LIVE UPDATES
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ದಾಸನಿಗೆ ಮತ್ತೆ ಸೆರೆಮನೆ ವಾಸ, ಅಕ್ಟೋಬರ್ 8ಕ್ಕೆ ಬೇಲ್ ನಿರೀಕ್ಷೆ
Karnataka News Live October 5, 2024 : ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ದಾಸನಿಗೆ ಮತ್ತೆ ಸೆರೆಮನೆ ವಾಸ, ಅಕ್ಟೋಬರ್ 8ಕ್ಕೆ ಬೇಲ್ ನಿರೀಕ್ಷೆ
Oct 05, 2024 06:44 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ದಾಸನಿಗೆ ಮತ್ತೆ ಸೆರೆಮನೆ ವಾಸ, ಅಕ್ಟೋಬರ್ 8ಕ್ಕೆ ಬೇಲ್ ನಿರೀಕ್ಷೆ
- Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಅಕ್ಟೋಬರ್ 8ಕ್ಕೆ ಮತ್ತೆ ವಿಚಾರಣೆ ಮುಂದುವರೆಯಲಿದ್ದು, ಅಂದು ಬೇಲ್ ಸಿಗುವ ನಿರೀಕ್ಷೆ ಇದೆ.
ಕರ್ನಾಟಕ News Live: ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಮುಂದಾದ ಸರ್ಕಾರ, ಅನಗತ್ಯ ಫೀಲ್ಡ್‌ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ ತಾಕೀತು
- ಕರ್ನಾಟಕದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಕಾರ್ಯ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ಕೆಲವು ನಿರ್ದೇಶನಗಳನ್ನು ತಹಸಿಲ್ದಾರರಿಗೆ ನೀಡಿದ್ದಾರೆ.
ಕರ್ನಾಟಕ News Live: ಬಿಜೆಪಿ ಶಾಸಕ ಮುನಿರತ್ನಗೆ ಮುಂದುವರೆದ ನ್ಯಾಯಾಂಗ ಬಂಧನ; ಮತ್ತೆ 14 ದಿನ ಪರಪ್ಪನ ಅಗ್ರಹಾರದಲ್ಲೇ ವಾಸ
- ಬಿಜೆಪಿ ಶಾಸಕ ಮುನಿರತ್ನಗೆ ಜೈಲು ಸಂಕಷ್ಟ ಮತ್ತೆ ಮುಂದುವರೆದಿದೆ. ಎಸ್‌ಐಟಿ ಮನವಿ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಅಕ್ಟೋಬರ್ 19ರವರೆಗೆ ಮುನಿರತ್ನ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಹೀಗಾಗಿ ಮತ್ತೆ 14 ದಿನ ಶಾಸಕರು ಪರಪ್ಪನ ಅಗ್ರಹಾರದಲ್ಲೇ ಉಳಿಯಬೇಕಾಗಿದೆ. (ವರದಿ: ಎಚ್. ಮಾರುತಿ)
ಕರ್ನಾಟಕ News Live: Gadag Trekking: ನೀವು ಚಾರಣ ಪ್ರಿಯರೇ, ಗದಗದ ಕಪ್ಪತಗುಡ್ಡಕ್ಕೆ ಬನ್ನಿ, ನಂದಿವೇರಿ ಮಠದ ಹಸಿರು ಸ್ವಾಮೀಜಿ ಅವರೊಂದಿಗೆ ಚಾರಣ ಸಂಭ್ರಮಿಸಿ
- ಗದಗ ಜಿಲ್ಲೆಯ ಡಂಬಳ ಸಮೀಪದ ಕಪ್ಪತಗುಡ್ಡ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿನ ನಂದಿವೇರಿ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರೇ ಪ್ರತಿ ತಿಂಗಳ ಎರಡನೇ ಭಾನುವಾರ ಚಾರಣ ಹಮ್ಮಿಕೊಳ್ಳುತ್ತಾರೆ. ಮುಂದಿನ ಭಾನುವಾರ( ಅಕ್ಟೊಬರ್ 13) ಚಾರಣವಿದೆ.
ಕರ್ನಾಟಕ News Live: ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು
- ಮೈಸೂರು ದಸರಾದಲ್ಲಿ ರೈತ ದಸರಾಗೆ ಚಾಲನೆ ಸಿಕ್ಕಿದೆ. ಮೆರವಣಿಗೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ಇದೇ ವೇಳೆ ವೀರಗಾಸೆ, ದೊಳ್ಳುಕುಣಿತ, ಕಂಸಾಳೆ ಮೊದಲಾದ ಜಾನಪದ ಕಲಾಪ್ರಕಾರಗಳು ಗಮನ ಸೆಳೆದವು.
ಕರ್ನಾಟಕ News Live: ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ; ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ
- ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರವರೆಗಿನ 3.7 ಕಿ.ಮೀ ವಿಸ್ತರಣೆ ಪೂರ್ಣಗೊಂಡಿದೆ. ಸಿಎಂಆರ್‌ಎಸ್ ಅನುಮೋದನೆಯ ನಂತರ ಅಕ್ಟೋಬರ್ ತಿಂಗಳ ಅಂತ್ಯಕ್ಕೂ ಮುನ್ನ ಈ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಡುವ ಸಾಧ್ಯತೆ ಇದೆ.
