ಕನ್ನಡ ಸುದ್ದಿ  /  ಕ್ರೀಡೆ  /  ಹಿಜಾಬ್ ಧರಿಸಿರುವ ಸಾನಿಯಾ ಮಿರ್ಜಾ ಮೊದಲ ಫೋಟೋ ವೈರಲ್; ಅದರಿಂದ ಗಳಿಸಿದ ಹಣವೆಷ್ಟು ಎಂಬುದು ಇಲ್ಲಿದೆ

ಹಿಜಾಬ್ ಧರಿಸಿರುವ ಸಾನಿಯಾ ಮಿರ್ಜಾ ಮೊದಲ ಫೋಟೋ ವೈರಲ್; ಅದರಿಂದ ಗಳಿಸಿದ ಹಣವೆಷ್ಟು ಎಂಬುದು ಇಲ್ಲಿದೆ

Sania Mirza: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಹಿಜಾಬ್ ಧರಿಸಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹಿಜಾಬ್ ಧರಿಸಿರುವ ಸಾನಿಯಾ ಮಿರ್ಜಾ ಮೊದಲ ಫೋಟೋ ವೈರಲ್; ಅದರಿಂದ ಗಳಿಸಿದ ಹಣವೆಷ್ಟು ಎಂಬುದು ಇಲ್ಲಿದೆ
ಹಿಜಾಬ್ ಧರಿಸಿರುವ ಸಾನಿಯಾ ಮಿರ್ಜಾ ಮೊದಲ ಫೋಟೋ ವೈರಲ್; ಅದರಿಂದ ಗಳಿಸಿದ ಹಣವೆಷ್ಟು ಎಂಬುದು ಇಲ್ಲಿದೆ

ಭಾರತ ತಂಡದ ದಿಗ್ಗಜ ಟೆನಿಸ್ ತಾರೆಗಳಲ್ಲಿ ಒಬ್ಬರಾದ ಸಾನಿಯಾ ಮಿರ್ಜಾ (Sania Mirza) ಅವರು ತಮ್ಮ ಅದ್ಭುತ ಆಟದಿಂದ ಮಾತ್ರವಲ್ಲದೆ ತನ್ನ ಮನಮೋಹಕ ಶೈಲಿಯಿಂದಲೂ ಅಭಿಮಾನಿಗಳನ್ನು ಯಾವಾಗಲೂ ಆಕರ್ಷಿಸುತ್ತಾರೆ. ರಾಕೆಟ್ ಹಿಡಿದು ಟೆನಿಸ್ ಕೋರ್ಟ್​​ನಲ್ಲಿ ಅಲ್ಲದೆ ಫ್ಯಾಶನ್ ಸೆನ್ಸ್‌ನಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇತ್ತೀಚೆಗೆ ಸಾನಿಯಾ ಹಿಜಾಬ್ ಧರಿಸಿ ಫ್ಯಾನ್ಸ್​ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಜಾಬ್ - ಅಬಯಾ ಧರಿಸಿರುವ ವಿಡಿಯೋವನ್ನು ಸಾನಿಯಾ ಇನ್​ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಆದರೆ, ಇದು ಪರ್ಫ್ಯೂಮ್ ಬ್ರಾಂಡ್​ಗೆ ಸಂಬಂಧಿಸಿದ ಬ್ರಾಂಡಿಂಗ್ ಆಗಿದೆ. ಅಹ್ಮದ್ ಅಲ್ಮಾಘ್ರಿಬಿ ಪರ್ಫ್ಯೂಮ್​ ಪ್ರಚಾರಕ್ಕೆ ಸಂಬಂಧಿಸಿ ಸಾನಿಯಾ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಎರಡು ದಿನಗಳ ಹಿಂದೆ ಈ ವಿಡಿಯೋ ಶೇರ್ ಮಾಡಿದ್ದಾರೆ. ಅದಕ್ಕೂ ಮುನ್ನ ಹಜ್​ ಯಾತ್ರೆಯ ಕುರಿತು ಸುದೀರ್ಘ ಪೋಸ್ಟ್ ಹಾಕಿದ್ದಾರೆ.

