ಗಡಿಯಲ್ಲಿ ಭಾರತೀಯ ಸೈನಿಕನ ಅಪಹರಣ, ಭಾರತದ ಪ್ರತಿಕ್ರಿಯೆಗೆ ಬೆಚ್ಚಿ ಬಿಡುಗಡೆ ಮಾಡಿದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ
ಬಾಂಗ್ಲಾದೇಶದ ದುಷ್ಕರ್ಮಿಗಳು ಅಪಹರಿಸಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕನನ್ನು ಅಲ್ಲಿನ ಗಡಿ ಪಡೆ ಮಧ್ಯಪ್ರವೇಶಿಸಿ ಬಿಡುಗಡೆ ಮಾಡಿದೆ.
ಕೋಲ್ಕತ್ತಾ: ಇದು ಬಾಂಗ್ಲಾದೇಶದ ಗಡಿಯಲ್ಲಿ ನಡೆದ ವಿದ್ಯಾಮಾನ. ಅಲ್ಲಿ ಸರ್ಕಾರ ಪತನಗೊಂಡ ನಂತರ ಭಾರತೀಯ ಭದ್ರತಾ ಪಡೆ ತನ್ನ ಗಸ್ತನ್ನು ಹೆಚ್ಚಿಸಿದ್ದು, ಈ ವೇಳೆ ಭಾರತೀಯ ಸೈನಿಕರೊಬ್ಬರನ್ನು ಅಪರಿಸಲಾಯಿತು. ಗಡಿ ಕಾಯುತ್ತಿದ್ದ ಯೋಧನನ್ನು 15-20 ಬಾಂಗ್ಲಾದೇಶಿ ದುಷ್ಕರ್ಮಿಗಳು ಅಪಹರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯಿಂದ ಗಂಭೀರ ಸಂದೇಶ ರವಾನೆಯಾಯಿತು. ಇದರಿಂದ ಬೆಚ್ಚಿದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ(ಬಿಜಿಬಿ ) ಕೂಡಲೇ ಸೈನಿಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ಎರಡು ದೇಶಗಳ ನಡುವೆ ಸಂಘರ್ಷಕ್ಕೆ ದಾರಿ ಆಗಬೇಕಾಗಿದ್ದ ಸೈನಿಕನ ಅಪಹರಣ ಸುಖಾಂತ್ಯ ಕಂಡಿದೆ. ಈ ರೀತಿ ಅಪಹರಣಕ್ಕೆ ಆಸ್ಪದ ನೀಡದಂತೆ ಭಾರತವೂ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದೆ.
ಎರಡು ದಿನದ ಹಿಂದೆ ಪಶ್ಚಿಮ ಬಂಗಾಲಕ್ಕೆ ಹೊಂದಿಕೊಂಡಂತೆ ಇರುವ ದಿನಾಜ್‌ಪುರ ಪ್ರದೇಶದ ಬಿರಾಲ್ ಗಡಿಯ ಬಳಿ ವಾಡಿಕೆಯ ಗಸ್ತು ತಿರುಗುತ್ತಿದ್ದಾಗ 15-20 ಅಕ್ರಮ ಬಾಂಗ್ಲಾದೇಶಿ ದುಷ್ಕರ್ಮಿಗಳ ತಂಡವು ಸೈನಿಕನನ್ನು ಅಪಹರಿಸಿತು.
ಈ ಭಾಗದಲ್ಲಿ ವಲಸಿಗರನ್ನು ತಡೆಯಲು ಗಡಿ ಭದ್ರತಾ ಪಡೆಯ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗುತ್ತಿದ್ದುಮ ನುಸುಳುವಿಕೆಗೆ ಅವಕಾಶವಿಲ್ಲದಾಗಿದೆ. ಇದು ಕೆಲವರನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿಯೇ ಅಪಹರಣ ನಡೆದಿತ್ತು.