ಕರ್ನಾಟಕ News Live: Mysore Tour packages: ಮೈಸೂರು ದಸರಾ ಪ್ರವಾಸ ಬರುತ್ತೀದ್ದೀರಾ, ಕೆಎಸ್‌ಟಿಡಿಸಿ ಗೋವಾ, ಊಟಿ ಸಹಿತ ಹಲವು ಟೂರ್ ಪ್ಯಾಕೇಜ್ ಉಂಟು
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಮೈಸೂರು ದಸರಾಕ್ಕೆ ಆಗಮಿಸುವವರು ಹಾಗೂ ಸ್ಥಳೀಯವಾಗಿ ಪ್ರವಾಸ ಹೋಗ ಬಯಸುವವರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಆರಂಭಿಸಿದೆ.
ಕರ್ನಾಟಕ News Live: Mangalore Dasara 2024: ಮಂಗಳೂರು ದಸರಾ ಹಾಫ್ ಮ್ಯಾರಥಾನ್ ನಲ್ಲಿ ಓಡಿ, ಬಹುಮಾನ ಗೆಲ್ಲಿರಿ; ನಾಳೆ ಸ್ಪರ್ಧೆ
- ಮಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಾಫ್ ಮ್ಯಾರಥಾನ್ ಓಟವನ್ನು ದಸರಾ ಸಮಿತಿಯಿಂದ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವೂ ಇದೆ. ಈ ಕುರಿತ ವಿವರ ಇಲ್ಲಿದೆ.
- ವರದಿ: ಹರೀಶ ಮಾಂಬಾಡಿ, ಮಂಗಳೂರು
ಕರ್ನಾಟಕ News Live: ಉಡುಪಿಯ ಉಪ್ಪುಂದದಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥ, ಇಬ್ಬರು ಆಸ್ಪತ್ರೆಗೆ ದಾಖಲು
- Udupi News: ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ ಸ್ಥಳೀಯ ಓವರ್‌ಹೆಡ್ ನೀರಿನ ಟ್ಯಾಂಕ್‌ನ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ News Live: ಮೈಸೂರಿನ ಪಾರಂಪರಿಕ ಕಟ್ಟಡಗಳ ಜತೆಗೆ ಪ್ರಮುಖ ದ್ವಾರಗಳೂ ಈಗಲೂ ಆಕರ್ಷಣೆ; ಅರಮನೆ ಭಿನ್ನ ಗೇಟ್‌ಗಳ ಇತಿಹಾಸವೂ ಆಸಕ್ತಿದಾಯಕ, ಇವುಗಳ ವಿಶೇಷತೆ ಏನು
- ಮೈಸೂರಿನ ಅರಮನೆ, ಪಾರಂಪರಿಕ ಕಟ್ಟಡಗಳಂತೆ ಪ್ರಮುಖ ದ್ವಾರಗಳೂ ಆಕರ್ಷಣೀಯ. ಇವೂ ಕೂಡ ಇತಿಹಾಸವನ್ನು ಸಾರುತ್ತವೆ. ಈಗಲೂ ಉತ್ತಮ ನಿರ್ವಹಣೆಯಿಂದ ಬಳಕೆಯಲ್ಲಿವೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.
ಕರ್ನಾಟಕ News Live: ಮೈಸೂರು ದಸರಾದಲ್ಲಿ ಸಂಚಾರ ಕಿರಿಕಿರಿ, ಪ್ರಮುಖ ರಸ್ತೆಯಲ್ಲೇ ಅವ್ಯವಸ್ಥೆ, ವ್ಯಾಪಾರಸ್ಥರ ಆಕ್ರೋಶ: ಬದಲಾವಣೆ ಗಮನಿಸಿ
ಮೈಸೂರಿನಲ್ಲಿ ದಸರಾ ದಟ್ಟಣೆ ಹೆಚ್ಚಿ ಸಂಚಾರ ಅಡಚಣೆಗಳೂ ಪ್ರಮುಖ ಭಾಗದಲ್ಲಿ ಆಗುತ್ತಿವೆ. ಸಂಚಾರ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಅಲ್ಲಲ್ಲಿ ಅವ್ಯವಸ್ಥೆಯೂ ಆಗಿದೆ.
ಕರ್ನಾಟಕ News Live: ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ 4 ದಿನಗಳ ಕಾಲ ಧಾರಾಕಾರ ಮಳೆ; ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್
- Heavy Rain in Karnataka: ರಾಜ್ಯದ ವಿವಿಧೆಡೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಹೆಚ್ಚಿನದಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ News Live: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಬೇಲ್ ಭವಿಷ್ಯ ಇಂದೇ ನಿರ್ಧಾರ, ಜಾಮೀನಿನ ಜಾಮೂನು ಸಿಗುವ ನಿರೀಕ್ಷೆಯಲ್ಲಿ ಫ್ಯಾನ್ಸ್
- Renukaswamy Murder Case: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಇಂದು ಅಂದರೆ ಅಕ್ಟೋಬರ್ 5 ಶನಿವಾರ ಮಧ್ಯಾಹ್ನ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಸಿಗಲಿರುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. (ವರದಿ-ಎಚ್.ಮಾರುತಿ)