ಇತ್ತೀಚೆಗೆ ಮಿರ್ಜಾ ಕುಟುಂಬದ ಸದಸ್ಯರು ಹಜ್​ ಯಾತ್ರೆ ಪೂರ್ಣಗೊಳಿಸಿದ ನಂತರ ಸಾನಿಯಾ ಅವರ ಸಹೋದರಿ ಅನಮ್ ಕೂಡ ತಮ್ಮ ಪ್ರಯಾಣದ ಮುಖ್ಯಾಂಶಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿ ಅನಮ್ ಮತ್ತು ಅವರ ಪತಿ ಜೊತೆಗೆ ಸಾನಿಯಾ ಮದೀನಾದಲ್ಲಿರುವ ಪರ್ಫ್ಯೂಮ್​ ಶೋರೂಮ್‌ಗೆ ಭೇಟಿ ನೀಡಿದರು. ಅವರೆಲ್ಲರೂ ಪ್ರಚಾರದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮುಸ್ಲಿಮರಿಗೆ ಮಹತ್ವದ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತ ಯಾತ್ರೆಯಾದ ಹಜ್ ಯಾತ್ರೆ ಪೂರ್ಣಗೊಳಿಸಿದ ಸಾನಿಯಾ ಮಿರ್ಜಾ ಅವರು ತಮ್ಮ ತಂದೆ ಇಮ್ರಾನ್ ಮಿರ್ಜಾ ಅವರೊಂದಿಗೆ ಹೋಗಿದ್ದರು. ಸಹೋದರಿ ಅನಮ್ ಮಿರ್ಜಾ ಮತ್ತು ಸೋದರ ಮಾವ ಅಸಾದುದ್ದೀನ್ ಸೇರಿದಂತೆ ಅವರ ಕುಟುಂಬದೊಂದಿಗೆ ಸಾನಿಯಾ ಅಪೂರ್ಣ ಕ್ಷಣಗಳನ್ನು ಕಳೆದಿದ್ದಾರೆ. ಆದರೆ, ಎಲ್ಲರ ಗಮನ ಸೆಳೆದಿದ್ದು ಅವರ ಹಿಜಾಬ್.

ಸಾನಿಯಾ ಮದುವೆಯ ವದಂತಿ

ಹಜ್‌ನಲ್ಲಿ ನಿರತರಾಗಿದ್ದ ಸಾನಿಯಾ ಅವರನ್ನು ಶೀಘ್ರದಲ್ಲೇ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮದುವೆಯಾಗುತ್ತಾರೆ ಎಂಬ ವದಂತಿಗಳು ಹಬ್ಬಿದೆ. ಸಾನಿಯಾ ತಂದೆ ಇಮ್ರಾನ್ ಎನ್‌ಡಿಟಿವಿ ಜೊತೆ ಮಾತನಾಡಿ, ಇದೆಲ್ಲವೂ ಕಸ. ಆಕೆ ಯಾರನ್ನೂ ಭೇಟಿಯಾಗಿಲ್ಲ. ಯಾರನ್ನೂ ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾನಿಯಾ ಮತ್ತು ಶಮಿಯ ಮದುವೆಯ ಫೋಟೋವನ್ನು ಮಾರ್ಫ್ ಮಾಡಲಾಗಿರುವ ಫೋಟೋಗಳು ವೈರಲ್ ಆಗುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಚಿತ್ರಗಳು ಸಾನಿಯಾ ಮತ್ತು ಮಾಜಿ ಪತಿ ಶೋಯೆಬ್ ಮಲಿಕ್ ಅವರ ಮದುವೆಯದ್ದಾಗಿದೆ. ಆದರೆ ಇಲ್ಲಿ ಮಲಿಕ್ ಫೋಟೋವನ್ನು ಎಡಿಟ್ ಮಾಡಿ ಶಮಿ ಮುಖವನ್ನು ಇರಿಸಲಾಗಿದೆ. ಸಾನಿಯಾ-ಶೋಯೆಬ್ 2010 ರಲ್ಲಿ ವಿವಾಹವಾದರು. ಈ ದಂಪತಿಗೆ ಇಜಾನ್ ಎಂಬ ಮಗ ಇದ್ದಾನೆ. ಈ ವರ್ಷದ ಜನವರಿಯಲ್ಲಿ ಶೋಯೆಬ್ ನಟ ಸನಾ ಜಾವೇದ್ ಅವರನ್ನು ವಿವಾಹವಾಗಿ ಸಾನಿಯಾ ಅವರೊಂದಿಗೆ ವಿಚ್ಛೇದನ ಪಡೆದರು.

ಅಲ್ಲದೆ, ಸಾನಿಯಾ ಮಿರ್ಜಾ ಕೂಡ ಈ ಬಗ್ಗೆ ಮೌನ ಮುರಿದಿದ್ದರು. ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ವೈರಲ್​ ಆಗಿದ್ದು, ದಿ ಆನ್ಸರ್​ ಇಸ್​ ಸಬರ್‌, ಇಟ್ಸ್​ ಆಲ್​ವೇಸ್​ ಸಬರ್​ (ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ) ಎಂದು ಸಾನಿಯಾ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಸಾನಿಯಾ ಅವರಂತೆಯೇ ಶಮಿ ಅವರು ತಮ್ಮ ಪತ್ನಿ ಹಸಿನ್ ಜಹಾನ್ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆದರೆ, ಈ ಬಗ್ಗೆ ಸಾನಿಯಾ ಅಥವಾ ಮೊಹಮ್ಮದ್​ ಶಮಿ ಯಾರೂ ಅಧಿಕೃತವಾಗಿ ಏನೂ ಹೇಳಿಲ್ಲ.