ವಿಷಯವನ್ನು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ದುಷ್ಕರ್ಮಿಗಳು ಭಾರತದ ಭೂಪ್ರದೇಶವನ್ನು ದಾಟಿ ಬಿಎಸ್ಎಫ್ ಯೋಧನನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ಕರೆದೊಯ್ದರಲ್ಲದೇ ಆತನನನ್ನು ಬಿಜಿಬಿ ಕಸ್ಟಡಿಯಲ್ಲಿ ಇರಿಸಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಬಿಎಸ್ಎಫ್ ಹೇಳಿಕೆ ನೀಡಿತು. ಇದು ಗಡಿಯಲ್ಲಿ ಆತಂಕದ ವಾತಾವರಣಕ್ಕೂ ದಾರಿ ಮಾಡಿಕೊಟ್ಟಿತು.
ಅಪಹರಣಕ್ಕೊಳಗಾದ ಯೋಧನನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಾಯುವ್ಯ ವಲಯದ ಪ್ರದೇಶ ಕಮಾಂಡರ್ ಅವರಿಗೆ ಸಂದೇಶವನ್ನು ಈ ಸಿಲಿಗುರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಎಸ್‌ಎಫ್‌ನ ಉತ್ತರ ಬಂಗಾಳದ ಫ್ರಾಂಟಿಯರ್ ಇನ್ಸ್‌ಪೆಕ್ಟರ್ ಜನರಲ್ ರವಾನಿಸಿದರು.
ಇದು ಕಠಿಣ ಸನ್ನಿವೇಶಕ್ಕೆ ದಾರಿ ಮಾಡಿಕೊಡಲಿದೆ. ದುಷ್ಕರ್ಮಿಗಳ ವಿರುದ್ದ ದಾಳಿಯೂ ಅನಿವಾರ್ಯವಾಗಲಿದೆ ಎನ್ನುವ ಖಡಕ್ ಸಂದೇಶ ರವಾನೆಯಾಗಿತ್ತು.
ಈ ಸಂದೇಶ ರವಾನೆಯಾಗುತ್ತಲೇ ಬಾಂಗ್ಲಾ ಗಡಿ ಪಡೆಯ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಪಹರಿಸಿದ್ದ ಯೋಧನನ್ನು ಸುರಕ್ಷಿತವಾಗಿ ಗಡಿ ಪ್ರದೇಶದಲ್ಲಿ ತಲುಪಿಸಿದರು. ಇದರೊಂದಿಗೆ ಇಡೀ ಪ್ರಕರಣ ಸುಖಾಂತ್ಯ ಕಂಡಿತು.
ಈ ಆಕ್ರಮಣಕಾರಿ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬಾಂಗ್ಲಾದೇಶಿ ದುಷ್ಕರ್ಮಿಗಳ ಕ್ರಮಗಳ ವಿರುದ್ಧ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ಗಡಿಯಲ್ಲಿ ಶಾಂತಿಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಬಲುಮುಖ್ಯ. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಲು ತನ್ನ ನಾಗರಿಕರಿಗೆ ಸೂಚನೆ ನೀಡುವಂತೆ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ಅನ್ನು ಬಿಎಸ್‌ಎಫ್ ಕೋರಿದೆ.
ಬಿಎಸ್ಎಫ್ ತನ್ನ ಗಡಿಯುದ್ದಕ್ಕೂ "ಝೀರೋ ಫೈರಿಂಗ್" ನೀತಿಗೆ ಬದ್ಧವಾಗಿದೆ ಮತ್ತು ಎಲ್ಲರಿಗೂ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದಿಂದ ಸಹಕಾರವನ್ನು ಬಯಸುತ್ತದೆ ಎಂದೂ ಹೇಳಿದೆ.
ಭಾರತ ಮತ್ತು ಬಾಂಗ್ಲಾದೇಶಗಳು 4,096 ಕಿಮೀ ಗಡಿಯನ್ನು ಹಂಚಿಕೊಂಡಿವೆ. ಬಿಎಸ್‌ಎಫ್ ಮತ್ತು ಬಿಜಿಬಿ ಯಿಂದ ಎರಡೂ ಕಡೆಗಳಲ್ಲೂ ಭದ್ರತೆಯನ್ನು ಹಾಕಿದ್ದು, ನಿರಂತರ ಗಡಿ ಪಡೆಗಳು ಗಸ್ತು ನಡೆಸುತ್ತಿವೆ.