ಹುಬ್ಬಳ್ಳಿ -ಋಷಿಕೇಶ ವಿಶೇಷ ರೈಲು ಸಂಚಾರ, ಇಂದಿನಿಂದ ಮೇ 27ರ ತನಕ 5 ಟ್ರಿಪ್, ಋಷಿಕೇಶ -ಹುಬ್ಬಳ್ಳಿ ನಡುವೆಯೂ 5 ರೈಲು ಸಂಚಾರ
ಹುಬ್ಬಳ್ಳಿ -ಋಷಿಕೇಶ ವಿಶೇಷ ರೈಲು ಸಂಚಾರ ಇಂದಿನಿಂದ ಮೇ 27ರ ತನಕ 5 ಟ್ರಿಪ್ ಒದಗಿಸುವುದಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಪ್ರಕಟಿಸಿದೆ. ಇದರಂತೆ, ಋಷಿಕೇಶ -ಹುಬ್ಬಳ್ಳಿ ನಡುವೆಯೂ 5 ರೈಲು ಸಂಚಾರ ಇರಲಿದೆ. ಬೇಸಿಗೆ ಪ್ರಯಾಣಿಕ ದಟ್ಟಣೆ ನಿರ್ವಹಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ತಿಳಿಸಿದೆ. ವಿವರ ಇಲ್ಲಿದೆ.
ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು, ಬೇಸಿಗೆ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಯೋಗನಗರಿ ಋಷಿಕೇಶಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಇಂದಿನಿಂದ ಮೇ 27 ರ ತನಕ ಪ್ರತಿ ಸೋಮವಾರ ಹುಬ್ಬಳ್ಳಿ- ಋಷಿಕೇಶಕ್ಕೆ 5 ವಿಶೇಷ ರೈಲುಗಳು ಸಂಚರಿಸಲಿವೆ. ಅದೇ ರೀತಿ ಋಷಿಕೇಶ- ಹುಬ್ಬಳ್ಳಿ ನಡುವೆಯೂ ಮೇ 2 ರಿಂದ ಮೇ 30 ರನಕ ಪ್ರತಿ ಗುರುವಾರ ವಿಶೇಷ ರೈಲು ಸಂಚರಿಸಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ- ಯೋಗ ನಗರಿ ಋಷಿಕೇಶ- ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 06225/06226 ವಿಶೇಷ ರೈಲುಗಳು ವಿಶೇಷ ಸಮ್ಮರ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಘೋಷಿಸಿದೆ.
ಇಂದಿನಿಂದ ಹುಬ್ಬಳ್ಳಿ- ಋಷಿಕೇಶ ವಿಶೇಷ ರೈಲು ಸಂಚಾರ
ಹುಬ್ಬಳ್ಳಿ- ಋಷಿಕೇಶ ನಡುವಿನ ಮೊದಲ ವಿಶೇಷ ರೈಲು ಇಂದು (ಏಪ್ರಿಲ್ 29) ರಾತ್ರಿ 9.45ಕ್ಕೆ ಹುಬ್ಬಳ್ಳಿಯಿಂದ ಋಷಿಕೇಶಕ್ಕೆ ಹೊರಡಲಿದೆ. ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭ, ಮಿರಾಜ್ ಜಂಕ್ಷನ್, ಸತಾರ, ಪುಣೆ ಜಂಕ್ಷನ್, ಕೋಪರ್‌ಗಾಂವ್, ಮನ್ಮಾಡ್ ಜಂಕ್ಷನ್, ಭೂಸವಾಲ್ ಜಂಕ್ಷನ್, ಖಂಡ್ವಾ, ಭೋಪಾಲ್ ಜಂಕ್ಷನ್, ಬಿನಾ ಜಂಕ್ಷನ್, ವಾರಂಗಲ್ ಲಕ್ಷ್ಮೀಭಾಯಿ ಝಾನ್ಸಿ, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್, ಗಾಜಿಯಾಬಾದ್, ಮೇರಠ್ ಸಿಟಿ, ಖಟೌಲಿ, ಮುಜಾಫರನಗರ, ದೇವಬಂದ್, ತಾಪ್ರಿ, ರೂರ್ಕಿ, ಹರಿದ್ವಾರ, ಯೋಗನಗರಿ ಋಷಿಕೇಶಕ್ಕೆ ಮೂರನೇ ದಿನ (ಮೇ 1) ಸಂಜೆ 6.45ಕ್ಕೆ ತಲುಪಲಿದೆ.
