ಬರೋಬ್ಬರಿ 66 ಕೋಟಿ: ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರಿಕೆಟಿಗರಲ್ಲಿ ಕೊಹ್ಲಿಗೆ ಅಗ್ರಸ್ಥಾನ, ಧೋನಿ ಎಷ್ಟು?
ಕನ್ನಡ ಸುದ್ದಿ  /  ಕ್ರೀಡೆ  /  ಬರೋಬ್ಬರಿ 66 ಕೋಟಿ: ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರಿಕೆಟಿಗರಲ್ಲಿ ಕೊಹ್ಲಿಗೆ ಅಗ್ರಸ್ಥಾನ, ಧೋನಿ ಎಷ್ಟು?

ಬರೋಬ್ಬರಿ 66 ಕೋಟಿ: ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರಿಕೆಟಿಗರಲ್ಲಿ ಕೊಹ್ಲಿಗೆ ಅಗ್ರಸ್ಥಾನ, ಧೋನಿ ಎಷ್ಟು?

Excert: ಬಿಸಿಸಿಐ ಮತ್ತು ಐಪಿಎಲ್‌ನಿಂದ ಪಡೆಯುವ ಸಂಬಳದ ಹೊರತಾಗಿ, ವಿರಾಟ್ ಕೊಹ್ಲಿ ವಿವಿಧ ಬ್ರಾಂಡ್‌ಗಳ ಜಾಹೀರಾತುಗಳಿಂದಲೂ ಕೋಟಿ ಕೋಟಿ ಗಳಿಸುತ್ತಾರೆ. ಇದರಿಂದಾಗಿಯೇ ಅವರ ಒಟ್ಟು ಆಸ್ತಿ 1050 ಕೋಟಿ ರೂ. ಪ್ರತಿ ವರ್ಷ ಭಾರೀ ಆದಾಯದ ಕಾರಣ, ಕೊಹ್ಲಿ ಈಗ ತೆರಿಗೆ ವಿಷಯದಲ್ಲೂ ಎಲ್ಲರನ್ನೂ ಹಿಂದೆ ಬಿಟ್ಟಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಕ್ರೀಡೆ ಮತ್ತು ಗಳಿಕೆಯ ವಿಷಯದಲ್ಲಿ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತಾರೆ. ಕ್ರಿಕೆಟ್ ಹೊರತಾಗಿ, ಕೊಹ್ಲಿ ವಿವಿಧ ಮೂಲಗಳಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ, ಇದರಲ್ಲಿ ಬ್ರಾಂಡ್ ಎಂಡಾರ್ಸ್‌ಮೆಂಟ್ ಜೊತೆಗೆ ಅವರು ವಿವಿಧ ಕಂಪನಿಗಳಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಅದಕ್ಕಾಗಿಯೇ ಅವರು ಭಾರತ ಸರ್ಕಾರಕ್ಕೆ ಭಾರಿ ಮೊತ್ತವನ್ನು ತೆರಿಗೆಯಾಗಿ ಪಾವತಿಸುತ್ತಾರೆ. ಇದೀಗ ಫಾರ್ಚೂನ್ ಇಂಡಿಯಾ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಗಳಿಕೆಯಲ್ಲೂ ವಿರಾಟ್ ಕೊಹ್ಲಿಯೇ ಚಾಂಪಿಯನ್

