ಜೀವನದಲ್ಲೇ ನನಗೆ ಸಿಕ್ಕ ಅಪರೂಪದ ಅವಕಾಶ: ಬಾಲರಾಮ ಪ್ರಾಣ ಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಜೀವನದಲ್ಲೇ ನನಗೆ ಸಿಕ್ಕ ಅಪರೂಪದ ಅವಕಾಶ: ಬಾಲರಾಮ ಪ್ರಾಣ ಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ

ಜೀವನದಲ್ಲೇ ನನಗೆ ಸಿಕ್ಕ ಅಪರೂಪದ ಅವಕಾಶ: ಬಾಲರಾಮ ಪ್ರಾಣ ಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ

Sachin Tendulkar: ಅಯೋಧ್ಯೆಯ ಪವಿತ್ರ ಸಮಾರಂಭದ ನಂತರ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಐತಿಹಾಸಿಕ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಜೀವನದಲ್ಲೇ ವಿಶೇಷ ಕ್ಷಣ ಎಂದಿದ್ದಾರೆ

ಬಾಲರಾಮನ ಪ್ರಾಣಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ.
ಬಾಲರಾಮನ ಪ್ರಾಣಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ.

ಜನವರಿ 22, 2024ರಂದು ಪವಿತ್ರ ನಗರವಾದ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ಸಂಪನ್ನಗೊಂಡಿತು. ರಾಮಭಕ್ತರ ಶತಮಾನಗಳ ಕಸನು ಸಾಕಾರಗೊಂಡಿದೆ. ರಾಮಭಕ್ತರು ಸಿಹಿ ಹಂಚಿ, ಪಟಾಕಿ ಹಚ್ಚಿ ಸಂಭ್ರಮ ಸಡಗರದಲ್ಲಿ ಮಿಂದೆದ್ದಿದ್ದಾರೆ. ದೇಶ-ವಿದೇಶಗಳಿಂದ ಭಕ್ತರ ದಂಡು ದಂಡೇ ಅಯೋಧ್ಯೆ ಕಡೆ ಹರಿದು ಬಂದಿತ್ತು. ಸಿನಿಮಾ ರಂಗ, ಕ್ರಿಕೆಟಿಗರು ಸೇರಿ ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಸಮಾರಂಭ ಭಾರತದ ಕೆಲವು ದೊಡ್ಡ ವ್ಯಕ್ತಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಭಾಗವಹಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್. ಟೈಮ್ಸ್ ನೌ ಜೊತೆಗಿನ ವಿಶೇಷ ಸಂವಾದದಲ್ಲಿ ಸಚಿನ್ ಅವರು ಪವಿತ್ರ ಸಮಾರಂಭದ ನಂತರ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದೊಂದು ವಿಶೇಷ ಅನುಭೂತಿಯಾಗಿದ್ದು, ಐತಿಹಾಸಿಕ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಜೀವನದಲ್ಲೇ ವಿಶೇಷ ಕ್ಷಣ ಎಂದಿದ್ದಾರೆ.

ರಾಮಮಂದಿರ ನಿರ್ಮಾಣವು ಜಗತ್ತಿನಾದ್ಯಂತ ಲಕ್ಷಾಂತರ ಮತ್ತು ಲಕ್ಷಾಂತರ ಜನರ ಕನಸು ನನಸಾಗಿದೆ ಎಂದು ಹೇಳಿದ ಅವರು, ಎಲ್ಲರೂ ಶ್ರೀರಾಮನ ಆಶೀರ್ವಾದ ಪಡೆಯುವಂತೆ ಕೋರಿದ್ದಾರೆ. ಜೈ ಶ್ರೀ ರಾಮ್. ಇದು ಒಂದು ವಿಶೇಷ ಭಾವನೆ. ನಿಜವಾಗಿಯೂ ಜೀವಮಾನದ ಅವಕಾಶ. ಲಕ್ಷಾಂತರ ಜನರ ಕನಸು ನನಸಾಗಿದೆ. ಎಲ್ಲರೂ ಸಹ ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಪಡೆಯಿರಿ. ಅದಕ್ಕಿಂತ ದೊಡ್ಡದು ಯಾವುದೂ ಇರಲಾರದು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಸೆಹ್ವಾಗ್ ಭಾವುಕ ಪೋಸ್ಟ್

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಸಮಾರಂಭದ ನಂತರ ಭಾವುಕರಾಗಿದ್ದಾರೆ. ಅಯೋಧ್ಯೆಯಲ್ಲಿ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಾನು ಭಾವುಕನಾಗಿದ್ದೇನೆ, ನನಗೆ ಸಂತೋಷವಾಗಿದೆ, ನಾನು ಹೆಮ್ಮೆಪಡುತ್ತೇನೆ, ನಾನು ವಿನಮ್ರನಾಗಿದ್ದೇನೆ. ನಾನು ಸಂತೃಪ್ತನಾಗಿದ್ದೇನೆ, ನಾನು ಮೌನವಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ರಾಮನೊಂದಿಗೆ ಒಬ್ಬನೇ. ಎಲ್ಲರಿಗೂ ನಮಸ್ಕಾರ.. ರಾಮ್ ಲಲ್ಲಾ ಬಂದಿದ್ದಾರೆ. ಇದನ್ನು ಸಾಧ್ಯವಾಗಿಸಿದ ಮತ್ತು ಇದಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಜೈ ಶ್ರೀ ರಾಮ್ ಎಂದು ಸೆಹ್ವಾಗ್ ಪೋಸ್ಟ್ ಮಾಡಿದ್ದಾರೆ. ಇನ್ನು ಸಚಿನ್ ಜೊತೆಗೆ ಹಲವು ಕ್ರೀಡಾಪಟುಗಳು ಈ ವಿಶೇಷ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅನಿಲ್ ಕುಂಬ್ಳೆ, ರವೀಂದ್ರ ಜಡೇಜಾ, ಮಿಥಾಲಿ ರಾಜ್, ಸೈನಾ ನೆಹ್ವಾನ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೈಮುಗಿದು ಶುಭ ಹಾರೈಸಿದ ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ

ಶ್ರೀ ರಾಮ ಮತ್ತು ಆಂಜನೇಯನ ಪರಮ ಭಕ್ತನಾಗಿರುವ ಸ್ಪಿನ್ನರ್ ಕೇಶವ್​ ಮಹಾರಾಜ್ ರಾಮ ಮಂದಿರ ಲೋಕಾರ್ಪಣೆಗೆ ಸೌತ್​ ಆಫ್ರಿಕಾದಿಂದಲೇ ಶುಭ ಹಾರೈಸಿದ್ದಾರೆ. ಸಮಸ್ತ ಹಿಂದೂಗಳಿಗೆ ಒಳಿತನ್ನು ಬಯಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ಸಮುದಾಯಕ್ಕೆ ಶುಭ ಹಾರೈಸುತ್ತೇನೆ. ಎಲ್ಲರಿಗೂ ಶಾಂತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವಂತೆ ಮಾಡಲಿ. ಜೈ ಶ್ರೀ ರಾಮ್ ಎಂದು ಹೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Whats_app_banner