ಕನ್ನಡ ಸುದ್ದಿ  /  Karnataka  /  Kalaburagi News Karnataka Men Duped Into Joining Russia War In Job Scam Mea Help Sought Mkk

ಉದ್ಯೋಗ ವಂಚನೆ, ಏಜೆಂಟರ ಕಿತಾಪತಿ; ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್, ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ

ಉದ್ಯೋಗ ವಂಚನೆಯ ಏಜೆಂಟರ ಕಿತಾಪತಿಗೆಒಳಗಾಗಿ ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್. ಕಲಬುರಗಿಯ ನಾಲ್ವರು ಯುವಕರನ್ನು ವಾಪಸ್ ಭಾರತಕ್ಕೆ ಕರೆತರಲು ಈಗ ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ ಮಾಡಲಾಗಿದೆ.

ಉದ್ಯೋಗ ವಂಚನೆಯ ಏಜೆಂಟರ ಕಿತಾಪತಿಯ ಕಾರಣ ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್. ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ ಮಾಡಲಾಗಿದೆ.
ಉದ್ಯೋಗ ವಂಚನೆಯ ಏಜೆಂಟರ ಕಿತಾಪತಿಯ ಕಾರಣ ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್. ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ ಮಾಡಲಾಗಿದೆ.

ಕಲಬುರಗಿ: ಉದ್ಯೋಗದ ಭರವಸೆಯೊಂದಿಗೆ ರಷ್ಯಾಕ್ಕೆ ತೆರಳಿದ್ದ ಕಲಬುರಗಿ ಜಿಲ್ಲೆಯ ನಾಲ್ವರು ಯುವಕರನ್ನು ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆ ಬಳಸಿಕೊಳ್ಳುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಗಮನಾರ್ಹ ಅಂಶವೆಂದರೆ, ಹೀಗೆ ಉಕ್ರೇನ್ ವಿರುದ್ಧ ಯುದ್ಧ ನಡೆಸುವಂತೆ ಬಲವಂತವಾಗಿ ಕೈಯಲ್ಲಿ ಸ್ಟೆನ್‍ಗನ್ ಹಿಡಿದು ಹೋರಾಡಬೇಕಾದ ಅನಿವಾರ್ಯತೆ ಎದುರಿಸುತ್ತಿರುವ ಓರ್ವ ಯುವಕನ ತಂದೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‍ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಡ್ ಕಾನ್ಸ್‍ಟೇಬಲ್ ಸೈಯದ್ ನವಾಜ್ ಅಲಿ ಕಾಳಗಿ ಅವರ ಪುತ್ರ ಸೈಯದ್ ಇಲಿಯಾಸ್ ಹುಸೇನಿ ಹಾಗೂ ಆತನೊಂದಿಗೆ ರಷ್ಯಾ ದೇಶದಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗ ಕೈಗೊಳ್ಳಲು ತೆರಳಿದ್ದ ಜಿಲ್ಲೆಯ ಅಬ್ಬುಲ್ ನಯೀಂ, ಮೊಹ್ಮದ್ ಸೂಫಿಯಾನ್, ಮೊಹ್ಮದ್ ಸಮೀರ್ ಅಹ್ಮದ್ ಈಗ ಸಂಕಷ್ಟದಲ್ಲಿದ್ದಾರೆ.

ಉದ್ಯೋಗ ವಂಚನೆಗೆ ಒಳಗಾದ ಕಲಬುರಗಿ ಯುವಕರು

ಉದ್ಯೋಗ ವಂಚನೆಗೆ ಒಳಗಾದ ಈ ನಾಲ್ವರು ಪ್ರಸ್ತುತ ರಷ್ಯಾ-ಉಕ್ರೇನ್ ಗಡಿಯಲ್ಲಿ ರಷ್ಯಾ ಪರವಾಗಿ ಯುದ್ಧ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಪೈಕಿ ಸೈಯದ್ ಇಲಿಯಾಸ್ ಹುಸೇನಿ ತನ್ನ ಮೊಬೈಲ್ ಮೂಲಕ ಕಳುಹಿಸಿದ ವಿಡಿಯೋ ಸಂದೇಶದಿಂದಾಗಿ ಈ ಆತಂಕಕಾರಿ ಅಂಶ ಬಹಿರಂಗಗೊಂಡಿದೆ.

