Viral Video; ಬಾಡು ಉಣ್ಣದ ಡಾಕ್ಟರ್ ಬಾಡೂಟದ ಬಗ್ಗೆ ಹೇಳಿದ್ರು, ವೀಕ್ಷಕರಿಂದ ಮೆಚ್ಚುಗೆಯ ಸುರಿಮಳೆ- ವೈರಲ್ ವಿಡಿಯೋ
Viral News; ನಾನ್ ವೆಜ್ ಒಳ್ಳೇದು. ಅನಾದಿ ಕಾಲದಿಂದ ತಿಂದುಕೊಂಡು ಬಂದಿದ್ದಾರೆ. ಆಯ್ತಾ? ಇನ್ನು ಇವಾಗ ತಿಂದ್ರೆ ಏನಾಗ್ಬಿಡ್ತದೆ, ಪ್ರಾಬ್ಲೆಂ ಏನ್ ಗೊತ್ತಾ? ಎಂದು ಬಾಡು ಉಣ್ಣದ ಡಾಕ್ಟರ್ ಬಾಡೂಟದ ಬಗ್ಗೆ ಹೇಳಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಬಾಡು ಉಣ್ಣದ ಡಾಕ್ಟರ್ ಒಬ್ಬರು ಬಾಡೂಟದ ಬಗ್ಗೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಪ್ರದೀಪ ಮೈಸೂರು ಕನ್ನಡಿಗ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲಿ ಈ ವಿಡಿಯೋಗೆ ಅವರು ಬಾಡೇ ನಮ್ಮ ಗಾಡು ಎಂಬ ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದರು.
ಈ ಟ್ವೀಟನ್ನು ರವಿ-Ravi ಆಲದಮರ ಅವರು “ಬಾಡು ತಿನ್ನದ ಡಾಕ್ಟರ್, ಬಾಡು ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ.” ಎಂಬ ಮರು ಟ್ವೀಟ್ ಮಾಡಿದ್ದಾರೆ. ಈ ಎರಡೂ ಟ್ವೀಟ್‌ಗಳನ್ನು ಬಹಳ ಮೆಚ್ಚಿಕೊಂಡಿದ್ದು, ಅನೇಕರು ರೀಟ್ವೀಟ್ ಮಾಡಿದ್ದಾರೆ.
ಬಾಡು ಉಣ್ಣದ ಡಾಕ್ಟರ್ ಹೇಳಿರುವುದೇನು?
ವಿಡಿಯೋ ಶುರುವಾಗುತ್ತಲೇ, "ನಾನ್ ವೆಜ್ ಒಳ್ಳೇದು. ಅನಾದಿ ಕಾಲದಿಂದ ತಿಂದುಕೊಂಡು ಬಂದಿದ್ದಾರೆ. ಆಯ್ತಾ? ಇನ್ನು ಇವಾಗ ತಿಂದ್ರೆ ಏನಾಗ್ಬಿಡ್ತದೆ, ಪ್ರಾಬ್ಲೆಂ ಏನ್ ಗೊತ್ತಾ? - ಹೆಂಗೆ ಬೇಯಿಸ್ತಾರೆ ಅನ್ನೋದು ಬಹಳ ಮುಖ್ಯ. ಗೊತ್ತಾಯ್ತಾ? ಎಂದು ಡಾಕ್ಟರ್ ಮಾತು ಶುರುಮಾಡ್ತಾರೆ.
ಮಾತು ಮುಂದುವರಿಸುತ್ತ, ಈಗ ನೋಡಿ ಈಗ ಸೌತ್ ಕೊರಿಯಾ, ಥೈಲ್ಯಾಂಡ್ ವಿಯೆಟ್ನಾಂ ಇವರೆಲ್ಲ ದಿನ ದಿನಾ ನಾನ್ ವೆಜ್ (Non Veg) ತಿಂತಾರೆ ಅವ್ರು. ಅದೆಂಗೆ ಏನೂ ಆಗೋದಿಲ್ಲ, ಅವರಿಗೆ ಹಾರ್ಟ್ ಅಟ್ಯಾಕ್ (heart attack) ಆಗಲ್ಲ.
ನಾವೆಲ್ಲಾ ಚೆನ್ನಾಗಿ ಬೆಣ್ಣೆ ಹಾಕ್ಬಿಟ್ಟೆ, ತುಪ್ಪು ಹಾಕ್ಬಿಟ್ಟೆ, ಎಣ್ಣೆಯಲ್ಲಿ ಕರಿದುಬಿಟ್ಟೆ, ಫ್ರೈ ಮಾಡ್ಬಿಟ್ಟೆ, ಮೂರು ಮೂರು ಸಲ ತಿಂದ್ಬಿಟ್ಟೆ ಅಂತ ಜಾಸ್ತಿ ತಿಂದ್ಬಿಟ್ಟೆ ಮಾಡಿ ತೊಂದರೆ ಮಾಡ್ಕೊಂತಾ ಇದ್ದೀವಿ.
