ರೆಟ್ರೋ ನೈಟ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರ ಮಸ್ತ್ ಮಸ್ತ್ ಡ್ಯಾನ್ಸ್; ಶ್ರೇಯಾಂಕಾ, ಎಲ್ಲಿಸ್ ಪೆರ್ರಿ ಸಾಂಪ್ರಾದಾಯಿಕ ಉಡುಪಿನಲ್ಲಿ ಮಿಂಚು-ellyse perrys glamorous saree avatar and smriti mandhanas funky look during rcbs retro night wins hearts wpl 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೆಟ್ರೋ ನೈಟ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರ ಮಸ್ತ್ ಮಸ್ತ್ ಡ್ಯಾನ್ಸ್; ಶ್ರೇಯಾಂಕಾ, ಎಲ್ಲಿಸ್ ಪೆರ್ರಿ ಸಾಂಪ್ರಾದಾಯಿಕ ಉಡುಪಿನಲ್ಲಿ ಮಿಂಚು

ರೆಟ್ರೋ ನೈಟ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರ ಮಸ್ತ್ ಮಸ್ತ್ ಡ್ಯಾನ್ಸ್; ಶ್ರೇಯಾಂಕಾ, ಎಲ್ಲಿಸ್ ಪೆರ್ರಿ ಸಾಂಪ್ರಾದಾಯಿಕ ಉಡುಪಿನಲ್ಲಿ ಮಿಂಚು

RCBs retro night: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಏರ್ಪಡಿಸಿದ್ದ ರೆಟ್ರೋ ನೈಟ್​ ಪಾರ್ಟಿಯಲ್ಲಿ ಆರ್​ಸಿಬಿ ಆಟಗಾರ್ತಿಯರು ಫುಲ್​ ಚಿಲ್​ ಆಗಿದ್ದಾರೆ. ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

ರೆಟ್ರೋ ನೈಟ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರ ಮಸ್ತ್ ಮಸ್ತ್ ಡ್ಯಾನ್ಸ್
ರೆಟ್ರೋ ನೈಟ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರ ಮಸ್ತ್ ಮಸ್ತ್ ಡ್ಯಾನ್ಸ್

ವುಮೆನ್ಸ್ ಪ್ರೀಮಿಯರ್​​ ಲೀಗ್​​ನಲ್ಲಿ (WPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಉತ್ತಮ ಪ್ರದರ್ಶನ ನೀಡುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಏರ್ಪಡಿಸಿದ್ದ ರೆಟ್ರೋ ನೈಟ್​ ಪಾರ್ಟಿಯಲ್ಲಿ ಆರ್​ಸಿಬಿ ಆಟಗಾರ್ತಿಯರು ಫುಲ್​ ಚಿಲ್​ ಆಗಿದ್ದಾರೆ. ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳನ್ನು ಆರ್​ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಪಾರ್ಟಿಯಲ್ಲಿ ಕೋಚಿಂಗ್​ ಸ್ಟಾಫ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.

ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ಆಸ್ಟ್ರೇಲಿಯಾ ಎಲ್ಲಿಸ್ ಪೆರ್ರಿ ಮತ್ತು ಸೋಫಿ ಮೊಲಿನೆಕ್ಸ್ ಅವರು ಸಾಂಪ್ರಾದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಉಳಿದಂತೆ ಎಲ್ಲರೂ ರೆಟ್ರೋ ಲುಕ್​​​ನಲ್ಲಿ ಕಣ್ಮನ ಸೆಳೆದಿದ್ದಾರೆ. ಅದರಲ್ಲೂ ಎಲ್ಲಿಸ್ ಪೆರ್ರಿ ಸೀರೆಯುಟ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಪ್ಪು ಸೀರೆಯಲ್ಲಿ ಅಪ್ಪಟ ಅಪ್ಸರೆಯಂತೆ ಕಂಡಿದ್ದಾರೆ. ಆಲ್​ರೌಂಡರ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಫೋಟೋಗಳೇ ಹೆಚ್ಚು ವೈರಲ್ ಆಗುತ್ತಿವೆ.

