ನೀನು ಎಂದೆಂದಿಗೂ ನನ್ನ ವಿರಾಟ್ ಭಯ್ಯಾ; ಕೊಹ್ಲಿ ಸ್ಟ್ರೈಕ್ರೇಟ್ ಚರ್ಚೆ ನಡುವೆ ಯುಜ್ವೇಂದ್ರ ಚಹಲ್ ಭಾವನಾತ್ಮಕ ಪೋಸ್ಟ್
Yuzvendra Chahal : ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆ ಯುಜ್ವೇಂದ್ರ ಚಹಲ್ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024) ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ತನ್ನ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ್ದಾರೆ. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಅವರು ತಮ್ಮ 8ನೇ ಐಪಿಎಲ್ ಶತಕ ಗಳಿಸಿ ಹಲವು ದಾಖಲೆ ಬರೆದಿದ್ದಾರೆ. ಅಲ್ಲದೆ, 2024ರ ಐಪಿಎಲ್ನಲ್ಲಿ ಪ್ರಮುಖ ರನ್ ಸ್ಕೋರರ್ ಆಗಿರುವ ಕೊಹ್ಲಿ, ತನ್ನ ಅಜೇಯ 113 ರನ್ಗಳ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳಿದ್ದವು. 156.94ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ.
ವಿರಾಟ್ ಈ ಶತಕವನ್ನು ಸಿಡಿಸಲು 67 ಎಸೆತಗಳನ್ನು ತೆಗೆದುಕೊಂಡ ಕಾರಣ ಕಳಪೆ ದಾಖಲೆಗೆ ಒಳಗಾಗಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿದ್ದಾರೆ. ಆಡಿರುವ ಐದು ಪಂದ್ಯಗಳಲ್ಲಿ 2 ಅರ್ಧಶತಕ, ಶತಕ ಸೇರಿದಂತೆ 316 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೂ ಟಿ20 ವಿಶ್ವಕಪ್ಗೆ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ವಿಶ್ವಕಪ್ಗೆ ಕಡೆಗಣಿಸಲು ಕಾರಣ ಏನೆಂದರೆ ಅವರ ಸ್ಟ್ರೈಕ್ರೇಟ್.
ಮಾಧ್ಯಮ ವರದಿಗಳ ಪ್ರಕಾರ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಆಯ್ಕೆ ಸಮಿತಿಯ ಇತರ ಸದಸ್ಯರು ಕೊಹ್ಲಿಯ ನಿಧಾನಗತಿಯ ಸ್ಟ್ರೈಕ್ ರೇಟ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದುರದೃಷ್ಟವಶಾತ್ ಕೊಹ್ಲಿಗೆ ಈಗಾಗಲೇ ಸಾಕಷ್ಟು ರನ್ ಗಳಿಸಿದ್ದರೂ ಸಮಸ್ಯೆ ಸ್ಟ್ರೈಕ್ರೇಟ್ ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ಯಾಮರೂನ್ ಗ್ರೀನ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಯಾವುದೇ ಮಹತ್ವದ ಕೊಡುಗೆ ನೀಡದ ಕಾರಣ ಕೊಹ್ಲಿ ಏಕಾಂಗಿ ಹೋರಾಟ ನಡೆಸುವಂತಾಗಿದೆ.
ಯುಜ್ವೇಂದ್ರ ಚಹಲ್ ಭಾವನಾತ್ಮಕ ಪೋಸ್ಟ್
ಕೊಹ್ಲಿ ಸ್ಟ್ರೈಕ್ರೇಟ್ ಸುತ್ತಲಿನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿರಾಟ್ ಕೊಹ್ಲಿ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀನು ಎಂದೆಂದಿಗೂ ನನ್ನ ವಿರಾಟ್ ಭಯ್ಯಾ ಎಂದು ಹಂಚಿಕೊಂಡು ಲವ್ ಎಮೋಜಿಗಳನ್ನು ಹಾಕಿದ್ದಾರೆ. ಆರ್ಸಿಬಿ ಜೊತೆ 2014-2021 ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಚಹಲ್, ಕೊಹ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ಇದೇ ಕಾರಣಕ್ಕೆ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ಚಹಲ್ ಹಂಚಿಕೊಂಡಿದ್ದಾರೆ.
ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಎಷ್ಟು ಪಂದ್ಯ ಗೆಲ್ಲಬೇಕು?
ಪ್ರಸ್ತುತ 5ರಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೂ 9 ಪಂದ್ಯಗಳನ್ನು ಆಡಬೇಕಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಆರ್ಸಿಬಿ, ಪ್ಲೇಆಫ್ ಪ್ರವೇಶಿಸಲು ಕನಿಷ್ಠ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಏಕೆಂದರೆ, ಯಾವುದೇ ತಂಡ ಪ್ಲೇಆಫ್ಗೇರಲು ಒಟ್ಟು 16 ಅಂಕ ಗಳಿಸಬೇಕು. ಅಂದರೆ 8 ಪಂದ್ಯಗಳಲ್ಲಿ ಜಯಿಸಬೇಕು. ಈ ಲೆಕ್ಕಾಚಾರ ಹಾಕಿದರೆ, ಆರ್ಸಿಬಿ ಇನ್ನೂ 7ರಲ್ಲಿ ಗೆಲ್ಲಬೇಕು. ಕೇವಲ ಗೆಲ್ಲುವುದಲ್ಲ, ಅದರ ಜೊತೆಗೆ ಭರ್ಜರಿ ನೆಟ್ ರನ್ ರೇಟ್ ಅನ್ನೂ ಕಾಯ್ದುಕೊಳ್ಳಬೇಕಿದೆ.
ಆದರೆ ಆರ್ಸಿಬಿ ಕೇವಲ 8ರಲ್ಲಿ ಗೆದ್ದರೆ ಸಾಲದು. ಉಳಿದ 9ರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದರಷ್ಟೇ ಯಾವುದೇ ಸಮಸ್ಯೆ ಇಲ್ಲದೆ, ನೇರವಾಗಿ ಪ್ಲೇ ಆಫ್ಗೆ ಎಂಟ್ರಿಕೊಡಲಿದೆ. ಆಗ 10 ಗೆಲುವು ಸಾಧಿಸಿದಂತಾಗುತ್ತದೆ. ಇದು ಸಾಧ್ಯವಾಗಲಿಲ್ಲವೆಂದರೂ 9ರ ಪೈಕಿ 8 ರಲ್ಲಾದರೂ ಗೆಲ್ಲಲೇಬೇಕು. ಆಗ 9 ಜಯದೊಂದಿ 18 ಅಂಕ ಪಡೆಯಲಿದೆ. ಪ್ರಸ್ತುತ ಎಲ್ಲಾ ತಂಡಗಳಿಂದ ಉತ್ತಮ ಪ್ರದರ್ಶನ ಹೊರ ಬರುತ್ತಿದ್ದು, ಪಂದ್ಯ ಪಂದ್ಯಕ್ಕೂ ಅನೇಕ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ.