ಕನ್ನಡ ಸುದ್ದಿ  /  Entertainment  /  Sandalwood News Yuva Rajkumar Starrer Yuva Movie First Song Will Be Released On March 2 In Chamarajanagar Mnk

Yuva: ತಾತನ ತವರು ಜಿಲ್ಲೆಯಲ್ಲಿ ಮೊಮ್ಮಗನ ಸಂಭ್ರಮ; ಚಾಮರಾಜನಗರದಲ್ಲಿ ಒಬ್ಬನೇ ಶಿವ ಒಬ್ಬನೇ ಯುವ ಹಾಡು ಬಿಡುಗಡೆ

ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿ ಮಗ ಯುವ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮೊದಲು ಚಾಮರಾಜನಗರದಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ಯುವ ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ.

Yuva: ತಾತನ ತವರು ಜಿಲ್ಲೆಯಲ್ಲಿ ಮೊಮ್ಮಗನ ಸಂಭ್ರಮ; ಚಾಮರಾಜನಗರದಲ್ಲಿ ಒಬ್ಬನೇ ಶಿವ ಒಬ್ಬನೇ ಯುವ ಹಾಡು ಬಿಡುಗಡೆ
Yuva: ತಾತನ ತವರು ಜಿಲ್ಲೆಯಲ್ಲಿ ಮೊಮ್ಮಗನ ಸಂಭ್ರಮ; ಚಾಮರಾಜನಗರದಲ್ಲಿ ಒಬ್ಬನೇ ಶಿವ ಒಬ್ಬನೇ ಯುವ ಹಾಡು ಬಿಡುಗಡೆ

Yuva First Single: ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿಮಗ ಯುವ ರಾಜ್‌ಕುಮಾರ್‌ (Yuva Rajkumar) ಚೊಚ್ಚಲ ಸಿನಿಮಾ ಯುವ (Yuva Movie) ಸಿನಿಮಾ, ಪ್ರಚಾರ ಕಣಕ್ಕಿಳಿದಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಯುವ ಸಿನಿಮಾ ತಂಡದಿಂದ ಗಾನಬಜಾನ ಕೇಳಿಸಲಿದೆ. ಅಂದರೆ, ಚಿತ್ರದ ಮೊದಲ ಹಾಡಿನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ವಿಶೇಷ ಏನೆಂದರೆ, ರಾಜ್‌ ಕುಟುಂಬದ ತವರು ಜಿಲ್ಲೆ ಚಾಮರಾಜನಗರದಲ್ಲಿ (Chamarajnagara) ಮಾ. 2ರಂದು ಒಬ್ಬನೇ ಶಿವ ಒಬ್ಬನೇ ಯುವ ಹಾಡು ರಿಲೀಸ್‌ ಆಗಲಿದೆ.

ಈ ಸಲದ ಮಾರ್ಚ್‌ ತಿಂಗಳು ಡಾ. ರಾಜ್‌ ಕುಟುಂಬಕ್ಕೆ ಮತ್ತು ಫ್ಯಾಮಿಲಿಗೆ ತುಂಬ ವಿಶೇಷವಾದದ್ದು. ಕಾರಣ, ಈ ತಿಂಗಳು ರಾಜ್‌ ಕುಟುಂಬದಿಂದ ಸಾಕಷ್ಟು ಸಿನಿ ಅಪ್‌ಡೇಟ್‌ಗಳು ಸಿಗಲಿವೆ. ಆ ಪೈಕಿ ನಾಳೆ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಮೊದಲ ಹಾಡು ಹೊರಬಂದರೆ, ದೊಡ್ಡಪ್ಪ ಶಿವರಾಜ್‌ಕುಮಾರ್‌ ಅಭಿನಯದ ಕರಟಕ ದಮನಕ ಸಿನಿಮಾ ಸಹ ಇದೇ 8ರಂದು ರಿಲೀಸ್‌ ಆಗಲಿದೆ. ಇದೇ 17 ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇಗೂ ತಯಾರಿ ಶುರುವಾಗಿದೆ. ಹಾಗಾಗಿ ಈ ಸಲದ ಮಾರ್ಚ್‌ ಫ್ಯಾನ್ಸ್‌ಗೆ ಭರ್ಜರಿಯಾಗಿಯೇ ಇರಲಿದೆ.

