ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ

ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಂಗತಿಗಳ ಪಟ್ಟಿಯನ್ನು ( Kalyan Karnataka Top 10 Important things) ನಿಮಗಾಗಿ ನೀಡಿದೆ.

ಕಲ್ಯಾಣ ಕರ್ನಾಟಕ ಹಲವಾರು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ.
ಕಲ್ಯಾಣ ಕರ್ನಾಟಕ ಹಲವಾರು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. (Britannica photo)

ಕಲ್ಯಾಣ ಕರ್ನಾಟಕ ಉದಯವಾಗಿದೆ. ನಿಜಾಮರ ಆಡಳಿತದಿಂದ ಕರ್ನಾಟಕ ಆಡಳಿತಕ್ಕೆ ಸೇರಲ್ಪಟ್ಟು, ನಾಲ್ಕರಿಂದ ಏಳು ಜಿಲ್ಲೆಗಳಿಗೆ ವಿಸ್ತರಣೆಗೊಂಡಿರುವ ಕಲಬುರಗಿ ಕೇಂದ್ರಿತ ಕಲ್ಯಾಣ ಕರ್ನಾಟಕ ಹಲವು ವಿಶೇಷತೆಗಳನ್ನು ಹೊಂದಿದ ಪ್ರದೇಶ. ಪ್ರದೇಶದ ಹಿನ್ನೆಲೆ,. ವಿಶೇಷಗಳ ಹತ್ತು ಅಂಶಗಳ ಪಟ್ಟಿ ಇಲ್ಲಿದೆ.

  1. ಕಲ್ಯಾಣ ಕರ್ನಾಟಕ. ಕರ್ನಾಟಕದ ಈಶಾನ್ಯ ಭಾಗದ ಮುಖ್ಯ ಪ್ರದೇಶ. ಒಂದು ಕಾಲಕ್ಕೆ ಹೈದ್ರಾಬಾದ್‌ ನಿಜಾಮರ ಆಡಳಿತದ ಭಾಗವಾಗಿದ್ದರಿಂದ ಇದನ್ನು ಹೈದ್ರಾಬಾದ್‌ ಕರ್ನಾಟಕ ಎಂದೇ ಕರೆಯಲಾಗುತ್ತಿತ್ತು. ಆರು ವರ್ಷದ ಹಿಂದೆ ಇದನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಲಾಯಿತು.
  2. ಹೈದ್ರಾಬಾದ್‌ನ ನಿಜಾಮರ ಆಡಳಿತ ಪ್ರಭಾವ ಕಲಬುರಗಿ ಹಾಗೂ ಬೀದರ್‌ನಲ್ಲಿ ಅಧಿಕವಾಗಿತ್ತು. ಇಲ್ಲಿನ ಜನರಿಗೆ ಹೈದ್ರಾಬಾದ್‌ ಜತೆಯಲ್ಲಿಯೇ ಹೆಚ್ಚಿನ ನಂಟು ಇತ್ತು. ದ್ರದ ಆಗಿನ ಗೃಹ ಮಂತ್ರಿಯಾಗಿದ್ದ ಸರದಾರ ವಲ್ಲಭಬಾಯ ಪಟೇಲ್‌ ಮತ್ತು ಈ ಭಾಗದ ಹೋರಾಟಗಾರರ ಫಲವಾಗಿ ಮತ್ತೆ ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. 1956 ರವರೆಗೆ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಆನಂತರ ಕರ್ನಾಟಕದ ಭಾಗವಾಯಿತು.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಇತಿಹಾಸ ಸಾರುವ ಪ್ರಮುಖ 10 ಕೋಟೆಗಳಿವು: ಇವುಗಳ ವಿಶೇಷತೆ ಏನು
  3. ಈಗಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು, ತೆಲುಗಿನ ಭಾಷೆ ಪ್ರಭಾವ ಹೆಚ್ಚಿದೆ. ಕೆಲವು ಕಡೆ ಮರಾಠಿ ಪ್ರಭಾವವೂ ಇದೆ. ಆದರೆ ಕನ್ನಡದ ಬೇರುಗಳೂ ಗಟ್ಟಿಯಾಗಿವೆ. ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗೆ ಮಹಾರಾಷ್ಟ್ರದ ನಂಟಿದ್ದರೆ, ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಈಗಿನ ತೆಲಂಗಾಣದ ಗಡಿ ಹಂಚಿಕೊಂಡಿವೆ.
  4. ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಎಂದೇ ಆರು ದಶಕ ಇದನ್ನು ಕರೆಯಲಾಗುತ್ತಿದೆ. ಹೈದ್ರಾಬಾದ್‌ ಕರ್ನಾಟಕ ಮಂಡಳಿ ಸಹಿತ ಹಲವಾರು ಸಂಸ್ಥೆಗಳ ಹೆಸರು ಹಾಗೆಯೇ ಇತ್ತು. ಈಗಲೂ ಅದೇ ಹೆಸರು ಕರೆಯುವುದು ಬೇಡ. ಪ್ರತ್ಯೇಕತೆ ಇರಲಿ ಎನ್ನುವ ಕೂಗು ಹೆಚ್ಚಿದ್ದರಿಂದ ಇದನ್ನು 2019ರಲ್ಲಿ ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಲಾಯಿತು. ಈಗ ಎಲ್ಲಾ ಚಟುವಟಿಕೆಗಳು ಕಲ್ಯಾಣ ಕರ್ನಾಟಕದ ನಾಮಾಂಕಿತದ ಅಡಿಯೇ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ, ಕಲ್ಯಾಣ ಕರ್ನಾಟಕ ಸಾರಿಗೆ ಹೀಗೆ ಎಲ್ಲವೂ ಬದಲಾಗಿವೆ.

