Karnataka News Live September 11, 2024 : Ola Electric; ಸ್ಕೂಟರ್ ರಿಪೇರಿಯಾಗದೆ ಹತಾಶನಾದ ಗ್ರಾಹಕ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್ ಸುಟ್ಟ- ವಿಡಿಯೋ
Sep 11, 2024 07:39 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Ola Electric Customer Rage; ಎಲೆಕ್ಟ್ರಿಕ್ ಸ್ಕೂಟರ್ ಪದೇಪದೆ ರಿಪೇರಿಗೆ ಬಂದ ಕಾರಣ ಹತಾಶ ಗ್ರಾಹಕ ಕಲಬುರಗಿ ಓಲಾ ಎಲೆಕ್ಟ್ರಿಕ್ ಶೋರೂಂಗೆ ಬೆಂಕಿ ಹಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಹತಾಶೆಗೆ ನಿಜವಾದ ಕಾರಣ ಇದು.
- Rashtriya Swayamsevak Sangh: ಮಂಗಳೂರಿನ ಆರೆಸ್ಸೆಸ್ ಕೇಂದ್ರ ಕಚೇರಿ ಸಂಘ ನಿಕೇತನದ ಗಣೇಶೋತ್ಸವದಲ್ಲಿ ಕ್ರಿಶ್ಚಿಯನ್ ಬಂಧುಗಳಿಂದ ಗಣಪತಿಗೆ ಪೂಜೆ ನಡೆದಿದ್ದು, ಸೌಹಾರ್ದತೆಯ ಸಂದೇಶವನ್ನು ಸಾರಿದೆ.
- Garlic Cultivation: ಪ್ರಸ್ತುತ ಹೆಚ್ಚು ಬೇಡಿಕೆಯುಳ್ಳ ತರಕಾರಿಗಳ ಪೈಕಿ ಬೆಳ್ಳುಳ್ಳಿಯೂ ಒಂದು. ಲಾಭದಾಯಕವಾದ ಈ ಕೃಷಿಯತ್ತ ರೈತರು ಹೆಜ್ಜೆ ಹಾಕುತ್ತಿರುವುದು ಪ್ರಮುಖವಾಗಿದೆ. ಹಾಗಿದ್ದರೆ ಬೆಳ್ಳುಳ್ಳಿ ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ವಿವರ.
Water Adalat; ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೀರಿನ ಬಿಲ್ ಮತ್ತು ಇತರೆ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಇತ್ಯರ್ಥಗೊಳಿಸಲು ಜಲ ಮಂಡಳಿ ಮುಂದಾಗಿದೆ. ಸೆ12ರಂದು ಯಲಹಂಕ, ಜೆಪಿನಗರ, ನಾಗರಬಾವಿ ಸೇರಿ ವಿವಿಧೆಡೆ ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್ ನಡೆಯಲಿದೆ.
Doctor prescriptions in Kannada; ಕರ್ನಾಟಕದಲ್ಲಿ ವೈದ್ಯರು ಈಗ ಕನ್ನಡದಲ್ಲಿ ಔಷಧ ಚೀಟಿ (Doctor prescriptions in Kannada) ಬರೆದು ಕೊಡಲು ಶುರುಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿ ಕನ್ನಡದಲ್ಲಿ ಇರಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಆರೋಗ್ಯ ಸಚಿವರಿಗೆ ಪತ್ರ ಬರೆದ ಬೆನ್ನಿಗೆ ಈ ಬೆಳವಣಿಗೆ ಗಮನಸೆಳೆದಿದೆ.
- Mysuru Dasara 2024: ಮೈಸೂರು ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಮಕ್ಕಳಿಗೆ ಅರಮನೆ ಆವರಣದಲ್ಲೇ ತಾತ್ಕಾಲಿಕ ಶಾಲೆ ಆರಂಭಿಸಲಾಗಿದೆ. ಇದರ ಜೊತೆಗೆ ಆರೋಗ್ಯ ಶಿಬಿರವೂ ಆಯೋಜಿಸಲಾಗಿದೆ.
- Road Accident: ಟೋಲ್ ಬಳಿಯಿದ್ದ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿದೆ. ಈ ಘಟನೆ ಧಾರವಾಡದ ಅಣ್ಣಿಗೇರಿ ತಾಲೂಕಿನ ನಲವಡಿ ಟೋಲ್ ಬಳಿ ಸಂಭವಿಸಿದೆ.
