ಜಲ ಬಿಕ್ಕಟ್ಟು; ಬೆಂಗಳೂರಲ್ಲಿ ಮನೆ ಖರೀದಿಸ್ತೀರಾ ಎಂದು ಈ ಡಾಕ್ಟರ್ ಕೊಟ್ಟ ಸಲಹೆ ವೈರಲ್‌ ಆಯ್ತು, ಏನಿದೆ ಅಂಥದ್ದು ಅದರಲ್ಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಜಲ ಬಿಕ್ಕಟ್ಟು; ಬೆಂಗಳೂರಲ್ಲಿ ಮನೆ ಖರೀದಿಸ್ತೀರಾ ಎಂದು ಈ ಡಾಕ್ಟರ್ ಕೊಟ್ಟ ಸಲಹೆ ವೈರಲ್‌ ಆಯ್ತು, ಏನಿದೆ ಅಂಥದ್ದು ಅದರಲ್ಲಿ

ಜಲ ಬಿಕ್ಕಟ್ಟು; ಬೆಂಗಳೂರಲ್ಲಿ ಮನೆ ಖರೀದಿಸ್ತೀರಾ ಎಂದು ಈ ಡಾಕ್ಟರ್ ಕೊಟ್ಟ ಸಲಹೆ ವೈರಲ್‌ ಆಯ್ತು, ಏನಿದೆ ಅಂಥದ್ದು ಅದರಲ್ಲಿ

ಬೆಂಗಳೂರು ಜಲ ಬಿಕ್ಕಟ್ಟು: ರಾಜ್ಯ ರಾಜಧಾನಿಯಲ್ಲಿ ದಿನಬಳಕೆ ನೀರು ಕೊರತೆ ಉಂಟಾಗಿದ್ದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ, ಮನೆ ಖರೀದಿದಾರರು ಬಿಲ್ಡರ್ ಅಥವಾ ಬಿಬಿಎಂಪಿ ಜೊತೆ 99 ವರ್ಷಕ್ಕೆ ನೀರು ಪೂರೈಕೆ ಕರಾರು ಮಾಡಿಕೊಳ್ಳಿ ಎಂದು ಡಾಕ್ಟರ್ ಒಬ್ಬರು ಕೊಟ್ಟ ಸಲಹೆ ವೈರಲ್ ಆಗಿದೆ. ಅದರಲ್ಲೇನಿದೆ…

ಬೆಂಗಳೂರು ಜಲ ಬಿಕ್ಕಟ್ಟು: ಬೆಂಗಳೂರಲ್ಲಿ ಮನೆ ಖರೀದಿ ಮಾಡ್ತೀರಾ ಎನ್ನುತ್ತ ನೀರು ಕೊರತೆ ಎದುರಿಸಲು ವೈರಲ್‌ ಸಲಹೆ ನೀಡಿದ ಡಾಕ್ಟರ್‌ ದೀಪಕ್ ಕೃಷ್ಣ ಮೂರ್ತಿ (ಬಲಚಿತ್ರ). ಮತ್ತೊಂದು ಚಿತ್ರ (ಎಡಭಾಗದ್ದು) ಸಾಂಕೇತಿಕ.
ಬೆಂಗಳೂರು ಜಲ ಬಿಕ್ಕಟ್ಟು: ಬೆಂಗಳೂರಲ್ಲಿ ಮನೆ ಖರೀದಿ ಮಾಡ್ತೀರಾ ಎನ್ನುತ್ತ ನೀರು ಕೊರತೆ ಎದುರಿಸಲು ವೈರಲ್‌ ಸಲಹೆ ನೀಡಿದ ಡಾಕ್ಟರ್‌ ದೀಪಕ್ ಕೃಷ್ಣ ಮೂರ್ತಿ (ಬಲಚಿತ್ರ). ಮತ್ತೊಂದು ಚಿತ್ರ (ಎಡಭಾಗದ್ದು) ಸಾಂಕೇತಿಕ.