    ಇದನ್ನೂ ಓದಿರಿ: ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು; ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ
  5. ಹಿಂದಿನ ಹೈದ್ರಾಬಾದ್‌, ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಆರ್ಥಿಕ, ಶೈಕ್ಷಣಿಕ ಸಹಿತ ಹಲವು ರೀತಿಯಲ್ಲಿ ಅಭಿವೃದ್ದಿ ಕಂಡಿಲ್ಲ ಎನ್ನುವ ಕೂಗು ಇತ್ತು. ಈ ಕಾರಣದಿಂದ ಈ ಭಾಗದ ಏಳು ಜಿಲ್ಲೆಗಳಿಗೆ 2013ರಲ್ಲಿ 371 ಜೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ದಿ. ಸಿಎಂ ಎನ್. ಧರ್ಮಸಿಂಗ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೈದ್ರಾಬಾದ್ ಕರ್ನಾಟಕ ಅಸಮತೋಲನ ಹೋಗಲಾಡಿಸಲು 371 ಜೆ ವಿಧೇಯಕ ಒದಗಿಸುವಲ್ಲಿ ಯಶಸ್ವಿಯಾದರು. ಇದರಡಿ ಪ್ರತ್ಯೇಕ ಉದ್ಯೋಗ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳು ಈ ಭಾಗದ ಜನರಿಗೆ ಸಿಗುತ್ತಿದೆ.
  6. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಸದ್ಯ ಏಳು ಜಿಲ್ಲೆಗಳಿವೆ. ಮೊದಲು ಕಲಬುರಗಿ, ಬೀದರ್‌, ರಾಯಚೂರು, ಬಳ್ಳಾರಿ ನಾಲ್ಕೇ ಜಿಲ್ಲೆಗಳಿದ್ದವು. ರಾಯಚೂರು ಜಿಲ್ಲೆ ವಿಭಜಿಸಿ ಕೊಪ್ಪಳ, ಕಲಬುರಗಿ ಜಿಲ್ಲೆ ವಿಭಜಿಸಿ ಯಾದಗಿರಿ, ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ರಚಿಸಿದ್ದರಿಂದ ಏಳು ಜಿಲ್ಲೆಗಳಾಗಿ ಮಾರ್ಪಟ್ಟಿವೆ. ಹರಪನಹಳ್ಳಿ ತಾಲ್ಲೂಕು ಬಳ್ಳಾರಿಯಿಂದ ದಾವಣಗೆರೆ ಜಿಲ್ಲೆಗೆ ಸೇರಿ ಈಗ ವಿಜಯನಗರ ವ್ಯಾಪ್ತಿಯಲ್ಲಿದೆ.

