Entertainment News in Kannada Live October 9, 2024: Ramarasa: ಬಿಗ್‌ಬಾಸ್ 11ರ ವಿಜೇತ ಕಾರ್ತಿಕ್ ಮಹೇಶ್ ಬರ್ತ್‌ಡೇಗೆ ‘ರಾಮರಸ’ ಚಿತ್ರದಿಂದ ವಿಶೇಷ ಉಡುಗೊರೆ
Oct 09, 2024 10:11 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಕಾರ್ತಿಕ್ ಮಹೇಶ್ ಈಗ ರಾಮರಸ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ನಿರ್ದೇಶಕ ಜಟ್ಟ ಗುರುರಾಜ್ ನಿರ್ದೇಶನ ಮಾಡಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಆಗಿದೆ.
ಆರ್‌ಜೆ ಪ್ರದೀಪ್ ಸಕ್ಕತ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನವೆಂಬರ್ 22ರಂದು ತೆರೆ ಕಾಣುತ್ತಿದೆ. ಸುನಿಲ್ ರಾವ್, ನಾಗೇಂದ್ರ ಷಾ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದು ನಾಗರಾಜ್ ಸೋಮಯಾಜಿ, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
- Rajinikanth Vettaiyan Movie: ರಜನಿಕಾಂತ್ ನಟನೆಯ ವೆಟ್ಟೈಯಾನ್ ಸಿನಿಮಾ ಅಕ್ಟೋಬರ್ 10ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾಕ್ಕೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ, ಮುಂಗಡ ಬುಕಿಂಗ್‌ನಲ್ಲಿ ಬೆಂಗಳೂರಿನಲ್ಲಿ ತಮಿಳು ಅವತರಣಿಕೆಯೇ ಮೇಲುಗೈ ಸಾಧಿಸಿದೆ.
- ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಾ!? ಇಂಥದ್ದೊಂದು ಪ್ರಶ್ನೆ ಇದೀಗ ಮನೆ ಮಂದಿಯನ್ನು ಭಯಭೀತಗೊಳಿಸಿದೆ. ಸುಖಾಸುಮ್ಮನೆ ಮನೆಯಲ್ಲಿನ ಪಿಂಗಾಣಿ ತಟ್ಟೆಗಳು ಕೆಳಕ್ಕೆ ಬಿದ್ದು ಒಡೆಯುತ್ತಿವೆ. ಈ ನಿಗೂಢಕ್ಕೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.
- ಡಾ. ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಬಗ್ಗೆ ಆಗಿನ ಕಾಲದಲ್ಲಿಯೇ ಕಟು ಟೀಕೆ ಟಿಪ್ಪಣಿಗಳು ತೇಲಿ ಬಂದಿದ್ದವು. ಖ್ಯಾತ ನಾಮ ನಿರ್ದೇಶಕರು, ಸಾಹಿತಿಗಳು ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದರು. ಆದರೆ, ಸಿನಿಮಾ ಮಾತ್ರ ಅದ್ಯಾವುದಕ್ಕೂ ಬಗ್ಗದೆ, ಸುದೀರ್ಘ 2 ವರ್ಷಗಳ ಕಾಲ ಓಡಿ ದಾಖಲೆ ಬರೆಯಿತು.
- ಭವ್ಯಾ ಗೌಡ ಅವರು ಊಟ ಮಾಡುವ ಸಂದರ್ಭದಲ್ಲಿ ಜಗದೀಶ್ ಅವರಿಗೆ ನೀವು ಬೇರೆ ಟೈಮಲ್ಲಂತೂ ನೆಮ್ಮದಿ ಕೊಡೋದಿಲ್ಲ. ಊಟ ಮಾಡುವಾಗಲಾದರೂ ನೆಮ್ಮದಿ ಕೊಡಿ ಎಂದು ಹೇಳುತ್ತಾರೆ. ಆ ಮಾತಿಗೆ ಜಗದೀಶ್ ಟ್ರಿಗರ್ ಆಗುತ್ತಾರೆ.
