ಕನ್ನಡ ಸುದ್ದಿ  /  Cricket  /  Rohit Sharma Is Almost Set To Take Back Captaincy Of Mumbai Indians From Hardik Pandya Ipl Nita Ambani Jayawardene Prs

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆಯಾಗುತ್ತಾ; ಎಂಐ ಮಾಲೀಕರು, ಜಯವರ್ಧನೆ ಸಭೆ ನಡೆಸಿದ್ದಾರೆ ಎನ್ನಲಾದ ಫೋಟೋ ವೈರಲ್

Rohit Sharma Back to Captaincy : ಕ್ಯಾಪ್ಟನ್ಸಿ ಬದಲಾವಣೆ ಕುರಿತು ಎಂಐ ಮಾಲೀಕರಾದ ನೀತಾ ಅಂಬಾನಿ, ಅವರ ಪುತ್ರ ಆಕಾಶ್ ಅಂಬಾನಿ ಮತ್ತು ಮಹೇಲಾ ಜಯವರ್ಧನೆ ಅವರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾದ ಪೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಎಂಐ ಮಾಲೀಕರು, ಜಯವರ್ಧನೆ ಸಭೆ ನಡೆಸಿದ್ದಾರೆ ಎನ್ನಲಾದ ಫೋಟೋ ವೈರಲ್
ಎಂಐ ಮಾಲೀಕರು, ಜಯವರ್ಧನೆ ಸಭೆ ನಡೆಸಿದ್ದಾರೆ ಎನ್ನಲಾದ ಫೋಟೋ ವೈರಲ್

ಐಪಿಎಲ್​​ಗೂ ಮುನ್ನ ಮತ್ತು ಐಪಿಎಲ್​ ಆರಂಭದಿಂದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ನೂತನ​ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya), ಸಾಕಷ್ಟು ಚರ್ಚೆಯಲ್ಲಿದ್ದಾರೆ. ಹಾರ್ದಿಕ್ ಕ್ಯಾಪ್ಟನ್ಸಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಐಪಿಎಲ್​​ನ ಆರಂಭಿಕ ಎರಡು ಪಂದ್ಯಗಳಲ್ಲಿ ಮುಂಬೈ​ ಹೀನಾಯ ಸೋಲುಂಡ ಕಾರಣ ನಾಯಕತ್ವ ಬದಲಾವಣೆಗೆ ಆಗ್ರಹ ಹೆಚ್ಚಾಗಿದೆ. ಇದರ ನಡುವೆ ಕ್ಯಾಪ್ಟನ್ಸಿ ಬದಲಾವಣೆ ಕುರಿತು ಎಂಐ ಮಾಲೀಕರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾದ ಪೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಮುಂಬೈ ಸೋಲಿಗೆ ಪ್ರಮುಖ ಕಾರಣ ಹಾರ್ದಿಕ್ ಪಾಂಡ್ಯ. ಅತಿಯಾದ ಬುದ್ಧಿವಂತಿಕೆಯಿಂದ ವರ್ತಿಸುವ ಮೂಲಕ ಭಾರಿ ಬೆಲೆ ತೆತ್ತಿದ್ದಾರೆ. ಬೌಲಿಂಗ್ ಆಯ್ಕೆ ವಿಚಾರದಲ್ಲಿ ಜಸ್ಪ್ರೀತ್ ಬುಮ್ರಾಗೆ ಹೊಸ ಚೆಂಡು ನೀಡದಿರುವುದು, ತಾನೇ ಅಥವಾ ಹೊಸಬರಿಗೆ ಹೊಸ ಚೆಂಡು ಬೌಲಿಂಗ್ ಮಾಡಿಸಿರುವುದು, ಬ್ಯಾಟಿಂಗ್​ ಕ್ರಮಾಂಕ ಬದಲಾವಣೆ, ಫೀಲ್ಡಿಂಗ್ ಸೆಟ್ ಮಾಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸಾಕಷ್ಟು ಪ್ರಮಾದ ಎಸಗಿದ್ದಾರೆ.

ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳಿಂದ ಹಾರ್ದಿಕ್​ ಕ್ಯಾಪ್ಟನ್ಸಿಗೆ ಟೀಕೆ ವ್ಯಕ್ತವಾಗಿದೆ. ರೋಹಿತ್​ಗೆ ಮತ್ತೆ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಭಿಮಾನಿಗಳಿಂದ ಮಾತ್ರವಲ್ಲ, ಮಾಜಿ ಕ್ರಿಕೆಟರ್​ಗಳು, ಕ್ರಿಕೆಟ್ ಪಂಡಿತರು, ತಜ್ಞರಿಂದಲೂ ಮುಂಬೈ ಮಾಲೀಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಐದು ಟ್ರೋಫಿ ಗೆದ್ದುಕೊಟ್ಟ ನಾಯಕನಿಗೆ ಅವಮಾನ ಮಾಡಿದ್ದಾರೆ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಟ್ರೋಲ್​ ಜಾತ್ರೆಯೇ ನಡೆಯುತ್ತಿದೆ. ವಿರೋಧ ಹೆಚ್ಚಾದ ಕಾರಣ ಮುಂಬೈ ಮಾಲೀಕರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಮುಂಬೈನಲ್ಲಿ ಮಹತ್ವದ ಸಭೆಯ ಫೋಟೋ ವೈರಲ್

ಮುಂಬೈನಲ್ಲಿ ಎಂಐ ಮಾಲೀಕರಾದ ನೀತು ಅಂಬಾನಿ (Nita Ambani) ಮತ್ತು ಅವರ ಪುತ್ರ ಆಕಾಶ್ ಅಂಬಾನಿ (Akash Ambani) ಹಾಗೂ ಫ್ರಾಂಚೈಸ್‌ನ ಜಾಗತಿಕ ಪ್ರದರ್ಶನದ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಮಹತ್ವದ ಸಭೆ ನಡೆಸಿದ್ದಾರೆ. ಈ ಮೂವರು ಇರುವ ಫೋಟೋ ವೈರಲ್ ಆಗಿದ್ದು, ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈ ನಾಯಕತ್ವವನ್ನು ಮತ್ತೊಮ್ಮೆ ರೋಹಿತ್ ಶರ್ಮಾಗೆ ನೀಡುವ ಕುರಿತು ಮಾತುಕತೆ ನಡೆದಿದೆ. ರೋಹಿತ್ ನಾಯಕತ್ವ ವಹಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎನ್ನಲಾದ ಪೋಸ್ಟ್​ವೊಂದು ವೈರಲ್ ಆಗುತ್ತಿದೆ.

ಎಕ್ಸ್​ ಖಾತೆಯಲ್ಲಿ ರುಷಿ (@rushiii_12) ಎಂಬವರು ಪೋಸ್ಟ್ ಮಾಡಿದ್ದಾರೆ. ಇವರು ತನ್ನ ಬಯೋದಲ್ಲಿ ಕ್ರೀಡಾ ವರದಿಗಾರರೆಂದು ಬರೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಗಮನಿಸಿದರೆ, ಆತನ ಪಕ್ಕಾ ರೋಹಿತ್​ ಶರ್ಮಾ ಅಭಿಮಾನಿ ಎಂಬುದು ತಿಳಿಯುತ್ತದೆ. ಹಾಗಾಗಿ ಸಭೆ ನಡೆಸಿರುವ ಫೋಟೋವನ್ನು ಹಂಚಿಕೊಂಡಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಬರೆದಿದ್ದಾರೆ. ಹಾಗಾಗಿ ಇದು ಸುಳ್ಳು ಸುದ್ದಿ ಎಂದು ತಿಳಿಯುತ್ತಿದೆ. ಫ್ರಾಂಚೈಸಿ ಕಡೆಯಿಂದ ಯಾವುದೇ ಅಧಿಕೃತ ಸುದ್ದಿ ಪ್ರಕಟಗೊಂಡಿಲ್ಲ.

'ಒನ್ ಫ್ಯಾಮಿಲಿ' ಎಂಬ ಟ್ಯಾಗ್ ಲೈನ್ ಹೊಂದಿರುವ ಎಂಐ, ಎರಡು ಬಣಗಳಾಗಿದೆ‌ ಎಂದು ವರದಿಯಾಗಿದೆ. ಐದು ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್​​ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಗುಂಪುಗಳಾಗಿವೆ ಎಂದು ಹಿಂದಿ ಪತ್ರಿಕೆ ದೈನಿಕ್ ಜಾಗರಣ್ ವರದಿ ಮಾಡಿತ್ತು. ರೋಹಿತ್​ ಪರ ಬಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್, ತಿಲಕ್ ವರ್ಮಾ ನಿಂತಿದ್ದರೆ, ಹಾರ್ದಿಕ್ ಪರ ಇಶಾನ್​ ಕಿಶನ್ ಸೇರಿ ಹಲವರು ಬೆಂಬಲ ನೀಡುತ್ತಿದ್ದಾರೆ. ತಂಡವೊಂದು ಇಬ್ಭಾಗಗೊಂಡಿದೆ ಎಂದು ವರದಿಯಾಗಿದೆ. ಆದರೆ ಅಧಿಕೃತವಾಗಿ ಯಾವುದೇ ವಿಷಯ ಬಹಿರಂಗಗೊಂಡಿಲ್ಲ.

IPL_Entry_Point