South India Rain: ತಮಿಳುನಾಡಿನ ಹಲವೆಡೆ ಇಂದು ಭಾರಿ ಮಳೆಯ ಮುನ್ಸೂಚನೆ; ದಕ್ಷಿಣ ಭಾರತದ ಈ 4 ರಾಜ್ಯಗಳಲ್ಲಿ ಮತ್ತೆ ಮುಂಗಾರು ಕೊರತೆ
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ಆಗಸ್ಟ್ 11) ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಆದರೆ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಳೆ ಕೊರತೆ ಇದೆ.
ಬೆಂಗಳೂರು: ತೆಲಂಗಾಣದಲ್ಲಿ (Telangana Rains) ಕಳೆದ ಕಳೆವು ದಿನಗಳಿಂದ ಮಳೆಯ ಕೊರತೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಕೆಲವು ಪ್ರದೇಶಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಆಗಸ್ಟ್ 10ರ ಬೆಳಗ್ಗೆ 8.30ಕ್ಕೆ ದಾಖಲಾಗಿರುವ ವರದಿಯ ಪ್ರಕಾರ, ತೆಲಂಗಾಣ ಪ್ರತ್ಯೇಕ ಸ್ಥಗಳಲ್ಲಿ ಮಳೆಯಾಗಿದೆ. ಜೋಗುಲಾಂಬ ಗದ್ವಾಲ್ ಜಿಲ್ಲೆಯ ಘಟ್ಟುನಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದ ಇದೇ ಜಿಲ್ಲೆಯ ಆಲಂಪುರದಲ್ಲಿ 3, ಮನೋಪಾದ್, ಮಲ್ದಕಲ್ ತಲಾ 2, ವಡ್ಡೆಯಲ್ಲಿ 1, ಮೇದಕ್ ಜಿಲ್ಲೆಯ ನರಸಾಪುರ 1, ಭೂಪಾಲಪಲ್ಲಿಯ ಕಾಳೇಶ್ವರ್‌ನಲ್ಲಿ 1, ಮಂಚೇರಿಯಲ್ ಜಿಲ್ಲೆಯ ಚೆನ್ನೂರಿನಲ್ಲಿ 1, ಜೋಗುಲಾಂಬ ಗದ್ವಾಲ್ ಜಿಲ್ಲೆಯ ಐಜಾ ಹಾಗೂ ಮಹಬೂಬಬಾದ್‌ನ ಮಲ್ಯಾಲ್‌ನಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ.
ನೆಲ್ಲೂರಿನಲ್ಲಿ ಮೂರು ಸೆಂಟಿ ಮೀಟರ್ ಮಳೆ
ಆಂಧ್ರಪ್ರದೇಶದ (Andhra Pradesh Rains) ಕರಾವಳಿ ಹಾಗೂ ರಾಯಲಸೀಮಾ ಭಾಗದ ಕೆಲವು ಪ್ರದೇಶಗಳನ್ನು ಹೊರತುಪಡಿಸಿಸ ಬಹುತೇಕ ಕಡೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇಂದು (ಆಗಸ್ಟ್ 11) ರಾಯಲಸೀಮಾ ಮತ್ತು ಯಾನಂನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಕಡೆಗಳಲ್ಲಿ ಒಣ ಹವೆ ಮುಂದುವರೆಯಲಿದೆ.
ಆಂಧ್ರದ ಕರಾವಳಿ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಾಗಿದೆ. ನೆಲ್ಲೂರು ಜಿಲ್ಲೆಯ ರಾಪುರದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಬಾಪಟ್ಲಾದಲ್ಲಿ 1, ವಿಜಯನಗರ ಮತ್ತು ಇದೇ ಜಿಲ್ಲೆಯ ಡೆಂಕಡ ಹಾಗೂ ಪ್ರಕಾಂಶ ಜಿಲ್ಲೆಯ ದರ್ಸಿಯಲ್ಲಿ ತಲಾ ಒಂದು ಸೆಂಟಿ ಮೀಟರ್ ಮಳೆಯಾಗಿದೆ.