ಬಿಸಿಸಿಐ ಮತ್ತು ಐಪಿಎಲ್‌ನಿಂದ ಪಡೆಯುವ ಸಂಬಳದ ಹೊರತಾಗಿ, ವಿರಾಟ್ ಕೊಹ್ಲಿ ವಿವಿಧ ಬ್ರಾಂಡ್‌ಗಳ ಜಾಹೀರಾತುಗಳಿಂದಲೂ ಕೋಟಿ ಕೋಟಿ ಗಳಿಸುತ್ತಾರೆ. ಇದರಿಂದಾಗಿಯೇ ಅವರ ಒಟ್ಟು ಆಸ್ತಿ 1050 ಕೋಟಿ ರೂ. ಪ್ರತಿ ವರ್ಷ ಭಾರೀ ಆದಾಯದ ಕಾರಣ, ಕೊಹ್ಲಿ ಈಗ ತೆರಿಗೆ ವಿಷಯದಲ್ಲೂ ಎಲ್ಲರನ್ನೂ ಹಿಂದೆ ಬಿಟ್ಟಿದ್ದಾರೆ. ಫಾರ್ಚೂನ್ ಇಂಡಿಯಾ ವರದಿ ಪ್ರಕಾರ, ಕೊಹ್ಲಿ ಈ ಬಾರಿ ಬರೋಬ್ಬರಿ 66 ಕೋಟಿ ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯೂ ಕಡಿಮೆ ಇಲ್ಲ

ತೆರಿಗೆ ಪಾವತಿ ವಿಚಾರದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾರಿಗೂ ಕಡಿಮೆ ಇಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರವೂ ಅವರ ಗಳಿಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಕ್ರಿಕೆಟ್ ಮೈದಾನದಲ್ಲಿ ಧೋನಿ ಅವರ ಬುದ್ಧಿವಂತಿಕೆಯನ್ನು ಇಡೀ ಜಗತ್ತು ನೋಡಿದೆ, ಕೇವಲ ಕ್ರಿಕೆಟಿಗನಲ್ಲದೆ, ಉತ್ತಮ ಉದ್ಯಮಿಯೂ ಆಗಿದ್ದಾರೆ. ಇದೇ ಕಾರಣಕ್ಕೆ ಇಂದು ಅವರ ಆಸ್ತಿ 1000 ಕೋಟಿ ದಾಟಿದೆ. ಇದೇ ಕಾರಣಕ್ಕೆ ಧೋನಿ ಈ ವರ್ಷ ಒಟ್ಟು 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಮತ್ತು ವಿರಾಟ್ ನಂತರ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾ ವ್ಯಕ್ತಿಯಾಗಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ತೆರಿಗೆ ಪಾವತಿಸುವ ವಿಷಯದಲ್ಲಿ ಕೊಹ್ಲಿ ಮತ್ತು ಧೋನಿಗಿಂತ ಕಡಿಮೆಯಿಲ್ಲ. ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ವಿವಿಧ ವ್ಯವಹಾರಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಲೇ ಅವರ ಇಂದಿನ ಆಸ್ತಿ ಸುಮಾರು 14 ಕೋಟಿ ರೂ. ಆದರೆ, ತೆರಿಗೆ ಪಾವತಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ಸಚಿನ್ 28 ಕೋಟಿ ತೆರಿಗೆ ಪಾವತಿಸಿದ್ದಾರೆ.

ಸೌರವ್ ಗಂಗೂಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಾಲ್ಕನೇ ಕ್ರೀಡಾ ವ್ಯಕ್ತಿಯಾಗಿದ್ದಾರೆ. ಇವರ ಆದಾಯವು ಮುಖ್ಯವಾಗಿ ಅವರ ವ್ಯಾಪಾರ ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಐಪಿಎಲ್‌ನಿಂದ ಬರುತ್ತದೆ. ವರದಿಯ ಪ್ರಕಾರ, ಗಂಗೂಲಿ ಈ ವರ್ಷ 23 ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಠೇವಣಿ ಮಾಡಿದ್ದಾರೆ. ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, 600 ಕೋಟಿ ರೂ. ಸಕ್ರಿಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಅವರು ಕ್ರಮವಾಗಿ 13 ಕೋಟಿ ಮತ್ತು 10 ಕೋಟಿ ತೆರಿಗೆ ಪಾವತಿಸಿದ್ದಾರೆ. ಆದಾಗ್ಯೂ, ಫಾರ್ಚೂನ್ ಇಂಡಿಯಾ ಪ್ರಕಾರ, ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಅಗ್ರ 20 ರಲ್ಲಿ ಇಲ್ಲ.

ವರದಿ: ವಿನಯ್ ಭಟ್.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.