Chandramukhi 2 Review: ಆಪ್ತರಕ್ಷಕದ ಹೊಸ ಅವತಾರ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸುವ ಚಿತ್ರ; ಚಂದ್ರಮುಖಿ 2 ಕುರಿತು ಪ್ರೇಕ್ಷಕರ ಅಭಿಪ್ರಾಯ
Chandramukhi 2 Movie Twitter Review: ಚಂದ್ರಮುಖಿ 2 ಸಿನಿಮಾ ಫಸ್ಟ್ ಶೋ ನೋಡುತ್ತಿರುವ ಪ್ರೇಕ್ಷಕರು ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚಂದ್ರಮುಖಿ 2 ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ? ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆ ಹೇಗಿದೆ? ತಿಳಿದುಕೊಳ್ಳೋಣ ಬನ್ನಿ.
ಬೆಂಗಳೂರು (Chandramukhi 2 Twitter Review): ಇಂದು ತಮಿಳು, ತೆಲುಗು ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಹುನಿರೀಕ್ಷಿತ ಚಂದ್ರಮುಖಿ 2 ಸಿನಿಮಾವು ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ನಟನೆಯ ಈ ಚಿತ್ರವು ಹಲವು ಕಾರಣಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಂದ್ರಮುಖಿಯ ಮೊದಲ ಭಾಗದಲ್ಲಿ ರಜನಿಕಾಂತ್ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು. ಇದೀಗ ಅವರ ಬದಲು ರಾಘವ ಲಾರೆನ್ಸ್ ಅವರು ಚಂದ್ರಮುಖಿ 2ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪಿ. ವಾಸು ನಿರ್ದೇಶನದ ಚಂದ್ರಮುಖಿ 2 ಚಿತ್ರದ ಕುರಿತು ಪ್ರೇಕ್ಷಕರ ಅಭಿಪ್ರಾಯ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಚಂದ್ರಮುಖಿ 2 ಚಿತ್ರವು ಕನ್ನಡದ ಆಪ್ತರಕ್ಷಕ ಸಿನಿಮಾದ ಕಥೆ ಹೊಂದಿದೆ. ಆಪ್ತ ರಕ್ಷಕ ಸಿನಿಮಾವನ್ನು ಪಿ. ವಾಸು ನಿರ್ದೇಶಿಸಿದ್ದರು. ಡಾ. ವಿಷ್ಣುವರ್ಧನ್ ನಟನೆಯ ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು. ಇದೀಗ ಚಂದ್ರಮುಖಿ 2 ಸಿನಿಮಾವನ್ನು ಪಿ. ವಾಸು ನಿರ್ದೇಶಿಸಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ನಮ್ಮ ಮೈಸೂರಿನಲ್ಲಿಯೇ ಆಗಿದೆ. ರಾಘವ ಲಾರೆನ್ಸ್ ಅವರು ಚಂದ್ರಮುಖಿ 2 ಬಿಡುಗಡೆಗೆ ಮುನ್ನ ತಮ್ಮ ಗುರು ರಜನಿಕಾಂತ್ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ರಾಘವೇಂದ್ರ ಸ್ವಾಮಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ.
ಚಂದ್ರಮುಖಿ 2 ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕಂಗನಾ ರಣಾವತ್ ಚಿತ್ರವಾಗಿರುವುದರಿಂದ ಹಿಂದಿ ಭಾಷೆಯಲ್ಲಿ ಹೆಚ್ಚು ಥಿಯೇಟರ್‌ಗಳು ಬುಕ್ ಆಗಿವೆ ಎಂಬ ಸುದ್ದಿಯಿದೆ. ಇದೇ ಸಮಯದಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಸಾಕಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸ್ಕಂದ ಮತ್ತು ಚಂದ್ರಮುಖಿ 2 ಚಿತ್ರವು ಥಿಯೇಟರ್‌ಗಳಲ್ಲಿ ಸ್ಪರ್ಧೆ ನಡೆಸಲಿದೆ. ಕನ್ನಡಿಗರಿಗೆ ಖುಷಿಯ ವಿಚಾರವೇನೆಂದರೆ ಗೋಲ್ಡನ್ ಸ್ಟಾರ್ ನಟನೆಯ ಬಾನ ದಾರಿಯಲ್ಲಿ ಚಿತ್ರವು ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಸಕಾರಾತ್ಮಕ ವಿಮರ್ಶೆಗಳು ಕೇಳಿಬರುತ್ತಿವೆ.
ಚಂದ್ರಮುಖಿ 2 ಟ್ವಿಟ್ಟರ್ ವಿಮರ್ಶೆ
ಬಹುತೇಕ ಪ್ರೇಕ್ಷಕರು ಇಂದು ಚಂದ್ರಮುಖಿ 2 ಸಿನಿಮಾದ ಫಸ್ಟ್ ಶೋಗೆ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಚಿತ್ರದ ಕುರಿತು ಪ್ರೇಕ್ಷಕರ ಅಭಿಪ್ರಾಯಗಳು (chandramukhi 2 review and rating) ಏನೆಲ್ಲ ಇವೆ ಎಂದು ತಿಳಿಯಲು ಈ ಲಿಂಕ್ ನೋಡ್ತಾ ಇರಿ. ಸ್ಟೇ ಟ್ಯೂನ್ಡ್.