ಬೆಂಗಳೂರು: ಬೇಸಿಗೆ ಬರುವ ಮೊದಲೇ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನೇದಿನೆ ತೀವ್ರಗೊಳ್ಳುತ್ತಿದೆ. ನೀರು ಪೂರೈಕೆ ವಿಚಾರದಲ್ಲಿಸ್ಥಳೀಯಾಡಳಿತ ವಿಫಲವಾಗಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಹಿರಿಯ ವೈದ್ಯರೊಬ್ಬರು, “ಬೆಂಗಳೂರಲ್ಲಿ ಮನೆ ಖರೀದಿಸ್ತೀರಾ…” ಎನ್ನುತ್ತಸೋಷಿಯಲ್ ಮೀಡಿಯಾದಲ್ಲಿ ನೀಡಿದ ಸಲಹೆ ವೈರಲ್ ಆಗಿದೆ.

ಬೆಂಗಳೂರಲ್ಲಿ ಮನೆ ಖರೀದಿಸುವುದಾದರೆ ಮುಂದಿನ 99 ವರ್ಷಕ್ಕೆ ನೀರು ಪೂರೈಕೆ ಖಾತರಿಮಾಡಿಕೊಳ್ಳಬೇಕು. ಅದಕ್ಕಾಗಿ ಬಿಲ್ಡರ್ ಅಥವಾ ಬಿಬಿಎಂಪಿ ಜತೆಗೆಕರಾರು ಮಾಡಿಕೊಳ್ಳಬೇಕಾದ್ದು ಅನಿವಾರ್ಯ ಎಂಬುದು ಡಾಕ್ಟರ್ ಕೊಟ್ಟ ಸಲಹೆಯ ಸಾರ.

ಮಾರತ್ತಹಳ್ಳಿ ಕಾವೇರಿ ಹಾಸ್ಪಿಟಲ್‌ನಲ್ಲಿ ಸೀನಿಯರ್ ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ದೀಪಕ್ ಕೃಷ್ಣಮೂರ್ತಿಅವರು ಮಾಡಿದ ಟ್ವೀಟ್ ವೈರಲ್ ಆಗಿರುವಂಥದ್ದು.

ಬೆಂಗಳೂರಲ್ಲಿ ಮನೆ ಖರೀದಿಸ್ತೀರಾ ಎನ್ನುತ್ತ ಡಾಕ್ಟರ್ ಕೊಟ್ಟ ಸಲಹೆ ಇದು

“ಬೆಂಗಳೂರಿನಲ್ಲಿ ಮನೆ ಖರೀದಿಸುವವರು ಬಿಲ್ಡರ್ / ಬಿಬಿಎಂಪಿಯೊಂದಿಗೆ ನೀರಿನ ಒಪ್ಪಂದಕ್ಕೆ ಒತ್ತಾಯಿಸಬೇಕು. ಯಾವುದೇ ಸಮಯದಲ್ಲಿ, ಬಿಲ್ಡರ್/ಬಿಬಿಎಂಪಿ ಮುಂದಿನ 99 ವರ್ಷಗಳವರೆಗೆ ನೀರು ಪೂರೈಸಬೇಕು. ಇಲ್ಲದಿದ್ದರೆ, ದುಬಾರಿ ಮನೆಗಳನ್ನು ಖರೀದಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಡಾ ದೀಪಕ್ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.

ಇದಲ್ಲದೆ, ಈಗಾಗಲೇ ಮನೆ ಖರೀದಿ ಮಾಡಿರುವವರುಸರ್ಕಾರ ಸಾಕಷ್ಟು ನೀರು ಪೂರೈಸದೇ ಇದ್ದರೆಆಸ್ತಿ ತೆರಿಗೆ ಪಾವತಿಸಬೇಕಾದ್ದು ಇಲ್ಲ ಎಂದೂ ಟ್ವೀಟ್‌ನಲ್ಲಿಸೇರಿಸಿದ್ದಾರೆ.

ಅವರ ಈ ಟ್ವೀಟ್ ವೈರಲ್ ಆಗಿದ್ದು ಈಗಾಗಲೇ 58ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 110 ಕ್ಕೂ ಪ್ರತಿಕ್ರಿಯೆಗಳನ್ನೂ ಪಡೆದಕೊಂಡಿದೆ. ಬೆಂಗಳೂರು ಜಲ ಬಿಕ್ಕಟ್ಟು ಎಲ್ಲರನ್ನೂ ಕಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ಧಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೇಗಿದೆ ಪ್ರತಿಕ್ರಿಯೆ

