Karnataka News Live December 20, 2024 : Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿ ವಿಕಲಚೇತನರ ಕವಿಗೋಷ್ಠಿ; ಮೊದಲ ಬಾರಿ ವೇದಿಕೆ ಏರಿದರು ಅಂಧಕವಿಗಳು
Dec 20, 2024 07:29 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- Mandya Sahitya Sammelana: ಮಂಡ್ಯದಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಇತಿಹಾಸ ನಿರ್ಮಾಣವಾಯಿತು. ಅಂಧ ಕವಿಗಳ ಕವಿಗೋಷ್ಠಿ ವಿಶೇಷವಾಗಿತ್ತು.
Bengaluru traffic: ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕಾರಣ ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ ಚಾಲಕ 16 ಚಕ್ರದ ಟ್ರಕ್ವೊಂದನ್ನು ಬಿಟ್ಟು ಹೋಗಿದ್ದಾರೆ. ಆಮೇಲೆ ಏನಾಯ್ತು? ಇಲ್ಲಿದೆ ವಿವರ.
- ಕನ್ನಡದಲ್ಲಿ ಒಂದು ಕಾಲಕ್ಕೆ ಭಾರೀ ಸಂಚಲನ ಮೂಡಿಸಿದ್ದ ತ್ರಿವೇಣಿ ಅವರ ಶರಪಂಜರ ಕಾದಂಬರಿ ಈಗ ಇಟಲಿ ಭಾಷೆಗೆ ಅನುವಾದಗೊಂಡಿದೆ. ಇಟಲಿಯಲ್ಲಿ ಕಾದಂಬರಿ ಹೆಸರೇನು ಇಲ್ಲಿದೆ ವಿವರ.
- ಬೆಂಗಳೂರು ಆಟೋ ರಿಕ್ಷಾ ಪ್ರಯಾಣ ದರ ಏರಿಕೆಯಾಗುವ ಸಂಭವ ಹೆಚ್ಚಿದೆ. ಹೀಗಾಗಿ ಇದು ಓಲಾ, ರ್‍ಯಾಪಿಡೋ, ಉಬರ್ ಪ್ರಯಾಣದ ಬೆಲೆ ಏರಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಪೊಲೀಸರ ವಶವಾಗಿದ್ದ ಸಿಟಿ ರವಿ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಅಶ್ಲೀಲ ಶಬ್ದ ಬಳಸಿದ್ದಾರೆ ಎನ್ನಲಾದ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಸಿಟಿ ರವಿಗೆ ಹೈಕೆೋರ್ಟ್ ರಿಲೀಫ್ ನೀಡಿದೆ.
Education: ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಹಾಗಾದರೆ ಚಿಂತೆ ಮಾಡಬೇಡಿ. ಚಿಕ್ಕಮಗಳೂರು ಸಿಸಿಆರ್‌ಐ 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಅದರ ವಿವರ ಇಲ್ಲಿದೆ.
KSRTC Strike: ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕರ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಚಾಲಕರು ಕೆಲಸಕ್ಕೆ ಹಾಜರಾಗಿಲ್ಲ. ಸೋಮವಾರದಿಂದಲೇ ಚಾಲಕರು ಗೈರಾಗಿರುವ ಕಾರಣ ಕೆಎಸ್‌ಆರ್‌ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರ ಪರದಾಟ ಕಂಡುಬಂತು. ಈ ಕುರಿತ ವರದಿ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
- Mandya Sahitya Sammelana: ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಹಾವೇರಿ ಜನಪದ ವಿಶ್ವವಿದ್ಯಾನಿಲಯಕ್ಕೆ ಸರ್ಕಾರ ಅನುದಾನ ಒದಗಿಸಬೇಕು. ಮಹಿಳಾ ವಿಶ್ವವಿದ್ಯಾನಿಲಯ, ಸಂಗೀತ ವಿಶ್ವವಿದ್ಯಾನಿಲಯಗಳನ್ನು ಮರೆಯಬಾರದು ಎಂದು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊರುಚ ಸಲಹೆ ನೀಡಿದ್ದಾರೆ.
- ಬೆಂಗಳೂರು ಮೆಟ್ರೋ ರೈಲು ಜಾಲ ಇನ್ನಷ್ಟು ವಿಸ್ತರಣೆಯಾಗಲಿದೆ. ಹೊಸಕೋಟೆ, ನೆಲಮಂಗಲ, ಬಿಡದಿಗೆ ಹೊಸ ಮಾರ್ಗ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.
