ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Personal Finance: ಹಣ ಸಂಪಾದನೆ ಹೇಗೆ? ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು 12 ದಾರಿಗಳು

Personal Finance: ಹಣ ಸಂಪಾದನೆ ಹೇಗೆ? ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು 12 ದಾರಿಗಳು

Ways to Make Money Online: ಹಣ ಸಂಪಾದನೆ ಎಲ್ಲರ ಗುರಿ. ಈಗಿನ ಆನ್‌ಲೈನ್‌ ಯುಗದಲ್ಲಿ ಹಣ ಸಂಪಾದನೆಗೆ ಹೆಚ್ಚಿನ ದಾರಿಗಳಿವೆ. ಆನ್‌ಲೈನ್‌ ಮೂಲಕ ಹಣ ಸಂಪಾದನೆ ಮಾಡಲು ಬಯಸುವವರು ಈ ಸಲಹೆಗಳನ್ನು ಪಾಲಿಸಬಹುದು.

Personal Finance: ಹಣ ಸಂಪಾದನೆ ಹೇಗೆ? ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು 12 ದಾರಿಗಳು
Personal Finance: ಹಣ ಸಂಪಾದನೆ ಹೇಗೆ? ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು 12 ದಾರಿಗಳು

ಆನ್‌ಲೈನ್‌ನಲ್ಲಿ ಹಣ ಸಂಪಾದಿಸಿ ಎಂಬ ಜಾಹೀರಾತುಗಳನ್ನು ಕಂಡು ಸಾಕಷ್ಟು ಜನರು ಮೋಸ ಹೋಗಿರಬಹುದು. ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಬಯಸುವ ಸಾವಿರಾರು ಜನರನ್ನು ವಂಚಿಸಲೆಂದು ಸಾವಿರಾರು ವಂಚಕರು ಕಾದುಕುಳಿತಿರುತ್ತಾರೆ. ಇಂತಹ ಸಮಯದಲ್ಲಿ ಆನ್‌ಲೈನ್‌ನಲ್ಲಿ ಉದ್ಯೋಗ, ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಎಂಬ ಮೋಸದ ಜಾಲಗಳಿಗೆ ಬೀಳಬಾರದು. ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಮಾಡಲು ಇಲ್ಲಿ ಹನ್ನೆರಡು ಸಲಹೆ ನೀಡಲಾಗಿದೆ. ಪ್ರಯತ್ನಿಸಿ ನೋಡಿ.

ಟ್ರೆಂಡಿಂಗ್​ ಸುದ್ದಿ

ವಿಮೆ ಮಾರಾಟ

ಆನ್‌ಲೈನ್‌ನಲ್ಲಿ ವಿಮೆ ಪಾಯಿಂಟ್‌ ಆಫ್‌ ಸೇಲ್ಸ್‌ಮ್ಯಾನ್‌ ಆಗಿ ಹಣ ಸಂಪಾದಿಸಬಹುದು. ಈಗ ಬಹುತೇಕರು ಇಂಟರ್‌ನೆಟ್‌ನಲ್ಲಿಯೇ ಹಲವು ಜನರನ್ನು ಸಂಪರ್ಕಿಸಿ ವಿಮೆ ಮಾರಾಟ ಮಾಡುತ್ತಾರೆ. ಇದಕ್ಕಾಗಿ ನಿಮ್ಮಲ್ಲಿ ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌ ಕನೆಕ್ಷನ್‌ ಇದ್ದರೆ ಸಾಕು.

ಫ್ರಿಲ್ಯಾನ್ಸಿಂಗ್‌ ಕೆಲಸ

ಪ್ರೋಗ್ರಾಮಿಂಗ್‌, ಎಡಿಟಿಂಗ್‌, ಡಿಸೈನಿಂಗ್‌ ಇತ್ಯಾದಿ ಕೌಶಲ ಇರುವವರು ಆನ್‌ಲೈನ್‌ನಲ್ಲಿ ಫ್ರಿಲ್ಯಾನ್ಸರ್‌ ಕೆಲಸ ಹುಡುಕಬಹುದು. ಇದಕ್ಕಾಗಿ ಫ್ರೀಲ್ಯಾನ್ಸರ್‌ಡಾಟ್‌ಕಾಂ, ಅಪ್‌ವರ್ಕ್‌ ಇತ್ಯಾದಿ ವೆಬ್‌ಗಳಲ್ಲಿ ಹೆಸರು ನೋಂದಾಯಿಸಬೇಕು.

