ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌ ಸೇರಿದಂತೆ ಸೆಲೆಬ್ರಿಟಿಗಳ ಜತೆ ಕ್ರೂಸ್‌ ಹಡಗಿನಲ್ಲಿ ವಿವಾಹಪೂರ್ವ ಪಾರ್ಟಿಗೆ ರಾಧಿಕಾ ಮರ್ಚೆಂಟ್‌ ರೆಡಿ
ಕನ್ನಡ ಸುದ್ದಿ  /  ಮನರಂಜನೆ  /  ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌ ಸೇರಿದಂತೆ ಸೆಲೆಬ್ರಿಟಿಗಳ ಜತೆ ಕ್ರೂಸ್‌ ಹಡಗಿನಲ್ಲಿ ವಿವಾಹಪೂರ್ವ ಪಾರ್ಟಿಗೆ ರಾಧಿಕಾ ಮರ್ಚೆಂಟ್‌ ರೆಡಿ

ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌ ಸೇರಿದಂತೆ ಸೆಲೆಬ್ರಿಟಿಗಳ ಜತೆ ಕ್ರೂಸ್‌ ಹಡಗಿನಲ್ಲಿ ವಿವಾಹಪೂರ್ವ ಪಾರ್ಟಿಗೆ ರಾಧಿಕಾ ಮರ್ಚೆಂಟ್‌ ರೆಡಿ

Radhika Merchant cruise party: ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಯುರೋಪ್‌ ಕ್ರೂಸ್‌ ಪಾರ್ಟಿಯು ಸೆಲೆಬ್ರಿಟಿಗಳ ಜತೆ ನಡೆಯಲಿದೆ. ಈ ಪಾರ್ಟಿಯಲ್ಲಿ ಭಾಗವಹಿಸಲು ರಾಧಿಕಾ ಮರ್ಚೆಂಟ್‌, ರಣವೀರ್ ಸಿಂಗ್, ಸಲ್ಮಾನ್ ಖಾನ್, ಎಂಎಸ್ ಧೋನಿ ಎಲ್ಲರೂ ಸೋಮವಾರ ಬೆಳಿಗ್ಗೆ ಕಲಿನಾ ವಿಮಾನ ನಿಲ್ದಾಣದಲ್ಲಿದ್ದರು.

ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌ ಸೇರಿದಂತೆ ಸೆಲೆಬ್ರಿಟಿಗಳ ಜತೆ ಕ್ರೂಸ್‌ ಹಡಗಿನಲ್ಲಿ ವಿವಾಹಪೂರ್ವ ಪಾರ್ಟಿಗೆ ರಾಧಿಕಾ ಮರ್ಚೆಂಟ್‌ ರೆಡಿ
ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌ ಸೇರಿದಂತೆ ಸೆಲೆಬ್ರಿಟಿಗಳ ಜತೆ ಕ್ರೂಸ್‌ ಹಡಗಿನಲ್ಲಿ ವಿವಾಹಪೂರ್ವ ಪಾರ್ಟಿಗೆ ರಾಧಿಕಾ ಮರ್ಚೆಂಟ್‌ ರೆಡಿ

ಬೆಂಗಳೂರು: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಮದುವೆಗೆ ಮೊದಲು ಮತ್ತೊಂದು ಪಾರ್ಟಿ ನಡೆಯಲಿದೆ. ಈಗಾಗಲೇ ಪ್ರೀವೆಡ್ಡಿಂಗ್‌ ಕಾರ್ಯಕ್ರಮವೊಂದು ನಡೆದಿದೆ. ಇನ್ನೊಂದು ಪ್ರೀವೆಡ್ಡಿಂಗ್‌ ಪಾರ್ಟಿಯು ವಿಲಾಸಿ ಕ್ರೂಸ್‌ ಹಡಗಿನಲ್ಲಿ ನಡೆಯಲಿದೆ. ಈ ದಂಪತಿ ಸೆಲೆಬ್ರಿಟಿ ಸ್ನೇಹಿತರ ಜತೆ ಇಟಲಿಯಿಂದ ಫ್ರಾನ್ಸ್‌ಗೆ ಕ್ರೂಸ್‌ ಹಡಗಿನಲ್ಲಿ ಮಸ್ತಿ ಮಾಡುತ್ತ ಪ್ರಯಾಣ ಮಾಡಲಿದ್ದಾರೆ. ಈ ಪಾರ್ಟಿಯಲ್ಲಿ ಭಾಗಿಯಾಗುವ ಸಲುವಾಗಿ ಸೋಮವಾರ ಬೆಳಿಗ್ಗೆ ರಾಧಿಕಾ ಮುಂಬೈನ ಕಲಿನಾ ವಿಮಾನ ನಿಲ್ದಾಣದಿಂದ ಇಟಲಿಗೆ ವಿಮಾನದಲ್ಲಿ ಹೋಗಲು ಆಗಮಿಸಿದ್ದಾರೆ.