ಎಷ್ಟು ಬೇಕೋ ಅಷ್ಟು ಬೇಯಿಸಿ ತಿನ್ನೋದ್ರೆ ಬಹಳ ಒಳ್ಳೇದು. ಮನೆದು ತಿನ್ನಬೇಕು.
ಅದರಲ್ಲಿ ವೈಟ್ ಮೀಟ್ (white meat) ಅಂತ ಬರುತ್ತದೆ. ಅದೇ ಬಿಳಿ ಮಾಂಸ. ಇನ್ನು ಕೆಂಪು ಮಾಂಸ ಅಂತ ಇದೆ. ಕೆಂಪು ಮಾಂಸದಲ್ಲಿ ರೆಡಿಮೇಡ್ ಕೊಲೆಸ್ಟ್ರಾಲ್ (ready made cholesterol) ಇದೆ. ಅದು ಅಷ್ಟು ಒಳ್ಳೇದಲ್ಲ. ತಿನ್ನಬಾರದಾ ಡಾಕ್ಟರ್ ಅಂತ ಕೇಳಿದ್ರೆ ತಿನ್ನಬಹುದು. ಕಮ್ಮಿ ತಿನ್ನಬೇಕು. ಅಷ್ಟೆ.
ಬಿಳಿ ಮಾಂಸ ಬರ್ತದಲ್ಲ ಅದು ಚಿಕನ್ (chicken) ನಲ್ಲಿ ಇರ್ತದೆ. ಕೋಳಿ ಮಾಂಸದಲ್ಲಿ ಇರ್ತದೆ. ಆಮೇಲೆ ನಿಮ್ಮ ಫಿಶ್ (fish) ಅಲ್ಲಿ ಇರ್ತದೆ. ಅದೇ ಸೀಫುಡ್. ಅದೆಲ್ಲಲ್ಲ ವಿಶೇಷವಾಗಿ ಸಮುದ್ರದ ಮೀನುಗಳು ಬಹಳ ಒಳ್ಳೇದು.
ಅದನ್ನೆಲ್ಲ ಬಳಸ್ಕೋಬಹುದು. ಅದರಲ್ಲೆಲ್ಲಾ ಒಳ್ಳೆ ಪ್ರೊಟೀನ್ (protein) ಇರ್ತದೆ. ಒಳ್ಳೆ ಫ್ಯಾಟ್ (fat) ಇರ್ತದೆ. ಅನುಕೂಲ ಮಾಡುತ್ತೆ.
ಮೊಟ್ಟೆ. ಹೌದು ಮೊಟ್ಟೆ ಫುಲ್ ತಿನ್ನಬೇಕು. ಹಳದಿ ಭಾಗನೂ ತಿನ್ನಬೇಕು. ಹಳದಿ ಭಾಗನೇ ಜೀವ ಬಿಳಿದ ತಿಂತಾನೂ ಒಳ್ಳೆ ಒಳ್ಳೇದು ಹಳದಿ ಭಾಗ. ಅದರಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಇರ್ತದೆ. ಬೇಕು ಅದು. ಒಳ್ಳೆ ಕೊಲೆಸ್ಟ್ರಾಲ್ ಇರೋದು ಬೇಕು. ಶುರು ಮಾಡಿ, ಈಗ ನಾಳೆ ನಾನು ಹೇಳಿದ ಮೇಲೆ ಶುರು ಮಾಡಿ ಇವಾಗ ಸರಿನಾ?
ನೋಡಿ ನಾನು ವೆಜಿಟೇರಿಯನ್ ಆದ್ರೂ ತಿಳ್ಕೊಂಡು ನಾನು ನಿನಗೆ ಎಲ್ಲ ಹೇಳ್ತಿದೀನಿ ಎಂದು ಹೇಳುತ್ತ ಕೊನೆಗೊಳಿಸಿದ್ದಾರೆ.
ಈ ವಿಡಿಯೋವನ್ನು ಡಾಕ್ಟರ್ ಸ್ವತಃ ತಮ್ಮ ಮೊಬೈಲ್‌ನಲ್ಲೇ ರೆಕಾರ್ಡ್ ಮಾಡಿ ನಂತರ, ಆಪ್ತರೊಂದಿಗೆ ಶೇರ್ ಮಾಡಿದಂತೆ ಇದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಅಂದ ಹಾಗೆ ಈ ಡಾಕ್ಟರ್ ತುಮಕೂರಿನವರು ಎಂಬುದು ಗೊತ್ತಾಗಿದೆ. ಡಾ.ಭಾನುಪ್ರಕಾಶ್ ಇವರ ಹೆಸರು. ಹೃದ್ರೋಗ ತಜ್ಞರು.
ಇನ್ನು ಈ ವಿಡಿಯೋ ಬಂದಿರುವ ಕಾಮೆಂಟ್‌ಗಳಲ್ಲಿ ನಾನಾ ರೀತಿಯ ಅಂಶಗಳಿದ್ದು, ಕೆಲವು ಗಮನಸೆಳೆಯುವಂತಿವೆ. ಇನ್ನು ಕೆಲವು ಅಪ್ರಸ್ತುತವೆನಿಸುವಂತಿದೆ.