ಏರುತ್ತೆ ಅಂತ ಇನ್‌ವೆಸ್ಟ್ ಮಾಡಿದ್ರೆ ಈ ಷೇರು 700 ರೂ ನಿಂದ ಜರ್‍ರಂತ 2 ರೂ ಗೆ ಇಳಿಯೋದಾ!; ಹೂಡಿಕೆದಾರರಿಗೆ ದೊಡ್ಡ ಲಾಸ್‌-business news stock market investment reliance communications rcom share price fell 99 pc huge loss for investors uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಏರುತ್ತೆ ಅಂತ ಇನ್‌ವೆಸ್ಟ್ ಮಾಡಿದ್ರೆ ಈ ಷೇರು 700 ರೂ ನಿಂದ ಜರ್‍ರಂತ 2 ರೂ ಗೆ ಇಳಿಯೋದಾ!; ಹೂಡಿಕೆದಾರರಿಗೆ ದೊಡ್ಡ ಲಾಸ್‌

ಏರುತ್ತೆ ಅಂತ ಇನ್‌ವೆಸ್ಟ್ ಮಾಡಿದ್ರೆ ಈ ಷೇರು 700 ರೂ ನಿಂದ ಜರ್‍ರಂತ 2 ರೂ ಗೆ ಇಳಿಯೋದಾ!; ಹೂಡಿಕೆದಾರರಿಗೆ ದೊಡ್ಡ ಲಾಸ್‌

ಟೆಲಿಕಾಂ ಕ್ಷೇತ್ರದ ರಿಲಯನ್ಸ್ ಕಮ್ಯೂನಿಕೇಷನ್ಸ್ (ಆರ್‌ಕಾಮ್‌) ಷೇರುಗಳ ಮೇಲೆ ಹೂಡಿಕೆ ಮಾಡಿದ್ದವರು ಈಗ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ. ಅನೇಕರು ಏರುತ್ತೆ ಅಂತ ಇನ್‌ವೆಸ್ಟ್ ಮಾಡಿದ್ರೆ ಈ ಷೇರು 700 ರೂ ನಿಂದ ಜರ್‍ರಂತ 2 ರೂ ಗೆ ಇಳಿಯೋದಾ! ಹೌದು.. ಆರ್‌ಕಾಮ್‌ ಷೇರಿನ ಕಥೆ-ವ್ಯಥೆ ಇದು. ಹೂಡಿಕೆದಾರರಿಗೆ ದೊಡ್ಡ ಲಾಸ್‌ ಆಗಿರುವುದು ಹೀಗೆ ಗಮನಿಸಿ.

ರಿಲಯನ್ಸ್ ಕಮ್ಯುನಿಕೇಶನ್ಸ್ ಹೂಡಿಕೆದಾರರಿಗೆ ದೊಡ್ಡ ಲಾಸ್‌ (ಸಾಂಕೇತಿಕ ಚಿತ್ರ)
ರಿಲಯನ್ಸ್ ಕಮ್ಯುನಿಕೇಶನ್ಸ್ ಹೂಡಿಕೆದಾರರಿಗೆ ದೊಡ್ಡ ಲಾಸ್‌ (ಸಾಂಕೇತಿಕ ಚಿತ್ರ) (LM)

ಷೇರುಪೇಟೆ ಹೂಡಿಕೆಯೇ ಹಾಗೆ. ಒಂದು ರೀತಿ ಜೂಜಾಟದಂತೆ. ಸ್ವಲ್ಪ ಯಾಮಾರಿದರೂ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುವಂಥ ವಹಿವಾಟು. ಲಾಭ ಮಾಡಿಕೊಟ್ಟರೂ ಅಷ್ಟೇ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡುವಂತಹ ವಹಿವಾಟು. ಯಾವುದೇ ಕಂಪನಿಯ ಷೇರುಗಳ ಮೇಲೆ ಹೂಡಿಕೆ ಮಾಡುವಾಗ ಅದರ ವಹಿವಾಟುಗಳ ಕಡೆಗೆ, ಪಾಲುದಾರರು ಯಾರು, ಬಂಡವಾಳದಲ್ಲಿ ಯಾರ ಪಾಲು ಎಷ್ಟು, ಕಳೆದ ಮೂರು ವರ್ಷ ಕಂಪನಿ ವಹಿವಾಟು ಹೇಗಿದೆ, ಲಾಭ ಎಷ್ಟು, ವಹಿವಾಟು ಎಷ್ಟು ಎಂಬಿತ್ಯಾದಿ ಗಮನಿಸಬೇಕು. ಆದರೆ, ಕಂಪನಿಯ ಬ್ರಾಂಡ್‌ ನೋಡಿಕೊಂಡು ಅನೇಕರು ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ.