    ಇದನ್ನೂ ಓದಿರಿ: ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು
  7. ಕೃಷಿಗೆ ಹೆಸರು ಮಾಡಿದ ಜಿಲ್ಲೆಗಳಿವು. ಕಲಬುರಗಿಯ ತೊಗರಿ, ರಾಯಚೂರು- ಕೊಪ್ಪಳದ ಭತ್ತ ಹಾಗೂ ಅಕ್ಕಿ, ಬಳ್ಳಾರಿ ಜಿಲ್ಲೆ ಹಡಗಲಿ ಮಲ್ಲಿಗೆ ಈ ಭಾಗದ ಪ್ರಮುಖ ಬೆಳೆಗಳು. ಈ ಭಾಗದ ತೊಗರಿ, ಅಕ್ಕಿಗೆ ಭಾರೀ ಬೇಡಿಕೆಯಿದೆ. ಇವು ರೈತರ ಪ್ರಮುಖ ಆದಾಯ ಬೆಳೆಗಳೂ ಹೌದು.
  8. ಕೊಪ್ಪಳದ ಕಿನ್ನಾಳ ಕಲೆ, ಮಹತ್ವದ ಇತಿಹಾಸ ಇರುವ ವಿಜಯನಗರ ವೈಭವದ ಹಂಪಿ, ಬೀದರ್‌, ಕಲಬುರಗಿ, ರಾಯಚೂರು,ಬಳ್ಳಾರಿ ಕೋಟೆಗಳು ವೈಶಿಷ್ಟ್ಯ. ಜನಪದ ಕಲೆಗಳಿಗೂ ಈ ಭಾಗ ಹೆಸರುವಾಸಿ.
  9. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮದ ಭಾಗವಾಗಿಯೂ ಹೆಸರು ಪಡೆದಿದೆ. ಕಲಬುರಗಿ ಶರಣಬಸವೇಶ್ವರ, ಬಂದೇನವಾಜ್‌ ದರ್ಗಾ, ಬುದ್ದ ಸ್ಥೂಪ, ಬಹುಮನಿ ಸುಲ್ತಾನರ ಕೋಟೆ, ಬೀದರ್‌ನ ಗುರುದ್ವಾರ, ಭೀಮ ತೀರದ ಗಾಣಗಾಪೂರ, ಸಂಡೂರಿನ ಹಸಿರು ತಾಣ, ಹಂಪಿ ಪಾರಂಪರಿಕ ವೈಭವ, ಹೊಸಪೇಟೆ ತುಂಗಭದ್ರಾ ಜಲಾಶಯ ಕೂಡ ಪ್ರಮುಖ ಪ್ರವಾಸಿ ಆಕರ್ಷಣೆ. ತೆಲಂಗಾಣ ಭಾಗವಾಗಿದ್ದರೂ ಕರ್ನಾಟಕದ ಹಿನ್ನೆಲೆ ಇರುವ ರಾಯಚೂರು ಸಮೀಪದ ಮಂತ್ರಾಲಯವೂ ಜನರ ಶ್ರದ್ದಾ ಕೇಂದ್ರವಾಗಿ ಮಾರ್ಪಟ್ಟಿದೆ
  10. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಒತ್ತು ನೀಡಲು ಕಲಬುರಗಿ ವಿಶ್ವವಿದ್ಯಾನಿಲಯದ ನಂತರ ಕೇಂದ್ರೀಯ ವಿಶ್ವವಿದ್ಯಾನಿಲಯ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ, ಬೀದರ್‌ನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ. ಇತ್ತೀಚಿಗೆ ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲೂ ಪ್ರತ್ಯೇಕ ವಿಶ್ವವಿದ್ಯಾನಿಲಯಗಳು ರೂಪುಗೊಂಡು ಶಿಕ್ಷಣಕ್ಕೆ ಇನ್ನಿಲ್ಲದ ಒತ್ತು ದೊರೆತಿದೆ.

Whats_app_banner