ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌, ಎಕ್ಸಿಟ್ ಪೋಲ್‌ ಕಡೆಗೆ ಎಲ್ಲರ ಚಿತ್ತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌, ಎಕ್ಸಿಟ್ ಪೋಲ್‌ ಕಡೆಗೆ ಎಲ್ಲರ ಚಿತ್ತ

ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌, ಎಕ್ಸಿಟ್ ಪೋಲ್‌ ಕಡೆಗೆ ಎಲ್ಲರ ಚಿತ್ತ

Maharashtra Elections: ಮಹಾರಾಷ್ಟ್ರ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಫಲೋಡಿ ಸಟ್ಟಾ ಬಜಾರ್‌ ಅಥವಾ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ ಭವಿಷ್ಯ (Phalodi Satta Bazar Predicts) ಪ್ರಕಟವಾಗಿದೆ. ಇದೇ ವೇಳೆ, ಎಲ್ಲರ ಚಿತ್ತ ಎಕ್ಸಿಟ್‌ ಪೋಲ್ ಕಡೆಗಿದ್ದು, ಮಹಾಯುತಿ ಕಡೆಗೆ ಒಲವು ಇದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌, ಎಕ್ಸಿಟ್ ಪೋಲ್‌ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. (ಸಾಂಕೇತಿಕವಾಗಿ ನವಿ ಮುಂಬಯಿಯ ಮತಗಟ್ಟೆಯ ಚಿತ್ರ ಬಳಸಲಾಗಿದೆ)
ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌, ಎಕ್ಸಿಟ್ ಪೋಲ್‌ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. (ಸಾಂಕೇತಿಕವಾಗಿ ನವಿ ಮುಂಬಯಿಯ ಮತಗಟ್ಟೆಯ ಚಿತ್ರ ಬಳಸಲಾಗಿದೆ) (PTI)

ಮುಂಬಯಿ: ಮಹಾರಾಷ್ಟ್ರ ಚುನಾವಣೆ ಒಂದೇ ಹಂತದ ಮತದಾನ ಇಂದು (ನವೆಂಬರ್ 20) ಸಂಪನ್ನವಾಗಿದೆ. ಈ ನಡುವೆ, ಎಲ್ಲರ ಚಿತ್ತ ಎಕ್ಸಿಟ್‌ ಪೋಲ್ (ಮತದಾನೋತ್ತರ ಸಮೀಕ್ಷೆ) ಕಡೆಗೆ ಹರಿದಿರುವಾಗಲೇ ಫಲೋಡಿ ಸಟ್ಟಾ ಬಜಾರ್‌ (ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ) ನ ಭವಿಷ್ಯ ಪ್ರಕಟವಾಗಿದೆ. ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸುತ್ತ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಮಹಾರಾಷ್ಟ್ರದಲ್ಲಿ, ಬಿಜೆಪಿ ನೇತೃತ್ವದ ಮಹಾಯುತಿಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ಮತ್ತು ಏಕನಾಥ್ ಶಿಂಧೆ ಅವರ ಶಿವ ಸೇನಾ ಮಿತ್ರಪಕ್ಷಗಳಾಗಿದ್ದು, ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಹೆಚ್ಚು ಮುಖಾ ಮುಖಿ ಸ್ಪರ್ಧೆ ಕಾಣುತ್ತಿದೆ. ಬಿಜೆಪಿ ನೇತೃತ್ವದ ಮಹಾಯುತಿ ಪರ ಒಲವು ಇರುವುದು ಕಂಡುಬಂದಿದ್ದು, ಎಲ್ಲರ ಚಿತ್ತ ಎಕ್ಸಿಟ್ ಪೋಲ್ ಫಲಿತಾಂಶಗಳ ಕಡೆಗೆ ತಿರುಗಿದೆ. ಈ ನಡುವೆ, ಬೆಟ್ಟಿಂಗ್ ಬಜಾರ್‌ಗಳ ಪೈಕಿ ಬಹುಮುಖ್ಯವಾಗಿರುವ ಫಲೋಡಿ ಸಟ್ಟಾ ಬಜಾರ್‌ ಭವಿಷ್ಯವೂ ಮಹಾಯುತಿ ಪರವೇ ಇದ್ದು ಅದರ ವಿವರ ಹೀಗಿದೆ