ಚಾಮರಾಜನಗರದಲ್ಲಿ ಅದ್ಧೂರಿ ಕಾರ್ಯಕ್ರಮ

ಸದ್ಯ ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮದ ಜತೆಗೆ ಯುವ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ. ಈ ವರೆಗೂ ಯುವ ಸಿನಿಮಾದಿಂದ ಸಣ್ಣ ಸುಳಿವೂ ಹೊರಬಿದ್ದಿರಲಿಲ್ಲ. ಇದೀಗ ಬಿಡುಗಡೆ ಸನಿಹ ಬರುತ್ತಿದ್ದಂತೆ, ಹಾಡನ್ನು ಪ್ರೇಕ್ಷಕನ ಎದೆಗಿಳಿಸಲು ಚಿತ್ರತಂಡ ಪ್ಲಾನ್‌ ಮಾಡಿದೆ. ಬೃಹತ್‌ ವೇದಿಕೆ ಮೇಲೆ ಹಾಡು, ನೃತ್ಯದ ಮೂಲಕ ಚಿತ್ರದ ಕಲಾವಿದರು ಗಮನ ಸೆಳೆಯಲಿದ್ದಾರೆ.

ಮಾರ್ಚ್‌ 28ಕ್ಕೆ ರಿಲೀಸ್

ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಯುವ. ಈಗಾಗಲೇ ಹಲವು ವಿಶೇಷತೆಗಳಿಂದಲೂ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಘೋಷಣೆ ಆದಾಗಿನಿಂದಲೂ ಸುದ್ದಿಯಲ್ಲಿರುವ ಈ ಸಿನಿಮಾ ಇತ್ತೀಚೆಗಷ್ಟೇ ಶೂಟಿಂಗ್‌ ಮುಗಿಸಿಕೊಂಡಿತ್ತು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲೂ ಬಿಜಿಯಾಗಿರುವ ಈ ಸಿನಿಮಾ, ಈಗಾಗಲೇ ರಿಲೀಸ್‌ ದಿನಾಂಕವನ್ನೂ ಘೋಷಣೆ ಮಾಡಿದೆ. ಮಾರ್ಚ್ 28ರಿಂದ ಕರುನಾಡಿನ ಮುಂದೆ ಯುವ ಪರ್ವ ಆರಂಭವಾಗಲಿದೆ.

ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ

ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ವ್ಯಾಪಾರ ಎಷ್ಟು ಕೋಟಿಗೆ ಆಗಿದೆ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ಆದರೆ ಗಾಂಧಿನಗರದಲ್ಲಿ ಮಾತ್ರ ಮೂರು ಕೋಟಿಗೆ ಚಿತ್ರದ ಹಾಡುಗಳು ಬಿಕರಿಯಾಗಿವೆ ಎಂಬ ವಿಚಾರ ಓಡಾಡುತ್ತಿದೆ. ದಶಕಗಳಿಂದ ಸೂಪರ್ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ನಾಯಕರ ಸಿನಿಮಾದ ಹಾಡುಗಳೇ 2 ಕೋಟಿ ಗಡಿ ದಾಟುವುದು ಅಪರೂಪ. ಅಂತಹದರಲ್ಲಿ ಯುವ ರಾಜ್‌ಕುಮಾರ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ದಾಖಲೆಯೇ ಸರಿ.

ರಾಜಕುಮಾರ ಸೇರಿ ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ ನಿರ್ದೇಶಕ ಸಂತೋಷ್ ಆನಂದ್‌ ರಾಮ್‌ ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯುವರತ್ನ, ರಾಘವೇಂದ್ರ ಸ್ಟೋರ್ಸ್‌ ಬಳಿಕ ಯುವ ಚಿತ್ರಕ್ಕೂ ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ , ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಯುವ ಜೊತೆಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಆನಂದ್ ಆಡಿಯೋ, ಯುವ ರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾದ ಯುವ ಚಿತ್ರದ ಹಾಡುಗಳನ್ನು ಖರೀಸಿದೆ. ಈ ಮೂಲಕ ಇನ್ನೇನು ಶೀಘ್ರದಲ್ಲಿ ಕರುನಾಡಿನೆಲ್ಲೆಡೆ ಯುವ ಚಿತ್ರದ ಹಾಡುಗಳ ದಿಬ್ಬಣ ಹೊರಡಲಿದೆ.

IPL_Entry_Point