ಬಹುತೇಕ ಜನ ಈ ಕೆಲಸ ಮಾಡುವುದಿಲ್ಲ. ಬಳಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದೇ ರೀತಿ, ಬಿಲ್ಡರ್‌ಗಳು ನಿರಂತರ ನೀರು ಪೂರೈಕೆ ಇದೆ ಎಂಬಿತ್ಯಾದಿಯಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಬೆಂಗಳೂರಿನ ಉದ್ದಗಲಕ್ಕೂ ಟ್ಯಾಂಕರ್ ನೀರು ಬುಕ್ ಆಗ್ತಾ ಇರೋದು ನೋಡಿದರೆ ಕ್ರೇಝಿ ಅನ್ನಿಸುತ್ತಿದೆ ಎಂದು ವಿಶಾಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದು ಅದ್ಭುತವಾದ ಕಲ್ಪನೆ. ಆದರೆ ಬಿಲ್ಡರ್ ಅಂತಹ ಒಪ್ಪಂದಗಳಿಗೆ ಸಹಿಹಾಕಿದ ಉದಾಹರಣೆಗಳಿಲ್ಲ. ಆದಾಗ್ಯೂ ಅಂತಹ ಒಪ್ಪಂದಗಳು ಕೆಲವು ಬದ್ಧತೆಗಳನ್ನು ಕಾಯಂಗೊಳಿಸುತ್ತವೆ. ರೇರಾ ಇದನ್ನು ಗಮನಿಸಿ, ಸೂಕ್ತ ನಿಯಮಗಳನ್ನು ರೂಪಿಸುವುದಕ್ಕೆ ಅವಕಾಶ ಇದೆ. ನೀರು ಬಹಳ ನಿರ್ಣಾಯಕವಾದುದು ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ ರಾವ್ ಟ್ವೀಟ್ ಮಾಡಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ 1,000 ಯೂನಿಟ್‌ಗಳಿಗಿಂತ ಹೆಚ್ಚು ಇದ್ದರೆ ಫ್ಲಾಟ್‌ಗಳನ್ನು ಖರೀದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಸಂಪನ್ಮೂಲಗಳ ದೊಡ್ಡ ಕೊರತೆ ಇದ್ದೇ ಇರುತ್ತದೆ. ಬಿಲ್ಡರ್ ಇತ್ತೀಚೆಗೆ 3,000 ಯೂನಿಟ್‌ಗಳ ಸಮುದಾಯವನ್ನು ಪೋಸ್ಟ್ ಮಾಡಿದ್ದಾರೆ, ಈ ಅನೇಕ ಜನರಿಗೆ ನೀವು ಹೇಗೆ ನೀರು ಸರಬರಾಜು ಮಾಡುತ್ತೀರಿ ಎಂದರೆ ಅದಕ್ಕೆ ಅವರ ಬಳಿ ಉತ್ತರ ಇದೆಯಾದರೂ, ಅದು ಕಾರ್ಯಸಾಧು ಎಂದೆನಿಸುವುದಿಲ್ಲ ಎಂದು ಗಣೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಲ್ಲಿ ಟ್ಯಾಂಕರ್ ನೀರು ದರ 3,000 ರೂಪಾಯಿ ಸಮೀಪ

ಬೆಂಗಳೂರು ಅಪಾರ್ಟ್‌ಮೆಂಟ್ಸ್‌ ಫೆಡರೇಷನ್‌ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಅಂತರ್ಜಲ ಮಟ್ಟ ಕುಸಿದಿದೆಯೋ ಅಲ್ಲಿ, 1,000 ಲೀಟರ್ ನೀರಿನ ದರ ಈಗಾಗಲೇ 238 ರೂಪಾಯಿ ದಾಟಿದೆ. ಇದರ ಅರ್ಥ ಇಷ್ಟೆ- 12,000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ನ ದರ ಈ ಹಿಂದೆ 1,500 ರೂಪಾಯಿ ಇದ್ದುದು ಈಗ ಹೆಚ್ಚು ಕಡಿಮೆ 2,850 ರೂಪಾಯಿ ತಲುಪಿದೆ. ಅಂದರೆ ಒಟ್ಟಾರೆಯಾಗಿ ನೀರಿನ ದರ 3,000 ರೂಪಾಯಿ ಆಸುಪಾಸಿನಲ್ಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner