Mysore News: ಮೈಸೂರಿನ ಫೋಟೋ, ವಿಡಿಯೋ ತೆಗೆದಿದ್ದೀರಾ, ಸ್ಪರ್ಧೆಗೆ ಕಳುಹಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಿನ ಫೋಟೋ, ವಿಡಿಯೋ ತೆಗೆದಿದ್ದೀರಾ, ಸ್ಪರ್ಧೆಗೆ ಕಳುಹಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

Mysore News: ಮೈಸೂರಿನ ಫೋಟೋ, ವಿಡಿಯೋ ತೆಗೆದಿದ್ದೀರಾ, ಸ್ಪರ್ಧೆಗೆ ಕಳುಹಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

Mysore Tourism ಮೈಸೂರಿನಲ್ಲಿ ಪ್ರವಾಸ ಕೈಗೊಂಡಾಗ ತೆಗೆದುಕೊಂಡಿದ್ದ ಫೋಟೋ/ ವಿಡಿಯೋ ಕಳುಹಿಸಿ. ಬಹುಮಾನ ಗೆಲ್ಲಿರಿ. ಇದರ ವಿವರ ಇಲ್ಲಿದೆ.

ಮೈಸೂರಿನ ಪ್ರವಾಸಿ ತಾಣ, ಕಲೆಗಳ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿರಿ.
ಮೈಸೂರಿನ ಪ್ರವಾಸಿ ತಾಣ, ಕಲೆಗಳ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿರಿ.

ಮೈಸೂರು: ನೀವು ಮೈಸೂರಿನ ಬಗ್ಗೆ ವಿಶೇಷ ಆಸಕ್ತಿ ಇರುವವರೇ, ಆಗಾಗ ಪ್ರವಾಸ ಮಾಡುತ್ತಿರುತ್ತೀರಾ. ಮೈಸೂರು ಜಿಲ್ಲೆಯ ಪ್ರವಾಸಿಗಳನ್ನು ನೋಡಿ ಖುಷಿ ಪಟ್ಟು ಬಂದಿದ್ದೀರಾ, ಜತೆಗೆ ಅಲ್ಲಿನ ಪ್ರವಾಸಿ ತಾಣಗಳ ಫೋಟೋ ಹಾಗೂ ವಿಡಿಯೋ ಮಾಡಿದ್ದೀರಾ, ಹಾಗಿದ್ದರೆ ನೀವು ತೆಗೆದಿರುವ ಫೋಟೋ ಹಾಗೂ ವಿಡಿಯೋವನ್ನು ಕಳುಹಿಸಿ ಭಾರೀ ನಗದು ಬಹುಮಾನವನ್ನು ಪಡೆಯಿರಿ, ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಈ ಕಾರಣದಿಂದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಮೈಸೂರಿನ ಅನ್ವೇಷಿಸದ ಪ್ರವಾಸಿ ತಾಣಗಳು" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಮಟ್ಟದ ಛಾಯಾಚಿತ್ರ ಮತ್ತು ಕಿರು ವಿಡಿಯೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದರಡಿ ಸಾರ್ವಜನಿಕರಿಂದ ಫೋಟೋ ಹಾಗೂ ವಿಡಿಯೋ ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನದಿಗಳು, ಪ್ರಕೃತಿ ಮತ್ತು ರಮಣೀಯ ಸೌಂದರ್ಯ ತಾಣಗಳು, ಜಲಪಾತಗಳು, ವಸ್ತು ಸಂಗ್ರಹಾಲಯಗಳು, ಜಾನಪದ ಹಾಗೂ ಕಲೆಗಳು, ಸಾಂಪ್ರದಾಯಿಕ ಸ್ಥಳೀಯ ಹಬ್ಬಗಳು ಮತ್ತು ಕಲೆಗಳು, ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಹಾಗೂ ಇತರೆ ತಾಣಗಳ ರಾಜ್ಯ ಮಟ್ಟದ ಛಾಯಾಗ್ರಹಣ ಮತ್ತು ಕಿರು ವೀಡಿಯೋ ಸ್ಪರ್ಧೆಯಾಗಿದೆ. ಆಯ್ಕೆಯಾದ ಅತ್ಯುತ್ತಮ ಸಲ್ಲಿಕೆಗಳಿಗೆ ಪ್ರಥಮ ಬಹುಮಾನವಾಗಿ ರೂ.25,000 ದ್ವಿತೀಯ ಬಹುಮಾನ ರೂ.15,000 ಹಾಗೂ ತೃತೀಯ ಬಹುಮಾನವಾಗಿ ರೂ.10,000 ಗಳನ್ನು ನೀಡಲಾಗುವುದು.

ಮೈಸೂರು ನಗರದಲ್ಲಿಯೇ ವಿಶ್ವವಿಖ್ಯಾತ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಸೆಂಟ್‌ ಫಿಲೋಮಿನಾ ಚರ್ಚ್‌, ಹಲವಾರು ಅರಮನೆ, ಸ್ಮಾರಕಗಳು, ಪಾರಂಪರಿಕ ಕಟ್ಟಡಗಳಿವೆ. ಮೈಸೂರು ಜಿಲ್ಲೆಯಲ್ಲಿ ಹಲವಾರು ದೇಗುಲ, ಪರಿಸರ ಪ್ರವಾಸಿ ತಾಣಗಳಿವೆ. ಇವುಗಳಿಗೆ ಸಂಬಂಧಿಸಿದ ಫೋಟೋಗಳನ್ನು ನೀವು ಕಳುಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು https://Mysore.nic.inen/competitions/ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜೂ.20 ಅಂತಿಮ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ visitmysurutourism@gmail.com ಹಾಗೂ 7411564510, 9008693409 ನ್ನು ಸಂಪರ್ಕಿಸಬಹುದು ಎಂದು ಮೈಸೂರು ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ. ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner