ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು? ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗಕ್ಕೆ ಸಿಗಬಹುದೇ ರಿಲೀಫ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು? ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗಕ್ಕೆ ಸಿಗಬಹುದೇ ರಿಲೀಫ್‌

ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು? ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗಕ್ಕೆ ಸಿಗಬಹುದೇ ರಿಲೀಫ್‌

Union Budget cheaper and costlier list: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಮಂಡಿಸುವ ಕೇಂದ್ರ ಬಜೆಟ್‌ 2024-25ರ ಮೇಲೆ ಎಲ್ಲರೂ ಗಮನವಿಟ್ಟಿದ್ದಾರೆ. ಈ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿಯಾಗಬಹುದು? ಯಾವ ವಸ್ತು ಅಗ್ಗವಾಗಬಹುದು ಎಂದು ಎಲ್ಲರೂ ಆಲೋಚಿಸುತ್ತಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ವಿವರ ಪಡೆಯೋಣ.

ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು?
ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು?

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ತನ್ನ 7ನೇ ಬಜೆಟ್‌ ಮಂಡಿಸಲಿದ್ದಾರೆ. 2024-25ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಈ ಮುಂದಿನ ವಸ್ತುಗಳು ದುಬಾರಿಯಾಗಬಹುದು ಅಥವಾ ಅಗ್ಗವಾಗಬಹುದು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಬಜೆಟ್‌ನಲ್ಲಿ ಭಾರತದ ಆರ್ಥಿಕತೆಯ ಪುನರ್‌ರಚನೆಗೆ ಆದ್ಯತೆ ದೊರಕಬಹುದು. ಮೂಲಸೌಕರ್ಯ ಅಭಿವೃದ್ಧಿಯಿಂದ ಸಾಮಾಜಿಕ ಕಲ್ಯಾಣದವರೆಗೆ ಅನೇಕ ಕೊಡುಗೆಗಳು, ಘೋಷಣೆಗಳು ಇರಬಹುದು. ಸದ್ಯ ಈ ಮುಂದಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು.

ಈ ಬಜೆಟ್‌ನಲ್ಲಿ ಮೊಬೈಲ್‌ ಫೋನ್‌ಗಳ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಸಂಕುಚಿತ ಅನಿಲದ ದರ ಕಡಿಮೆಯಾಗಬಹುದು.

ಹೊಸ ಮನೆ ಖರೀದಿ ಕೈಗೆಟುಕಬಹುದು ಅಥವಾ ಅಫರ್ಡೆಬಲ್‌ ಆಗಬಹುದು.

2023ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವರು ಕ್ಯಾಮೆರಾ ಲೆನ್ಸ್‌ಗಳು ಒಳಗೊಂಡಂತೆ ವಿವಿಧ ಬಿಡಿಭಾಗಗಳ ಆಮದು ತೆರಿಗೆ ಇಳಿಸುವ ಪ್ರಸ್ತಾಪ ಮಾಡಿದ್ದರು. ಈ ಮೂಲಕ ಮೊಬೈಲ್‌ ಫೋನ್‌ಗಳ ದರ ತಗ್ಗಿಸಲು ಪ್ರಯತ್ನಿಸುದಾಗಿ ಹೇಳಿದ್ದರು.

ಫೋನ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳ ಪ್ರಮುಖ ಬಿಡಿಭಾಗವಾದ ಲೀಥಿಯಂ ಐಯಾನ್‌ ಬ್ಯಾಟರಿಗಳ ಮೇಲಿನ ತೆರಿಗೆ ದರ ಇಳಿಸುವ ಪ್ರಸ್ತಾಪವನ್ನೂ ಈ ಬಜೆಟ್‌ನಲ್ಲಿ ಮಾಡುವ ನಿರೀಕ್ಷೆಯಿದೆ. ಇದು ಕೂಡ ಭಾರತದಲ್ಲಿ ಮೊಬೈಲ್‌ ತಯಾರಿಸುವವರಿಗೆ ಅನುಕೂಲವಾಗಲಿದೆ. ಇದರಿಂದಲೂ ಮೊಬೈಲ್‌ ದರ ಅಗ್ಗವಾಗಲಿದೆ.

ನಿನ್ನೆ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ "ಸರ್ವೀಸ್‌" ಮತ್ತು "ಗ್ರೋಥ್‌" ಎಂಬ ಪದಗಳನ್ನು ಹೆಚ್ಚು ಬಾರಿ ನಿರ್ಮಲಾ ಸೀತಾರಾಮನ್‌ ಬಳಸಿದ್ದರು. ಹೀಗಾಗಿ, ಈ ಬಜೆಟ್‌ನಲ್ಲಿ ಸೇವೆ ಮತ್ತು ಪ್ರಗತಿಗೆ ಹೆಚ್ಚಿನ ಒತ್ತು ದೊರಕುವ ಸಾಧ್ಯತೆಯಿದೆ.

ತೆರಿಗೆ ಸಡಿಲಿಕೆಗಳ ಭರವಸೆಯ ನಡುವೆ ಮಧ್ಯಮ ವರ್ಗವು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಹೆಚ್ಚಳವಾಗಬಹುದು. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಮೂಲ ತೆರಿಗೆ ವಿನಾಯಿತಿ ಮಿತಿ ಹೆಚ್ಚಬಹುದು. ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಪದ್ಧತಿ ಸರಳೀಕೃತವಾಗುವ ಸೂಚನೆಯಿದೆ.

2024 ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್ ಅನ್ನು ತರ್ಕಬದ್ಧಗೊಳಿಸಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಸೆಕ್ಷನ್ 80 ಸಿ ಕಡಿತದ ಮಿತಿಯನ್ನು ಹೆಚ್ಚಿಸುವ ಮತ್ತು ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಹೆಚ್ಚಿನ ತೆರಿಗೆ ಪ್ರಯೋಜನಗಳು ದೊರಕಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.