ಬಿಗ್‌ ಬಾಸ್ ಕನ್ನಡ ಸೀಸನ್ 11: ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಜತೆಗೆ ನಟಿ ಐಶ್ವರ್ಯಾ ಸಿಂಧೋಗಿ ಎಂಟ್ರಿ-bigg boss kannada season 11 contestants list chaitra kundapura aishwarya shindogi enters bbk 11 mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್ ಕನ್ನಡ ಸೀಸನ್ 11: ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಜತೆಗೆ ನಟಿ ಐಶ್ವರ್ಯಾ ಸಿಂಧೋಗಿ ಎಂಟ್ರಿ

ಬಿಗ್‌ ಬಾಸ್ ಕನ್ನಡ ಸೀಸನ್ 11: ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಜತೆಗೆ ನಟಿ ಐಶ್ವರ್ಯಾ ಸಿಂಧೋಗಿ ಎಂಟ್ರಿ

Bigg boss Kannada Season 11 contestants List: ನಟಿ ಐಶ್ವರ್ಯಾ ಸಿಂಧೋಗಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ಐಶ್ವರ್ಯಾ ನಟಿಯಾಗಿ ಗುರುತಿಸಿಕೊಂಡು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇತ್ತ ತಮ್ಮ ಪ್ರಖರ ಭಾಷಣದ ಮೂಲಕವೇ ಚೈತ್ರಾ ಸುದ್ದಿಯಾದ ಉದಾಹರಣೆಗಳಿವೆ.

ಬಿಗ್‌ ಬಾಸ್ ಕನ್ನಡ ಸೀಸನ್ 11ಕ್ಕೆ ಆಗಮಿಸಿದ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಮತ್ತು ನಟಿ ಐಶ್ವರ್ಯಾ ಸಿಂಧೋಗಿ
ಬಿಗ್‌ ಬಾಸ್ ಕನ್ನಡ ಸೀಸನ್ 11ಕ್ಕೆ ಆಗಮಿಸಿದ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಮತ್ತು ನಟಿ ಐಶ್ವರ್ಯಾ ಸಿಂಧೋಗಿ

ಚೈತ್ರಾ ಕುಂದಾಪುರ ಮತ್ತು ನಟಿ ಐಶ್ವರ್ಯಾ ಸಿಂಧೋಗಿ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ. 13 ಮತ್ತು 14ನೇ ಸ್ಪರ್ಧಿಯಾಗಿ ಬಿಗ್‌ ಮನೆ ಪ್ರವೇಶಿಸಿದ್ದಾರೆ. ಕಳೆದ ಬಾರಿಯ ಸೀಸನ್‌ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್‌ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಶನಿವಾರ (ಸೆ 28) ಉತ್ತರ ಸಿಕ್ಕಿದೆ. 17 ಮಂದಿ ಸ್ಪರ್ಧಿಗಳ ಪೈಕಿ, ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಿವೀಲ್‌ ಮಾಡಲಾಗಿದೆ. ಆ ಲಿಸ್ಟ್‌ನಲ್ಲಿ ಚೈತ್ರಾ ಕುಂದಾಪುರ ಅವರ ಹೆಸರೂ ಇತ್ತು. ಈಗ ಅತಿ ಹೆಚ್ಚು ಮತಗಳನ್ನು ಪಡೆದು ನರಕದ ಬಾಗಿಲು ತಟ್ಟಿದ್ದಾರೆ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ.

ಚೈತ್ರಾ ಕುಂದಾಪುರ.. ಈ ಹೆಸರು ಕರಾವಳಿ ಭಾಗದವರಿಗೆ ಚೆನ್ನಾಗಿಯೇ ಗೊತ್ತು. ತಮ್ಮ ಖಡಕ್‌ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ತೆಕ್ಕಟ್ಟೆಯಲ್ಲಿ ಪಿಯುಸಿ ಮುಗಿಸಿ, ಕೊಣಾಜೆಯಲ್ಲಿ ಡಿಗ್ರಿ ಮುಗಿಸಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿ ಒಂದಷ್ಟು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದರು. ಅದಾದ ಬಳಿಕ ಉಡುಪಿಯ ಸ್ಪಂದನ ಟಿವಿಯಲ್ಲಿ ನಿರೂಪಕಿಯಾಗಿ, ಉದಯವಾಣಿ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ. ಈಗ ಇದೇ ಮಾತುಗಾರ್ತಿ ಬಿಗ್‌ಬಾಸ್‌ಗೆ ಎಂಟ್ರಿಯಾಗಿದ್ದಾರೆ.