ಈ ಮೊದಲು ಸೈಯದ್ ಇಲಿಯಾಸ್ ಹುಸೇನಿ ದುಬೈ ಎಮಿರೇಟ್ಸ್ ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸೋಷಿಯಲ್ ಮೀಡಿಯಾ ಮೂಲಕ ಬಾಬಾ ವ್ಲಾಗ್ ಅಲಿಯಾಸ್‌ ಮುಂಬೈ ಮೂಲದ ಬಾಬಾ ಎಂಬಾತ ಪರಿಚಯವಾದೆ. ಚೀಫ್ ಏಜೆಂಟ್ ಬಾಬಾ ಜೊತೆಗೆ ಇತರ ಏಜೆಂಟ್‍ಗಳಾದ ಸೂಫಿಯಾನ್, ಮೋಯಿನ್ ಹಾಗೂ ಪೂಜಾ ಹೆಸರಿನ ಇತರ ಮೂವರು ಏಜೆಂಟರು ಸಹ ಪರಿಚಯವಾಗಿ ಈ ಅಮಾಯಕ ಯುವಕರನ್ನು ರಷ್ಯಾ ಯುದ್ಧ ಭೂಮಿಗೆ ಕಳುಹಿಸುವ ಹಿಕ್ಮತ್ತು ಮಾಡಿದವರು ಎಂಬುದು ಗೊತ್ತಾಗಿದೆ.

ಸೆಕ್ಯುರಿಟಿ ಗಾರ್ಡ್ಸ್ ಕೆಲಸ ಎಂದು ರಷ್ಯಾ ಪರ ಯುದ್ಧ ಮಾಡಲು ಕರೆದೊಯ್ದರು

ರಷ್ಯಾ ದೇಶದ ನಗರವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ಸ್‌ ಕೆಲಸಕ್ಕೆ ಯುವಕರು ಬೇಕಿದ್ದು, ಮಾಸಿಕ 1 ಲಕ್ಷ ರೂಪಾಯಿ ವೇತನ ನೀಡಲಾಗುತ್ತದೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾನೆ. ಈತನ ಮಾತಿಗೆ ಮರುಳಾದ ಸೈಯದ್ ಇಲಿಯಾಸ್ ಹಾಗೂ ಆತನ ಇತರ ಮೂವರು ಮಿತ್ರರು ಕಲಬುರಗಿಯಿಂದ ರಷ್ಯಾಕ್ಕೆ ತೆರಳಲು ಚೀಫ್ ಏಜೆಂಟ್ ಬಾಬಾಗೆ ತಲಾ ಮೂರು ಲಕ್ಷ ರೂಪಾಯಿ ಪಾವತಿಸಿ ಪ್ರಯಾಣಕ್ಕೆ ಸಿದ್ದರಾಗಿದ್ದಾರೆ.

ಈ ಮಧ್ಯೆ, 2023ರ ಡಿಸೆಂಬರ್ 18 ರಂದು ಚೆನ್ನೈ ವಿಮಾನ ನಿಲ್ದಾಣದ ಮೂಲಕ ರಷ್ಯಾ ರಾಜಧಾನಿ ಮಾಸ್ಕೋ ನಗರಕ್ಕೆ ಏರ್ ಅರೇಬಿಯಾ ವಿಮಾನದಲ್ಲಿ ತೆರಳಿದ್ದರು. ರಷ್ಯಾ ತಲುಪುತ್ತಿದ್ದಂತೆಯೇ ಅಲ್ಲಿನ ಖಾಸಗಿ ವಾಗ್ನರ್ ಸೇನಾ ಗ್ರೂಪ್ ಪರವಾಗಿ ಉಕ್ರೇನ್ ದೇಶಕ್ಕೆ ಕೇವಲ 40 ಕಿ.ಮೀ ಅಂತರದಲ್ಲಿರುವ ಗಡಿ ಭಾಗದಲ್ಲಿ ಈ ನಾಲ್ವರಿಗೂ ಸ್ಟೆನ್‌ಗನ್ ಕೊಟ್ಟು ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಅಸಾದುದ್ದೀನ್ ಓವೈಸಿ ಪತ್ರ

ಈ ಮಧ್ಯೆ, ಕಲಬುರಗಿಯ ನಾಲ್ವರು ಯುವಕರು ಸೇರಿ ತೆಲಂಗಾಣ ಮತ್ತು ಉತ್ತರ ಭಾರತದ ಕೆಲವು ಮುಸ್ಲಿಂ ಯುವಕರಿಗೆ ಇದೇ ರೀತಿ ಉದ್ಯೋಗದ ಆಮಿಷವೊಡ್ಡಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಈ ಯುವಕರನ್ನು ರಕ್ಷಿಸಿ ಭಾರತಕ್ಕೆ ಕರೆ ತರುವಂತೆ ಕೋರಿ ಸಂಸದ ಅಸಾದುದ್ದೀನ್ ಓವೈಸಿ ಮೊದಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಆ ಬಳಿಕವೇ ಈ ಅಂಶ ಜಗಜ್ಜಾಹೀರಾಗಿದೆ.

ಇದಾದ ಬಳಿಕ ಸೈಯದ್ ಇಲಿಯಾಸ್ ಹುಸೇನಿಯ ತಂದೆ ಹೆಡ್‍ಕಾನ್ಸ್‍ಟೇಬಲ್ ಸೈಯದ್ ನವಾಜ್ ಅಲಿ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸ್ವತಃ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ವಿದೇಶಾಂಗ ಖಾತೆ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point