ಕಂಟೆಂಟ್‌ ಬರವಣಿಗೆ

ಈಗ ಆನ್‌ಲೈನ್‌ ಜಗತ್ತು ಸಾಕಷ್ಟು ಕಂಟೆಂಟ್‌ ಬಯಸುತ್ತದೆ. ಇದರೊಂದಿಗೆ ವಿವಿಧ ಕಂಪನಿಗಳು ಕಂಟೆಂಟ್‌ ಬರಹಗಾರರನ್ನು ಬಯಸುತ್ತವೆ. ಇಂತಹ ಕೆಲಸವನ್ನು ಇಂಟರ್‌ಶಾಲಾ, ಫ್ರೀಲಾನ್ಸರ್‌, ಅಪ್‌ವರ್ಕ್‌, ಗುರು ಇತ್ಯಾದಿ ವೆಬ್‌ಸೈಟ್‌ಗಳಲ್ಲಿ ಪಡೆಯಬಹುದು. ಬ್ರ್ಯಾಂಡ್‌ಗಳು, ಟ್ರಾವೆಲ್‌ ಇತ್ಯಾದಿ ಟಾಪಿಕ್‌ ಬರೆಯುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಬ್ಲಾಗಿಂಗ್‌ ಅಥವಾ ಯೂಟ್ಯೂಬರ್‌

ಬ್ಲಾಗ್‌ ಬರಹಗಾರರಾಗುವ ಮೂಲಕವೂ ಹಣ ಸಂಪಾದಿಸಬಹುದು. ಇದರಲ್ಲಿ ಹಣ ಸಂಪಾದನೆ ಆರಂಭವಾಗಲು ಕೆಲವು ಸಮಯ ಬೇಕಾಗುತ್ತದೆ. ಬ್ಲಾಗಿಂಗ್‌ ಮೂಲಕ ಲಕ್ಷಲಕ್ಷ ಹಣ ಸಂಪಾದಿಸುವವರು ಇದ್ದಾರೆ. ಇದೇ ರೀತಿ ಯೂಟ್ಯೂಬರ್‌ ಆಗಿಯೂ ಹಣ ಸಂಪಾದಿಸಬಹುದು. ಯೂಟ್ಯೂಬ್‌ ಚಾನೆಲ್‌ ಆರಂಭಿಸಲು ಬಯಸುವವರಿಗೆ ಗೈಡ್‌ ಬೇಕಿದ್ದರೆ ಇಲ್ಲಿ ಕ್ಲಿಕ್‌ ಮಾಡಿ. ಅದೇ ರೀತಿ ಇನ್‌ಸ್ಟಾಗ್ರಾಂ ಮೂಲಕ ಹಣ ಸಂಪಾದಿಸಲು ಬಯಸುವವರು ಇಲ್ಲಿ ಕ್ಲಿಕ್‌ ಮಾಡಿ.

ಡಿಜಿಟಲ್‌ ಉತ್ಪನ್ನಗಳನ್ನು ಮಾರಾಟ ಮಾಡಿ

ರೆಸಿಪಿ, ಕ್ರಾಫ್ಟ್‌, ಆಡಿಯೋ, ವಿಡಿಯೋ ಕೋರ್ಸ್‌, ಇಪುಸ್ತಕಗಳು, ಡಿಸೈನ್‌ ಟೆಂಪ್ಲೆಟ್‌, ಪ್ಲಗಿನ್‌ಗಳು, ಸಾಫ್ಟ್‌ವೇರ್‌ ಇತ್ಯಾದಿ ನಿಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ನೀವು ಒಳ್ಳೆಯ ಉಪ್ಪಿನಕಾಯಿ ಮಾಡುವಿರಾದರೆ ಉಪ್ಪಿನಕಾಯಿಯನ್ನೂ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.

ಟ್ರಾನ್ಸ್‌ಲೇಷನ್‌ ಉದ್ಯೋಗ

ಅನುವಾದ ಮಾಡಲು ಬಯಸುವವರಿಗೆ ಆನ್‌ಲೈನ್‌ನಲ್ಲಿ ಹಲವು ಅವಕಾಶ ಇರುತ್ತದೆ. ಟ್ರಾನ್ಸ್‌ಲೇಟರ್‌ ಡೈರೆಕ್ಟರಿ ಇತ್ಯಾದಿಗಳಲ್ಲಿ ಹೆಸರು ನೋಂದಾಯಿಸಿಕೊಂಡು ಅನುವಾದ ಮಾಡಬಹುದು. ಇಂಗ್ಲಿಷ್‌ನಿಂದ ಕನ್ನಡ, ಕನ್ನಡದಿಂದ ಇಂಗ್ಲಿಷ್‌ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಅನುವಾದಕರಿಗೆ ಬೇಡಿಕೆ ಇದೆ.