ಐಶ್ವರ್ಯಾ ಸಿಂಧೋಗಿ..

ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ ಐಶ್ವರ್ಯಾ ಸಿಂಧೋಗಿ, ಜೀ ಕನ್ನಡದಲ್ಲಿ ಪ್ರಸಾರ ಕಂಡ ನಾಗಿಣಿ 2 ಮೂಲಕ ಹೆಚ್ಚು ಜನಪ್ರಿಯಗೊಂಡರು. ಅದಾದ ಬಳಿಕ ಸ್ಟಾರ್‌ ಸುವರ್ಣ ವಾಹಿನಿಯಲ್ಲಿನ ನಮ್ಮ ಲಚ್ಚಿ ಸೀರಿಯಲ್‌ನಲ್ಲಿಯೂ ನಟಿಸಿ ಗಮನ ಸೆಳೆದರು. ಮಂಗಳ ಗೌರಿ ಮದುವೆ ಸೀರಿಯಲ್‌ನಲ್ಲಿಯೂ ನಟಿಸಿದ್ದಾರೆ. ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಇದೇ ನಟಿ ಅಪ್ಪ ಅಮ್ಮ ಇಲ್ಲದ ನೋವಿನಲ್ಲಿಯೇ ಬಿಗ್‌ ಮನೆ ಪ್ರವೇಶಿಸಿದ್ದಾರೆ.

ಮನೆ ಪ್ರವೇಶಿಸಿದ 17 ಸ್ಪರ್ಧಿಗಳು

ಮೊದಲ ಸ್ಪರ್ಧಿಯಾಗಿ ಭವ್ಯಾ ಗೌಡ (ಸ್ವರ್ಗ)

ಎರಡನೇ ಸ್ಪರ್ಧಿಯಾಗಿ ಯಮುನಾ ಶ್ರೀನಿಧಿ (ಸ್ವರ್ಗ)

ಮೂರನೇ ಸ್ಪರ್ಧಿಯಾಗಿ ಧನರಾಜ್‌ ಆಚಾರ್ (ಸ್ವರ್ಗ)

‌ನಾಲ್ಕನೇ ಸ್ಪರ್ಧಿಯಾಗಿ ಗೌತಮಿ ಜಾಧವ್‌ (ಸ್ವರ್ಗ)

ಐದನೇ ಸ್ಪರ್ಧಿಯಾಗಿ ಅನುಷಾ ರೈ (ನರಕ)

ಆರನೇ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್‌ (ಸ್ವರ್ಗ)

ಏಳನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌ (ಸ್ವರ್ಗ)

ಎಂಟನೇ ಸ್ಪರ್ಧಿ ತ್ರಿವಿಕ್ರಮ್‌ (ಸ್ವರ್ಗ)

ಒಂಭತ್ತನೇ ಸ್ಪರ್ಧಿ ಶಿಶಿರ್‌ (ನರಕ)

ಹತ್ತನೇ ಸ್ಪರ್ಧಿ ಹಂಸಾ (ಸ್ವರ್ಗ)

ಹನ್ನೊಂದನೇ ಸ್ಪರ್ಧಿ ಮಾನಸಾ (ನರಕ)

ಹನ್ನೆರಡನೇ ಸ್ಪರ್ಧಿ ಗೋಲ್ಡ್‌ ರಾಜು (ನರಕ)

ಹದಿಮೂರನೇ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ

ಹದಿನಾಲ್ಕನೇ ಸ್ವರ್ಧಿ ಚೈತ್ರಾ ಕುಂದಾಪುರ

ಹದಿನೈದನೇ ಸ್ಪರ್ಧಿ ಉಗ್ರಂ ಮಂಜು

ಹದಿನಾರನೇ ಸ್ಪರ್ಧಿ ಮೋಕ್ಷಿತಾ ಪೈ 

ಹದಿನೇಳನೇ ಸ್ಪರ್ಧಿ ರಂಜಿತ್

ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?

ಕಲರ್ಸ್‌ ಕನ್ನಡ ನಡೆಸುತ್ತಿರುವ 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು kannada.hindustantimes.com/topic/bigg-boss-kannada ಜಾಲತಾಣಕ್ಕೆ ಭೇಟಿ ನೀಡಿ.

mysore-dasara_Entry_Point