ರಾಯಲಸೀಮಾ ಪ್ರದೇಶದ ಹಲವು ಕಡೆಗಳಲ್ಲಿ ಜೋರು ಮಳೆಯಾಗಿದೆ. ವೈಎಸ್‌ಆರ್ ಜಿಲ್ಲೆಯ ಮುದ್ದನೂರಿನಲ್ಲಿ ಇಡೀ ರಾಜ್ಯದಲ್ಲಿ ಗರಿಷ್ಠ 8 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಕರ್ನೂಲ್ 3, ವೈಎಸ್‌ಆರ್ ಜಿಲ್ಲೆಯ ಚಾಪದ, ಕಡಪಾ ಹಾಗೂ ಕಮಾಪುರಂನಲ್ಲಿ ತಲಾ 3, ತಿರುಪತಿ ಜಿಲ್ಲೆಯ ವೆಂಕಟಗಿರಿ, ವೈಎಸ್‌ಆರ್ ಜಿಲ್ಲೆಯ ಪ್ರದ್ದುತೂರ್, ಬದ್ವೇಲ್, ಶ್ರೀಸತ್ಯಸಾಯಿ ಜಿಲ್ಲೆಯ ಕದಿರಿ, ನಂದ್ಯಾಲ್ ಜಿಲ್ಲೆಯ ಧೋನೆ, ಅನಂತಪುರಂ ಮತ್ತು ಜಿಲ್ಲೆಯ ಸಿಂಗನಮಲ, ನಂದ್ಯಾಲ್ ಜಿಲ್ಲೆ, ವೈಎಸ್‌ಆರ್ ಜಿಲ್ಲೆಯ ವಲ್ಲೂರ್, ಕೊಂಡಾಪುರಂ ತಲಾ 2 ಸೆಂಟಿ ಮೀಟರ್, ತಿರುಪತಿಯ ಸತ್ಯವೇಡು, ಕರ್ನೂಲ್ ಜಿಲ್ಲೆಯ ಗೋನೆಗಂಡ್ಲ, ನಂದ್ಯಾಲ ಜಿಲ್ಲೆಯ ದೊರ್ನಿಪಾಡು, ರುದ್ರವರಂ, ಅಲ್ಲಗಡ್ಡ ಹಾಗೂ ಅನಂತಪುರಂ ಜಿಲ್ಲೆಯ ರಾಪ್ತಾಡುನಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ನೆರೆಯ ಮಹಾರಾಷ್ಟ್ರದಲ್ಲೂ ಮಳೆಯ ಕೊರತೆ
ಮಹಾರಾಷ್ಟ್ರದ (Maharashtra Rains) ಕೊಂಕಣ-ಗೋವಾದ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಇಂದು ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಉತ್ತರ ಮಧ್ಯ ಭಾಗ, ದಕ್ಷಿಣ ಮದ್ಯ ಮಹಾರಾಷ್ಟ್ರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳು ಹಾಗೂ ಮರಾಠವಾಡ ಜಿಲ್ಲೆಗಳಲ್ಲೂ ಲಘು ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಗಸ್ಟ್ 10ರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವಂತೆ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮಹಿಸಾಗರ್ ಜಿಲ್ಲೆಯ ಸಂತ್ರಂಪುರ್‌ನಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ, ದಾದಾರ ಮತ್ತು ನಗರ ಹವೇಲಿ ಜಿಲ್ಲೆಯ ಖಾನವೆಲ್, ಸಿಲ್ವಾಸ್ಸಾ, ರಾಜಯಗಡ ಜಿಲ್ಲೆಯ ಪೊಲಾದ್‌ಪುರ, ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್, ಸತಾರಾ ಜಿಲ್ಲೆಯ ಮಹಾಬಲೇಶ್ವರದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ರತ್ನಗಿರಿ ಜಿಲ್ಲೆಯ ಮಂದಗಂಡ್, ಸಂಗಮೇಶ್ವರ್ ದೇವುರುಖ್, ಗುಹಾಘರ್, ಕೊಲ್ಹಾಪುರ ಜಿಲ್ಲೆಯ ಗಗನ್‌ಬವಾಡ, ನಾಸಿಕ್ ಜಿಲ್ಲೆಯ ಇಗತ್‌ಪುರಿ, ಸಿಂಧುದುರ್ಗ ಜಿಲ್ಲೆಯ ಕುಡಾಲ್ ಹಾಗೂ ರಾಯಗಡ ಜಿಲ್ಲೆಯ ಮಾಥೆರಾನ್‌ನಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡಾ 36.4ರಷ್ಟು ಮಳೆ ಕೊರತೆಯಾಗಿದೆ. ಇದು ಮರಾಠವಾಡ ಪ್ರದೇಶದ ಒಂದು ಭಾಗವಾಗಿದ್ದು, ಔರಂಗಾಬಾದ್, ಜಲ್ನಾ, ಬೀಡ್, ಹಿಂಗೋಲಿ, ಒಸ್ಮಾನಾಬಾದ್, ಲಾತೂರ್ ಹಾಗೂ ನಾಂದೇಡ್‌ಅನ್ನು ಒಳಗೊಂಡಿದೆ.
ಕೇರಳ (Kerala Rains) ಮತ್ತು ಲಕ್ಷ್ಮದ್ವೀಪದ ಕೆಲವು ಪ್ರದೇಶಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಆಗಸ್ಟ್ 14ರ ಸೋಮವಾರದ ವರೆಗೆ ಇದೇ ಪರಿಸ್ಥಿತಿ ಇರಲಿದೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಕೆಲವೇ ಕೆಲವು ಪ್ರದೇಶಗಳಲ್ಲಿ ಸಾಧಾರಣೆ ಮಳೆಯಾಗಿದೆ. ಕಣ್ಣೂರು ಜಿಲ್ಲೆಯ ಅರಳಮ್‌ನಲ್ಲಿ 2 ಹಾಗೂ ಚೆಂಬರಿಯಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ.
ಇಂದು ತಮಿಳುನಾಡು, ಪುದುಚೇರಿಯ ಹಲವಡೆ ಭಾರಿ ಮಳೆಯ ಮುನ್ಸೂಚನೆ
ತಮಿಳುನಾಡಿನ (Tamilnadu Rains) ಹಲವು ಕಡೆಗಳಲ್ಲಿ ಇಂದು ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಪುದುಚೇರಿಯ (Puducherry) ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಮಳೆಯ ಸಂಭವ ಇದೆ ಎಂದು ಚೆನ್ನೈ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಹೋಲಿಸಿಕೊಂಡರೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 10ರ ಬೆಳಗ್ಗೆ 8.30ಕ್ಕೆ ದಾಖಲಾಗಿರುವ ಮಾಹಿತಿ ಪ್ರಕಾರ, ಉತ್ತಮ ಮಳೆಯಾಗಿದೆ. ಅರಿಯಲೂರು ಜಿಲ್ಲೆಯ ಕೊಲ್ಲಿಡಂನಲ್ಲಿ ಬರೋಬ್ಬರಿ 15 ಸೆಂಟಿ ಮೀಟರ್ ಮಳೆಯಾಗಿದೆ. ವಿಲ್ಲುಪುರಂ ಜಿಲ್ಲೆಯ ಬಸ್ಲ್ ಮುಗೈಯೂರ್ 12, ತಂಜಾವೂರಿನ ಅನೈಕಟ್‌ನಲ್ಲಿ 11 ಸೆಂಟಿ ಮೀಟರ್ ಮಳೆಯಾಗಿದೆ.
-----------------------------------------------------------------------------------
ಸಂಬಂಧಿತ ಲೇಖನ