Entertainment News in Kannada Live September 29, 2024: ಬಿಗ್ ಬಾಸ್ ಕನ್ನಡ ಸೀಸನ್ 11: ನಾನು ಉತ್ತರ ಕರ್ನಾಟಕದ ಮಣ್ಣಿನ ಮಗ; ಕೆಜಿಗಟ್ಟಲೆ ಚಿನ್ನ ಧರಿಸಿ ನರಕಕ್ಕೆ ಕಾಲಿಟ್ಟ ಗೋಲ್ಡ್ ಸುರೇಶ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 29 Sep 202404:24 PM IST
- Bigg boss Kannada Season 11 contestants List: ಬಿಗ್‌ಬಾಸ್ ಕನ್ನಡ ಸೀಸನ್ 11ರ 12ನೇ ಸ್ಪರ್ಧಿಯಾಗಿ ಸಿವಿಲ್ ಕಾಂಟ್ರ್ಯಾಕ್ಟರ್ ಗೋಲ್ಡ್ ಸುರೇಶ್ ಬಿಗ್ ಮನೆ ಪ್ರವೇಶಿಸಿದ್ದಾರೆ. ನಟನೆಯ ಯಾವುದೇ ಹಿನ್ನೆಲೆ ಇಲ್ಲದ ಇವರು ಉತ್ತರ ಕರ್ನಾಟಕದ ಬೆಳಗಾವಿ ಮೂಲದವರು. ಬಿಗ್ ಬಾಸ್ ಮನೆಯಲ್ಲಿ ನರಕದ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
Sun, 29 Sep 202404:23 PM IST
- Bigg boss Kannada Season 11 contestants List: ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಜಿ ಪಾತ್ರಧಾರಿ ಹಂಸ ನಾರಾಯಣ ಸ್ವಾಮಿ ಮತ್ತು ತುಕಾಲಿ ಸಂತೋಷ್ ಅವರ ಹೆಂಡತಿ ಮಾನಸಾ ಸಂತೋಷ್ ಈ ಸಲದ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.
Sun, 29 Sep 202403:31 PM IST
- Bigg boss Kannada Season 11 contestants List: ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ. ಶಿಶಿರ್ ಎಂಟನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ ಮತ್ತೊಬ್ಬ ನಟ ತ್ರಿವಿಕ್ರಮ್ ಒಂಬತ್ತನೇ ಕಂಟೆಸ್ಟೆಂಟ್ ಆಗಿ ಮನೆಗೆ ಪ್ರವೇಶಿಸಿದ್ದಾರೆ.
Sun, 29 Sep 202402:56 PM IST
- Bigg boss Kannada Season 11 contestants List: ಕಾಂಟ್ರವರ್ಸಿ ಹೇಳಿಕೆಯಿಂದಲೇ ಸುದ್ದಿಯಾದ ನ್ಯಾಯವಾದಿ ಕೆ.ಎನ್. ಜಗದೀಶ್ ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ್ರ ಯುವತಿ ಪರ ವಕಾಲತ್ತು ವಹಿಸಿದ್ದ ಜಗದೀಶ್, ಇದೀಗ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಆಗಮಿಸಿದ್ದಾರೆ.
Sun, 29 Sep 202402:29 PM IST
- Bigg boss Kannada Season 11 contestants List: ನಟಿ ಅನುಷಾ ರೈ ಅವರು ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ನಟಿಯಾಗಿ ಗುರುತಿಸಿಕೊಂಡಿರುವ ಅವರು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಅವರ ಪಟಾಕಿ ಪೋರಿಯೋ ಹಾಡಿಗೆ ಹೆಜ್ಜೆ ಹಾಕಿ ಬಿಗ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
Sun, 29 Sep 202402:27 PM IST
- Bigg boss Kannada Season 11 contestants List: ಚಿತ್ರನಟ ಧರ್ಮ ಕೀರ್ತಿರಾಜ್ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ ಧರ್ಮ, ಹಿರಿಯ ನಟ ಕೀರ್ತಿರಾಜ್ ಅವರ ಪುತ್ರ. ಬಿಗ್ ಬಾಸ್ ಮನೆಯಲ್ಲಿ ಅವರು ಸ್ವರ್ಗಕ್ಕೆ ಎಂಟ್ರಿ ಪಡೆದಿದ್ದಾರೆ.
Sun, 29 Sep 202401:50 PM IST
- Bigg boss Kannada Season 11 contestants List: ಸತ್ಯ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಗೌತಮಿ ಜಾಧವ್ ಬಿಗ್‌ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿದ್ದಾರೆ. ಕಿರುತೆರೆ ನಟಿಯಾಗಿ ಜನಪ್ರಿಯರಾಗಿರುವ ಅವರು ದೊಡ್ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
Sun, 29 Sep 202401:33 PM IST
- Bigg boss Kannada Season 11 contestants List: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ ಅವರು ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಸದ್ದು ಮಾಡಿ, ಗಿಚ್ಚಿ ಗಿಲಿಗಿಲಿ ಸೀಸನ್ 2ರಿಂದ ಸಾಕಷ್ಟು ಜನಪ್ರಿಯತೆ ಗಳಿಸಿದವರು.
Sun, 29 Sep 202401:07 PM IST
- Bigg boss Kannada Season 11 contestants List: ನಟಿ ಯಮುನಾ ಶ್ರೀನಿಧಿ ಅವರು ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಎಂಟ್ರಿ ಪಡೆದಿದ್ದಾರೆ. ಕಿರಿತೆರೆ ಮತ್ತು ಸ್ಯಾಂಡಲ್‌ವುಡ್ ನಟಿಯಾಗಿರುವ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದವರು. ಬಿಗ್ ಬಾಸ್ ಈ ಬಾರಿ ಪರಿಚಯಿಸಿದ್ದ ಸ್ವರ್ಗ-ನರಕ ಪರಿಕಲ್ಪನೆ ಈಗಾಗಲೇ ವೀಕ್ಷಕರ ಗಮನ ಸೆಳೆದಿದೆ.
Sun, 29 Sep 202412:55 PM IST
- Bigg boss Kannada Season 11 contestants List: ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಅವರು ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ಕಿರುತೆರೆ ನಟಿಯಾಗಿರುವ ಆಗಿರುವ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದವರು. ಬಿಗ್ ಬಾಸ್ ಈ ಬಾರಿ ಪರಿಚಯಿಸಿದ್ದ ಸ್ವರ್ಗ-ನರಕ ಪರಿಕಲ್ಪನೆ ಈಗಾಗಲೇ ವೀಕ್ಷಕರ ಗಮನ ಸೆಳೆದಿದೆ.
Sun, 29 Sep 202410:17 AM IST
- ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದ ಶೂಟಿಂಗ್ ಮುಗಿದಿದೆ. ಶಿವರಾಜ್‌ಕುಮಾರ್, ಉಪೇಂದ್ರ ಜತೆಗೆ ರಾಜ್ ಬಿ ಶೆಟ್ಟಿ ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿದ್ದಾರೆ.
Sun, 29 Sep 202407:43 AM IST
ಮದುವೆ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಮಲಯಾಳಂ ನಟಿ ಮೀರಾ ಜಾಸ್ಮಿನ್ ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೀರಾ ನಟಿಸಿರುವ ಕಾಮಿಡಿ ಸಿನಿಮಾ ಪಾಲುಂ ಪಳವುಂ ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಮಾ ಆಗಸ್ಟ್‌ನಲ್ಲಿ ತೆರೆ ಕಂಡಿತ್ತು.
Sun, 29 Sep 202406:34 AM IST
ದೇವರ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿತ್ತು. ಎರಡನೇ ದಿನ ಕಲೆಕ್ಷನ್ ಸ್ವಲ್ಪ ಇಳಿಕೆ ಆಗಿದೆ. 2ನೇ ದಿನ ಬಾಕ್ಸ್ ಆಫೀಸಿನಲ್ಲಿ 100 ಕೋಟಿ ರೂ ಕಲೆಕ್ಷನ್ ಮಾಡಿದೆ. 300 ಕೋಟಿ ರೂ. ಬಂಡವಾಳದಲ್ಲಿ ತಯಾರಾದ ಸಿನಿಮಾ ಹಾಕಿದ ಬಂಡವಾಳ ತೆಗೆಯಲು ಇನ್ನು 2 ದಿನಗಳು ಕಾಯಬೇಕಿದೆ.
Sun, 29 Sep 202403:41 AM IST
ಬಿಗ್ ಬಾಸ್ ಕನ್ನಡ 11 ರ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಅವರನ್ನು ಅನೌನ್ಸ್ ಮಾಡಲಾಗಿದೆ. ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಜಿಗಟ್ಟಲೆ ಬಂಗಾರವನ್ನು ಮೈ ತುಂಬಾ ಧರಿಸುವ ಇವರು ಸಾಕು ನಾಯಿಗೂ ಚಿನ್ನದ ಸರ ಹಾಕಿದ್ದಾರೆ. ಈ ವಿಡಿಯೋವನ್ನು ಸುರೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Sun, 29 Sep 202402:27 AM IST
ಸತ್ಯ ಧಾರಾವಾಹಿ ಮೂಲಕ ಫ್ಯಾನ್ ಫಾಲೋಯಿಂಗ್ ಗಳಿಸಿರುವ ನಟಿ ಗೌತಮಿ ಜಾಧವ್, ಬಿಗ್ ಬಾಸ್ ಸೀಸನ್ 11ರ ಮೊದಲ ಕಂಟೆಸ್ಟಂಟ್ ಆಗಿ ಆಯ್ಕೆ ಆಗಿದ್ದಾರೆ. ಈ ಚೆಲುವೆ ಖ್ಯಾತ ಪತ್ರಕರ್ತ ಗಣೇಸ ಕಾಸರಗೋಡು ಅವರ ಸೊಸೆ. ಮರಾಠಿ , ಗೌತಮಿ ಮಾತೃಭಾಷೆ. ಇಷ್ಟದ ಸ್ಥಳ ಮಂಗಳೂರು. ಸ್ವಲ್ಪ ಸಮಯ ದೊರೆತರೂ ಸಾಕು ಮಂಗಳೂರಿಗೆ ತೆರಳಿ ಅಲ್ಲಿನ ಪರಿಸರವನ್ನು ಎಂಜಾಯ್ ಮಾಡ್ತಾರಂತೆ.
Sun, 29 Sep 202412:58 AM IST
ಶನಿವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ರಾಜಾ ರಾಣಿ ರೀ ಲೋಡೆಡ್ ಕಾರ್ಯಕ್ರಮದಲ್ಲಿ ಸಂಜಯ್ ಹಾಗೂ ಮೇಘಾ ದಂಪತಿ ಈ ಬಾರಿಯ ವಿನ್ನರ್ ಆಗಿದ್ದಾರೆ. ಗೆದ್ದ ಜೋಡಿಗೆ 5 ಲಕ್ಷ ರೂ. ನಗದು ಹಣ ದೊರೆತಿದೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.