ಕನ್ನಡ ಸುದ್ದಿ  /  Karnataka  /  Belagavi News Accident On Belagavi District Mugalkod Cross 6 People Dead Including Students Kub

Belagavi Accident: ಬೆಳಗಾವಿಯಲ್ಲಿ ಮತ್ತೊಂದು ಅಪಘಾತ, ಒಂದೇ ಕುಟುಂಬದ ಮೂವರು ಸೇರಿ 6 ಮಂದಿ ದುರ್ಮರಣ

ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ಅಪಘಾತ ಸಂಘವಿಸಿ ಆರು ಮಂದಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು
ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಗುರುವಾರವಷ್ಟೇ ಭೀಕರ ಅಪಘಾತ ನಡೆದು ಆರು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಶುಕ್ರವಾರ ಮತ್ತೊಂದು ಅಪಘಾತ ಸಂಘವಿಸಿದೆ. ಇದರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಜಾಂಬೋಟಿಯಿಂದ ಜತ್‌ಗೆ ಹೋಗುವ ಮಾರ್ಗದ ಮುಗಳಖೋಡ ಕ್ರಾಸ್‌ ಬಳಿ ಜೀಪ್‌ ಹಾಗೂ ಬೈಕ್‌ ನಡುವೆ ದುರಂತ ನಡೆದು ವಿದ್ಯಾರ್ಥಿಗಳೂ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ಏಕನಾಥ ಭೀಮಪ್ಪ ಪಡತರಿ, ಮೂಡಲಗಿ ತಾಲ್ಲೂಕು ಹರ್ಲಾಪುರದ ಮಲ್ಲಿಕಾರ್ಜುನ ಮರಾಠೆ, ಗುರ್ಲಾಪುರದ ಆಕಾಶ್‌ ರಾಮಪ್ಪ ಮರಾಠೆ, ಗುರ್ಲಾಪುರದ ಲಕ್ಷ್ಮಿ ರಾಮಪ್ಪ ಮರಾಠೆ, ಮುಗಳಖೋಡದ ನಾಗಪ್ಪ ಲಕ್ಷ್ಮಣ ಯಾದಣ್ಣವರ, ದುರದುಂಡಿ ಗ್ರಾಮದ ಹನಮಂತ ಮಾಲಪ್ಪ ಮಲ್ಯಾಗೋಳ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಗೋಕಾಕದ ಬಾಲಾನಂದ ಪರಸಪ್ಪ ಮಳಗಿ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಗೋಕಾಕದ ಬಾಲಾನಂದ ಪರಸಪ್ಪ ಮಳಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಮುಗಳಖೋಡ ಕ್ರಾಸ್‌ ದಾಟಿ ಬರುವಾಗ ಬೈಕ್‌ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದವರು ಮೃತಪಟ್ಟರೆ, ನಂತರ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದ ವಿಷಯ ತಿಳಿದು ಹಾರೋಗೇರಿ ಠಾಣಾ ಪೊಲೀಸರು ಕೂಡಲೇ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಕಾರಿನ ಒಳಗೆ ಸಿಲುಕಿದ್ದ ದೇಹಗಳನ್ನು ಹೊರ ತೆಗೆಯಲು ಸ್ಥಳೀಯರು ಸಹಕರಿಸಿದರು.

ಅಣ್ಣ ತಮ್ಮ ಹಾಗೂ ಸಹೋದರಿ ಸೇರಿದಂತೆ ಒಂದೇ ಕುಟುಂಬದವರು ಕಾರಿನಲ್ಲಿ ಬರುವಾಗ ದುರಂತ ನಡೆದಿದ್ದು, ಜನರ ವಿಷಯ ತಿಳಿದು ಮಮ್ಮಲ ಮರುಗಿದರು. ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮತ್ತೊಂದು ಅಪಘಾತ

ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಮೂರನೇ ಅಪಘಾತದಲ್ಲಿ ಶುಕ್ರವಾರ ಮೂವರು ಅಸು ನೀಗಿದ್ದಾರೆ. ಎರಡು ಕಾರುಗಳ ನಡುವೆ ಯರಗಟ್ಟಿ ತಾಲ್ಲೂಕಿನ ಕುರುಬಗಟ್ಟಿ ಬಳಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಮೃತರ ವಿವರ ಲಭ್ಯವಾಗಿಲ್ಲ.

ಎರಡು ದಿನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೂರು ಅಪಘಾತದಲ್ಲಿ 16 ಮಂದಿ ಮೃತಪಟ್ಟಂತಾಗಿದೆ.