ಅಂಥದ್ದೇ ಸನ್ನಿವೇಶ ಈಗ ಆರ್‌ಕಾಮ್‌ ಅಥವಾ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ ಷೇರುಗಳ ಹೂಡಿಕೆದಾರರದ್ದು. ಅನಿಲ್ ಅಂಬಾನಿ ಒಡೆತನದ ಈ ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಭಾರಿ ಆಘಾತ ನೀಡಿದ್ದು 700 ರೂಪಾಯಿ ಇದ್ದ ಷೇರು ಮೌಲ್ಯ ಜರ್‍ರಂತ 2 ರೂಪಾಯಿಗೆ ಇಳಿದು ಭಾರಿ ಲಾಸ್ ಉಂಟುಮಾಡಿದೆ. ಅಂದ ಹಾಗೆ, ಅನಿಲ್ ಅಂಬಾನಿ ಈ ಕಂಪನಿಯ ಪ್ರವರ್ತಕರಾಗಿದ್ದು, ಅನಿಲ್ ಅಂಬಾನಿ ಅವರ ಕುಟುಂಬವು ಪ್ರಸ್ತುತ ಅದರಲ್ಲಿ 0.36 ರಷ್ಟು ಪಾಲನ್ನು ಹೊಂದಿದೆ.

ಆರ್‌ಕಾಮ್‌ ಷೇರು ಬೆಲೆಯಲ್ಲಿ ತುಸು ಏರಿಕೆ

ಅನಿಲ್ ಅಂಬಾನಿಯವರ ಹಲವು ಲಿಸ್ಟೆಡ್ ಕಂಪನಿಗಳು ಭಾರಿ ಸಾಲದ ಕಾರಣ ಷೇರು ಮಾರುಕಟ್ಟೆಯಲ್ಲಿ ದಿವಾಳಿತನದ ಪ್ರಕ್ರಿಯೆಯನ್ನು ಎದುರಿಸುತ್ತಿವೆ. ಇದರ ನಕಾರಾತ್ಮಕ ಪರಿಣಾಮ ಅನಿಲ್ ಅಂಬಾನಿ ನೇತೃತ್ವದ ಇತರ ಕಂಪನಿಗಳ ಮೇಲೂ ಆಗುತ್ತಿದೆ. ಈ ಪೈಕಿ ಟೆಲಿಕಾಂ ಕ್ಷೇತ್ರದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಕೂಡ ಸೇರಿದೆ. 17 ವರ್ಷಗಳ ಅವಧಿಯಲ್ಲಿ ಈ ಕಂಪನಿಯ ಷೇರು 700 ರೂಪಾಯಿ ತಲುಪಿದ್ದದ್ದು ಈಗ 2 ರೂಪಾಯಿ ಮಟ್ಟಕ್ಕೆ ಕುಸಿದಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರು ವಹಿವಾಟು ಗಮನಿಸಿದರೆ, ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 2 ರೂಪಾಯಿಗಿಂತ ಕೆಳಕ್ಕೆ ಇಳಿದು 1.98 ರೂಪಾಯಿಗೆ ವಹಿವಾಟು ಮುಕ್ತಾಯವಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಷೇರು 2.49 ರೂಪಾಯಿ ಮಟ್ಟವನ್ನು ಮುಟ್ಟಿತ್ತು. ಇದು ಈ ಷೇರು ಮೌಲ್ಯದಲ್ಲಿ 52 ವಾರಗಳ ಗರಿಷ್ಠ ಮಟ್ಟವೂ ಆಗಿದೆ. 2024ರ ಮೇ ನಲ್ಲಿ, ಈ ಷೇರಿನ ಬೆಲೆ 1.47 ರೂಪಾಯಿ ಆಗಿತ್ತು. ಷೇರು ಮೌಲ್ಯ ಸದ್ಯ 52 ವಾರಗಳ ಕನಿಷ್ಠ ಮಟ್ಟದಲ್ಲಿದೆ.

ಆದಾಗ್ಯೂ ಸೋಮವಾರದ (ಸೆಪ್ಟೆಂಬರ್ 23) ವಹಿವಾಟಿನಲ್ಲಿ ಆರ್‌ಕಾಮ್ ಷೇರು ತುಸು ಚೇತರಿಕೆ ತೋರಿಸಿದ್ದು 2 ರೂಪಾಯಿಯಿಂದ ಮೇಲಕ್ಕೆದ್ದು 2.07 ರೂ ನಲ್ಲಿ ವಹಿವಾಟು ಶುರುಮಾಡಿದೆ.

