Seetha Rama Serial: ಕಣ್ಣೆದುರೇ ಇದೆ ಸಿಹಿ ಸತ್ಯ; ಸೀತಾ ಭಯಕ್ಕೂ, ಮೇಘಶ್ಯಾಮನ ಬಯಕೆಗೂ ಕಾರಣ ಒಂದೇ!-kannada television news seetha rama serial latest episode meghashyam and shalini came to ramas house mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಕಣ್ಣೆದುರೇ ಇದೆ ಸಿಹಿ ಸತ್ಯ; ಸೀತಾ ಭಯಕ್ಕೂ, ಮೇಘಶ್ಯಾಮನ ಬಯಕೆಗೂ ಕಾರಣ ಒಂದೇ!

Seetha Rama Serial: ಕಣ್ಣೆದುರೇ ಇದೆ ಸಿಹಿ ಸತ್ಯ; ಸೀತಾ ಭಯಕ್ಕೂ, ಮೇಘಶ್ಯಾಮನ ಬಯಕೆಗೂ ಕಾರಣ ಒಂದೇ!

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಸಿಹಿ ಜನ್ಮ ರಹಸ್ಯ ವೀಕ್ಷಕರಿಗೆ ಕುತೂಹಲ ಮೂಡಿಸಿದೆ. ಸಿಹಿ ಮೇಘಶ್ಯಾಮನ ಮಗಳೇ ಎಂಬ ವಿಚಾರ ಸೀತಾಗೆ ಗೊತ್ತಾಗಿದೆ. ಇತ್ತ ರಾಮನ ಮನೆಗೆ ಶ್ಯಾಮ್‌ ದಂಪತಿಯ ಆಗಮನವೂ ಆಗಿದೆ.

ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿ (Image\ Zee5)

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಸಿಹಿ ಹುಟ್ಟಿನ ರಹಸ್ಯವೇ ದೊಡ್ಡ ಸಂಚಿಕೆಯ ರೂಪ ಪಡೆದುಕೊಳ್ಳುತ್ತಿದೆ. ದಿನೇ ದಿನೆ ಸಿಹಿ ಜನ್ಮ ರಹಸ್ಯ ನೋಡುಗರಿಗೆ ಕುತೂಹಲ ಮೂಡಿಸುತ್ತಿದೆ. ಇಲ್ಲಿಯವರೆಗೂ ಎದುರಾಗದ ಒಂದಷ್ಟು ಟ್ವಿಸ್ಟ್‌ಗಳು ವೀಕ್ಷಕರ ಕಣ್ಣರಳಿಸುವಂತೆ ಮಾಡಿವೆ. ಸಿಹಿ ಸೀತಾ ಮಗಳಾದರೂ, ಆಕೆ ಬಾಡಿಗೆ ತಾಯಿ ಎಂಬುದು ಗೊತ್ತಾಗಿದೆ. ಇದರ ನಡುವೆ ಅದೇ ಸಿಹಿಯ ನಿಜವಾದ ತಂದೆ ಮತ್ತು ತಾಯಿಯೂ ಪ್ರತ್ಯಕ್ಷರಾಗಿದ್ದಾರೆ. ಸಿಹಿಯ ನಿಜವಾದ ಅಪ್ಪ ಅಮ್ಮ ಯಾರೆಂದು ಸೀತಾಗೆ ಗೊತ್ತಿದ್ದರೂ, ಆಕೆ ಸಿಹಿಯನ್ನು ಬಿಟ್ಟುಕೊಡಲು ಸಿದ್ಧಳಿಲ್ಲ.

ಸೀತಾ ಎದುರು ಮೇಘಶ್ಯಾಮನ ಸ್ಥಿತಿ ವಿವರಿಸಿದ್ದಾನೆ ರಾಮ. ಸರೋಗಸಿ ಮೂಲಕ ಮಗುವನ್ನು ಮಾಡಿಕೊಂಡು, ಇದೀಗ ಆ ಮಗು ಬೇಕೆಂದು ಶ್ಯಾಮ್‌ ಪಟ್ಟು ಹಿಡಿದಿದ್ದನ್ನು ಸೀತಾಳ ಮುಂದೆ ರಾಮ್‌ ಹೇಳಿಕೊಂಡಿದ್ದಾನೆ. ಆದರೆ, ಸಿಹಿ ಕಣ್ಣ ಮುಂದಿದ್ದರೂ ಇದು ನನ್ನ ಮಗಳು ಎಂಬ ಸಣ್ಣ ಅನುಮಾನ ಶ್ಯಾಮ್‌ಗೆ ಬರುತ್ತಿಲ್ಲ. ಆದರೆ, ಅಲ್ಲೇ ಇದ್ದ ಸೀತಾಗೆ ಇದೆಲ್ಲವೂ ತಿಳಿದಿದೆ. ಮನದಲ್ಲಿಯೇ ನೋವು ಉಣ್ಣುತ್ತಿದ್ದಾಳೆ ಸೀತಾ. ಈ ನಡುವೆ ಇದೇ ರಾಮನ ಮನೆಗೆ ಶ್ಯಾಮ್‌ ಮತ್ತು ಶಾಲಿನಿ ದಂಪತಿ ಆಗಮಿಸಿದೆ.

ರಾಮ್‌ ಮನೆಗೆ ಶ್ಯಾಮ್‌ ಆಗಮನ

ದೇಸಾಯಿ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಜೋರಾಗಿದೆ. ಹೀಗಿರುವಾಗಲೇ ಶ್ಯಾಮ್‌ ಮತ್ತು ಶಾಲಿನಿ ಜೋಡಿ ರಾಮ್‌ ಮನೆಗೆ ಆಗಮಿಸಿದೆ. ಗೇಟ್‌ ಬಳಿ ಬಂದ ಶ್ಯಾಮ್‌ಗೆ ಸಿಹಿಯಿಂದ ಅಪ್ಪುಗೆಯ ಸ್ವಾಗತ ಸಿಕ್ಕಿದೆ. ನಿಮ್ಮನ್ನು ತುಂಬ ಮಿಸ್‌ ಮಾಡಿಕೊಳ್ತಿದ್ದೇನೆ ಎಂದಿದ್ದಾಳೆ. ಸಿಹಿಯ ಈ ಮಾತಿಗೆ ಮೇಘಶ್ಯಾಮನೂ ಸಹ ನಾನೂ ನಿಮ್ಮನ್ನು ಮಿಸ್‌ ಮಾಡಿಕೊಳ್ತಿದ್ದೇನೆ ಎಂದಿದ್ದಾನೆ. ಅದಾದ ಮೇಲೆ ಎಲ್ಲಿ ನಿಮ್ಮ ಮಗು ಎಂದು ಸಿಹಿ ಡಾಕ್ಟರ್‌ ಅಂಕಲ್‌ನ ಕೇಳುತ್ತಿದ್ದಂತೆ, ನೀನೇ ಇದ್ಧೀಯಲ್ಲ, ನೀನೇ ನನ್ನ ಮಗಳು ಎಂದಿದ್ದಾನೆ ಶ್ಯಾಮ್.‌ ಅಷ್ಟೊತ್ತಿಗೆ ಅಲ್ಲೇ ಇದ್ದ ಸೀತಾಳ ಮನಸು ಕದಲಿದೆ. ಕೊಂಚ ಆತಂಕಕ್ಕೆ ಒಳಗಾಗಿದ್ದಾಳೆ.

ಭಾರ್ಗವಿ ತಂತ್ರ ಸೀತಾಳ ಗಮನಕ್ಕೆ

ಇನ್ನೊಂದು ಕಡೆ ಸೀತಾಳ ನಿಜ ಸತ್ಯವನ್ನು ಬಯಲು ಮಾಡಲು ಭಾರ್ಗವಿ ರುದ್ರಪ್ರತಾಪ್‌ನ ಜತೆ ನಿಂತಿದ್ದಾಳೆ. ಡಾ. ಅನಂತಲಕ್ಷ್ಮೀಯ ಪೂರ್ವಾಪರ ತಿಳಿದುಕೊಂಡು, ಆಕೆಯನ್ನು ತನ್ನ ಹಿಡಿತಕ್ಕೆ ಪಡೆದು, ಸೀತಾಳ ನಿಜ ಬಣ್ಣ ಬಯಲು ಮಾಡುವುದು ಭಾರ್ಗವಿ ಪ್ಲಾನ್. ಇನ್ನೊಂದು ಕಡೆ, ಇದೇ ಭಾರ್ಗವಿಯ ಇನ್ನೊಂದು ಮುಖ ಸೀತಾಗೆ ಗೊತ್ತಾಗಿದೆ. ಮಗು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರ್ಗವಿಯ ನಿಲುವು ಕೊಂಚ ಅನುಮಾನ ತರಿಸಿದೆ. ಇದೆಲ್ಲದರ ನಡುವೆ ಮೇಘಶ್ಯಾಮ್‌ನ ಮಗುವನ್ನು ಆತನಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾನೆ ರಾಮ್.‌

ಸೀತಾಳ ಮುಂದಿನ ನಡೆ ಏನು?

ಇತ್ತ ಸಿಹಿಯನ್ನು ನಾನು ಬಿಟ್ಟುಕೊಡಬೇಕಾ? ಸಿಹಿಯ ನಿಜವಾದ ಅಪ್ಪ ಅಮ್ಮ ಬಂದರೆ ಅವಳು ನನ್ನನ್ನು ಬಿಟ್ಟು ದೂರವಾಗಿ ಬಿಡ್ತಾಳಾ? ಅನ್ನೋ ಪ್ರಶ್ನೆ, ದುಗುಡ ಸೀತಾಳ ಮನಸ್ಸಿನಲ್ಲಿದೆ. ಯಾರೇ ಏನೇ ಅಂದರೂ, ಯಾರೇ ಎದುರಾದರೂ ನಾನು ಸಿಹಿಯನ್ನು ಬಿಟ್ಟುಕೊಡಲ್ಲ. ಇವಳು ನನ್ನ ಸಿಹಿ. ಏನೇ ಆದ್ರೂ ನಮ್ಮ ಬದುಕು ಛಿದ್ರ ಆಗೋಕೆ ನಾನು ಬಿಡಲ್ಲ. ಏನೇ ಆದರೂ ನಾನೇ ಕಾಪಾಡಿಕೊಳ್ಳುತ್ತೇನೆ. ನಿಮ್ಮಿಬ್ಬರನ್ನು ನಾನು ಯಾವತ್ತೂ ದೂರ ಮಾಡಿಕೊಳ್ಳಲ್ಲ ಎಂದಿದ್ದಾಳೆ ಸೀತಾ. ಒಟ್ಟಿನಲ್ಲಿ ಸೀತಾ ಶತಾಯ ಗತಾಯ ಸಿಹಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

 

mysore-dasara_Entry_Point