- Suvarna Dasara Darbar: ಸ್ಟಾರ್ ಸುವರ್ಣ ವಾಹಿನಿಯು ಕಿರುತೆರೆಯ ಅತೀ ದೊಡ್ಡ ದಸರಾ ಸಂಭ್ರಮವನ್ನೊಳಗೊಂಡ ಸುವರ್ಣ ದಸರಾ ದರ್ಬಾರ್ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ.
- ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸ್ಟಾರ್ ನಟರ ಅಭಿಮಾನಿಗಳ ನಡುವೆ ಜಗಳ-ವಾಗ್ವಾದ ನಡೆಯುತ್ತಲೇ ಇರುತ್ತದೆ. ಇತ್ತೀಚಿಗಂತೂ ಧ್ರುವ ಸರ್ಜಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಜಗಳ ಖಾಯಂ ಆಗಿಬಿಟ್ಟಿದೆ. ಈ ಬಗ್ಗೆ ಪರೋಕ್ಷವಾಗಿ ಧ್ರುವ ಸರ್ಜಾ ಹೇಳಿದ್ದೇನು ನೋಡಿ.
- Anshu Movie Trailer: ಕಿರುತೆರೆ ನಟಿ ನಿಶಾ ರವಿಕೃಷ್ಣನ್, ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಡಾಕ್ಟರ್ ಪಾರ್ವತಿಯಾಗಿ ಅವರ ಪಾತ್ರ ಸಾಗುತ್ತಿದೆ. ಈಗ ಇದೇ ಕಿರುತೆರೆಯಲ್ಲಿ ಮೋಡಿ ಮಾಡಿದ ನಿಶಾ, ಬೆಳ್ಳಿತೆರೆಗೂ ಎಂಟ್ರಿಕೊಡುತ್ತಿದ್ದಾರೆ. ಆ ಚಿತ್ರಕ್ಕೆ ಅಂಶು ಎಂದು ಶೀರ್ಷಿಕೆ ಇಡಲಾಗಿದ್ದು, ಟ್ರೇಲರ್ ಸಹ ಬಿಡುಗಡೆ ಆಗಿದೆ.
- ಸಿನಿಮಾ ಜಗತ್ತಿನಲ್ಲಿ ಅನ್ಯ ಧರ್ಮದವರನ್ನು ಮದುವೆಯಾಗುವುದು, ಪ್ರೀತಿಸುವುದು ಸಾಮಾನ್ಯ. ಇಂಡಸ್ಟ್ರಿಯಲ್ಲಿ ಧರ್ಮದ ಗೋಡೆ ಒಡೆದು ಮನೆ ಕಟ್ಟಿಕೊಂಡಿರುವ ಇಂತಹ ಜೋಡಿಗಳು ಸಾಕಷ್ಟಿವೆ. ಆ ಪೈಕಿ ಪ್ರಿಯಾಮಣಿ ಸಹ ಒಬ್ಬರು. ಈಗ ಇದೇ ನಟಿ ತಾವು ಎದುರಿಸಿದ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ.
2022 ಜನವರಿಯಲ್ಲಿ ಡಿವೋರ್ಸ್ ಘೋಷಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ಚರ್ಯ ಹಾಗೂ ನಟ ಧನುಷ್ ಈಗ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋರ್ಟ್ ನಿಗದಿಗೊಳಿಸದ ವಿಚಾರಣೆಗೆ ಇಬ್ಬರೂ ಗೈರಾಗಿದ್ದಾರೆ. ಮಗಳು ಅಳಿಯನನ್ನು ಒಗ್ಗೂಡಿಸಲು ರಜನಿಕಾಂತ್ ಶೀಘ್ರದಲ್ಲೇ ಪಾರ್ಟಿಯೊಂದನ್ನು ಅರೇಂಜ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
- ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿರುವ ಸಂದರ್ಭದಲ್ಲಿ ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂದು ವಾದ ನಡೆಯುತ್ತಿದೆ. ಕ್ಯಾಪ್ಟನ್ ಆದವರು ಇದನ್ನು ನೋಡಿಕೊಳ್ಳಬೇಕಿತ್ತು, ಆದರೆ ಈಗ ಕ್ಯಾಪ್ಟನ್ ತಾವೇ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹಂಸ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
ಈ ವಾರ ವಿವಿಧ ಒಟಿಟಿಯಲ್ಲಿ ಒಟ್ಟು 18 ಕಂಟೆಂಟ್‌ಗಳು ಸ್ಟ್ರೀಮ್ ಆಗುತ್ತಿವೆ. ಅದರಲ್ಲಿ ಸಿನಿಮಾಗಳು, ವೆಬ್ ಸರಣಿಗಳು ಎರಡೂ ಸೇರಿವೆ. ಆಕ್ಷನ್, ಥ್ರಿಲ್ಲರ್, ಹಾರರ್ ಸಿನಿಮಾಗಳು, ವೆಬ್ ಸೀರೀಸ್‌ಗಳು ಅಕ್ಟೋಬರ್ 7 ರಿಂದ 13 ವರೆಗೆ ಸ್ಟ್ರೀಮ್ ಆಗಲಿದೆ. ಈ ಕಂಟೆಂಟ್‌ಗಳಲ್ಲಿ 11, ಒಂದೇ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿರುವುದು ವಿಶೇಷ.