ನೀವು ರಿಲಯನ್ಸ್ ಕಮ್ಯುನಿಕೇಷನ್ಸ್ನ ಸಾರ್ವಕಾಲಿಕ ಚಾರ್ಟ್ ಅನ್ನು ನೋಡಿದರೆ, ಈ ಷೇರು 2007 ರಲ್ಲಿ ರೂ.700 ರ ಮಟ್ಟವನ್ನು ತಲುಪಿತು. ಒಟ್ಟಾರೆ, ಈ ಷೇರು ಶೇ.99.34ರಷ್ಟು ಕುಸಿದಿದೆ.

ತೆರಿಗೆ ಪಾವತಿ ಮತ್ತುಆರ್‌ಕಾಮ್‌ ದಿವಾಳಿ ಪ್ರಕ್ರಿಯೆ

ತೆರಿಗೆ ಬಾಕಿ ಪಾವತಿಸುವಂತೆ ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ನಿರ್ದೇಶಿಸಬೇಕು ಎಂದು ಕಂದಾಯ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ತಿರಸ್ಕರಿಸಿದ ಕಾರಣ ಈ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ದಿವಾಳಿತನದ ಪ್ರಕ್ರಿಯೆಯ ಪ್ರಾರಂಭದ ನಂತರ ಮಾಡಿದ ಮೌಲ್ಯಮಾಪನವನ್ನು ಆಧರಿಸಿ ಕಂಪನಿಯ ವಿರುದ್ಧದ ಬಾಕಿ ಹಕ್ಕು. ಎನ್‌ಸಿಎಲ್‌ಎಟಿಯ ದ್ವಿಸದಸ್ಯ ಪೀಠವು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠದ ಆದೇಶಗಳನ್ನು ಎತ್ತಿಹಿಡಿದಿದೆ. ಇದು 6.10 ಕೋಟಿ ರೂಪಾಯಿ ಪಾವತಿಸಬೇಕು ಎಂಬ ಮಹಾರಾಷ್ಟ್ರ ತೆರಿಗೆ ಇಲಾಖೆಯ ದಾವೆಯನ್ನು ವಜಾಗೊಳಿಸಿತು.

ಆರ್‌ಕಾಂಗೆ ಸಂಬಂಧಿಸಿದ ಕಾರ್ಪೊರೇಟ್ ದಿವಾಳಿತನದ ಪ್ರಕ್ರಿಯೆಯನ್ನು 2019ರ ಜೂನ್‌ 22ರಂದು ಪ್ರಾರಂಭಿಸಲಾಗಿದ್ದು, ಮಹಾರಾಷ್ಟ್ರ ಕಂದಾಯ ಇಲಾಖೆ ಎರಡು ತೆರಿಗೆ ಬಾಕಿ ದಾವೆಗಳನ್ನು ಹೂಡಿ ಹಕ್ಕು ಪ್ರತಿಪಾದಿಸಿತ್ತು. ಇದರಲ್ಲಿ ಮೊದಲ ಕ್ಲೈಮ್‌ ಅದೇ ವರ್ಷ ಜುಲೈ 24 ರಂದು 94.97 ಲಕ್ಷ ರೂಪಾಯಿಗೆ, ಎರಡನೇ ಕ್ಲೈಮ್ ಅನ್ನು 2021ರ ನವೆಂಬರ್ 15 ರಂದು 6.1 ಕೋಟಿ ರೂಪಾಯಿಗೆ ಆಗಿತ್ತು. ಎರಡನೇ ಕ್ಲೈಮ್‌ನ ಮೌಲ್ಯಮಾಪನ ಆದೇಶ 2021ರ ಆಗಸ್ಟ್ 30ಕ್ಕೆ ಆಗಿತ್ತು. ಎರಡನೇ ಕ್ಲೈಮ್‌ ದಿವಾಳಿತನ ಪ್ರಕ್ರಿಯೆ ಶುರುಮಾಡಿದ ಬಳಿಕ ಪ್ರತಿಪಾಸಿದ ಕಾರಣ ಅದನ್ನು ನ್ಯಾಯಪೀಠ ಮಾನ್ಯಮಾಡಲಿಲ್ಲ.

(ಗಮನಿಸಿ:- ಈ ಲೇಖನವನ್ನು ಮಾಹಿತಿಗಾಗಿ ಮಾತ್ರ ಪ್ರಕಟಿಸಲಾಗಿದೆ. ಯಾವುದೇ ಹೂಡಿಕೆ ಮಾಡುವ ಮೊದಲು ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.)

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.