ವೆಬ್‌, ಆಪ್‌ಗಳ ಬೀಟಾ ಟೆಸ್ಟ್‌

ಪ್ರತಿಯೊಂದು ಕಂಪನಿಯು ತಮ್ಮ ಆಪ್‌, ವೆಬ್‌ಸೈಟ್‌ ಬಿಡುಗಡೆ ಮಾಡುವ ಮೊದಲು ಟೆಸ್ಟ್‌ ಮಾಡುತ್ತಿದೆ. ಬೀಟಾ ಆವೃತ್ತಿ ಟೆಸ್ಟ್‌ ಮಾಡುವ ಉದ್ಯೋಗವೂ ಆನ್‌ಲೈನ್‌ನಲ್ಲಿ ದೊರಕುತ್ತದೆ. ಬೀಟಾಟೆಸ್ಟಿಂಗ್‌, ಟೆಸ್ಟರ್‌ ವರ್ಕ್‌, ಟ್ರೈಮೈಯುಐ ಇತ್ಯಾದಿ ವೆಬ್‌ಗಳಲ್ಲಿ ಕೆಲಸಕ್ಕೆ ಪ್ರಯತ್ನಿಸಬಹುದು.

ಟ್ರಾವೆಲ್‌ ಏಜೆಂಟ್‌ ಆಗಿ

ಟ್ರಾವೆಲ್‌ ಪ್ಲಾನರ್‌ ಆಗಿಯೂ ನೀವು ಆನ್‌ಲೈನ್‌ನಲ್ಲಿ ದುಡಿಯಬಹುದು. ಇಂಟರ್‌ನೆಟ್‌, ಫೋನ್‌ ಇತ್ಯಾದಿಗಳ ಅವಶ್ಯಕತೆ ಇರುತ್ತದೆ. ಪ್ರವಾಸಿ ಆಸಕ್ತರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಟ್ರಾವೆಲ್‌ ಸ್ಟೋರಿಗಳನ್ನು ಇಲ್ಲಿ ಕ್ಲಿಕ್‌ ಮಾಡುವ ಮೂಲಕ ಓದಬಹುದು.

ಡೇಟಾ ಎಂಟ್ರಿ ಜಾಬ್‌

ಹೆಚ್ಚಿನ ಕೌಶಲ ಇಲ್ಲದವರು ಇಂತಹ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಇದೇ ಹೆಸರಿನಲ್ಲಿ ಸಾಕಷ್ಟು ವಂಚನೆಯ ವೆಬ್‌ಗಳೂ ಇವೆ. ಫ್ರೀಲಾನ್ಸರ್‌, ಗುರು ಇತ್ಯಾದಿಗಳಲ್ಲಿ ಡೇಟಾ ಎಂಟ್ರಿ ಜಾಬ್‌ ಹುಡುಕಬಹುದು.

ಆನ್‌ಲೈನ್‌ ಟ್ಯೂಟರ್‌

ನೀವು ಒಳ್ಳೆಯ ಶಿಕ್ಷಕರಾಗಿದ್ದರೆ ಅಥವಾ ಆನ್‌ಲೈನ್‌ ಮೂಲಕ ಟೀಚಿಂಗ್‌ ಮಾಡಲು ಬಯಸಿದರೆ ಆನ್‌ಲೈನ್‌ ಟ್ಯೂಟರ್‌ ಆಗಬಹುದು. ಇಂಗ್ಲಿಷ್‌, ಗಣಿತ, ವಿಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ನೀವು ಟ್ಯೂಟರ್‌ ಆಗಬಹುದು.

ಷೇರು ಪೇಟೆ ಹೂಡಿಕೆ

ನಿಮ್ಮಲ್ಲಿ ಷೇರುಪೇಟೆ ಕುರಿತು ಜ್ಞಾನ ಇದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಕಂಪನಿಯ ಷೇರು ಖರೀದಿಸುವುದು, ಆ ಷೇರಿನ ಮೌಲ್ಯ ಹೆಚ್ಚಾದಗ ಮಾರಾಟ ಮಾಡುವುದು, ಷೇರು ಮೌಲ್ಯ ಕಡಿಮೆಯಾದಗ ಖರೀದಿಸುವುದು ಇತ್ಯಾದಿ ತಿಳಿದರಬೇಕು. ಷೇರುಪೇಟೆ ಕುರಿತಾದ ಲೇಖನಗಳನ್ನು ಎಚ್‌ಟಿ ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅಫಿಲಿಯೇಟ್‌ ಮಾರ್ಕೆಟಿಂಗ್‌

ನಿಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಹಿಂಬಾಲಕರು ಇದ್ದರೆ, ಸ್ವಂತ ವೆಬ್‌, ಬ್ಲಾಗ್‌ ಇದ್ದರೆ ಆನ್‌ಲೈನ್‌ನಲ್ಲಿ ಯಾವುದೇ ಹೂಡಿಕೆ ಮಾಡದೆ ಅಫಿಲಿಯೇಟ್‌ ಮಾಡಬಹುದು.

IPL_Entry_Point