ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amul Milk Price: ಅಮೂಲ್ ಲೀಟರ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳ; ಜೂನ್ 3 ರಿಂದಲೇ ಹೊಸ ದರ ಅನ್ವಯ

Amul Milk Price: ಅಮೂಲ್ ಲೀಟರ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳ; ಜೂನ್ 3 ರಿಂದಲೇ ಹೊಸ ದರ ಅನ್ವಯ

ದೇಶಾದ್ಯಂತ ಅಮೂಲ್ ಹಾಲಿನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಹೊಸ ದರಗಳು ಜೂನ್ 3ರ ಸೋಮವಾರದಿಂದಲೇ ಅನ್ವಯವಾಗಿದೆ.

ಅಮೂಲ್ ಲೀಟರ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಲಾಗಿದೆ. ಜೂನ್ 3 ರಿಂದಲೇ ಹೊಸ ದರ ಅನ್ವಯವಾಗಿದೆ. (ಫೋಟೋ-ಫೈಲ್)
ಅಮೂಲ್ ಲೀಟರ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಲಾಗಿದೆ. ಜೂನ್ 3 ರಿಂದಲೇ ಹೊಸ ದರ ಅನ್ವಯವಾಗಿದೆ. (ಫೋಟೋ-ಫೈಲ್)

ಬೆಂಗಳೂರು: ದೇಶಾದ್ಯಂತ ಅಮೂಲ್ ಹಾಲಿನ (Amul Milk Price) ಮಾರಾಟದ ಬೆಲೆಯನ್ನು ಹೆಚ್ಚಿಸಲಾಗಿದೆ. ಎಲ್ಲಾ ಮಾದರಿಯ ಅಮೂಲ್ ಹಾಲಿನ ಪ್ರತಿ ಲೀಟರ್‌ಗೆ 2 ಹೆಚ್ಚಿಸಲಾಗಿದ್ದು, ಹೊಸ ದರಗಳು ಇಂದಿನಿಂದಲೇ (ಜೂನ್ 3, ಸೋಮವಾರ) ಜಾರಿಗೆ ಬಂದಿವೆ. ಕಾರ್ಯಾಚರಣೆ ಮತ್ತು ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮೂಲ್ ಹಾಲಿನ ಬೆಲೆ ಹೆಚ್ಚಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ತಿಳಿಸಿದೆ. ಇದರೊಂದಿಗೆ, ದೇಶಾದ್ಯಂತ ಇರುವ ಎಲ್ಲಾ ಮಳಿಗೆಗಳಲ್ಲಿ ಅಮೂಲ್ ಹಾಲಿನ ಬೆಲೆ ಹೆಚ್ಚಳವಾಗಿದೆ. ಜಿಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023 ಫೆಬ್ರವರಿ ಹೆಚ್ಚಿಸಿತ್ತು.

ಟ್ರೆಂಡಿಂಗ್​ ಸುದ್ದಿ

'ಅಮೂಲ್' ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್‌ನ ಎಂಡಿ ಜಯೆನ್ ಮೆಹ್ತಾ ಮಾತನಾಡಿ, ಹೆಚ್ಚಿದ ಉತ್ಪಾದನಾ ವೆಚ್ಚವನ್ನು ರೈತರಿಗೆ ಸರಿದೂಗಿಸಲು ಈ ಹೆಚ್ಚಳ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಹೆಚ್ಚಳದೊಂದಿಗೆ, ಅರ್ಧ ಲೀಟರ್ ಎಮ್ಮೆ ಹಾಲು, 500 ಎಂಎಲ್ ಅಮೂಲ್ ಗೋಲ್ಡ್ ಹಾಲು ಹಾಗೂ 500 ಎಂಎಲ್ ಅಮೂಲ್ ಶಕ್ತಿ ಹಾಲಿನ ಪರಿಷ್ಕೃತ ಹಾಲಿನ ಬೆಲೆ ಕ್ರಮವಾಗಿ 36, 33 ಮತ್ತು 30 ರೂಪಾಯಿ ಇರಲಿದೆ."ಪ್ರತಿ ಲೀಟರ್‌ಗೆ 2 ರೂ.ಗಳ ಹೆಚ್ಚಳವು ಎಂಆರ್‌ಪಿಯಲ್ಲಿ 3-4 ಪ್ರತಿಶತದಷ್ಟು ಹೆಚ್ಚಳಕ್ಕೆ ಅನುವಾದಿಸುತ್ತದೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ತುಂಬಾ ಕಡಿಮೆಯಾಗಿದೆ. 2023ರ ಫೆಬ್ರವರಿಯಿಂದ ಅಮುಲ್ ಪ್ರಮುಖ ಮಾರುಕಟ್ಟೆಗಳಲ್ಲಿ ತಾಜಾ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ ಎಂದು ಜಿಸಿಎಂಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆ ರೈತರಿಗೆ ವರ್ಗಾವಣೆ

ಹಾಲಿನ ಕಾರ್ಯಾಚರಣೆ ಮತ್ತು ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದೆ. ಜಿಸಿಎಂಎಂಎಫ್ ಪ್ರಕಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯನ್ನು ಅಮೂಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. "ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸುತ್ತದೆ" ಅಂತಲೂ ಸ್ಪಷ್ಟಪಡಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