ಮಾರ್ಚ್ 6ರಂದು ಗುಜರಾತ್ ಜೈಂಟ್ಸ್ ವಿರುದ್ಧ ಸೋತ ಬಳಿಕ ಸ್ಮೃತಿ ಮಂಧಾನ ಮುಂದಾಳತ್ವದ ಆಟಗಾರ್ತಿಯರಿಗಾಗಿ ರೆಟ್ರೋ ನೈಟ್ ಪಾರ್ಟಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಟಗಾರ್ತಿಯರು ಕುಣಿದು ಕುಪ್ಪಳಿಸಿದ್ದಾರೆ. ಸ್ಮೃತಿ ಮಂಧಾನ, ರಿಚಾ ಘೋಷ್, ರೇಣುಕಾ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್ ಸೇರಿದಂತೆ ಹಲವರು ಮಸ್ತ್ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಮಂಧಾನ ಪಿಚ್ಚರ್ ಅಭೀ ಬಾಕಿ ಹೈ ಮೇರಿ ದೋಸ್ತ್​ ಎಂದು ಸಖತ್ ಕ್ಯೂಟ್​ ಆಗಿ ಹೇಳಿದ್ದಾರೆ.

ಆರ್​ಸಿಬಿ ಡ್ರೀಮ್ ಗರ್ಲ್ ಪೆರ್ರಿ ಲುಕ್ ವೈರಲ್

ಪಾರ್ಟಿಯಲ್ಲಿ ಅತಿ ಹೆಚ್ಚು ಕಣ್ಮನ ಸೆಳೆದಿದ್ದು ಅಂದರೆ ಎಲ್ಲಿಸ್ ಪೆರ್ರಿ. ದೇಸಿ ಶೈಲಿಯ ಸೀರೆಯುಟ್ಟು ಅಭಿಮಾನಿಗಳ ಹೃದಯ ಮತ್ತೊಮ್ಮೆ ಕದ್ದಿದ್ದಾರೆ. ಸಹಜ ಸುಂದರಿಯಾಗಿರುವ ಆಸ್ಟ್ರೇಲಿಯಾದ ಅನುಭವಿ ಆಲ್​ರೌಂಡರ್​ ಪೆರ್ರಿ, ಕಪ್ಪು ಬಣ್ಣದ ಸೀರೆ ಹಾಗೂ ಬಿಳಿ ಶರ್ಟ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳ ನಿದ್ದೆಗೆಡಿಸಿದೆ. ಸೀರೆಯುಟ್ಟು ಸಖತ್ ಡ್ಯಾನ್ಸ್​ ಮಾಡಿದ್ದಾರೆ.

ಮೂವರಿಗೆ ಸಿಕ್ತು ಪ್ರಶಸ್ತಿ

ರೆಟ್ರೋ ನೈಟ್ ಪಾರ್ಟಿಯಲ್ಲಿ ಮೂವರು ವಿಜೇತರನ್ನು ಘೋಷಿಸಲಾಯಿತು. ಶ್ರೇಯಾಂಕಾ ಮತ್ತು ಎಲ್ಲಿಸ್ ಪೆರ್ರಿಗೆ ಜಂಟಿಯಾಗಿ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡರು. ಎರಡನೇ ಪ್ರಶಸ್ತಿಯನ್ನು ಅಸಿಸ್ಟೆಂಟ್ ಹೆಡ್​ಕೋಚ್ ಮಲೋಲನ್ ರಂಗರಾಜನ್ ಮತ್ತು ಮೊದಲ ಪ್ರಶಸ್ತಿಯನ್ನು ಕೋಚ್​​ ಲ್ಯೂಕ್ ವಿಲಿಯಮ್ಸ್ ಅವರು ಗೆದ್ದುಕೊಂಡರು. ಪ್ರಶಸ್ತಿ ವಿಜೇತರನ್ನು ಸ್ಮೃತಿ ಮಂಧಾನ ಅನೌನ್ಸ್ ಮಾಡಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ದಿಶಾ ಕಸತ್, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್, ಸಬ್ಬಿನೇನಿ ಮೇಘನಾ, ಸಿಮ್ರಾನ್ ಬಹದ್ದೂರ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ನಡಿನ್ ಡಿ ಕ್ಲರ್ಕ್ , ಶುಭಾ ಸತೀಶ್, ಇಂದ್ರಾಣಿ ರಾಯ್.