- US Consulate Bangalore: ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗುವ ದೀರ್ಘಕಾಲದ ಬಹುಬೇಡಿಕೆಯ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಜನವರಿ 2025ರಿಂದ ಯುಎಸ್ ಕಾನ್ಸುಲೇಟ್ ಆರಂಭವಾಗುವ ಕುರಿತು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಘೋಷಿಸಿದ್ದಾರೆ.
CT Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್ ಗಂಭೀರವಾಗಿದ್ದು, ಬೆಳಗಾವಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಹೀಗಾಗಿ ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ. ಈವರೆಗಿನ 9 ಮುಖ್ಯ ವಿದ್ಯಮಾನಗಳ ನೋಟ ಇಲ್ಲಿದೆ.
- Mandya Sahitya Sammelana: ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಹಕ್ಕೊತ್ತಾಯಗಳನ್ನು ಸಮ್ಮೇಳನಾಧ್ಯಕ್ಷ ಗೊರುಚ ಮಂಡಿಸಿದರು.
Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಇಂದು (ಡಿಸೆಂಬರ್ 20) ಉದ್ಘಾಟಿಸಿದರು. ಇದು ಕನ್ನಡದ ನೆಲದಲ್ಲಿ ನಡೆಯುತ್ತಿರುವ ನಿಜಾರ್ಥದ ಸಮ್ಮೇಳನ ಎಂದು ಹೇಳಿದರು. ಅವರ ಭಾಷಣದ ಮುಖ್ಯ ಅಂಶಗಳು ಇಲ್ಲಿವೆ.
Kannada Sahitya Sammelana: ಬಹು ನಿರೀಕ್ಷಿತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಬೆಳಗ್ಗೆ ಧ್ವಜಾರೋಹಣ ನೆರವೇರಿದ್ದು, ಈಗ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುತ್ತಿದ್ದು, ಅದರ ನೇರ ಪ್ರಸಾರದ ವಿಡಿಯೋ ಮತ್ತು ವಿವರ ಇಲ್ಲಿದೆ.
Mandya Sahitya Sammelana: ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಯ ಸಡಗರ. ಇದನ್ನು ಆಯೋಜಿಸುವ ಮುನ್ನವೇ ವಿವಾದಗಳೂ ಎದುರಾದವು. ಅವುಗಳ ಪಟ್ಟಿ ಇಲ್ಲಿದೆ.
Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೂರು ದಿನದ ಸಮ್ಮೇಳನದಲ್ಲಿ ನಿಮ್ಮ ಚಟುವಟಿಕೆ, ಯೋಜನೆಗಳು ಹೇಗಿರಬೇಕು ಎನ್ನುವ ಗೈಡ್ ಇಲ್ಲಿದೆ.
Bengaluru Power Cut: ಬೆಂಗಳೂರಿನ ಹಲವೆಡೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿಯನ್ನು ಕೆಪಿಟಿಸಿಎಲ್ ಕೈಗೆತ್ತಿಕೊಂಡಿರುವ ಕಾರಣ ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್ ಕಟ್ ಎಂಬ ವಿವರ ಇಲ್ಲಿದೆ. (ವರದಿ - ಎಚ್ ಮಾರುತಿ, ಬೆಂಗಳೂರು)
Mandya Sahitya Sammelana: ಮಂಡ್ಯದಲ್ಲಿ ಮೂರು ದಶಕಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು. ಮೂರು ದಿನ ಕನ್ನಡದ ಹಬ್ಬ ಇರಲಿದೆ. ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.
- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಸೆಂಬರ್ 20ರ ಶುಕ್ರವಾರ ಚಳಿಯ ವಾತಾವರಣ ಕಡಿಮೆಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಮಂಜು ಮತ್ತು ಚಳಿಯ ಪರಿಸ್ಥಿತಿ ಗಣನೀಯವಾಗಿ ಇಳಿಕೆಯಾಗಿದೆ. ಡಿಸೆಂಬರ್ 23ರ ಸೋಮವಾರ ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
Karnataka High Court: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಶಿಕ್ಷೆ ಅಮಾನತ್ತಿಗೆ ಷರತ್ತು ವಿಧಿಸಬೇಕು ಎಂದು ಕೋರ್ಟ್ ಅನ್ನು ಸಿಬಿಐ ಆಗ್ರಹಿಸಿದೆ. ಪ್ರತ್ಯೇಕ ಕೇಸ್‌ನಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣ, ಸಿಬಿಐಗೆ ಏಕೆ ಒಪ್ಪಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)