- ಪುಷ್ಪ 2 ಚಿತ್ರದ ಬಗ್ಗೆ ಚಿತ್ರತಂಡ ಒಂದು ಅಪ್‌ಡೇಟ್ ನೀಡಿದೆ. ಬಾಕ್ಸ್ ಆಫೀಸ್ ಇತಿಹಾಸವನ್ನು ಸೃಷ್ಟಿ ಮಾಡಲು ಪುಷ್ಪಾ 2 ರೆಡಿಯಾಗಿದೆ. ಇದರಿಂದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳು ಖುಷಿಯಾಗಿದ್ದಾರೆ.
- ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ರಹಸ್ಯ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಈಗ ಇದೇ ಕುತೂಹಲಕ್ಕೆ ತೆರೆಬಿದ್ದಿದೆ. ಯಾವ ವಿಚಾರ ಸೀತಾಗೆ ತಿಳಿಯಬಾರದಿತ್ತೋ ಅದೇ ಸತ್ಯ ಗೊತ್ತಾಗಿದೆ. ಇನ್ನೇನಿದ್ದರೂ ಸಿಹಿಗಾಗಿ ಮತ್ತೊಂದು ಹೋರಾಟಕ್ಕೆ ಸೀತಾ ಸಿದ್ಧಳಾಗಿದ್ದಾಳೆ.
- ವೈಷ್ಣವ್‌ಗೆ ಯಾಕೆ ಹೀಗೆಲ್ಲ ಆಗ್ತಾ ಇದೆ ಎಂದು ಗೊತ್ತೇ ಆಗೋದಿಲ್ಲ. ಅವನು ಸದಾ ಅನುಮಾನದಲ್ಲೇ ಬದುಕುತ್ತಿದ್ದಾನೆ. ಈಗ ಅನುಮಾನಗಳು ಬಗೆಹರಿದರೂ ತನ್ನ ತಾಯಿ ತಪ್ಪು ಮಾಡುತ್ತಾರೆ ಎಂಬ ಕಲ್ಪನೆಯೂ ಅವನಿಗೆ ಇಲ್ಲ. ಲಕ್ಷ್ಮೀ ಆಡಿದ ಮಾತು ಕೇಳಿ ಶಾಕ್ ಆದ ವೈಷ್ಣವ್ ಮುಂದೇನು ಮಾಡ್ತಾನೆ ನೋಡಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 8ರ ಎಪಿಸೋಡ್‌ನಲ್ಲಿ ಊಟ ಕೊಡಲು ಕುಸುಮಾ ಸ್ಟೋರ್ ರೂಮ್‌ಗೆ ಹೋದಾಗ ಶ್ರೇಷ್ಠಾ, ಅವಳನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ಶ್ರೇಷ್ಠಾ, ಭಾಗ್ಯಾ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ಪೂಜಾ, ಸುಂದ್ರಿ ಅವಳನ್ನು ತಡೆದು ಮತ್ತೆ ಕಟ್ಟುತ್ತಾರೆ.
- ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ಮನೆಯಲ್ಲಿ ಎಲ್ಲರಿಗೂ ಗಾಬರಿ ಆಗಿದೆ. ಜೊತೆಗೆ ಶಿವು ಕೂಡ ಹೋಗಿದ್ದಾನೆ. ಆದರೆ ಇತ್ತ ವೀರಭದ್ರನ ಮರ್ಯಾದೆ ಹೋಗಿದೆ. ಮಗಳು ಓಡಿ ಹೋಗಿದ್ದಾಳೆ ಎಂದರೆ ಅದಕ್ಕಿಂತ ಅವಮಾನ ಬೇಕೆ? ಎಂದು ಅವನು ಆಲೋಚಿಸಿ ಸಿಟ್ಟಾಗಿದ್ದಾನೆ.
- ಅಮೃತಧಾರೆ ಧಾರಾವಾಹಿ ಅಕ್ಟೋಬರ್ 09 ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಚಾಕುಚುಚ್ಚಿಕೊಂಡ ಜೈದೇವ್ ಆಸ್ಪತ್ರೆಯಲ್ಲಿದ್ದಾನೆ. ಆತನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ, ಆತ ಆಸ್ಪತ್ರೆಯಿಂದ ಈ ಮನೆಗೆ ಬರಬಾರದು ಎಂದು ಶಕುಂತಲಾದೇವಿ ನಿರ್ಧಾರ ಕೈಗೊಂಡಿದ್ದಾರೆ.
- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಮಾರ್ಟಿನ್ ಚಿತ್ರ ಶುಕ್ರವಾರ (ಅಕ್ಟೋಬರ್ 11) ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಸಿನಿಮಾದ ನಾಯಕಿ ಮುಂಬೈ ಮೂಲದ ವೈಭವಿ ಶಾಂಡಿಲ್ಯ ಸಿನಿಮಾ ಹಾಗೂ ಕರ್ನಾಟಕದ ಬಗ್ಗೆ ಒಂದಿಷ್ಟು ಮಾತುಗಳನ್ನಾಡಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಇಷ್ಟ ಎಂದಿರುವ ವೈಭವಿ, ಕರ್ನಾಟಕ ನನ್ನ ಮನೆ ಎಂದಿದ್ದಾರೆ.
ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಕಾಂತಾರ , ಕೆಜಿಎಫ್ 2 ಸಿನಿಮಾಗಳಿಗೆ ಒಟ್ಟು 4 ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಕಿರಗಂದೂರು ಮುಂದಿನ 4 ತಿಂಗಳಲ್ಲಿ ಕೆಜಿಎಫ್ 3 ಬಗ್ಗೆ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದಾರೆ.
- ಸ್ತ್ರೀ 2 ಚಿತ್ರವು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಸುಮಾರು ರೂ.60 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಇದೇ ವರ್ಷ ಆಗಸ್ಟ್ 15 ರಂದು ಬಿಡುಗಡೆಯಾಗಿ ಪಾಸಿಟಿವ್ ಟಾಕ್ ಮೂಲಕ ಆರಂಭದಿಂದಲೂ ಭರ್ಜರಿ ಕಲೆಕ್ಷನ್ ಮಾಡಿದೆ.
ಯಶ್‌ಗೆ ಮುಂದೆ ಯಾವ ರೀತಿ ಬೆಳೆಯಬೇಕು ಎಂಬ ಐಡಿಯಾ ಇತ್ತು. ತಾನು ಪ್ಯಾನ್ ಇಂಡಿಯಾ ಲೆವೆಲ್‌ಗೆ ಬೆಳೆಯುತ್ತೇನೆಂಬ ಭರವಸೆ ಇತ್ತು. ಆದರೆ ಸಿನಿಮಾ ಬಗ್ಗೆ ಆತನಿಗೆ ಇರುವ ಕನಸು ಕಂಡು, ಎಲ್ಲಿ ಅವನು ಖಿನ್ನತೆಗೆ ಜಾರುತ್ತಾನೋ ಎಂಬ ಭಯ ನಮಗೆ ಕಾಡುತ್ತಿತ್ತು ಎಂದು ನಿರ್ದೇಶಕಿ ಶ್ರುತಿ ನಾಯ್ಡು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.