ಇಟಲಿಗೆ ಸೆಲೆಬ್ರಿಟಿಗಳ ಯಾನ

ಬೆಳ್ಳಂಬೆಳಗ್ಗೆ ನಿದ್ದೆಯ ಮಂಪರಿನಲ್ಲೇ ರಾಧಿಕಾ ಮರ್ಚೆಂಟ್‌ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಕಾರಿನಲ್ಲಿದ್ದ ಈಕೆ ಬಿಳಿ ಟೀ ಶರ್ಟ್‌ ಧರಿಸಿರುವುದ್ದರು. ಇದೇ ವಿಮಾನ ನಿಲ್ದಾಣದಲ್ಲಿ ಬಾಲಿವುಡ್‌ ನಟರಾದ ರಣವೀರ್ ಸಿಂಗ್, ಸಲ್ಮಾನ್ ಖಾನ್ ಮತ್ತು ಕ್ರಿಕೆಟಿಗ ಎಂ.ಎಸ್.ಧೋನಿ ಕೂಡ ಇದ್ದರು. ರಣವೀರ್‌ ತನ್ನ ಪತ್ನಿ ದೀಪಿಕಾ ಪಡುಕೋಣೆಯ ಜತೆ ಈ ಪಾರ್ಟಿಗೆ ಹೋಗಿಲ್ಲ. ಅವರೊಬ್ಬರೇ ವಿಮಾನ ನಿಲ್ದಾಣದಲ್ಲಿ ಕಾಣಿಸಿದ್ದಾರೆ. ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಈ ಪಾರ್ಟಿಗೆ ಆಗಮಿಸುವ ಸಾಧ್ಯತೆಯಿಲ್ಲ.

ಅಂಬಾನಿ ಮಗನ ಮದುವೆಯ ಪ್ರೀವೆಡ್ಡಿಂಗ್‌ ಕ್ರೂಸ್‌ ಪಾರ್ಟಿಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೂಡ ಹೊರಟಿದ್ದಾರೆ. ಕಳೆದ ತಿಂಗಳು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ನಂತರ ಭಾರಿ ಭದ್ರತೆಯನ್ನು ಒದಗಿಸಲಾಗಿತ್ತು. ಧೋನಿ ಅವರೊಂದಿಗೆ ಅವರ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಕೂಡ ವಿಮಾನ ನಿಲ್ದಾಣದಲ್ಲಿದ್ದರು.

ಇದಕ್ಕೂ ಮುನ್ನ ಸೋಮವಾರ ಬೆಳಿಗ್ಗೆ, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅವರ ಮಗಳು ರಾಹಾ ಕೂಡ ಕ್ರೂಸ್‌ ಪಾರ್ಟಿಗಾಗಿ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ. ರಾಧಿಕಾ ಮರ್ಚೆಂಟ್ ಎನ್ಕೋರ್ ಹೆಲ್ತ್‌ಕೇರ್‌ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ವೀರೇನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಪುತ್ರಿ. ಆನಂದ್ ಮತ್ತು ರಾಧಿಕಾ ಮಾರ್ಚ್ 1 ರಿಂದ 3 ರವರೆಗೆ ಗುಜರಾತ್‌ನ ಜಾಮ್ನನಗರದಲ್ಲಿ ಅದ್ದೂರಿ ಪ್ರೀವೆಡ್ಡಿಂಗ್‌ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಇತರ ಶತಕೋಟ್ಯಾಧಿಪತಿಗಳು, ಚಲನಚಿತ್ರ ತಾರೆಯರು, ಕ್ರಿಕೆಟಿಗರು ಮತ್ತು ಅಂತರರಾಷ್ಟ್ರೀಯ ಪಾಪ್ ಐಕಾನ್‌ಗಳು ಭಾಗವಹಿಸಿದ್ದರು.

ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌,ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅತಿಥಿಗಳಾಗಿ ಆಗಮಿಸಿದ್ದರು. ಗಾಯಕಿ ರಿಹಾನ್ನಾ ಕೂಡ ಈ ಪಾರ್ಟಿಗೆ ಬಂದಿದ್ದರು. ದಿಲ್ಜಿತ್ ದೋಸಾಂಜ್ ಅತಿಥಿಗಳನ್ನು 2 ನೇ ದಿನ ಮೋಡಿ ಮಾಡಿದರೆ, ಎಕಾನ್ 3 ನೇ ದಿನದ ಪಾರ್ಟಿಗೆ ಮೆರುಗು ತಂದರು.

ರಾಧಿಕಾ ಮರ್ಚೆಂಟ್‌ ಮದುವೆ ಯಾವಾಗ?

ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್, ಎಂಎಸ್ ಧೋನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನಂತ್ ಮತ್ತು ರಾಧಿಕಾ ಜುಲೈನಲ್ಲಿ ಮದುವೆಯಾಗಲು ಸಜ್ಜಾಗಿದ್ದಾರೆ.

Whats_app_banner