವಣೆಗಳನ್ನು ಘೋಷಿಸಿತು. ಮೂರು ವರ್ಷಗಳ ಕಾಲ ಕಂಪನಿಯಲ್ಲಿ ಆದಾಯ ಮತ್ತು ಹಣಗಳಿಕೆಯ ಲಂಬವಾದ ನೇತೃತ್ವ ವಹಿಸಿದ್ದ ರಾಹುಲ್ ಜೋಹ್ರಿ ಅವರ ರಾಜೀನಾಮೆಯನ್ನು ಸಹ ಅಂಗೀಕರಿಸಿತು. ನಂತರ, ಕಂಪನಿಯ ತಂತ್ರಜ್ಞಾನ ಮತ್ತು ಡೇಟಾದ ಅಧ್ಯಕ್ಷ ನಿತಿನ್ ಮಿತ್ತಲ್ ಕೂಡ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.