Operation Ajay: ಯುದ್ಧಪೀಡಿತ ಇಸ್ರೇಲ್‌ನಿಂದ ಮಕ್ಕಳು ಸೇರಿದಂತೆ 235 ಭಾರತೀಯರನ್ನ ಹೊತ್ತ 2ನೇ ವಿಮಾನ ಆಗಮನ
ಇಸ್ರೇಲ್‌ನ ಟೆಲ್ ಅವಿವ್‌ನಿಂದ ಭಾರತಕ್ಕೆ ಬಂದ ಚಾರ್ಟರ್ ವಿಮಾನದಲ್ಲಿ ಇಬ್ಬರು ಶಿಶುಗಳು, ಕೆಲ ಮಕ್ಕಳು ಸೇರಿದಂತೆ 235 ಇದ್ದಾರೆ. ಈಗಾಗಲೇ ಮೊದಲ ವಿಮಾನದಲ್ಲಿ 212 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿತ್ತು.
ನವದೆಹಲಿ: ಪ್ಯಾಲಸ್ತೀನ್-ಇಸ್ರೇಲ್ ಯುದ್ಧದ ನಡುವೆ ಇಸ್ರೇಲ್ನಲ್ಲಿ ಸಿಲುಕಿದ ಭಾರತೀಯ ನಾಗರಿಕರನ್ನು‘ಆಪರೇಷನ್ ಅಜಯ್’ ಅಡಿಯಲ್ಲಿ ಕರೆತರಲಾಗುತ್ತಿದೆ. ಇಂದು (ಅ.14, ಶನಿವಾರ) ಬೆಳಿಗ್ಗೆ 235 ಭಾರತೀಯರನ್ನ ಹೊತ್ತ 2ನೇ ವಿಮಾನವು ದೆಹಲಿಗೆ ಆಗಮಿಸಿದೆ.
ಇಸ್ರೇಲ್‌ನ ಟೆಲ್ ಅವಿವ್‌ನಿಂದ ಭಾರತಕ್ಕೆ ಬಂದ ಚಾರ್ಟರ್ ವಿಮಾನದಲ್ಲಿ ಇಬ್ಬರು ಶಿಶುಗಳು, ಕೆಲ ಮಕ್ಕಳು ಸೇರಿದಂತೆ 235 ಇದ್ದಾರೆ. ಈಗಾಗಲೇ ಮೊದಲ ವಿಮಾನದಲ್ಲಿ 212 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿತ್ತು.
ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ಮತ್ತು ಇಸ್ರೇಲಿ ಪಡೆಗಳ ನಡುವೆ ಯುದ್ಧ ಆರಂಭವಾಗಿತ್ತು. ಯುದ್ಧ ಆರಂಭದ ಬೆನ್ನಲ್ಲೇ ಭಾರತದಿಂದ ಇಸ್ರೇಲ್ಗೆ ಮತ್ತು ಇಸ್ರೇಲ್‌ನಿಂದ ಭಾರತಕ್ಕೆ ಏರ್ ಇಂಡಿಯಾ ಮತ್ತು ಇತರ ಏರ್‌ಲೈನ್ಸ್ ತನ್ನ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು.
ಇಸ್ರೇಲ್‌ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಭಾರತ ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತು. ಅಕ್ಟೋಬರ್ 12ರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹೊರಟಿದ್ದು, ಅಕ್ಟೋಬರ್ 13ರ (ಶುಕ್ರವಾರ) ಬೆಳಗ್ಗೆ ದೆಹಲಿ ತಲುಪಿತು. ಅಗತ್ಯವಿದ್ದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳನ್ನು ಸಹ ನಿಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ಕಂಟ್ರೋಲ್ ರೂಮ್ ಮತ್ತು ಸಹಾಯವಾಣಿ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಗಂಟೆಗಳ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಯ ಫೋನ್ ನಂಬರ್:
1800118797 (ಟೋಲ್ ಫ್ರೀ),
+91-11 23012113
+91-11-23014104
+91-11-23017905
+919968291988
ಇಮೇಲ್ ಐಡಿ --- situationroom@mea.gov.in.
ಭಾರತೀಯ ರಾಯಭಾರಿ ಕಚೇರಿಯ ತುರ್ತು ಸಹಾಯವಾಣಿ
+972-35226748
+972-543278392
ಇಮೇಲ್ ಐಡಿ --- cons1.telaviv@mea.gov.in.
ಇಸ್ರೇಲ್-ಹಮಾಸ್ ಯುದ್ಧ
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಇಂದು (ಶನಿವಾರ) ಎಂಟನೇ ದಿನಕ್ಕೆ ಕಾಲಿಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ, ಎರಡೂ ಕಡೆಗಳಿಂದ ಈವರೆಗೆ 3,200 ಮಂದಿ ಬಲಿಯಾಗಿದ್ದಾರೆ. ಅಕ್ಟೋಬರ್ 7 ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಪ್ಯಾಲೆಸ್ತೀನ್ನ ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿತ್ತು. ಇಸ್ರೇಲ್ಗೆ ಇದು ಗಾಜಾದಿಂದ ಅನಿರೀಕ್ಷಿತ ದಾಳಿಯಾಗಿದ್ದು, ರೊಚ್ಚಿಗೆದ್ದ ಇಸ್ರೇಲ್ ಯುದ್ಧ ಘೋಷಿಸಿತ್ತು.