Nagara Panchami: ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಿವಿಧ ದೋಷಗಳ ನಿವಾರಣೆಗಾಗಿ ಪೂಜೆ VIDEO
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಿದೆ. ತುಳುನಾಡಿನಲ್ಲಿ ನಾಗರಾಧಾನೆಗೆ ವಿಶೇಷ ಸ್ಥಾನ ಮಾನವಿದ್ದು, ಕುಟುಂಬದ ಮನೆಯ ನಾಗ ಬನದಲ್ಲಿ ನಾಗರಾಧನೆ ನಡೆಸುತ್ತಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿ ಪಡೆದಿರುವ ಹಲವು ದೇವಸ್ಥಾನಗಳಿದ್ದು, ಮಂಗಳೂರು ಹೊರ ವಲಯದಲ್ಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಭಕ್ತ ಸಾಗರ ಸೇರಿತ್ತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿಕ ನಾಗರಾಧನೆಗೆ ಪ್ರಸಿದ್ದಿ ಪಡೆದಿರುವ ಕುಡುಪು ಅನಂತ ಪದ್ಮನಾಭ ದೇವಸ್ಥಾನವು ಸಂತಾನ ಪ್ರಾಪ್ತಿ, ಸರ್ಪ ದೋಷ ನಿವಾರಣೆಗೆ ಹೆಸರು ವಾಸಿಯಾಗಿರುವ ಕ್ಷೇತ್ರ. ಸಾವಿರಾರು ವರ್ಷಗಳ ಇತಿಹಾಸವಿರುವ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ ಕಳೆಗಟ್ಟಿದ್ದು, ನಾಗಬನದಲ್ಲಿರುವ ವಿಗ್ರಹಗಳಿಗೆ ಹಾಲು ಹಾಗೂ ಎಳನೀರ ಅಭಿಷೇಕಗೈದು ವಿಶೇಷ ಪೂಜೆ ಪುನಸ್ಕಾರ ಮಾಡಲಾಯ್ತು.