ಮಹಾರಾಷ್ಟ್ರ ಚುನಾವಣೆ 2024: ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್‌

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಗೆಲುವು ಸಿಗುವ ಸಾಧ್ಯತೆ ಇದೆ ಎಂಬ ಅಂಶದ ಕಡೆಗೆ ಫಲೋಡಿ ಸಟ್ಟಾ ಬಜಾರ್ ಅಥವಾ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ ಒಲವು ತೋರಿದೆ. ಫಲೋಡಿ ಸಟ್ಟಾ ಬಜಾರ್ ಅಥವಾ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆಯ ಭವಿಷ್ಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಮಹಾಯುತಿಯು ಒಟ್ಟು 288 ಸ್ಥಾನಗಳಲ್ಲಿ 144 ರಿಂದ 152 ಸ್ಥಾನಗಳನ್ನು ಪಡೆಯಲಿದೆ. ಈ ಬೆಟ್ಟಿಂಗ್‌ ಗಮನಿಸಿದರೆ ಚುನಾವಣೆ ಮಹಾಯುತಿಗೆ ಸುಲಭ ಗೆಲುವು ನೀಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಮಹಾ ವಿಕಾಸ್ ಅಘಾಡಿ ಕೂಡ ತೀವ್ರ ಸ್ಪರ್ಧೆ ಒಡ್ಡಲಿದೆ ಎಂಬುದರ ಸುಳಿವು ಇದಾಗಿದೆ. ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಅಥವಾ ಫಲೋಡಿ ಬೆಟ್ಟಿಂಗ್ ಬಜಾರ್‌ ಈ ಹಿಂದೆ ನಿಖರ ಭವಿಷ್ಯ ಸೂಚಿಸಿ ಗಮನಸೆಳೆದಿತ್ತು. ಆದರೆ ಇತ್ತೀಚಿನ ಕೆಲವು ಭವಿಷ್ಯಗಳು ವಿಫಲವಾಗಿವೆ. ಇತ್ತೀಚಿಗೆ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವುದಿಲ್ಲ ಎಂಬ ಭವಿಷ್ಯ ನುಡಿದಿತ್ತು. ಆದರೆ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಮಹಾರಾಷ್ಟ್ರ ಚುನಾವಣಾ ಮತದಾನ ಸಂಪನ್ನ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಸಂಜೆ 6 ಗಂಟೆಗೆ ಮತದಾನ ಸಂಪನ್ನವಾಗಿದೆ. ಸಂಜೆ 5 ಗಂಟೆಗೆ ಶೇಕಡ 58.22 ಮತದಾನವಾಗಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ 288 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. 9.7 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 6101 ತೃತೀಯ ಲಿಂಗಿಗಳು, 6.41 ಲಕ್ಷ ಅಂಗವೈಕಲ್ಯ ಇರುವ ಮತದಾರರು ಇದ್ದಾರೆ. ಚುನಾವಣಾ ಆಯೋಗವು 1,00,186 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. 6 ಲಕ್ಷ ಸರ್ಕಾರಿ ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288 ವಿಧಾನಸಭೆ ಸ್ಥಾನಗಳ ಪೈಕಿ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ 149, ಶಿವ ಸೇನಾ (ಶಿಂಧೆ) 81, ಎನ್‌ಸಿಪಿ (ಅಜಿತ್ ಪವಾರ್‌) 59 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಮಹಾ ವಿಕಾಸ್ ಅಘಾಡಿ ಮೈತ್ರಿಯ ಕಾಂಗ್ರೆಸ್ ಪಕ್ಷ 101 ಸ್ಥಾನಗಳಲ್ಲಿ, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಬಿಎಸ್‌ಪಿ 237 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಎಐಎಂಐಎಂ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ವರ್ಷ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 28 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ. 2,086 ಸ್ವತಂತ್ರರು ಸೇರಿದಂತೆ 4,136 ವ್ಯಕ್ತಿಗಳು ಸ್ಪರ್ಧಿಸಿದ್ದಾರೆ. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಗಳ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ಧಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.