ಮ್ಯೂಸಿಕ್ ಮೈನ್ಸಸ್ ಪಾಯಿಂಟ್: ಚಂದ್ರಮುಖಿ 2 ಚಿತ್ರದಲ್ಲಿ ಮ್ಯೂಸಿಕ್ ಮೈನಸ್ ಪಾಯಿಂಟ್. ಏನೂ ಚೆನ್ನಾಗಿಲ್ಲ. ಯಾವುದೇ ಹಾಡು ನೆನಪಿನಲ್ಲಿ ಉಳಿಯುವಂತೆ, ಕೇಳುವಂತೆ ಇಲ್ಲ. ಕನ್ನಡದಲ್ಲಿ ಬಿಡುಗಡೆಯಾಗಿದ್ದಾಗ ರಾರಾ ಮ್ಯೂಸಿಕೇ ಅದ್ಭುತವಾಗಿತ್ತು. ಈಗ ಬಿಡುಗಡೆಯಾದ ಚಂದ್ರಮುಖಿ 2ನಲ್ಲಿ ಸಂಗೀತವೇ ಹಿನ್ನೆಡೆಯಾಗಿದೆ ಎಂದು ಗೋಪಿ ಟ್ರೋಲ್ ಪೇಜ್ ವಿಮರ್ಶೆ ಮಾಡಿದೆ.
ಮೊದಲಾರ್ಧ ನೀರಸ
ಚಿತ್ರದ ಮೊದಲಾರ್ಧ ನೀರಸವಾಗಿದೆ. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮಾತ್ರ ಅತ್ಯುತ್ತಮ ಎಂದು ಜಿಎಸ್‌ಎಲ್ ಎಂಬವರು ಟ್ವೀಟ್ ಮಾಡಿದ್ದಾರೆ.
ಚಂದ್ರಮುಖಿ 2 ಸೀಕ್ವೆಲ್ ಬ್ಲಾಕ್‌ಬಸ್ಟರ್ ಎಂದು ರಿವ್ಯೂ ರಾಕೆಟ್ ಟ್ವೀಟ್ ಮಾಡಿದೆ. ಮೊದಲ ಶೋ ಆರಂಭವಾಗಿದೆ, ನೋಡಲು ಸಂತೋಷವಾಗುತ್ತಿದೆ. ಶೀಘ್ರದಲ್ಲಿ ಸಿನಿಮಾ ಹೇಗಿದೆ ಅಂತೀವಿ ಎಂದು ಹಲವು ಜನರು ಟ್ವೀಟ್ ಮಾಡುತ್ತಿದ್ದಾರೆ.
ಭಯ ಹುಟ್ಟಿಸುತ್ತಿದೆ ಸಿನಿಮಾದ ದೃಶ್ಯಗಳು. ಮುಂದಿನ ದೃಶ್ಯಗಳಿಗೆ ಕಾತರದಿಂದ ಕಾಯುತ್ತಿದ್ದೇವೆ ಎಂದು ಪರವನಿಸಮ್ ಎಂಬವರು ಟ್ವೀಟ್ ಮಾಡಿದ್ದಾರೆ. ಇದು ಕನ್ನಡದ ಆಪ್ತರಕ್ಷಕದ ಹೊಸ ಅವತಾರದ ಸಿನಿಮಾವಾಗಿದೆ. ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸುವ ಸಿನಿಮಾ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಭಯ ಹುಟ್ಟಿಸುವ ಸಿನಿಮಾ
"ಚಂದ್ರಮುಖಿ ನಿಮಗೆ ಬೆನ್ನುಮೂಳೆ ಚುರುಕ್ ಎನಿಸುವಷ್ಟು ಭಯ ನೀಡಲಿದೆ. ಚಂದ್ರಮುಖಿ ಮತ್ತು ವೆಟ್ಟಿಯಾನ್ ನಡುವಿನ ಮಹಾಕಾವ್ಯದ ಮುಖಾಮುಖಿಯನ್ನು ತಪ್ಪಿಸಿಕೊಳ್ಳಬೇಡಿ ಇದು ಪರಿಪೂರ್ಣ ಕೌಟುಂಬಿಕ ಮನರಂಜನೆ ಚಿತ್ರ. ಸ್ನೇಹಿತರು ಕುಟುಂಬದ ಜತೆ ಈ ಸಿನಿಮಾ ನೋಡಿ" ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಸುದ್ದಿ ಅಪ್‌ಡೇಟ್ ಆಗುತ್ತಿದೆ.