ಇದೇ ರೀತಿ, ಮೇ 6, ಮೇ 13, ಮೇ 20, ಮೇ 27ರಂದು ಹುಬ್ಬಳ್ಳಿ- ಋಷಿಕೇಶ ನಡುವೆ ವಿಶೇಷ ರೈಲು ಸಂಚರಿಸಲಿದೆ.
ಮೇ 2 ರಿಂದ ಋಷಿಕೇಶ- ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚಾರ
ಋಷಿಕೇಶ ಮತ್ತು ಹುಬ್ಬಳ್ಳಿ ನಡುವಿನ ಮೊದಲ ವಿಶೇಷ ರೈಲು ಮೇ 2 ರಂದು ಸಂಜೆ 5.55ಕ್ಕೆ ಋಷಿಕೇಶದಿಂದ ಹುಬ್ಬಳ್ಳಿ ಕಡೆಗೆ ಹೊರಡಲಿದೆ. ಈ ರೈಲು ಹರಿದ್ವಾರ ಜಂಕ್ಷನ್, ರೂರ್ಕಿ, ತಾಪ್ರಿ, ದೇವಬಂದು, ಮುಜಾಫರನಗರ, ಖಟೌಲಿ, ಮೀರತ್ ಸಿಟಿ, ಘಾಜಿಯಾಬಾದ್, ಹಜರತ್ ನಿಜಾಮುದ್ದೀನ್, ಮಥುರಾ ಜಂಕ್ಷನ್, ವಿರಾಂಗ ಲಕ್ಷ್ಮೀಭಾಯಿ ಝಾನ್ಸಿ, ಬಿನಾ ಜಂಕ್ಷನ್, ಭೋಪಾಲ್ ಜಂಕ್ಷನ್,ಭೂಸವಾಲ್ ಜಂಕ್ಷನ್, ಮನ್ಮಾಡ್ ಜಂಕ್ಷನ್, ಕೋಪರ್‌ಗಾಂವ್, ಪುಣೆ ಜಂಕ್ಷನ್, ಸತಾರಾ, ಮಿರಾಜ್ ಜಂಕ್ಷನ್, ಘಟಪ್ರಭಾ, ಬೆಳಗಾವಿ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ಮೂರನೇ ದಿನ (ಮೇ 4) ತಲುಪಲಿದೆ. ಇದೇ ರೀತಿ, ಮೇ 2, ಮೇ 9, ಮೇ 16, ಮೇ 23 ಮತ್ತು ಮೇ 30 ರಂದು ಋಷಿಕೇಶ- ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚರಿಸಲಿದೆ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ - ಇಲ್ಲಿದೆ ವಿವರ
2) Amruthadhaare: ಸಿಕ್ಕಿದ್ದೇ ಛಾನ್ಸ್ ಅಂತ ಅಪೇಕ್ಷಾಗೆ ಪಾರ್ಥನಿಂದ ಕಿಸ್; ಬೊಂಬೆ ಹೇಳುತೈತೆ ನೀನೇ ರಾಜಕುಮಾರ ನೆನಪಿಸಿದ ಭೂಮಿಕಾ ಗಿಫ್ಟ್
3) ಕೊರಿಯನ್ ಡ್ರಾಮಾ ಪ್ರೇಮಿಗಳೇ ಇಲ್ನೋಡಿ; ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ 13 ಹೊಸ ಕೆ-ಡ್ರಾಮಾ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.