ಸಿಕ್ಕಾಪಟ್ಟೆ ತಲೆನೋವು, ಜ್ವರವನ್ನು ನಿರ್ಲಕ್ಷಿಸಬೇಡಿ, ಡೆಂಗ್ಯೂ ಇರಬಹುದು; ಡಾಕ್ಟರ್ ಬಸವರಾಜ್ ವಿವರಿಸಿದ್ದಾರೆ ಗಮನಿಸಿ- ವಿಡಿಯೋ
ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಭಾರಿ ಆತಂಕ ಮೂಡಿಸಿದೆ. ಮಳೆ ಹೆಚ್ಚಾದ ಪ್ರದೇಶದಲ್ಲಿ ಜ್ವರ ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿದೆ. ಇನ್ನು ಡೆಂಗೆ ತಡೆಗಟ್ಟಲು ಸರ್ಕಾರ ಸಾಕಷ್ಟು ಕಾರ್ಯಕ್ರಮ ಹಾಕಿಕೊಂಡಿದ್ದರೂ, ಜನರ ನಿಷ್ಕಾಳಜಿಯಿಂದ ಡೆಂಗ್ಯೂ ಹೆಚ್ಚುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿರುವ ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ಆಸ್ಪತ್ರೆಯ ಡಾಕ್ಟರ್ ಬಸವರಾಜ್ ಕುಂಟೋಜಿ ಅವರು ಮಾತನಾಡಿದ್ದು, ಡೆಂಗ್ಯೂ ಜ್ವರದ ಲಕ್ಷಣಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದಾರೆ.