ಕನ್ನಡ ಸುದ್ದಿ  /  ಕ್ರೀಡೆ  /  ಮಲೇಷ್ಯಾ ಮಾಸ್ಟರ್ಸ್ ಫೈನಲ್‌; ಚೀನಾದ ವಾಂಗ್ ಝಿಯಿ ವಿರುದ್ಧ ಸೋತ ಪಿವಿ ಸಿಂಧು

ಮಲೇಷ್ಯಾ ಮಾಸ್ಟರ್ಸ್ ಫೈನಲ್‌; ಚೀನಾದ ವಾಂಗ್ ಝಿಯಿ ವಿರುದ್ಧ ಸೋತ ಪಿವಿ ಸಿಂಧು

PV Sindhu: ಮಲೇಷ್ಯಾ ಮಾಸ್ಟರ್ಸ್ ಫೈನಲ್‌ನಲ್ಲಿ ಪಿವಿ ಸಿಂಧು ಸೋಲು ಕಂಡಿದ್ದಾರೆ. 2022ರಿಂದ ಚೊಚ್ಚಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಗೆಲ್ಲಲು ವಿಫಲರಾಗಿರುವ ಒಲಿಂಪಿಕ್‌ ಪದಕ ವಿಜೇತೆ, ಇದೀಗ ಮತ್ತೆ ಪದಕಗಳ ಬರ ಎದುರಿಸಬೇಕಾಗಿದೆ.

 ಚೀನಾದ ವಾಂಗ್ ಝಿಯಿ ವಿರುದ್ಧ ಸೋತ ಪಿವಿ ಸಿಂಧು (File Photo)
ಚೀನಾದ ವಾಂಗ್ ಝಿಯಿ ವಿರುದ್ಧ ಸೋತ ಪಿವಿ ಸಿಂಧು (File Photo) (PTI)

ಮಲೇಷ್ಯಾ ಮಾಸ್ಟರ್ಸ್ 2024 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು (PV Sindhu) ವೀರೋಚಿತ ಸೋಲು ಕಂಡಿದ್ದಾರೆ. ಕೌಲಾಲಂಪುರದಲ್ಲಿ ಮೇ 26ರ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಭಾರತದ ನಂಬರ್‌ ವನ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಸಿಂಧು ಮುಗ್ಗರಿಸಿದ್ದಾರೆ. ಆರಂಭಿಕ ಸೆಟ್‌ ಗೆಲುವಿನ ಹೊರತಾಗಿಯೂ, ನಂತರ ಸತತ ಮುಗ್ಗರಿಸಿದ ಅವರು, ಅಂತಿಮವಾಗಿ 16-21, 21-5, 21-16 ಸೆಟ್‌ಗಳಿಂದ ಸೋಲೊಪ್ಪಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲ ಗೇಮ್‌ನಲ್ಲಿಯೇ ಆಕ್ರಮಣಕಾರಿ ಆಟ ಆರಂಭಿಸಿದ ಸಿಂಧು, ಸುಲಭವಾಗಿ ಸೆಟ್‌ ಗೆದ್ದರು. ಅತ್ತ ಆರಂಭಿಕ ಸೆಟ್ ಸೋತ ನಂತರ ಚೀನಾ ಆಟಗಾರ್ತಿ ನಂತರ ಪುಟಿದೆದ್ದರು. ಅದೇ ಆವೇಶದಲ್ಲಿ ಮುಂದುವರೆದ ಅವರು, ಎಲ್ಲೂ ಭಾರತದ ಎದುರಾಳಿ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಸತತ ಎರಡು ಸೆಟ್‌ ಗೆದ್ದು ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

2022ರ ನಂತರ ಪ್ರಶಸ್ತಿ ಬರ ಎದುರಿಸುತ್ತಿರುವ ಸಿಂಧು, ಚೊಚ್ಚಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದ್ದರು. ಇದೀಗ ಅವರೆ ಆಸೆಗೆ ಚೀನಾ ಆಟಗಾರ್ತಿ ತಣ್ಣೀರೆರಚಿದ್ದಾರೆ.

ಫೈನಲ್‌ನ ಮೊದಲ ಗೇಮ್‌ನಲ್ಲಿ 21-16 ಅಂತರದ ಜಯದೊಂದಿಗೆ ಶುಭಾರಂಭ ಮಾಡಿದ ಸಿಂಧು, ಎರಡನೇ ಗೇಮ್‌ನಲ್ಲಿ ಅದೇ ಜೋಶ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅಬ್ಬರಿಸಿದ ಚೀನಾ ಎದುರಾಳಿ 16-21 ಅಂತರದಿಂದ ಎರಡನೇ ಸೆಟ್‌ ವಶಪಡಿಸಿಕೊಂಡರು. ಮೂರನೇ ಸೆಟ್‌ ಕೂಡಾ ಹೀಗೆಯೇ ಆಯ್ತು. ಆರಂಭದಲ್ಲಿ ಪಿವಿ ಸಿಂಧು 4-11 ಅಂತರದಿಂದ ಮುನ್ನಡೆಯಲ್ಲಿದ್ದರು. ಬಳಿಕ ರೊಚ್ಚಿಗೆದ್ದ ಚೀನಾ ಆಟಗಾರ್ತಿ ಕೆಲವೇ ನಿಮಿಷಗಳಲ್ಲಿ 15-13 ಅಂತರದಿಂದ ಮುನ್ನಡೆ ಸಾಧಿಸಿದರು. ಕೊನೆಗೆ 21-16 ಅಂತರದಿಂದ ಪಂದ್ಯವನ್ನೇ ವಶಪಡಿಸಿಕೊಂಡರು.

ಸೆಮಿಫೈನಲ್‌ನಲ್ಲಿ ರೋಚಕ ಗೆಲುವು

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು, ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಬುಸಾನನ್ ಒಂಗ್ಬಮ್ರುಂಗ್ಫಾನ್ ಅವರನ್ನು 13-21, 21-16, 21-12 ಅಂತರದಿಂದ ರೋಚಕವಾಗಿ ಸೋಲಿಸಿದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)