- Pitru Paksha 2024: ಪಿತೃ ಪಕ್ಷ ದಿನದಂದೇ ಗಾಂಧಿ ಜಯಂತಿ ದಿನವಿದ್ದು, ಪೂಜ್ಯರಿಗೆ ಎಡೆ ಇಡಲು ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿವಿಧ ಸಂಘಟನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿವೆ.
- ಬೀದಿ ನಾಟಕ ಸ್ಪರ್ಧೆ: ಇತಿಹಾಸದ ಮೇಲೆ ಬೆಳಕು ಚೆಲ್ಲಿ, ಅದೇ ವಿಷಯದ ಮೇಲೆ ಒಂದು ಸ್ಕ್ರಿಪ್ಟ್ ತಯಾರಿಸಿ ಇಂದಿನಿಂದಲೇ ತಯಾರಿ ಆರಂಭಿಸಿ. ನಿಮಗೆಂದೇ ಆಯೋಜಿಸಲಾಗುತ್ತಿದೆ. ಬೀದಿ ನಾಟಕ ಸ್ಪರ್ಧೆ. ಇದೇ ಅಕ್ಟೋಬರ್ 5ರಂದು ಬಂದು ಭಾಗವಹಿಸಿ. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ.
- Pune-Hubli Vande Bharat Express: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಂದು ಜಾರ್ಖಂಡ್‌ನ ಜೆಮ್‌ಶೆಡ್‌ಪುರದಿಂದ ಮಹಾರಾಷ್ಟ್ರದ ಪುಣೆಯಿಂದ ಕರ್ನಾಟಕದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ.
- Job News: ಗ್ರೂಪ್ ಬಿ ಮತ್ತು ಸಿ ನೇಮಕಾತಿಗೆ ಸಂಬಂಧಿಸಿ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಕುರಿತು ಗೃಹ ಸಚಿವರು ಏನು ಹೇಳಿದರು? ಇಲ್ಲಿದೆ ವಿವರ. (ವರದಿ-ಎಚ್. ಮಾರುತಿ)
- Cryptocurrency: ಬೆಂಗಳೂರಿನ ಸಂಸ್ಥೆಯೊಂದರಿಂದ 56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ದೋಚಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. (ವರದಿ-ಎಚ್. ಮಾರುತಿ)
- Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ಶೀಟ್ನಲ್ಲಿ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಬಗ್ಗೆಯೂ ಉಲ್ಲೇಖವಾಗಿರುವ ಕಾರಣ ಮಲ್ಲೇಶ್ವರಂನ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. (ವರದಿ-ಎಚ್. ಮಾರುತಿ)
- ರಾತ್ರೋ ರಾತ್ರಿ ಉದ್ಭವವಾಗುವ ಅವೈಜ್ಞಾನಿಕ ರೋಡ್ ಹಂಪ್‌ಗಳಿಂದ ಬಲಿಯಾಗುವ ಜೀವಗಳಿಗೆ ಹೊಣೆ ಯಾರು? ಕಾಂಕ್ರಿಟ್ ರಾಶಿಯಿಂದ ಗುಡ್ಡೆಯಂತೆ ನಿರ್ಮಾಣ ಮಾಡಿ ಜನರ ಪ್ರಾಣಕ್ಕೆ ಅಪಾಯ ತಂದೊಡ್ಡುವವರಿಗೆ ಏನು ಹೇಳೋದು?
- ಹಲವು ಹೋಟೆಲ್‌ಗಳಲ್ಲಿ ಬಗೆಬಗೆಯ ದೋಸೆಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ದೋಸೆ ಮಾಡುವ ದೋಸಾ ಮಾಸ್ಟರ್‌ಗಳಿಗೂ ಡಿಮ್ಯಾಂಡ್ ಜಾಸ್ತಿ. ಬೆಂಗಳೂರಿನಲ್ಲಿ ನುರಿತ ಅನುಭವಿ ದೋಸೆ ಮಾಸ್ಟರ್‌ಗಳು ಪ್ರತಿ ತಿಂಗಳು ಲಕ್ಷದವರೆಗೂ ದುಡಿಯುತ್ತಾರೆ. (ವರದಿ: ಎಚ್ ಮಾರುತಿ)